ಅಪಾರ ಔಷಧ ಗುಣ ಹೊಂದಿರುವ ನುಗ್ಗೆ ಸೊಪ್ಪನ್ನು ನೇರವಾಗಿ ಮಾರಾಟ ಮಾಡಿದರೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಎಂದು ತಿಳಿದ, ತಾಲೂಕಿನ ತಾವರಗೇರಾ ಪ್ರದೇಶದ ರೈತರೊಬ್ಬರು, ಸೊಪ್ಪಿನಿಂದ ತಯಾರಿಸಿದ ಪುಡಿಯನ್ನು ವಿದೇಶಗಳಿಗೆ ರಫ್ತುಮಾಡಿ ಗಮನಸೆಳೆದಿದ್ದಾರೆ.
ಮೂಲತಃ ಗಂಗಾವತಿ ತಾಲೂಕಿನವರಾದ ಬಸಯ್ಯ ಹಿರೇಮಠ, ತಾವರಗೇರಾ ಪ್ರದೇಶದಲ್ಲಿ 30ಎಕರೆ ಜಮೀನು ಖರೀದಿಸಿ, ನುಗ್ಗೆ ಬೇಸಾಯದಲ್ಲಿ ತೊಡಗಿದ್ದಾರೆ. ತೋಟಗಾರಿಕೆ ಕೃಷಿಯನ್ನು ವಿಶಿಷ್ಟ ರೀತಿಯಲ್ಲಿ ಕೈಗೊಳ್ಳಲು ಅವರಿಗೆ ಸಾಮಾಜಿಕ ಜಾಲತಾಣ ನೆರವಿಗೆ ಬಂದಿದೆ. ನುಗ್ಗೆ ಸೊಪ್ಪನ್ನು ನಿಗದಿತ ಉಷ್ಣಾಂಶದಲ್ಲಿ ಒಣಗಿಸಿ ಪೌಡರ್ ಆಗಿ ಪರಿವರ್ತಿಸಿದರೆ 2 ವರ್ಷಗಳವರೆಗೆ ದಾಸ್ತಾನು ಮಾಡಬಹುದು. ಆಹಾರವಸ್ತುವಾಗಿ ಬಳಸಬಹುದಾಗಿದೆ ಎಂಬ ಅಂಶ ಅವರ ಗಮನಸೆಳೆದಿದೆ. 20ಎಕರೆ ಪ್ರದೇಶದಲ್ಲಿ ನುಗ್ಗೆ ಸಸಿಗಳನ್ನು ನಾಟಿ ಮಾಡಿದ್ದಾರೆ. ತಮ್ಮ ಹೊಲಕ್ಕೆ ಹೊಂದಿಕೊಂಡಿರುವ ಇತರ ರೈತರ 15 ಎಕರೆಯನ್ನು ಲೀಸ್‌ಗೆ ಪಡೆದು ಅಲ್ಲೂ ನುಗ್ಗೆ ಸಸಿಗಳನ್ನು ಬೆಳೆಸಿದ್ದಾರೆ.
ಪೌಡರ್ ತಯಾರಿಸುವ ವಿಧಾನ:
ನುಗ್ಗೆ ಸಸಿಗಳಲ್ಲಿ ಕಾಯಿಯಾಗುವವರೆಗೆ ಈ ರೈತ ಕಾಯುವುದಿಲ್ಲ. ಗಿಡಗಳಲ್ಲಿನ ಸೊಪ್ಪನ್ನು ಆಗಾಗ್ಗೆ ಕೊಯ್ಲು ಮಾಡುತ್ತಾರೆ. ಎಲೆಗಳ ಬಣ್ಣ ಕೆಡದಂತೆ ಪಾಲಿ ಡ್ರೈಯಿಂಗ್ ವಿಧಾನದ ಮೂಲಕ ಕನಿಷ್ಠ 26 ಡಿಗ್ರಿ, ಗರಿಷ್ಠ 48 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಎಲೆಗಳನ್ನು ಒಣಗಿಸಲಾಗುತ್ತದೆ. ನಂತರ ಪೌಡರ್‌ಮಾಡಿ ಪ್ಯಾಕ್ ಮಾಡಲಾಗುತ್ತದೆ.
ಹಸಿ ಎಲೆಗಳನ್ನು ನೇರವಾಗಿ ಅಡುಗೆಗೆ ಅಥವಾ ಸೇವನೆಗೆ ಬಳಸಲು ಜನರು ಹಿಂದೇಟು ಹಾಕುತ್ತಾರೆ. ನಿಗದಿತ ಉಷ್ಣಾಂಶದಲ್ಲಿ ಎಲೆಗಳನ್ನು ಒಣಗಿಸಿ ಪೌಡರ್ ತಯಾರಿಸಿ ಮಾರಾಟ ಮಾಡಿದರೆ ಬೇಡಿಕೆಯ ಜತೆಗೆ ಬೆಲೆಯೂ ಹೆಚ್ಚು ಎಂಬುದು ರೈತ ಬಸಯ್ಯ ಹಿರೇಮಠ ಅವರ ಅನುಭವದ ಮಾತಾಗಿದೆ. ಹೀಗೆ ಸ್ಥಳೀಯವಾಗಿ ತಯಾರಿಸಿದ ನುಗ್ಗೆ ಪೌಡರ್‌ಗೆ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಿಂದ ಆರ್ಡರ್ ಬಂದಿರುವುದೇ ಅವರ ಉತ್ಸಾಹ ಇಮ್ಮಡಿಗೊಳಿಸಿದೆ.
ನುಗ್ಗೆ ಎಲೆಯಲ್ಲಿ ಸಾಕಷ್ಟು ಪೋಷಕಾಂಶಗಳು ಇರುವುದು ಪ್ರಯೋಗಗಳಿಂದ ರುಜುವಾತಾಗಿದೆ. ಇದರಲ್ಲಿ ಪೊಟ್ಯಾಷಿಯಂ, ಅಮಿನೋ ಆ್ಯಸಿಡ್, ಕ್ಯಾಲ್ಸಿಯಂ, ಕಬ್ಬಿಣಾಂಶ, ಕ್ಲೊರೊಫೆರಿಲ್ ನಾರಿನಾಂಶ ಇದೆ. ಮಧುಮೇಹ ರೋಗಿಗಳಿಗೆ ಇದು ಸೂಕ್ತ ಆಹಾರ. ಬಿ.ಪಿ. ನಿಯಂತ್ರಿಸುವ, ಕ್ಯಾನ್ಸರ್‌ಕಾರಕ ಅಂಶಗಳನ್ನು ನಾಶಮಾಡುವ ಗುಣವನ್ನು ನುಗ್ಗೆ ಸೊಪ್ಪು ಹೊಂದಿದೆ. ಸೊಪ್ಪನ್ನು ಸಾಂಬರ್‌ಗೆ ಹಾಕಬಹುದಾಗಿದೆ.
ನುಗ್ಗೆ ಸೊಪ್ಪಿನಿಂದ ಪೌಡರ್ ತಯಾರಿಸುವ ಘಟಕ ಆರಂಭಿಸುವುದಾಗಿ ಬಸಯ್ಯ ಹಿರೇಮಠ ಹೇಳಿದಾಗ ಆ ಬಗ್ಗೆ ಅಧ್ಯಯನ ನಡೆಸಲಾಯಿತು. ವೈಜ್ಞಾನಿಕವಾಗಿ ಇದು ಎಷ್ಟು ಸರಿ ಎಂಬುದನ್ನು ನಾನಾ ಆಕರಗಳ ಮೂಲಕ ತಿಳಿದು, ನುಗ್ಗೆ ಬೆಳೆ ಮತ್ತು ಪ್ರೊಸೆಸಿಂಗ್ ಯುನಿಟ್‌ಗೆ ಇಲಾಖೆಯಿಂದ ನೆರವು ನೀಡಲು ಪ್ರಸ್ತಾವನೆ ಕಳುಹಿಸಲಾಗಿತ್ತು. ಇದೀಗ ಅದು ಸಾಕಾರಗೊಂಡಿದೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಚಿಕ್ಕೋಡಿ: ಚಕ್ರ ಸ್ಫೋಟಗೊಂಡು ಚಲಿಸುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ ಸುಮಾರು 10ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಕ್ಷಿ ಗ್ರಾಮದಲ್ಲಿ ನಡೆದಿದೆ. ಸಾರಿಗೆ ಬಸ್ ಗೋಕಾಕ್ನಿಂದ ಸಂಕೇಶ್ವರ ಪಟ್ಟಣದತ್ತ ಹೋಗುತಿತ್ತು. ಬಸ್ಸಿನಲ್ಲಿ ಸುಮಾರು 34 ಮಂದಿ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಡ್ಡದಿಡ್ಡಿ ಹೋಗುತಿತ್ತು. ಬಸ್ ರಕ್ಷಿ ಗ್ರಾಮದ ಹೊರವಲಯದ ಯರಗಟ್ಟಿ – ಸಂಕೇಶ್ವರ ರಾಜ್ಯ ಹೆದ್ದಾರಿ ಮೇಲೆ ಬರುತ್ತಿದ್ದಂತೆ ಏಕಾಏಕಿ…
ಹಿಂದುಗಳಿಗೆ ಅಮಾವಾಸ್ಯೆ ಹುಣ್ಣಿಮೆಯಿಂದ ಹಿಡಿದು ಪ್ರತಿದಿನವೂ ಒಂದು ರೀತಿಯ ಹಬ್ಬವೇ ಸರಿ. ವರ್ಷದಲ್ಲಿ ಹೆಚ್ಚಿನ ಹಬ್ಬಗಳನ್ನ ಆಚರಿಸುವವರು ಕೂಡ ಇವರೇ, ಪ್ರತಿ ಹಬ್ಬಗಳು ಸಹ ಒಂದೊಂದು ವಿಶೇಷತೆಯನ್ನ ಹೊಂದಿವೆ ಎಂದರೆ ಖಂಡಿತ ತಪ್ಪಾಗಲಾರದು.ಹಿಂದೂಗಳು ಹೆಚ್ಚಾಗಿ ಸಂಪ್ರದಾಯಗಳನ್ನ ಇನ್ನು ಸಹ ಆಚರಣೆಯಲ್ಲಿಟ್ಟಿದ್ದರೆ, ಒಂದೊಂದು ಆಚರಣೆಗಳಿಗೂ ಸಹ ಒಂದೊಂದು ಮಹತ್ವವಿದೆ.
ಸರಕಾರಿ ಮತ್ತು ಖಾಸಗಿ ಕಂಪನಿ ಎಲ್ಲಿ ಕೆಲಸ ಮಾಡಿದರೂ ,ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡಿದರೂ, ಉದ್ದ್ಯೋಗಿಗಳು ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದರು ಪ್ರಮೋಷನ್, ಸಂಬಳ ಹೆಚ್ಚಳದ ಬಗ್ಗೆ ಎದರು ನೋಡುತ್ತಿರುತ್ತಾರೆ
ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಇಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 33 ವರ್ಷ ಸೇವೆ ಸಲ್ಲಿಸಿದವರ ಅಥವಾ 60 ವರ್ಷ ತುಂಬಿದವರನ್ನು ಸೇವೆಯಿಂದ ನಿವೃತ್ತಿಗೊಳಿಸುವ ಕುರಿತು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗಿತ್ತು. ಆದರೆ, ಈ ಕುರಿತ ಗೊಂದಲಗಳಿಗೆ ತೆರೆ ಬಿದ್ದಿದೆ. ನಿವೃತ್ತಿ ವಯಸ್ಸನ್ನು ಕಡಿಮೆ ಮಾಡುವ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹ ಮತ್ತು ವದಂತಿಗಳು ಹರಡಿದ ಬಗ್ಗೆ ಕೇಂದ್ರ ಸರ್ಕಾರ…