Health

ಹಲವು ರೋಗಗಳಿಗೆ ರಾಮಬಾಣ ಗೋಲ್ಡನ್ ಮಿಲ್ಕ್​. ಇದರ ಬಗ್ಗೆ ನಿಮಗೆ ಗೊತ್ತಾ?

90

ಅರಿಶಿನ ಬೆರೆತ ಹಾಲು ಭಾರತೀಯರಿಗೆ ಅಪರಿಚಿತವೇನಲ್ಲ. ಯಾವಾಗ ಶೀತ ಕೆಮ್ಮು ನೆಗಡಿ ಜ್ವರ ಬಂತೋ ನಮ್ಮ ಹಿರಿಯರು ಮೊದಲಾಗಿ ಅರಿಶಿನ ಪುಡಿ ಹಾಕಿ ಕುದಿಸಿದ ಹಾಲನ್ನು ಬಿಸಿಬಿಸಿಯಾಗಿ ಕುಡಿಸುತ್ತಿದ್ದರು. ಈ ಹಾಲು ನಮಗೆ ಔಷಧಿಯ ರೂಪದಲ್ಲಿ ಪರಿಚಿತವೇ ಹೊರತು ತೂಕ ಇಳಿಸುವ ಉಪಾಯದ ರೂಪದಲ್ಲಲ್ಲ! ನಮಗೆ ಕಾಣದ ಈ ಗುಣವನ್ನು ವಿದೇಶೀಯರು ಈಗಾಗಲೇ ಕಂಡುಕೊಂಡು ವ್ಯಾಪಾರ ಪ್ರಾರಂಭಿಸಿಬಿಟ್ಟಿದ್ದಾರೆ.

‘ಟರ್ಮರಿಕ್ ಲ್ಯಾಟೇ’ ಅಥವಾ “ಗೋಲ್ಡನ್ ಮಿಲ್ಕ್” ಎಂಬ ಅಂದ ಚೆಂದದ ಆಕರ್ಷಕ ಹೆಸರುಗಳನ್ನಿಟ್ಟು ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಚೆಂದದ ಹೆಸರಿಗೆ ಮರುಳಾಗಿ ದುಬಾರಿ ಬೆಲೆ ತೆತ್ತು ಕೊಳ್ಳುವ ಬದಲು ಇದನ್ನು ಮನೆಯಲ್ಲಿಯೇ ತಯಾರಿಸಿ ಕೊಳ್ಳುವುದು ಅತಿ ಸುಲಭ. ಒಂದು ಲೋಟ ಹಾಲನ್ನು ಚೆನ್ನಾಗಿ ಬಿಸಿ ಮಾಡಿ ಕುದಿ ಬರುವ ಮುನ್ನ ಒಂದು ಲೋಟಕ್ಕೆ ಕಾಲು ಚಿಕ್ಕಚಮಚದಷ್ಟು ಅರಿಶಿನ ಪುಡಿ ಬೆರೆಸಿ ಕದಡಿ ಉರಿ ಆರಿಸಿದರೆ ಆಯ್ತು. ಅರಿಶಿನ ಬೆರೆತ ಹಾಲು ಸಿದ್ಧ.

ಮೆದುಳಿಗೆ ಪ್ರಯೋಜನಕಾರಿ ಗೋಲ್ಡನ್ ಮಿಲ್ಕ್​ ಮೆದುಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಇದರೊಂದಿಗೆ ದಾಲ್ಚಿನ್ನಿ ಮತ್ತು ಶುಂಠಿಯನ್ನು ಸೇರಿಸಿದರೆ, ಅದರ ಪ್ರಯೋಜನವು ಅನೇಕ ಪಟ್ಟು ಹೆಚ್ಚಾಗುತ್ತದೆ. ದಾಲ್ಚಿನ್ನಿ ಬಳಸುವುದರಿಂದ ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಹಾಗೆಯೇ ಶುಂಠಿ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಜ್ಞಾಪಕ ಶಕ್ತಿ ಸುಧಾರಿಸುತ್ತದೆ.

ಗೋಲ್ಡನ್ ಹಾಲಿನಲ್ಲಿ ಅಥವಾ ಅರಿಶಿನದಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಗುಣಗಳಿವೆ. ಉರಿಯೂತ ಅಥವಾ ಗಾಯ ಸಮಸ್ಯೆಗೆ ಇದನ್ನು ಬಳಸಲಾಗುತ್ತದೆ. ಕ್ಯಾನ್ಸರ್, ಆಲ್ಜೈಮರ್, ಹೃದ್ರೋಗ ಮತ್ತು ಮೆಟಾಬಾಲಿಕ್ ಸಿಂಡ್ರೋಮ್‌ ತೊಂದರೆ ಇರುವವರು ಅರಿಶಿನ ಹಾಲನ್ನು ಕುಡಿಯುವುದು ಉತ್ತಮ ಎಂದು ವೈದ್ಯಲೋಕ ಅಭಿಪ್ರಾಯಪಟ್ಟಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಕೊತ್ತಂಬರಿ ಸೊಪ್ಪು ಸೇವನೆ ಮಾಡುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ.!

    ಹಸಿ ಕೊತ್ತಂಬರಿ ಸೊಪ್ಪನ್ನು ಪ್ರತಿದಿನ ಆಹಾರದಲ್ಲಿ ಬಳಸುವುದರಿಂದ ಎ.ಬಿ1, ಬಿ2, ಸಿ ಜೀವಸತ್ವಗಳು ಮತ್ತು ಕಬ್ಬಿಣ ಇವುಗಳ ಅಭಾವದಿಂದ ತಲೆದೋರುವ ವ್ಯಾಧಿಗಳ ಭಯವಿರುವುದಿಲ್ಲ. ಒಂದು ಟೀ ಚಮಚ ಕೊತ್ತಂಬರಿ ಸೊಪ್ಪಿನ ರಸವನ್ನು ಅಷ್ಟೇ ಪ್ರಮಾಣದ ಜೇನುತುಪ್ಪ ದೊಂದಿಗೆ ಮಿಶ್ರಮಾಡಿ ಪ್ರತಿದಿನ ರಾತ್ರಿ ಸೇವಿಸುತ್ತ್ತಿದ್ದರೆ ಮೆದುಳಿನ ಕ್ರಿಯಾಶಕ್ತಿ ಹೆಚ್ಚುವುದು. ಕಣ್ಣು, ಕಿವಿ, ಹೃದಯ, ಶ್ವಾಸಕೋಶ ಕ್ರಿಯೆ ಚುರುಕಿನಿಂದ ನಡೆಯುವುದು. ಕ್ಷಯ ಮತ್ತು ಉಬ್ಬಸ ರೋಗಗಳ ಬಾಧೆ ಇರುವುದಿಲ್ಲ. ಕೊತ್ತಂಬರಿ ಸೊಪ್ಪನ್ನು ಹಲ್ಲುಗಳಿಂದ ಅಗಿಯುವುದರಿಂದ ದಂತಕ್ಷಯ ನಿವಾರಣೆಯಾಗುವುದು. ಬಾಯಿಯಿಂದ ದುರ್ಗಂಧ…

  • ಸುದ್ದಿ

    MNC ಕಂಪನಿಯಲ್ಲಿ ಕೆಲಸ ಮಾಡ್ತಿರೋ ಈ ಜೋಡಿ ಪುಟ್‌ಪಾತ್‌ ಮೇಲೆ ತಿಂಡಿ ಮಾರೋದ್ಯಾಕೆ ಅಂತ ಕಾರಣಾ ಗೊತ್ತಾ..?ತಿಳಿದರೆ ಅಚ್ಚರಿಯಂತು ಗ್ಯಾರಂಟಿ..,!

    ಈ ಸ್ಟೋರಿನಾ ಮೊದಲ ಬಾರಿ ನೋಡಿದವರಿಗೆ ಇದು ವಿಚಿತ್ರ ಎನ್ನಿಸಬಹುದು. ಆದ್ರೆ ಈ ಜೋಡಿಯ ಕೆಲಸದ ಹಿಂದೆ ಒಂದೊಳ್ಳೆ ಸಂದೇಶವಿದೆ. ಅದೇನು ಅನ್ನೋದನ್ನ ಈ ಸ್ಟೋರಿಯಲ್ಲಿ ಓದಿ. ಮುಂಬೈನ ಖಾಂಡಿವಾಲಿ ಸ್ಟೇಷನ್‌ನಲ್ಲಿ ವಿದ್ಯಾವಂತರಾದ, ಒಳ್ಳೆ ಕಂಪನಿಯಲ್ಲಿ ಒಳ್ಳೆ ಸಂಬಳಕ್ಕೆ ಕೆಲಸ ಮಾಡುವ ಜೋಡಿಯೊಂದು ಫೂಟ್‌ಪಾತ್‌ನಲ್ಲಿ ತಿಂಡಿ ಮಾರುತ್ತಾರೆ. ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ 10 ಗಂಟೆಯ ಒಳಗೆ ಫೂಟ್‌ಪಾತ್‌ನಲ್ಲಿ ತಿಂಡಿ ಮಾರಿ, ಇವರು ತಮ್ಮ ತಮ್ಮ ಕೆಲಸಕ್ಕೆ ತೆರಳುತ್ತಾರೆ. ಎಂಬಿಎ ಮಾಡಿರುವ ಈ ಜೋಡಿ ತಿಂಡಿ ಮಾಡೋ…

  • ಕರ್ನಾಟಕ

    ಗೋವಾ ನಿರಾಶ್ರಿತ ಕನ್ನಡಿಗರಿಗೆ, ರಾಜ್ಯದಿಂದ ಸಿಕ್ಕ ಭಾಗ್ಯ ಏನು ಗೊತ್ತಾ..?

    ಗೋವಾದಲ್ಲಿ ನಿರಾಶ್ರಿತರಾಗಿರುವ ಕನ್ನಡಿಗರಿಗೆ ನಿವೇಶನ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಯವರ‌ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

  • ಆರೋಗ್ಯ

    ಯುವಜನರು ಕುಡಿತದ ಪ್ರಮಾಣ ಸಾಕು ಎಂದು ನಿರ್ಧರಿಸುತ್ತಾರೆ, ಹೇಗೆ ಗೊತ್ತಾ???

    ಕುಡಿತದ ಮೇಲೆ ಹಿಡಿತ ಬರುವವರೆಗೂ ಯುವಜನರು ಎಗ್ಗಿಲ್ಲದೆ ಪೆಗ್ ಗಳನ್ನು ಏರಿಸುತ್ತಿರುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದ್ದು, ಕುಡಿತದ ಪ್ರಮಾಣ ನಿರ್ಧರಿಸುವ ಕಲೆ ಹೇಗೆ ಕರಗತವಾಗುತ್ತದೆ ಎಂಬ ಬಗ್ಗೆಯೂ ಮಾಹಿತಿ ನೀಡಿದೆ.

  • ರಾಜಕೀಯ

    ಮಹಿಳಾ ಸಚಿವರಿಂದ ಬಿಯರ್ ಬಾರ್ ಉದ್ಘಾಟನೆ ! ಸಿಎಂ ಯೋಗಿಗೆ ತೀವ್ರ ಮುಜುಗರ

    ಉತ್ತರಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ವಾತಿ ಸಿಂಗ್ ಅವರು ಬಿಯರ್ ಬಾರ್ವೊಂದನ್ನು ಉದ್ಘಾಟಿಸಿದ ಫೋಟೋಗಳು ದೇಶಾದ್ಯಂತ ವೈರಲ್ ಆಗಿದ್ದು, ನೂತನ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತೀವ್ರ ಮುಜುಗರ

  • ಸುದ್ದಿ

    ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಪತ್ತೆ, ಓರ್ವ ಆಸ್ಪತ್ರೆಗೆ ದಾಖಲು…….!

    ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಭೀತಿ ಎದುರಾಗಿದೆ, 23 ವರ್ಷದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವರ್ಷ ನಿಪಾಹ್ ವೈರಸ್‌ನಿಂದಾಗಿ 17 ಮಂದಿ ಮೃತಪಟ್ಟಿದ್ದರು. ವೈರಲ್ ಇನ್‌ಫೆಕ್ಷನ್ ಹಾಗೂ ನಿಪಾಹ್ ವೈರಸ್ ಲಕ್ಷಣಗಳಿದ್ದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಎರ್ನಾಕುಲಮ್ ಜಿಲ್ಲೆಯ ವೈದ್ಯಾಧಿಕಾರಿ ಡಾ. ಎಂ.ಕೆ.ಕುಟ್ಟಪ್ಪನ್ ತಿಳಿಸಿದ್ದಾರೆ. ಈಗಾಗಲೇ ವ್ಯಕ್ತಿಯ ರಕ್ತದ ಸ್ಯಾಂಪಲ್ ತೆಗೆದು ಎರಡು ಇನ್‌ಸ್ಟಿಟ್ಯೂಟ್‌ ಗಳಿಗೆ ಕಳುಹಿಸಲಾಗಿದೆ.ಯಾರೂ ಆತಂಕಪಡುವ ಅಗತ್ಯವಿಲ್ಲ ವರದಿ ಇಂದು ಕೈಸೇರಲಿದೆ ಎಂದು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆಯೂ ಸಾಕಷ್ಟು…