ರೆಸಿಪಿ

ಮನೆಯಲ್ಲೇ ಕಾಲ್ ಸೂಪ್ ಮಾಡುವ ಸಿಂಪಲ್ ವಿಧಾನ…

855

ಪ್ರತಿ ಸಂಡೇ, ಚಿಕನ್, ಮಟನ್, ಫಿಶ್ ತಿನ್ನುತ್ತೀರಾ. ಹೀಗಾಗಿ ಈ ವಾರ ಆರೋಗ್ಯಕ್ಕೆ ಉತ್ತಮವಾದ ಕಾಲ್ ಸೂಪ್ ಮಾಡಿ ಸವಿಯಿರಿ. ಮಕ್ಕಳಿಂದ ವೃದ್ಧರವೆಗೂ ಕಾಲ್ ಸೂಪನ್ನು ಕುಡಿಯುತ್ತಾರೆ. ಆದರೆ ಮಕ್ಕಳು ಕುಡಿಯಲು ಇಷ್ಟಪಡುವುದಿಲ್ಲ. ಅದಕ್ಕೆ ಮಸಲಾ ಹಾಕಿ ರುಚಿಕರವಾಗಿ ಮಾಡಿಕೊಟ್ಟರೆ ಕುಡಿಯುತ್ತಾರೆ. ಆದ್ದರಿಂದ ಎರಡು ವಿಧಾನದಲ್ಲಿ ಕಾಲ್ ಸೂಪ್ ಮಾಡುವ ವಿಧಾನ ನಿಮಗಾಗಿ…

ಬೇಕಾಗುವ ಸಾಮಾಗ್ರಿಗಳು 1. ಮೇಕೆ ಕಾಲು – 2, 2. ಈರುಳ್ಳಿ – ಮೀಡಿಯಂ, 3. ಬೆಳ್ಳುಳ್ಳಿ – 2-3 ಎಸಳು
4. ಶುಂಠಿ – ಸ್ವಲ್ಪ, 5. ಚಕ್ಕೆ – ಸ್ವಲ್ಪ, 6. ಲವಂಗ – 2-3, 7. ದನಿಯಾ ಪುಡಿ – ಅರ್ಧ ಚಮಚ
8. ಕೆಂಪು ಮೆಣಸಿನಕಾಯಿ – ಖಾರಕ್ಕೆ ಬೇಕಾದಷ್ಟು, 9. ಕೊತ್ತಂಬರಿ ಸೊಪ್ಪು – ಸ್ವಲ್ಪ
10. ಉಪ್ಪು – ರುಚಿಗೆ ತಕ್ಕಷ್ಟು, 11. ಎಣ್ಣೆ – 2 ಚಮಚ, 12. ಅರಿಶಿಣ – ಚಿಟಿಕೆ

ಮಾಡುವ ವಿಧಾನ
* ಮೊದಲಿಗೆ ಅಂಗಡಿಯಿಂದ ಸುಟ್ಟು ತಂದ ಕಾಲನ್ನು ಚೆನ್ನಾಗಿ 2 ರಿಂದ 3 ಬಾರಿ ಶುದ್ಧ ನೀರಿನಲ್ಲಿ ತೊಳೆಯಬೇಕು.
* ಒಂದು ಪ್ಯಾನ್‍ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಚಕ್ಕೆ, ಲವಂಗ, ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿ.
* ತಣ್ಣಗೆ ಆದ ಮೇಲೆ ಒಂದು ಮಿಕ್ಸರ್ ಜಾರ್‍ಗೆ ಹಾಕಿ ಫ್ರೈ ಮಾಡಿದ ಪದಾರ್ಥಗಳನ್ನು ಹಾಕಿ ಜೊತೆಗೆ ಧನಿಯಾ, ಅರಿಶಿಣ ಪುಡಿ ಸೇರಿಸಿ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ಈಗ ಒಂದು ಕುಕ್ಕರ್ ಬಿಸಿಗಿಟ್ಟು, ಎಣ್ಣೆ ಹಾಕಿ ಬಿಸಿಯಾದ ಮೇಲೆ ತೊಳೆದ ಕಾಲುಗಳನ್ನು ಹಾಕಿ. 2 ನಿಮಿಷ ಫ್ರೈ ಮಾಡಿ.

* ಈಗ ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಉಪ್ಪು ಸೇರಿಸಿ, ಜಾಸ್ತಿ ನೀರು ಹಾಕಿ 3-5 ಕೂಗು ಕೂಗಿಸಿ.
* ಸೂಪ್ ನೀರಿನಂತೆ ಇದ್ದರೆ ಕುಡಿಯಲು ಚೆನ್ನಾಗಿರುತ್ತದೆ. ಹೀಗಾಗಿ ಜಾಸ್ತಿ ನೀರು ಹಾಕಿ ಚೆನ್ನಾಗಿ ಕೂಗಿಸಬೇಕು.
* ಕುಕ್ಕರ್ ಪ್ರೆಶರ್ ಇಳಿದ ಮೇಲೆ ಕಾಲನ್ನು ಬೇರ್ಪಡಿಸಿ, ಸೂಪನ್ನು ಪ್ರತ್ಯೇಕಿಸಿ.
* ಸರ್ವ್ ಮಾಡುವಾಗ ಸೂಪ್‍ಗೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಸರ್ವ್ ಮಾಡಿ. ಕುಡಿಯಲು ಚೆನ್ನಾಗಿರುತ್ತದೆ.
* ಸೂಪ್‍ನೊಂದಿಗೆ ಕಾಲನ್ನು ಸೇವಿಸಬಹುದು ಅಥವಾ ಅದೇ ಕಾಲನ್ನು ಮೇಲೆ ತಿಳಿಸಿದ ಮಸಾಲೆ ಪದಾರ್ಥಗಳನ್ನು ಸೇರಿಸಿ ಸಾರು ಮಾಡಿಕೊಂಡು ಸೇವಿಸಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಇದು ಮೂಢನಂಬಿಕೆಯಲ್ಲ ಸತ್ಯ ಈ ಹಿಂದೂ ಆಚರಣೆಗಳ ಬೆನ್ನಿಗಿದೆ ವಿಜ್ಞಾನ ನೀವು ತಿಳಿಯಲೇಬೇಕು,.!

    ಹಿಂದೂ ಧರ್ಮದ ಹಲವಾರು ಆಚರಣೆಗಳು, ಸಂಪ್ರದಾಯಗಳನ್ನು ಮೂಢನಂಬಿಕೆಯೆಂದು ಜರಿಯುವವರು ಹಲವು. ಆದರೆ, ವಿಜ್ಞಾನ ಮುಂದುವರಿದಂತೆಲ್ಲ ಈ ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ವಿವರಣೆ ದೊರೆಯುತ್ತ ಹೋಗುತ್ತಿದೆ.ಈ ವೈಜ್ಞಾನಿಕ ಜ್ಞಾನವನ್ನೇ ಸಂಪ್ರದಾಯದ ಹೆಸರಿನಲ್ಲಿ ತಲೆಮಾರಿನಿಂದ ತಲೆಮಾರಿಗೆ ಹರಿಯಬಿಡಲಾಗಿದೆ ಸಾಮಾನ್ಯ ಜನರಿಗೆ ಈ ಆಚರಣೆಗಳ ಹಿಂದಿನ ವಿಜ್ಞಾನದ ಅರಿವು ಇಲ್ಲವಾದರೂ, ಅವರಿದನ್ನು ನಂಬಿಕೆಯ ತಳಹದಿ  ಮೇಲೆ ಸಾವಿರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಅಂಥ ಕೆಲವು ಆಚರಣೆಗಳು ಹಾಗೂ ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ವಿವರಣೆಗಳನ್ನಿಲ್ಲಿ ಕೊಡಲಾಗಿದೆ. ನಾಣ್ಯಗಳನ್ನು ನದಿಗೆಸೆಯುವುದು : ನಾಣ್ಯಗಳನ್ನುದೇವಸ್ಥಾನದ ಸಮೀಪದ…

  • budget

    2023-24 ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ

    ಪಾರ್ಲಿಮೆಂಟ್​​ನಲ್ಲಿ 2023-24 ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Finance Minister Nirmala Sitharaman) ಅವರು ಕೇಂದ್ರ ಬಜೆಟ್(Union Budget)​ ಮಂಡಿಸುತ್ತಿದ್ದಾರೆ. ಇದು ಅವರ ಐದನೇ ಮತ್ತು ಈ ಸರ್ಕಾರದ ಅವಧಿಯ ಕೊನೆಯ ಪೂರ್ಣ ಬಜೆಟ್ ಆಗಿದೆ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನವೇ, ಈ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮೂಲಕ ಸರ್ಕಾರವು ಜನರ ನಿರೀಕ್ಷೆ ತಲುಪಲು ಹೊಸ ಯೋಜನೆಗಳನ್ನು ಆರಂಭಿಸುತ್ತಿದೆ. ಇದರ ಜೊತೆಗೆ ಮಧ್ಯಮ ವರ್ಗಕ್ಕೆ ಬಂಪರ್​ ನ್ಯೂಸ್​…

  • ಉಪಯುಕ್ತ ಮಾಹಿತಿ

    ಫೇಸ್ಬುಕ್’ನಲ್ಲಿ ಸಿಗಲಿದೆ ನಿರುದ್ಯೋಗಿಗಳಿಗೆ ಕೆಲಸ.!ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಡೇಟಾ ಲೀಕ್ ಪ್ರಕರಣದಲ್ಲಿ ವಿಶ್ವದಾದ್ಯಂತ ಫೇಸ್ಬುಕ್ ಟೀಕೆಗೆ ಗುರಿಯಾಗಿದೆ. ಈ ಮಧ್ಯೆಯೇ ವಿಶ್ವದಾದ್ಯಂತ ಫೇಸ್ಬುಕ್ ದೊಡ್ಡ ಮಟ್ಟದಲ್ಲಿ ನೇಮಕಾತಿಗೆ ಮುಂದಾಗಿದೆ. ಫೇಸ್ಬುಕ್ ಒಟ್ಟೂ 20000 ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಮುಂದಾಗಿದೆ. ಕಂಪನಿ ವಿಷಯ ಪರಿಶೀಲನೆ ಹಾಗೂ ಭದ್ರತೆ ವಿಭಾಗಕ್ಕಾಗಿ 15000 ಜನರನ್ನು ನೇಮಿಸಿಕೊಳ್ಳಲಿದೆ. ಉಳಿದ 5000 ಮಂದಿ ಇತರ ಕೆಲಸ ಮಾಡಲಿದ್ದಾರೆ. ಈ ಬಗ್ಗೆ ಫೇಸ್ಬುಕ್ ಸಿಇಓ ಮಾರ್ಕ್ ಜ್ಯೂಕರ್ಬರ್ಗ್ ಅಧಿಕೃತ ಮಾಹಿತಿ ನೀಡಿದ್ದಾರೆ. ಯುಎಸ್ ಸೆನೆಟ್ ನಲ್ಲಿ ಮಾರ್ಕ್ ಜ್ಯೂಕರ್ಬರ್ಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ….

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ…ಈ ಶುಭದಿನದಂದು ನಿಮ್ಮ ರಾಶಿಯ ಶುಭಫಲಗಳು ಹೇಗಿವೆ ನೋಡಿ…

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಹಲವಾರು ಯೋಜನೆಗಳನ್ನು ಕೈಬಿಟ್ಟು ಒಂದನ್ನು ಮಾತ್ರ ಆಯ್ಕೆ ಮಾಡಿಕೊಂಡಲ್ಲಿ ಸಿದ್ಧಿಗೆ ಅನುಕೂಲವಾಗುವುದು. ಪರಾಕ್ರಮ ರಾಹು ಸಂಚಾರದಿಂದಾಗಿ ಸಂವಹನ ಕಾರ್ಯದಲ್ಲಿ ಹಿನ್ನಡೆ ಉಂಟಾಗುವುದು. ದುರ್ಗಾದೇವಿಯನ್ನು ಪ್ರಾರ್ಥಿಸುವುದು ಒಳ್ಳೆಯದು.   .ನಿಮ್ಮ ಸಮಸ್ಯೆ.ಏನೇ…