ಉಪಯುಕ್ತ ಮಾಹಿತಿ

ನೀವು ರಾತ್ರಿ ಮಲಗುವ ಮುಂಚೆ ಇದನ್ನ ಮಾಡಿದ್ರೆ ಹಾರ್ಟ್ ಅಟ್ಯಾಕ್ ಆಗೋದು ತುಂಬಾ ಕಡಿಮೆ!

273

ಮಲಗುವುದಕ್ಕೂ ಮುನ್ನ ಹಿತವಾದ, ಧ್ಯಾನ, ಯೋಗ ಸಂಗೀತವನ್ನು ಆಲಿಸುವುದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಭಾರತೀಯ ಸಂಶೋಧಕರು ಹೇಳಿದ್ದಾರೆ.

ಈ ರೀತಿಯ ಮ್ಯೂಸಿಕ್ ಥೆರೆಪಿಯನ್ನು ಆಸ್ಪತ್ರೆಗಳಲ್ಲಿ ಪ್ರಯೋಗಿಸಲಾಗುತ್ತಿದ್ದು, ಯೋಗ ಸಂಗೀತವನ್ನು ಮಲಗುವುದಕ್ಕೂ ಮುನ್ನ ಆಲಿಸುವುದು ಹೃದಯ ಬಡಿತದ ವ್ಯತ್ಯಾಸಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜಸ್ಥಾನದ ಜೈಪುರದ ಹೆಚ್ ಜಿ ಎಸ್ಎಂಎಸ್ ಆಸ್ಪತ್ರೆಯ ನರೇಶ್ ಸೇನ್ ಹೇಳಿದ್ದಾರೆ.

ಈ ಅಧ್ಯಯನವನ್ನು ಜರ್ಮನಿಯಲ್ಲಿರುವ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಕಾಂಗ್ರೆಸ್ 2018 ರಲ್ಲಿ ಮಂಡಿಸಲಾಗಿದೆ. ಆರೋಗ್ಯಕರವಾಗಿದ್ದ ಸುಮಾರು 149 ಜನರನ್ನು ಅಧ್ಯಯನಕ್ಕೊಳಪಡಿಸಲಾಗಿತ್ತು.

149 ಜನರ ಪೈಕಿ ಕೆಲವರು ಮಲಗುವುದಕ್ಕೂ ಮುನ್ನ ಯೋಗ ಸಂಗೀತವನ್ನು ಆಲಿಸಿದರೆ, ಇನ್ನು ಕೆಲವರು ಪಾಪ್ ಮ್ಯೂಸಿಕ್ ಗೆ ಕಿವಿಕೊಟ್ಟಿದ್ದರು, ಮತ್ತೆ ಕೆಲವರು ಯಾವುದೇ ಸಂಗೀತವನ್ನೂ ಕೇಳದೇ ಹಾಗೆಯೇ ನಿದ್ದೆ ಮಾಡಿದ್ದರು.

ಸಮೀಕ್ಷೆಗೊಳಪಡಿಸಲಾಗಿದ್ದ ವ್ಯಕ್ತಿಗಳ ಹೃದಯ ಬಡಿತವನ್ನು ಸೆಷನ್ ನಲ್ಲಿಯೂ ಸಂಗೀತ ನಿಲ್ಲುವುದಕ್ಕೆ ಅಥವಾ ನಿಶಬ್ದ ಮೂಡುವುದಕ್ಕೂ 5 ನಿಮಿಷಗಳ ಮುನ್ನ ಮಾಪನ ಮಾಡಲಾಗಿತ್ತು. ಇದರ ಜೊತೆಗೆ ಆಂಕ್ಸೈಟಿ ಮಟ್ಟವನ್ನೂ ಮಾಪನ ಮಾಡಲಾಗಿತ್ತು,

ಯೋಗ ಸಂಗೀತ ಕೇಳುವ ವೇಳೆಯಲ್ಲಿ ಹೃದಯ ಬಡಿತ ವ್ಯತ್ಯಾಸ ಹೆಚ್ಚಾಗಿದ್ದು, ಪಾಪ್ ಮ್ಯೂಸಿಕ್ ನ್ನು ಕೇಳುವ ವೇಳೆಯಲ್ಲಿ ಇಳಿಕೆಯಾಗಿತ್ತು, ನಿಶಬ್ದವಾಗಿದ್ದಾಗ ಯಾವುದೇ ಬದಲಾವಣೆಗಳೂ ಇರಲಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಇನ್ನು ಯೋಗ ಸಂಗೀತ ಕೇಳುತ್ತಿದ್ದವರ ಆಂಕ್ಸೈಟಿ (ಆತಂಕ ಮಟ್ಟ) ಮಟ್ಟ ಕಡಿಮೆಯಾಗಿದ್ದು, ಪಾಪ್ ಮ್ಯೂಸಿಕ್ ನ್ನು ಕೇಳಿದ ನಂತರ ಹಾಗೂ ಯಾವುದೇ ಸಂಗೀತ ಕೇಳದಿದ್ದಾಗ ಆಂಕ್ಸೈಟಿ ಮಟ್ಟ ಹೆಚ್ಚಿರುವುದು ಸಮೀಕ್ಷೆಯಲ್ಲಿ ದಾಖಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಮುಂದಿನ ತಿಂಗಳಿಂದ 500 ಕಿಮೀ. ದೂರ ಸಂಚರಿಸುವ ರೈಲುಗಳ ಪ್ರಯಾಣದ ಅವಧಿ ಕಡಿತ..! ತಿಳಿಯಲು ಓದಿ…

    ಮುಂದಿನ ತಿಂಗಳಿಂದ 500 ಕಿ.ಮೀ.ಗಿಂತ ಹೆಚ್ಚು ದೂರ ಸಂಚರಿಸುವ ರೈಲುಗಳ ಪ್ರಯಾಣದ ಅವಧಿಯನ್ನು ಸ್ವಲ್ಪ ಕಡಿಮೆ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಸುದ್ದಿ

    ನೀವು ನಿದ್ದೆ ಮಾಡುವಾಗ ಎಡಗೈ ಮೇಲೆ ಮಲಗುತ್ತೀರಾ ಹಾಗಾದರೆ ಇದನ್ನೊಮ್ಮೆ ತಪ್ಪದೆ ಓದಿ,.!

    ನಾವು ಮಧ್ಯಾಹ್ನ ಅಥವಾ ರಾತ್ರಿ  ಮಲಗುವಾಗ ನಮ್ಮ ಕೈ ಮೇಲೆ ತಲೆನ ಹಾಕಿಕೊಂಡು ಮಲಗುತ್ತೇವೆ ಅದು ನಿಮಗೂ ಗೊತ್ತು, ನಿದ್ದೆ ಮನುಷ್ಯನಿಗೆ ವರದಾನವಾಗಿದೆ, ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಕೆಲಸ ಮಾಡುವವರು ನಿದ್ರೆ ಕಡೆ ಗಮನ ಕೊಡುತ್ತಿಲ್ಲ ತುಂಬಾ ಕೆಲಸದ ಕಡೆ ಗಮನ ಕೊಡುತ್ತಿದ್ದಾರೆ ಇದರಿಂದ ನಮ್ಮ  ಆರೋಗ್ಯದ  ಮೇಲೆ ತುಂಬಾನೇ  ಪರಿಣಾಮ ಬೀರುತ್ತದೆ. ಇದರಿಂದ  ರಾತ್ರಿ ಮಲಗುವ  ನಿದ್ದೆ  ಸಾಕಾಗುವುದಿಲ್ಲ ಹಾಗಾಗಿ  ಮಧ್ಯಾಹ್ನವೂ ಕೂಡ ಮಲಗುತ್ತಾರೆ,  ಮತ್ತು  ಹೆಚ್ಚಾಗಿ ನಿದ್ರೆ ಮಾಡುವವರನ್ನು ಸೋಂಬೇರಿಗಳು ಅಂತಾನೂ  ಕರೆಯುತ್ತಾರೆ….

  • ಸಿನಿಮಾ

    ನಾಯಕ ನಟ ದುನಿಯಾ ವಿಜಿ ರವರಿಗೆ ಕೋಲಾರದಲ್ಲಿ ಭರ್ಜರಿ ಸ್ವಾಗತ

    ಕೋಲಾರ: ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಚಲನಚಿತ್ರದ ಪ್ರಚಾರಕ್ಕಾಗಿ ಭಾನುವಾರ ಕೋಲಾರ ನಗರಕ್ಕೆ ಆಗಮಿಸಿದ ದುನಿಯಾ ವಿಜಿ ಮತ್ತು ಚಿತ್ರದ ನಿರ್ದೇಶದ ಗೋಪಿಚಂದ್ ಮಲಿನೇನಿ ಅವರಿಗೆ ಎನ್‌ಬಿಕೆ ಹೆಲ್ಪಿಂಗ್ ಹ್ಯಾಂಡ್ಸ್ ಮತ್ತು ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು. ವೀರಸಿಂಹಾರೆಡ್ಡಿ ಚಿತ್ರದ ನಿರ್ದೇಶಕ ಗೋಪಿಚಂದ್ ಮಲಿನೇನಿ ಮತ್ತು ಜಗನ್ ಶನಿವಾರ ರಾತ್ರಿಯೇ ಕೋಲಾರಕ್ಕೆ ಆಗಮಿಸಿ ನಗರದ ಹೊರವಲಯದ ನಾಗಾರ್ಜುನ ಹೋಟೆಲ್‌ನಲ್ಲಿ ವಾಸ್ತವ್ಯಹೂಡಿದ್ದರು. ಭಾನುವಾರ ಬೆಳಿಗ್ಗೆ ಬೆಂಗಳೂರಿನಿಂದ ಆಗಮಿಸಿದ್ದ ದುನಿಯಾ ವಿಜಿ ಅವರನ್ನು ಸೇರಿಕೊಂಡರು. ಉಪಹಾರದ ನಂತರ ಇವರನ್ನು ಕೋಲಾರದ…

  • ದೇಶ-ವಿದೇಶ

    ಉಗ್ರ ಸಂಘಟನೆಯ ಮುಕಂಡನನ್ನು ಅಟ್ಟಾಡಿಸಿ ಕೊಂದ ನಮ್ಮ ಹೆಮ್ಮೆಯ ಭಾರತೀಯ ಸೇನೆ

    ಭಾರತೀಯ ಸೇನೆ ಶನಿವಾರ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಹಿಜ್ಬುಲ್‍ ಮುಜಾಹಿದ್ದೀನ್ ಮುಖಂಡ ಸಬ್ಜಾರ್‍ ಅಹ್ಮದ್‍ ಸೇರಿದಂತೆ 7 ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದೆ. ಬುಹ್ರಾನ್‍ ವಾನಿ ನಂತರ ಸಬ್ಜಾರ್ ಅಹ್ಮದ್‍ ಹಿಜ್ಬುಲ್‍ ಸಂಘಟನೆಯನ್ನು ಮುನ್ನಡೆಸುತ್ತಿದ್ದ ಎಂದು ಸೇನಾ ಮೂಲಗಳು ಹೇಳಿವೆ.

  • ಸುದ್ದಿ

    ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದ ರಾಕಿಂಗ್ ಸ್ಟಾರ್ ಯಶ್,.!

    ರಾಕಿಂಗ್ ಸ್ಟಾರ್ ಯಶ್ ಎಂದರೆ ನಮ್ಮೆಲ್ಲರ ಅಚ್ಚು ಮೆಚ್ಚಿನ ಹೀರೋ ಅವರಿಗೆ  ಫಾಲೋ ವರ್ಸ್ ತುಂಬಾನೇ ಜಾಸ್ತಿ  ಈಗ ಅವರಿಗೆ  ದಿ ಜಿಕ್ಯೂ ಇಂಡಿಯಾ ಆಯೋಜಿಸಿದ್ದ, ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರು (The GQ 50 MostInfluential Young Indians) ಪಟ್ಟಿಯಲ್ಲಿ ಯಶ್ ಪ್ರಮುಖ ಸ್ಥಾನ ಪಡೆದುಕೊಂಡಿದ್ದಾರೆ. ಸೋಮವಾರ ಸಂಜೆ ಮುಂಬೈನಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಮಾಡಿದ ಸಾಧನೆ, ಯುವ ಮನಸ್ಸುಗಳಲ್ಲಿ ಸಂಚಲನ ಸೃಷ್ಟಿಸಿದ, ಅವರ ಯೋಚನೆ,…