ಸುದ್ದಿ

ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀರು ಕುಡಿದರೆ ಏನು ಪ್ರಯೋಜನಗಳು ಗೊತ್ತಾ…?

116

ಕೆಲವರು ಸದಾಕಾಲ ಬಿಸಿಬಿಸಿ ನೀರನ್ನೇ ಕುಡಿಯಲು ಇಷ್ಟಪಡ್ತಾರೆ, ಇನ್ನು ಕೆಲವರಿಗೆ ನೀರು ಎಷ್ಟು ತಣ್ಣಗಿದ್ರೂ ಸಾಲದು. ಚರ್ಮದ ಆರೋಗ್ಯ, ಜೀರ್ಣಕ್ರಿಯೆ, ಮೈಗ್ರೇನ್ ನಿಂದ ಹಿಡಿದು ಎಲ್ಲದಕ್ಕೂ ನೀರು ಪರಿಹಾರ. ಬಿಸಿ ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು ಅನ್ನೋದನ್ನು ವೈದ್ಯಕೀಯ ಲೋಕ ಕೂಡ ಒಪ್ಪಿಕೊಂಡಿದೆ.

ಊಟದ ಜೊತೆಗೆ ಒಂದು ಲೋಟ ಬಿಸಿ ನೀರು ಸೇವನೆ ಒಳ್ಳೆಯದು ಅನ್ನೋದು ಆಯುರ್ವೇದ ವೈದ್ಯರ ಸಲಹೆ. ಚೀನಾ ಮತ್ತು ಜಪಾನ್ ನಲ್ಲಿ ಊಟದ ಜೊತೆ ಬಿಸಿಬಿಸಿ ಚಹಾ ಕುಡಿಯುವ ಪದ್ಧತಿಯಿದೆ. ಹಾಗಂತ ಅದೇನು ಮಸಾಲಾ ಟೀ ಅಲ್ಲ, ಬಿಸಿ ನೀರಿಗೆ ಸ್ವಲ್ಪ ಗ್ರೀನ್ ಟೀ ಹಾಕಿಕೊಂಡು ಕುಡಿಯುವುದು.

ಜಪಾನ್ ನಲ್ಲಿ ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಬ್ರಷ್ ಮಾಡುವುದಕ್ಕೂ ಮುನ್ನ 4 ಗ್ಲಾಸ್ ಬಿಸಿನೀರು ಕುಡಿಯುತ್ತಾರೆ. ಮೊದಲು ಒಂದು ಗ್ಲಾಸ್ ನಿಂದ ಈ ಥೆರಪಿ ಆರಂಭಿಸಿ, ನಿಧಾನವಾಗಿ 4 ಗ್ಲಾಸ್ ಗೆ ಹೆಚ್ಚಿಸಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಸೇವಿಸುವುದರಿಂದ ಮಲಬದ್ಧತೆ ಉಂಟಾಗುವುದಿಲ್ಲ. ಹೊಟ್ಟೆ ಊದಿಕೊಳ್ಳುವುದು, ಹೊಟ್ಟೆ ನೋವು ಎಲ್ಲವನ್ನೂ ಇದು ಕಡಿಮೆ ಮಾಡುತ್ತದೆ.

ಬಿಸಿನೀರು ಸೇವನೆ ಚರ್ಮಕ್ಕೂ ಹೊಳಪು ತರಬಲ್ಲದು. ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುವ ಮೂಲಕ ಬಿಸಿನೀರು ಟಾಕ್ಸಿನ್ ಗಳನ್ನು ಹೊರಹಾಕುತ್ತದೆ. ಹಾಗಾಗಿ ಚರ್ಮಕ್ಕೆ ಹೊಳಪು ಬರುತ್ತದೆ. ಬಿಸಿನೀರು ಸೇವನೆ ಹಸಿವನ್ನು ಉತ್ತೇಜಿಸುತ್ತದೆ. ನೀರಿನ ಬಿಸಿಯನ್ನು ಕಡಿಮೆ ಮಾಡಲು ನಮ್ಮ ದೇಹ ಶ್ರಮಿಸುತ್ತದೆ, ಇದರಿಂದ ಚಯಾಪಚಯ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ನಿಮ್ಮ ದೇಹ ಹೆಚ್ಚು ಆಹಾರವನ್ನು ಬೇಡುತ್ತದೆ.

ಜೀರ್ಣಕ್ರಿಯೆಗೂ ಬಿಸಿನೀರು ಸೇವನೆ ಸಹಕಾರಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿದ್ರೆ ನಿಮ್ಮ ಕಿಡ್ನಿ ಮತ್ತು ಲಿವರ್ ಕಾರ್ಯಾಚರಣೆ ಉತ್ತಮಗೊಳ್ಳುತ್ತದೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಗಂಟಲು ಕೆರೆತ, ಶೀತ ಇವೆಲ್ಲದರಿಂದ್ಲೂ ಪಾರಾಗಬಹುದು. ಶೀತವಾದಾಗ ಕೂಡ ಬಿಸಿನೀರನ್ನೇ ಕುಡಿಯುವುದು ಉತ್ತಮ.

ಮುಟ್ಟಿನ ಸೆಳೆತ ಮತ್ತು ನೋವಿನಿಂದ್ಲೂ ಬಿಸಿನೀರು ಪರಿಹಾರ ಒದಗಿಸುತ್ತದೆ. ಹೊಟ್ಟೆನೋವು ಬಂದಾಗ ಬಿಸಿನೀರಿನ ಬ್ಯಾಗ್ ಅನ್ನು ಹೊಟ್ಟೆಮೇಲಿಟ್ಟುಕೊಂಡರೆ ರಿಲೀಫ್ ಸಿಗುತ್ತದೆ. ಬಿಸಿನೀರನ್ನು ಕುಡಿಯುವದರಿಂದ್ಲೂ ನೋವು ಕಡಿಮೆಯಾಗುತ್ತದೆ. ಬೇಗ ವೃದ್ಧಾಪ್ಯ ನಿಮ್ಮನ್ನು ಆವರಿಸಿಕೊಳ್ಳದಂತೆ ಬಿಸಿನೀರು ತಡೆಯುತ್ತದೆ. ಬಿಸಿನೀರು ದೇಹದಿಂದ ಟಾಕ್ಸಿನ್ ಗಳನ್ನು ಹೊರಹಾಕುವುದರಿಂದ ನಿಮ್ಮ ಚರ್ಮ ಬೇಗನೆ ಸುಕ್ಕಾಗುವುದಿಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ, ಸೌಂದರ್ಯ

    ನಿಮ್ಮ ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಲೋಳೆಸರ(ಅಲೋವೇರ)ದ ಈ 15 ಅದ್ಭುತ ಪ್ರಯೋಜನಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಲೋಳೆಸರ, ಇದು ಅಲೋವೇರ ಎಂದು ಕರೆಯುವ ಈ ಗಿಡದ ಮೂಲ ಸ್ಥಳ ಆಫ಼್ರಿಕಾ ಖಂಡ. ಅಲೋ ವೆರಾ ಎಂಬುದು ಅನ್ನಿಯ ಕುಲದ ಸಸ್ಯ ಜಾತಿಯಾಗಿದೆ.ಇದು ಪ್ರಪಂಚದಾದ್ಯಂತ ಉಷ್ಣವಲಯದ ಹವಾಮಾನಗಳಲ್ಲಿ ಕಾಡು ಬೆಳೆಯುತ್ತದೆ

  • ಸಿನಿಮಾ

    ‘ಹೆಬ್ಬುಲಿ’ ಜಾಗಕ್ಕೆ ‘ಚಕ್ರವರ್ತಿ’ ಎಂಟ್ರಿ! ‘ಸಂತೋಷ್’ ಯಾರಿಗೆ?

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಚಿತ್ರಮಂದಿರಕ್ಕೆ ಅಪ್ಪಳಿಸಲು ತಯಾರಾಗಿದೆ. ಈಗಾಗಲೇ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ‘ಚಕ್ರವರ್ತಿ’ ಅಭಿಮಾನಿಗಳಲ್ಲಿ ಈಗೊಂದು ಗೊಂದಲ ಕಾಡುತ್ತಿದೆ.[‘ಬಾಹುಬಲಿ’ ಮೀರಿಸಿದ ದರ್ಶನ್ ‘ಚಕ್ರವರ್ತಿ’] ಗಾಂಧಿನಗರದಲ್ಲಿ ‘ಚಕ್ರವರ್ತಿ’ ಚಿತ್ರಕ್ಕೆ ಯಾವುದು ಪ್ರಮುಖ ಚಿತ್ರಮಂದಿರವೆಂಬುದು ಈಗ ಪ್ರಶ್ನೆಯಾಗಿದೆ. ಸದ್ಯ, ದರ್ಶನ್ ಸಿನಿಮಾಗಳ ನೆಚ್ಚಿನ ಚಿತ್ರಮಂದಿರಗಳಲ್ಲಿ ಸುದೀಪ್ ಅಭಿನಯದ ‘ಹೆಬ್ಬುಲಿ’ ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಪ್ರದರ್ಶನವಾಗುತ್ತಿದೆ. ಹೀಗಿರುವಾಗ ‘ಚಕ್ರವರ್ತಿ’ಯ ಎಂಟ್ರಿ ಎಲ್ಲಿ ಎಂಬುದು ಕುತೂಹಲ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಸೀತಾಫಲ ಹಣ್ಣು ಸೇವಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ..?ಒಮ್ಮೆ ತಿಂದು ನೋಡಿ

    ಹಣ್ಣುಗಳ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸೀತಾಫಲ ಕೂಡ ಬಹಳ ರುಚಿಕರ ಹಣ್ಣು. ಸೀತಾಫಲ, ರುಚಿ ಜೊತೆ ಆರೋಗ್ಯಕ್ಕೂ ಬಹಳ ಒಳ್ಳೆಯದು. ಸೀತಾಫಲ ಸೇವನೆಯಿಂದ ಸಾಕಷ್ಟು ಲಾಭಗಳಿವೆ. ಸೀತಾಫಲದಲ್ಲಿ ಎ, ಸಿ, ಬಿ2 ವಿಟಮಿನ್ ಸಾಕಷ್ಟು ಪ್ರಮಾಣದಲ್ಲಿದೆ. ನಿಯಮಿತ ರೂಪದಲ್ಲಿ ಸೀತಾಫಲ ಸೇವನೆಯಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ಸೀತಾಫಲ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಗುಣವಿರುತ್ತದೆ. ಇದು ದೇಹದಲ್ಲಿರುವ ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ. ಕ್ಯಾನ್ಸರ್ ನಂತಹ ಅಪಾಯಕಾರಿ ರೋಗದಿಂದಲೂ ಮುಕ್ತಿ ಪಡೆಯಬಹುದಾಗಿದೆ. ಸೀತಾಫಲದಲ್ಲಿರುವ ಕ್ಯಾಲೋರಿ…

  • ಜ್ಯೋತಿಷ್ಯ

    ಗುರು ರಾಘವೇಂದ್ರ ಸ್ವಾಮಿಯನ್ನು ನೆನೆಯುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(25 ಏಪ್ರಿಲ್, 2019) ನೀವು ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು ಇದು ನಿಮ್ಮನ್ನು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು…

  • ಸಂಬಂಧ

    ಒಂದು ಫೋಟೋಗಾಗಿ ಮದುವೆಮನೆಯಲ್ಲೇ ಕಿತ್ತಾಡಿಕೊಂಡ ವಧು ವರರು!ಆಮೇಲೆ ಏನಾಯ್ತು ಗೊತ್ತಾ???

    ಕೆಲವಾರು ಮದುವೆ ಸಮಾರಂಭಗಳಲ್ಲಿ ತಲೆದೋರುವ ನಾನಾರೀತಿಯ ಸಮಸ್ಯೆಗಳಿಂದ ವಿವಾದಗಳುಂಟಾಗಿ ಮದುವೆ ಮಂಟಪಗಳಲ್ಲಿಯೇ ವಧು, ವರರು ಮತ್ತು ಅವರ ಕಡೆಯವರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುವುದೂ ಇದೆ. ಇಂತಹುದೇ ಘಟನೆ ಇದೀಗ ರಾಜಸ್ಥಾನದಲ್ಲೂ ನಡೆದಿದೆ. ಸಪ್ತಪದಿಯ ಸಂದರ್ಭದಲ್ಲಿ ಗಂಡು ತಾನು ಮದುವೆಯಾಗವ ಮದುಮಗಳೆದುರು ಇಟ್ಟ ಬೇಡಿಕೆಯಿಂದಾಗಿ ಜಗಳವೇರ್ಪಟ್ಟಿದ್ದಲ್ಲದೇ ಮದುವೆಯೇ ಮುರಿದು ಬಿದ್ದಿದೆ.

  • India, Place

    ಕೈಲಾಸ ಪರ್ವತ

    ಕೈಲಾಸ ಪರ್ವತವು ಟಿಬೆಟ್ ನ ಹಿಮಾಲಯ  ಶ್ರೇಣಿಯ ಗಾಂಗ್ ಡೈಸ್ ಸರಣಿಯ ಒಂದು ಶಿಖರ. ಈ ಪರ್ವತಪ್ರದೇಶವು ಏಷ್ಯಾದ ಹಲವು ಮಹಾನದಿಗಳಿಗೆ ಮೂಲಸ್ಥಾನವಾಗಿದೆ. ಸಿಂಧೂ ನದಿ , ಸಟ್ಲೆಜ್ ನದಿ ಮತ್ತು ಬ್ರಹ್ಮಪುತ್ರ ಈ ಆಸುಪಾಸಿನಲ್ಲಿಯೇ ಉಗಮಿಸುತ್ತವೆ. ಕೈಲಾಸಪರ್ವತವು ಹಿಂದೂ ಬೌದ್ಧ, ಜೈನ ಮತ್ತು ಬಾನ್ಧರ್ಮೀಯರಿಗೆ ಪವಿತ್ರ ತಾಣವಾಗಿದೆ. ಹಿಂದೂ ನಂಬಿಕೆಗಳ ಪ್ರಕಾರ ಕೈಲಾಸಪರ್ವತವು ಪರಶಿವನ ನೆಲೆ. ಕೈಲಾಸಪರ್ವತವು ಟಿಬೆಟ್ ನಲ್ಲಿ ಮಾನಸಸರೋವರ ಮತ್ತು ರಾಕ್ಷಸ್ ತಾಲ್ ಗಳ ಮಗ್ಗುಲಲ್ಲಿದೆ. ಕೈಲಾಸಪರ್ವತದ ಆರೋಹಣವನ್ನು ಮಾಡಿದುದರ ಬಗೆಗೆ ಯಾವುದೇ ದಾಖಲೆಗಳಿಲ್ಲ. ಹಿಂದೂ ಮತ್ತು ಬೌದ್ಧ ಧರ್ಮೀಯರು ಕೈಲಾಸಪರ್ವತವನ್ನು ಅತಿ ಪವಿತ್ರ ತಾಣವಾಗಿ ಪರಿಗಣಿಸುವುದರಿಂದಾಗಿ ಈ…