ಸುದ್ದಿ

ಮೀನುಗಾರರ 60 ಕೋಟಿ ಸಾಲ ಮನ್ನಾ ಮಾಡಿ ಬಂಪರ್ ಖುಷಿ ನೀಡಿದ ಯಡಿಯೂರಪ್ಪ…!

33

ಬೆಂಗಳೂರು, ಜುಲೈ 29  ಅಧಿಕಾರಕ್ಕೆ ಬಂದ ದಿನವೇ ನೇಕಾರರ ಸಾಲಮನ್ನಾ ಮಾಡುವ ಮೂಲಕ ಮಹತ್ವದ ಘೋಷಣೆ ಮಾಡಿದ್ದ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕರಾವಳಿ ಭಾಗದ ಮೀನುಗಾರರಿಗೆ ಸಂತಸದ ಸುದ್ದಿ ನೀಡಿದ್ದಾರೆ.

ಕರಾವಳಿ ಭಾಗದ ಮೂರು ಜಿಲ್ಲೆಗಳ ಮೀನುಗಾರರಿಗೆ ಯಡಿಯೂರಪ್ಪ ಅವರು ಸಾಲಮನ್ನಾದ ಸಿಹಿ ಸುದ್ದಿ ನೀಡಿದ್ದಾರೆ. 2017-18, 2018-19 ಸಾಲಿನಲ್ಲಿ  ಕರಾವಳಿಯ 3 ಜಿಲ್ಲೆಗಳಲ್ಲಿ  ಒಟ್ಟು 23507 ಮೀನುಗಾರರು  ವಾಣಿಜ್ಯ  ಮತ್ತು ಪ್ರಾದೇಶಿಕ ಬ್ಯಾಂಕುಗಳಲ್ಲಿ ಮಾಡಿರುವ ಒಂದು ಹಂತದವರೆಗಿನ ಸಾಲವನ್ನು ಮನ್ನಾ ಮಾಡುವ ಕುರಿತು ಬಿ.ಎಸ್ ಯಡಿಯೂರಪ್ಪ ಅವರು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಶಾಸಕರಾದ  ರಘುಪತಿಭಟ್ಇವರ  ನೇತೃತ್ವದಲ್ಲಿ  ಭಾನುವಾರ  ನಡೆದ  ಶಾಸಕಾಂಗ  ಸಭೆಯಲ್ಲಿ  ಮೂರು ಜಿಲ್ಲೆಗಳ  ಕರಾವಳಿಯ  ಶಾಸಕರು  ಮುಖ್ಯಮಂತ್ರಿಗಳಲ್ಲಿ  ಆಗ್ರಹ  ಮಾಡಿದ  ಮೇಲೆ  ಸೋಮವಾರ  ನಡೆದ ಕ್ಯಾಬಿನೆಟ್ನಲ್ಲಿ  ಈ  ನಿರ್ಣಯಮಾಡಿರುತ್ತಾರೆ.

 ಹಾಗಾಗಿ ನೇಕಾರರ ಜೊತೆಗೆ ಮೀನುಗಾರರ ಸಮುದಾಯಕ್ಕೂ ಈ ಸವಲತ್ತನ್ನು ವಿಸ್ತರಣೆ ಮಾಡಿದಂತಹ ಮುಖ್ಯ ಮಂತ್ರಿಯವರಿಗೆ ಉಡುಪಿ ಶಾಸಕರಘು ಪತಿಭಟ್ರವರು ಅಭಿನಂದನೆ  ಸಲ್ಲಿಸಿರುತ್ತಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಹಸುವಿನ ಹೊಟ್ಟೆ ಮೇಲೆ ತಾಯಿಯ ಮಡಿಲಿನಲ್ಲಿ ಮಗುವಿನ ಆರೈಕೆಯ ದೃಶ್ಯ.

    ಸಾಮಾನ್ಯವಾಗಿ ಹಸುವಿನ ಹೊಟ್ಟೆ ಮೇಲೆ ಕಪ್ಪು-ಬಿಳುಪು ಬಣ್ಣವಿರುವ  ನಾನಾ ರೀತಿಯ ಚಿತ್ರಗಳು ಕಾಣಸಿಗುತ್ತವೆ. ಇದೀಗ ಇಂತದ್ದೇ ಹಸುವಿನ ಹೊಟ್ಟೆ ಮೇಲೆ ತಾಯಿಯ ಮಡಿಲಿನಲ್ಲಿ ಮಗುವಿನ ಆರೈಕೆಯ ಚಿತ್ರವೊಂದು ಮೂಡಿ ಎಲ್ಲರ ಗಮನ ಸೆಳೆದಿದೆ.  ಮೂಲತಃ ಕೃಷಿ ಜೊತೆಗೆ ಹೈನುಗಾರಿಕೆ ಮಾಡುವ ಜಾಧವ್ ಕುಟುಂಬ ನಾಲ್ಕು ವರ್ಷಗಳ ಹಿಂದೆ ಮಹಾರಾಷ್ಟ್ರದ ಮೀರಜ್ ಜಾನುವಾರು ಮಾರುಕಟ್ಟೆಯಿಂದ ಬಿಳಿ – ಕಪ್ಪು ಬಣ್ಣದ ಜರ್ಸಿ ಪ್ರಬೇಧದ ಹಸುವನ್ನು ತಂದಿದ್ದರು. ಕಳೆದ ಮೂರು ವರ್ಷಗಳಿಂದ ಹೊಟ್ಟೆಯ ಮೇಲೆ ಈ ರೀತಿ ಹಚ್ಚೆ ಮೂಡಲು ಆರಂಭವಾಗಿ…

  • ಆರೋಗ್ಯ

    ಕರ್ಜೂರದಲ್ಲಿರುವ ಆರೋಗ್ಯಕಾರಿ ಗುಣಗಳ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ರುಚಿ ರುಚಿ ಕರ್ಜೂರ ಆರೋಗ್ಯಕ್ಕೂ ಒಳ್ಳೆಯದು. ಪ್ರತಿದಿನ ಕರ್ಜೂರ ತಿನ್ನುವುದರಿಂದ ಸಾಕಷ್ಟು ಲಾಭಗಳಿವೆ. ಮಿನರಲ್, ಫೈಬರ್, ವಿಟಮಿನ್ ಇದ್ರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕೇವಲ ಮೂರು ಕರ್ಜೂರ ತಿನ್ನುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶ ನಮ್ಮ ದೇಹ ಸೇರುತ್ತದೆ.

  • ರಾಜಕೀಯ

    ಬಿಜೆಪಿ 2023 ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ?

    ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್, ಅರ್ಧ ಲೀ. ಉಚಿತ ನಂದಿನಿ ಹಾಲು: ಬಿಜೆಪಿಯಿಂದ ಪ್ರಣಾಳಿಕೆ ರಿಲೀಸ್ !!! ಬಿಪಿಎಲ್ (BPL) ಕುಟುಂಬಗಳಿಗೆ ಪ್ರತಿವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ಒಂದರಂತೆ 3 ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಉಚಿತವಾಗಿ ವಿತರಿಸುತ್ತೇವೆ ಎಂದು ಬಿಜೆಪಿ (BJP) ತನ್ನ ಚುನಾವಣಾ (Election) ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ರಾಜ್ಯದ ವಿಧಾನ ಸಭೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ…

  • ವಿಸ್ಮಯ ಜಗತ್ತು

    ಇಂತಹ ಮೈ ಜುಮ್ಮೆನಿಸುವ ಶವ ಸಂಸ್ಕಾರ ನೀವು ಎಲ್ಲಿಯೂ ನೋಡಿಲ್ಲ, ಕೇಳಿಲ್ಲ!ಗುಂಡಿಗೆ ಇರೋರು ಮಾತ್ರ ಓದಿ…

    ಮರಣಾ ನಂತರದ ದೇಹದ ವಿಸರ್ಜನ ಕ್ರಿಯೆಗೆ ಅಂತ್ಯೇಷ್ಟಿ ಅಥವಾ ಅಂತಿಮ ಸಂಸ್ಕಾರ ಎಂದು ಕರೆಯಲಾಗುತ್ತದೆ.ನಮ್ಮ ಭಾರತ ದೇಶದಲ್ಲಿ ಅಂತ್ಯಸಂಸ್ಕಾರವು ಧರ್ಮದಿಂದ ಧರ್ಮಕ್ಕೆ ವಿಭಿನ್ನವಾಗಿರುತ್ತದೆ. ಆದರೆ ನಮ್ಮ ಪಕ್ಕದ ದೇಶವಾದ ಟಿಬೇಟಿನಲ್ಲಿ ವಿಚಿತ್ರ ರೀತಿಯ ಶವ ಸಂಸ್ಕಾರ ಮಾಡುತ್ತಾರೆ. ಸಾಮಾನ್ಯರು ಸತ್ತಾಗ ಹಳೆಯ ಟೈರು ಮತ್ತಿತರ ಉರಿಯುವ ವಸ್ತುಗಳನ್ನು ಉಪಯೋಗಿಸಿ ಶವದಹನ ಮಾಡುವ ಪದ್ಧತಿ ಇದು. ಎರಡನೆಯದು ಹೊಂಡ ತೆಗೆದು ಹೂಳುತ್ತಾರೆ.ಮೂರನೆಯದು ಸತ್ತ ಮೂರೂ ದಿನಗಳ ನಂತರ ಹೆಣವನ್ನು ಬಟ್ಟೆಯಲ್ಲಿ ಸುತ್ತಿ ನೀರಿನಲ್ಲಿ ಹಾಕುತ್ತಾರೆ. ನಾಲ್ಕನೆಯ ಶವ ಸಂಸ್ಕಾರ ಮಾಡುವ…

  • ಆರೋಗ್ಯ

    ನೈಸರ್ಗಿಕವಾಗಿ ಹೊಟ್ಟೆಯ ಬೊಜ್ಜು ಕರಗಿಸಬೇಕೇ, ಹಾಗಾದರೆ ಹೀಗೆ ಮಾಡಿ.

    ಬೊಜ್ಜು ಕರಗಲು ಸರಳ ಯೋಗಾಸನವಾದ ಊರ್ಧ್ವ ಪ್ರಸಾರಿತ ಪಾದಾಸನದ ಅಭ್ಯಾಸ ಮಾಡಬಹುದು. ಊರ್ಧ್ವ ಎಂದರೆ ಮೇಲ್ಮುಖ, ಪ್ರಸಾರಿತ ಎಂದರೆ ವಿಸ್ತ್ರತ. ಪಾದ ಎಂದು ಕಾಲು ಮತ್ತು ಆಸನ ಎಂದರೆ ಯೋಗಭಂಗಿ. ಸಾಮಾನ್ಯ ಎಲ್ಲ ವಯಸ್ಸಿನವರು ಅಭ್ಯಾಸ ಮಾಡಬಹುದು. ಆರಂಭದಲ್ಲಿ ಹೊಸಬರು ಗೋಡೆಯ ಸಹಾಯ ತೆಗೆದುಕೊಳ್ಳಬಹುದು. ವಿಧಾನ: ನೆಲದ ಮೇಲೆ ಆರಾಮವಾಗಿ ವಿಶ್ರಾಂತಿ ಮಾಡಿ. ಆಮೇಲೆ ಕಾಲುಗಳು ಜೋಡಣೆ, ಕೈಗಳನ್ನು ತೊಡೆಯ ಪಕ್ಕದಲ್ಲಿ ಇರಿಸಿ. ಸ್ವಲ್ಪ ಹೊತ್ತು ಈ ಸ್ಥಿತಿಯಲ್ಲಿದ್ದು, ಉಸಿರನ್ನು ತೆಗೆದುಕೊಳ್ಳುತ್ತ ನಿಧಾನವಾಗಿ ಎರಡೂ ಕಾಲುಗಳನ್ನು 30ರಿಂದ…

  • ಗ್ಯಾಜೆಟ್

    ಮುಂಬರುವ ದಿನಗಳಲ್ಲಿ ಹೂವಾವೆಯ್ ಇಂಡಿಯಾದಿಂದ 5G ತಂತ್ರಜ್ಞಾನ ಬಳಕೆ..?ತಿಳಿಯಲು ಈ ಲೇಖನ ಓದಿ..

    ಮುಂದಿನ ಕೆಲ ದಿನಗಳಲ್ಲಿ ಭಾರತಕ್ಕೆ 5ಜಿ ತಂತ್ರಜ್ಞಾನ ತರಲು Huawei ತುದಿಗಾಲಲ್ಲಿ ನಿಂತಿದೆ, ಭಾರತೀಯರು 4ಜಿ ತಂತ್ರಜ್ಞಾನದ ರುಚಿ ಸವಿಯುತ್ತಿರುವ ಬೆನ್ನಲ್ಲೇ ಇದೀಗ ೫ಜಿ ತಂತ್ರಜ್ಞಾನವು ಭಾರತಕ್ಕೆ ಬರುತ್ತಿರುವುದು ಕೌತುಕಕ್ಕೆ ಕಾರಣವಾಗಿದೆ.