ಸುದ್ದಿ

ಕೊರೋನಾ ವೈರಸ್ ಭಯದಲ್ಲಿದ್ದ ಜನರಿಗೆ ಮತ್ತೊಂದು ಶಾಕ್, ಬಂದಿದೆ ಇನ್ನೊಂದು ಖಾಯಿಲೆ!

166

ಈಗಾಗಲೇ ಕೊರೊನ ವೈರಸ್ ಪ್ರಕರಣಗಳು ಭಾರತದಲ್ಲಿ ಬೆಳಕಿಗೆ ಬಂದಿವೆ, ಈ ಬಗ್ಗೆ ಹಲವು ನ್ಯೂಸ್ ಚಾನೆಲ್ ಗಳು ಒಂದೊಂದು ರೀತಿಯ ವರದಿ ಮಾಡುತ್ತಿವೆ. ದೇಶದಲ್ಲಿ ಈಗಾಗಲೇ ಈ ವೈರಸ್ ಬಗ್ಗೆ ಭಾರಿ ಪ್ರಮಾಣದ ಜಾಗ್ರತೆ ವಹಿಸಲಾಗಿದೆ, ಏಕೆಂದರೆ ಈ ಮಹಾಮಾರಿ ವೈರಸ್ ಈಗಾಗಲೇ ಚೀನಾದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರ ಪ್ರಾಣ ತೆಗೆದುಕೊಂಡಿದೆ. ಕೊರೋನಾ ವೈರಸ್ ಎಂಬ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ವಿಶ್ವದಾದ್ಯಂತ 100,000 ಮೀರಿದೆ ಎಂದು ಶನಿವಾರ ಬಿಡುಗಡೆಯಾದ ಅಧಿಕೃತ ಮಾಹಿತಿ ತಿಳಿಸಿದೆ. ಇನ್ನು ವಿಶ್ವಸಂಸ್ಥೆ ಕೂಡ ಕೊರೋನಾ ಬಗ್ಗೆ ಭಾರಿ ಮಟ್ಟದಲ್ಲಿ ಕಳವಳ ವ್ಯಕ್ತ ಪಡಿಸಿದೆ, ಪ್ರಪಂಚದ 94 ರಾಷ್ಟ್ರಗಳು ಹಾಗು ಹಲವು ಭಾಗಗಳಲ್ಲಿ ಕೊರೋನಾ ಹರಡಿರುವ ಬಗ್ಗೆ ವರದಿಯಾಗಿದೆ.

ಚೀನಾದಲ್ಲಿ ಸಾವಿರಾರು ಮಂದಿಯ ಸಾವಿಗೆ ಕಾರಣವಾಗಿರುವ ಕೊರೋನಾ ವೈರಸ್ ಪ್ರಕರಣ ಕರ್ನಾಟಕದಲ್ಲಿ ಕೂಡ ವರದಿಯಾಗಿದೆ. ಮೊದಲಿಗೆ ಹೈದರಾಬಾದ್ ನ ಟೆಕ್ಕಿ ಗೆ ಕೊರೋನಾ ಸೋಂಕು ತಗುಲಿ ನಂತರ ಬೆಂಗಳೂರಿನಿಂದ ಆತ ತನ್ನ ಊರಿಗೆ ಪ್ರಯಾಣಿಸಿದ್ದಾನೆ ಎಂದು ವರದಿಯಾಗಿತ್ತು, ಇದಾದ ಬಳಿಕ ಬೆಂಗಳೂರಿನಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ. ಸದ್ಯಕ್ಕೆ ಒಂದೆಡೆ ಕೊರೋನಾ ಭೀತಿಯಿಂದ ಬದುಕುತ್ತಿರುವ ಕರ್ನಾಟಕದ ಜನತೆಗೆ ಇದೀಗ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ, ಹೌದು ಸದ್ಯಕ್ಕೆ ಕರುನಾಡಿಗೆ ನೆರೆ ರಾಜ್ಯದಿಂದ ಬಂದಿರುವ ಆ ಒಂದು ಸುದ್ದಿ ಮತ್ತಷ್ಟು ಸಂಕಷ್ಟ ತರಿಸಿದೆ.

ಒಂದು ಕಡೆ ಕರೋನ ವೈರಸ್ ನಿಂದ ಭಯಭೀತರಾಗಿದ್ದಾರೆ ಇನ್ನೊಂದು ಕೇರಳದ ಕೋಳಿಕೋಡ್ ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಕೋಳಿ ಫಾರಂ ಹಾಗೂ ಖಾಸಗಿ ನರ್ಸರಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು ಕೂಡಲೇ ಕೇರಳ ಪಶುಸಂಗೋಪನಾ ಇಲಾಖೆ ತುರ್ತು ಸಭೆ ಕರೆದಿದೆ. ಪ್ರತಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳು ಸಾಯುತ್ತಿರುವುದರಿಂದ ಅನುಮಾನಗೊಂಡ ಕೋಳಿ ಸಾಕಾಣಿಕೆಗಾರರು ಕೋಳಿಗಳನ್ನ ಕಣ್ಣೂರು ಲ್ಯಾಬ್ ಮತ್ತು ಭೋಪಾಲ್ ಲ್ಯಾಬ್ ಗಳಿಗೆ ಕಳುಹಿಸಿದ್ದರು, ಇನ್ನು ಇನ್ನು ಲ್ಯಾಬ್ ಗೆ ಕಳುಹಿಸಲಾಗಿದ್ದ ಕೋಳಿಗಳನ್ನ ಪರಿಶೀಲನೆ ಮಾಡಿದಾಗ ಕೋಳಿಗಳಿಗೆ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ.

ರೋಗವು ನಿಯಂತ್ರಣದಲ್ಲಿದೆ ಮತ್ತು ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಕೇರಳದ ಅರೋಗ್ಯ ಇಲಾಖೆ ತಿಳಿಸಿದೆ, ಆದರೆ ಅಧಿಕಾರಿಗಳು ರಾಜ್ಯದಲ್ಲಿ ಹೆಚ್ಚಿನ ಎಚ್ಚರಿಕೆ ನೀಡುವಂತೆ ಒತ್ತಾಯಿಸಿದ್ದಾರೆ. ಇದು 2016 ರ ನಂತರ ಏಕಾಏಕಿ ರಾಜ್ಯದಲ್ಲಿ ಬರ್ಡ್ ಫ್ಲೂ ಪ್ರಕರಣವಾಗಿದೆ, ಪ್ರತಿದಿನ ಇನ್ನೂರು ಕೋಳಿಗಳು ಸಾಯಲು ಪ್ರಾರಂಭಿಸಿದಾಗ ರೋಗಗಳ ಅನುಮಾನ ಹೊರಹೊಮ್ಮಿತು ಎಂದು ಇಲಾಖೆ ಸ್ಪಷ್ಟಪಡಿಸಿದೆ. ಹಕ್ಕಿಗಳ ಸಾವಿನ ಬಗ್ಗೆ ನಮಗೆ ಗುರುವಾರವಾಷ್ಟೇ ಮಾತ್ರ ಮಾಹಿತಿ ನೀಡಲಾಯಿತು, ಕೂಡಲೇ ನಾವು ಪರೀಕ್ಷಾ ಮಾದರಿಗಳನ್ನು ಕಣ್ಣೂರು ಪ್ರಯೋಗಾಲಯಕ್ಕೆ ಮತ್ತು ನಂತರ ಭೋಪಾಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ ಮತ್ತು ನಾವು ಇನ್ನೂ ಮುಖ್ಯ ಕಾರ್ಯದರ್ಶಿಯಿಂದ ಮಾರ್ಗಸೂಚಿಗಳನ್ನು ಸ್ವೀಕರಿಸಿಲ್ಲ ಎಂದು ಪಶುಸಂಗೋಪನಾ ಅಧಿಕಾರಿ ಕೆ ಸಿಂಧು ಹೇಳಿದರು.

ವರದಿಗಳ ಪ್ರಕಾರ ಭೋಪಾಲ್ ಪ್ರಯೋಗಾಲಯದಿಂದ ಹಕ್ಕಿ ಜ್ವರ ಧ್ರಡೀಕರಣವಾಗಿದೆ, ಹೀಗಾಗಿ ಗಡಿಭಾಗ ಆಗಿರುವುದರಿಂದ ಕರ್ನಾಟಕ ಕೂಡ ಮತ್ತಷ್ಟು ಎಚ್ಚರ ವಹಿಸಬೇಕಾಗಿದೆ, ಒಂದೆಡೆ ಕೊರೋನಾ ಇನ್ನೊಂದೆಡೆ ಹಕ್ಕಿ ಜ್ವರ ಇವೆರಡು ಈಗ ಕರ್ನಾಟಕಕ್ಕೆ ಸಂಕಷ್ಟ ತಂದಿದೆ ಎನ್ನಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ