Health

ಹಲವು ರೋಗಗಳಿಗೆ ರಾಮಬಾಣ ಗೋಲ್ಡನ್ ಮಿಲ್ಕ್​. ಇದರ ಬಗ್ಗೆ ನಿಮಗೆ ಗೊತ್ತಾ?

75

ಅರಿಶಿನ ಬೆರೆತ ಹಾಲು ಭಾರತೀಯರಿಗೆ ಅಪರಿಚಿತವೇನಲ್ಲ. ಯಾವಾಗ ಶೀತ ಕೆಮ್ಮು ನೆಗಡಿ ಜ್ವರ ಬಂತೋ ನಮ್ಮ ಹಿರಿಯರು ಮೊದಲಾಗಿ ಅರಿಶಿನ ಪುಡಿ ಹಾಕಿ ಕುದಿಸಿದ ಹಾಲನ್ನು ಬಿಸಿಬಿಸಿಯಾಗಿ ಕುಡಿಸುತ್ತಿದ್ದರು. ಈ ಹಾಲು ನಮಗೆ ಔಷಧಿಯ ರೂಪದಲ್ಲಿ ಪರಿಚಿತವೇ ಹೊರತು ತೂಕ ಇಳಿಸುವ ಉಪಾಯದ ರೂಪದಲ್ಲಲ್ಲ! ನಮಗೆ ಕಾಣದ ಈ ಗುಣವನ್ನು ವಿದೇಶೀಯರು ಈಗಾಗಲೇ ಕಂಡುಕೊಂಡು ವ್ಯಾಪಾರ ಪ್ರಾರಂಭಿಸಿಬಿಟ್ಟಿದ್ದಾರೆ.

‘ಟರ್ಮರಿಕ್ ಲ್ಯಾಟೇ’ ಅಥವಾ “ಗೋಲ್ಡನ್ ಮಿಲ್ಕ್” ಎಂಬ ಅಂದ ಚೆಂದದ ಆಕರ್ಷಕ ಹೆಸರುಗಳನ್ನಿಟ್ಟು ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಚೆಂದದ ಹೆಸರಿಗೆ ಮರುಳಾಗಿ ದುಬಾರಿ ಬೆಲೆ ತೆತ್ತು ಕೊಳ್ಳುವ ಬದಲು ಇದನ್ನು ಮನೆಯಲ್ಲಿಯೇ ತಯಾರಿಸಿ ಕೊಳ್ಳುವುದು ಅತಿ ಸುಲಭ. ಒಂದು ಲೋಟ ಹಾಲನ್ನು ಚೆನ್ನಾಗಿ ಬಿಸಿ ಮಾಡಿ ಕುದಿ ಬರುವ ಮುನ್ನ ಒಂದು ಲೋಟಕ್ಕೆ ಕಾಲು ಚಿಕ್ಕಚಮಚದಷ್ಟು ಅರಿಶಿನ ಪುಡಿ ಬೆರೆಸಿ ಕದಡಿ ಉರಿ ಆರಿಸಿದರೆ ಆಯ್ತು. ಅರಿಶಿನ ಬೆರೆತ ಹಾಲು ಸಿದ್ಧ.

ಮೆದುಳಿಗೆ ಪ್ರಯೋಜನಕಾರಿ ಗೋಲ್ಡನ್ ಮಿಲ್ಕ್​ ಮೆದುಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಇದರೊಂದಿಗೆ ದಾಲ್ಚಿನ್ನಿ ಮತ್ತು ಶುಂಠಿಯನ್ನು ಸೇರಿಸಿದರೆ, ಅದರ ಪ್ರಯೋಜನವು ಅನೇಕ ಪಟ್ಟು ಹೆಚ್ಚಾಗುತ್ತದೆ. ದಾಲ್ಚಿನ್ನಿ ಬಳಸುವುದರಿಂದ ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಹಾಗೆಯೇ ಶುಂಠಿ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಜ್ಞಾಪಕ ಶಕ್ತಿ ಸುಧಾರಿಸುತ್ತದೆ.

ಗೋಲ್ಡನ್ ಹಾಲಿನಲ್ಲಿ ಅಥವಾ ಅರಿಶಿನದಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಗುಣಗಳಿವೆ. ಉರಿಯೂತ ಅಥವಾ ಗಾಯ ಸಮಸ್ಯೆಗೆ ಇದನ್ನು ಬಳಸಲಾಗುತ್ತದೆ. ಕ್ಯಾನ್ಸರ್, ಆಲ್ಜೈಮರ್, ಹೃದ್ರೋಗ ಮತ್ತು ಮೆಟಾಬಾಲಿಕ್ ಸಿಂಡ್ರೋಮ್‌ ತೊಂದರೆ ಇರುವವರು ಅರಿಶಿನ ಹಾಲನ್ನು ಕುಡಿಯುವುದು ಉತ್ತಮ ಎಂದು ವೈದ್ಯಲೋಕ ಅಭಿಪ್ರಾಯಪಟ್ಟಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮೈಸೂರು ದಸರಾ ವೇದಿಕೆಯಲ್ಲೇ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದ ‘ಬಿಗ್ ಬಾಸ್’ ಖ್ಯಾತಿಯ ಚಂದನ್ ಶೆಟ್ಟಿ ಹಾಗು ನಿವೇದಿತಾ….!

    ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮ ವಿಶೇಷ ಘಟನೆಗೆ ಸಾಕ್ಷಿಯಾಗಿದೆ. ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಉಂಗುರ ತೊಡಿಸಿದ್ದಾರೆ. ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ದಾಂಪತ್ಯ ಜೀವನಕ್ಕೆ ಕಾಲಿಡಲು ಮೈಸೂರು ದಸರಾ ವೇದಿಕೆಯಲ್ಲೇ ಮುನ್ನುಡಿ ಬರೆದಿದ್ದಾರೆ. ಯುವ ದಸರಾದಲ್ಲಿ ನಿವೇದಿತಾ ಅವರಿಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ ಉಂಗುರ ತೊಡಿಸಿದ್ದಾರೆ. ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮ ರಂಗೇರಿದ್ದು ಕಾರ್ಯಕ್ರಮ ಮುಗಿಯುವ ವೇಳೆಯಲ್ಲಿ ಚಂದನ್ ಶೆಟ್ಟಿ ವೇದಿಕೆಯಲ್ಲಿಯೇ ಐ ಲವ್ ಯು ಹೇಳಿದ್ದಾರೆ….

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ, ಕಾರ್ತೀಕ ಹುಣ್ಣಿಮೆಯ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 ಮೇಷ(23 ನವೆಂಬರ್, 2018) ಸಂಜೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ. ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಹ್ಲಾದಕರ…

  • ಸುದ್ದಿ

    ಸಿಎಂ ಗ್ರಾಮ ವಾಸ್ತವ್ಯ ಮತ್ತು ಜನತಾದರ್ಶನವನ್ನು ಮುಂದೂಡಿಕೆ….!ಯಾಕೆ?

    ನಿನ್ನೆ ಜೂನ್ 21 ರ ಸಂಜೆ ಮತ್ತು ರಾತ್ರಿ ಸುರಿದ ಮಳೆಯಿಂದಾಗಿ ಕಲಬುರ್ಗಿ ತಾಲೂಕಿನ ಹೇರೂರು ( ಬಿ) ಗ್ರಾಮದಲ್ಲಿ ಇಂದು ಜೂನ್ 22 ರಂದು ನಡೆಯಬೇಕಿದ್ದ ಜನತಾದರ್ಶನ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿದೆ. ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ.ಖರ್ಗೆ ಹಾಗೂ ಅಲ್ಲಿನ ಜಿಲ್ಲಾಧಿಕಾರಿ ವೆಂಕಟೇಶ ಅವರೊಂದಿಗೆ ನಿನ್ನೆ ಮಧ್ಯರಾತ್ರಿಯವರೆಗೂ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚಿಸಿ ಅಂತಿಮವಾಗಿ ಮುಂದೂಡುವ ನಿರ್ಣಯ ಕೈಗೊಳ್ಳಬೇಕಾಯಿತು, ಇದು ಒಂದೆಡೆ ತೀವ್ರ ನಿರಾಶೆ ಉಂಟು…

  • ಆರೋಗ್ಯ, ಉಪಯುಕ್ತ ಮಾಹಿತಿ

    ಈ ಕಾರಣಗಳಿಗಾಗಿ ಪ್ರತೀದಿನ ತಪ್ಪದೇ ಬಾಳೆಹಣ್ಣು ತಿನ್ನಲೇಬೇಕು…

    ಊಟ ಆದ್ಮೇಲೆ ಬಾಳೆ ಹಣ್ಣು ತಿನ್ನುವುದು ಸಾಮಾನ್ಯವಾಗಿದೆ. ಬಾಳೆ ಹಣ್ಣು ತಿನ್ನೋದ್ರಿಂದ ಸಾಕಷ್ಟು ಪ್ರಯೋಜನವಿದೆ ಎಂಬುದನ್ನು ಸಂಶೋಧನೆ ಕೂಡ ಹೇಳಿದೆ. ದಿನಕ್ಕೆ ಮೂರು ಸಣ್ಣ ಬಾಳೆಹಣ್ಣು ತಿನ್ನೋದ್ರಿಂದ 90 ನಿಮಿಷ ವ್ಯಾಯಾಮ ಮಾಡಿದಾಗ ಸಿಗುವಷ್ಟು ಶಕ್ತಿ ಸಿಗುತ್ತದೆಯಂತೆ. ಬರೀ ಶಕ್ತಿ ಮಾತ್ರವಲ್ಲ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯ ಕೂಡ ಸುಧಾರಿಸುತ್ತದೆ ಅಂತ ತಜ್ಞರು ಹೇಳಿದ್ದಾರೆ. ಬೊಜ್ಜು ನಿಯಂತ್ರಿಸುತ್ತದೆ :- ಅತೀವ ಒತ್ತಡದಲ್ಲಿ ಕೆಲಸಮಾಡುವವರು, ಬೊಜ್ಜಿನ ಸಮಸ್ಯೆಗೆ ಹೆಚ್ಚಾಗಿ ಒಳಗಾಗುವರು. ಸುಮಾರು , 5000 ಒಳರೋಗಿಗಳ ಆರೋಗ್ಯಸಮೀಕ್ಷೆಯಿಂದ ದ್ರುಢಪಟ್ಟಿದೆ….

  • ಸುದ್ದಿ

    ಮನೆಯಲ್ಲಿ ಶನಿದೇವನ ಸ್ಥಾಪನೆ ಯಾವ ಕಾರಣಕ್ಕೆ ಮಾಡಬಾರದು ಗೊತ್ತ..!

    ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ನಿಯಮಿತ ಪೂಜೆಗೆ ವಿಶೇಷ ಮಹತ್ವವಿದೆ. ದೇವರನ್ನು ಆರಾಧಿಸುವ ಮೂಲಕ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆಗಳು ಉದ್ಭವಿಸುತ್ತವೆ. ಹಾಗಾಗಿ ಜನರು ಬೆಳಿಗ್ಗೆ ಮತ್ತು ಸಂಜೆ ದೇವರ ಪೂಜೆ, ಮಂತ್ರ ಪಠಣ ಮಾಡುತ್ತಾರೆ. ಪ್ರತಿಯೊಬ್ಬರ ದೇವರ ಮನೆಯಲ್ಲೂ ಅನೇಕ ದೇವರುಗಳ ಫೋಟೋಗಳನ್ನು ಇಡಲಾಗುತ್ತದೆ. ಆದ್ರೆ ಕೆಲ ದೇವರ ಫೋಟೋಗಳನ್ನು ಮನೆಯಲ್ಲಿ ಇಡುವಂತಿಲ್ಲ. ಶನಿ ದೇವರ ಫೋಟೋವನ್ನು ಕೂಡ ಮನೆಗೆ ತರಬಾರದು. ಹಿಂದೂ ಧರ್ಮದ ಪ್ರಕಾರ ಶನಿದೇವರ ಫೋಟೋ, ವಿಗ್ರಹವನ್ನು ಮನೆಯಲ್ಲಿ ಇಡಬಾರದು….