ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಕ್ಕುಗಳೆಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಮುದ್ದು ಮುದ್ದಾಗಿ ಮಿಯಾಂವ್ ಮಿಯಾಂವ್ ಅನ್ಕೊಂಡು ಮನೆಯಲ್ಲಿ ಅತ್ತಿಂದಿತ್ತ ಓಡಾಡ್ತಾ, ಮನೆಗೆ ಬಂದ್ರೆ ತನ್ನ ಮೈ ಉಜ್ಕೊಂಡು, ಚೇಷ್ಟೆ ಮಾಡ್ಕೊಂಡಿರುತ್ತೆ. ಅದರ ಈ ಚೇಷ್ಟೆಗಳನ್ನ ನೋಡೋದೇ ಒಂಥರಾ ಖುಷಿ. ಆದ್ರೆ ಇಲ್ಲೊಬ್ರು ಅದೇ ರೀತಿ ಅರ್ಜೆಂಟಿನಾ ಲೋಬೊ ಎಂಬ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎರಡು ಪುಟ್ಟ ಪ್ರಾಣಿಗಳು ಮಲಗಿದ್ದನ್ನು ನೋಡಿದರು. ಅವು ತುಂಬ ದುರ್ಬಲವಾಗಿದ್ದವು. ಹತ್ತಿರ ಹೋಗಿ ನೋಡಿದ ಲೋಬೋ ಅವರಿಗೆ ಪುಟ್ಟಪುಟ್ಟ ಬೆಕ್ಕಿನಮರಿಗಳಂತೆ ಕಂಡುಬಂದವು.

ಲೋಬೊ ಅವರಿಗೆ ಮೊದಲಿನಿಂದಲೂ ಪ್ರಾಣಿಗಳೆಂದರೆ ಪ್ರೀತಿ. ಅದೆರಡೂ ಮರಿಗಳನ್ನು ರಕ್ಷಿಸುವುದಕ್ಕೋಸ್ಕರ ಹಿಡಿದುಕೊಂಡು ಮನೆಗೆ ತಂದರು. ಅದರಲ್ಲಿ ಒಂದು ಮರಿ ಬದುಕುಳಿಯಲಿಲ್ಲ. ಮತ್ತೊಂದು ಮರಿ ಉಳಿಯಿತು. ಆ ಬದುಕುಳಿದ ಮರಿಯನ್ನು ತಾವೇ ದತ್ತು ತೆಗೆದುಕೊಂಡು ಆರೈಕೆ ಮಾಡಲು ಲೋಬೋ ನಿರ್ಧರಿಸಿದರು. ಅದಕ್ಕೆ ಟಿಟೋ ಎಂದು ಹೆಸರನ್ನೂ ಇಟ್ಟರು. ಎಲ್ಲವೂ ಚೆನ್ನಾಗೇ ಇತ್ತು. ಅದನ್ನ ಆಸ್ಪತ್ರೆಗೆ ಕೊಂಡೊಯ್ಯುವವರೆಗೂ. ಮುದ್ದಾದ ಬೆಕ್ಕಿನ ಮರಿ ಪೂಮಾ ಆಗೋಯ್ತು. ಆ ಮರಿಕೂಡ ಚೆನ್ನಾಗಿಯೇ ಬೆಳೆಯುತ್ತಿತ್ತು. ಆದರೆ ಒಂದು ದಿನ ಅದನ್ನು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಯಿತು. ಆದರೆ ಅಲ್ಲಿ ಹೋದಬಳಿಕ, ಆ ಬೆಕ್ಕಿನ ಮರಿಯನ್ನು ಪರಿಶೀಲನೆ ನಡೆಸಿದ ವೈದ್ಯರು ಬೇರೆಯದೇ ಸತ್ಯ ಹೇಳಿದರು. ಅದನ್ನು ಕೇಳಿ ಲೋಬೋ ಅಕ್ಷರಶಃ ಹೌಹಾರಿದರು. ಅದು ಸಾಮಾನ್ಯ ಜಾತಿಯ ಬೆಕ್ಕಲ್ಲ, ಬದಲಾಗಿ ಪೂಮಾ ಅಂತ ಹೇಳಿದ್ರು.

ಜಾಗ್ವಾರುಂಡಿ ಬೆಕ್ಕುಗಳು ಕಾಡಿನಲ್ಲಿ ವಾಸಿಸುತ್ತವೆ. ಅವು ಸಾಕುಬೆಕ್ಕುಗಳಿಗಿಂತಲೂ ದೊಡ್ಡದಾಗಿ ಇರುತ್ತವೆ ಮತ್ತು ಚಿರತೆಗಳಿಗಿಂತ ಸ್ವಲ್ಪ ಚಿಕ್ಕದಾಗಿರುತ್ತವೆ. ಇವು ಪರಭಕ್ಷಕಗಳು. ಆದರೆ ನೋಡಲು ಸ್ವಲ್ಪಮಟ್ಟಿಗೆ ಸಾಮಾನ್ಯ ಬೆಕ್ಕುಗಳನ್ನು ಹೋಲುವುದರಿಂದ ಲೋಬೋ ಬೇಸ್ತುಬಿದ್ದಿದ್ದರು.
ಅಷ್ಟಕ್ಕೂ ಸಾಮಾನ್ಯವಾಗಿ ಸಾಕುವ ಬೆಕ್ಕಿನ ಮರಿಗಳಿಗಿಂತ ಈ ಮರಿ ಚುರುಕಾಗಿರುವುದನ್ನು ಲೋಬೋ ಗಮನಿಸಿದ್ದರು. ಹೀಗೆ ಟಿಟೋ ಒಮ್ಮೆ ಏನೋ ಮಾಡಲು ಕಾಲಿಗೆ ಪೆಟ್ಟು ಮಾಡಿಕೊಂಡಿತು. ಅದಕ್ಕೆ ಚಿಕಿತ್ಸೆ ಕೊಡಿಸಲೆಂದು ಆಸ್ಪತ್ರೆಗೆ ಕರೆದುಕೊಂಡು ಹೋದಾಗಲೇ ವೈದ್ಯರು ಈ ಬೆಕ್ಕಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೋಬೋ ಅವರಿಗೆ ನೀಡಿದರು.

ಇವು ಬೆಕ್ಕುಗಳ ಪ್ರಬೇಧಕ್ಕೆ ಸೇರಿದ್ದರೂ ಸಾಕುಬೆಕ್ಕುಗಳಷ್ಟು ಸೌಮ್ಯವಲ್ಲ. ಮಾರಕವಾಗಿ ದಾಳಿ ಮಾಡಬಲ್ಲವು. ಇವು ಹೆಚ್ಚಾಗಿ ಉತ್ತರ ಅಮೆರಿಕಾ ಹಾಗೂ ದಕ್ಷಿಣ ಅಮೆರಿಕಾ ಕಾಡುಗಳಲ್ಲಿ ಕಂಡುಬರುತ್ತವೆ ಎಂದು ಪ್ರಾಣಿತಜ್ಞರು ಹೇಳಿದರು. ಇದನ್ನೆಲ್ಲ ಕೇಳಿ ಶಾಕ್ಗೊಳಗಾದ ಲೋಬೋ ಆ ಬೆಕ್ಕನ್ನು ಅರ್ಜೆಂಟಿನಾ ಪ್ರಾಣಿ ಸಂರಕ್ಷಣಾ ಸಂಸ್ಥೆಗೆ ಒಪ್ಪಿಸಿದ್ದಾರೆ. ಅವರು ಕೂಡ ಜಾಗ್ವಾರುಂಡಿ ಪುಮಾಕ್ಕೆ ಅಗತ್ಯ ಚಿಕಿತ್ಸೆ ಕೊಡಿಸಿ ಕಾಡಿಗೆ ಬಿಡಲು ನಿರ್ಧರಿಸಿದ್ದಾರೆ. ಸದ್ಯ ಈ ಸ್ಟೋರಿಯನ್ನ ಪ್ರಾಣಿ ರಕ್ಷಣಾ ಕೇಂದ್ರ ಫೇಸ್ಬುಕ್ನಲ್ಲಿ ಹಂಚಿಕೊಂಡಿದೆ. ಮಾತ್ರವಲ್ಲದೇ ಟಿಟೊದ ಕೆಲವು ಪೋಟೋಗಳನ್ನು ಅಪ್ಲೋಡ್ ಮಾಡಿದ್ದು ವೈರಲ್ ಆಗಿದೆ. ಯಾವ್ದಕ್ಕೂ ನೀವು ಸಾಕಿರೋ ಬೆಕ್ಕನ್ನು ಒಂದ್ಸಲ ಚೆಕ್ ಮಾಡ್ಕೊಂಡ್ ಬಿಡಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಕಿಂಗ್ ಸ್ಟಾರ್ ಯಶ್ ಕುಟುಂಬ ನ್ಯಾಯಾಲಯದ ಆದೇಶದಂತೆ ಬೆಂಗಳೂರಿನ ಬನಶಂಕರಿಯ ಕತ್ರಿಗುಪ್ಪೆಯಲ್ಲಿರುವ ಬಾಡಿಗೆ ಮನೆಯನ್ನು ಮಾರ್ಚ್ 31ರೊಳಗೆ ಖಾಲಿ ಮಾಡಬೇಕಾಗಿತ್ತು. ಆದರೆ ಇದೀಗ ಯಶ್ ಅವರ ತಾಯಿ ಪುಷ್ಪಾ, ಇನ್ನೂ ಆರು ತಿಂಗಳ ಕಾಲ ಇದೇ ಮನೆಯಲ್ಲಿ ನೆಲೆಸಲು ಅವಕಾಶ ಮಾಡಿಕೊಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಕುಟುಂಬ ಹಾಸನದಲ್ಲಿ ನೆಲೆಸಲು ನಿರ್ಧರಿಸಿದ್ದು, ಅಲ್ಲಿ ಈಗಾಗಲೇ ಮನೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಇನ್ನು 6 ತಿಂಗಳೊಳಗಾಗಿ ಈ ಕಾರ್ಯ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ತಮಗೆ ಈಗ ವಾಸಿಸುತ್ತಿರುವ…
ಗಾಯಿತ್ರಿ ಚಿತ್ರ ನೋಡುತ್ತಿದ್ದ ವಿಜಿ ಎಂಬಾತ ಬಾಲ್ಕನಿಯಿಂದ ಬಿದ್ದಿಲ್ಲ. ಆತ ಕುಳಿತ ಸ್ಥಳದಿಂದಲೇ ಕುಸಿದು ಬಿದ್ದಿದ್ದಾನೆ ಎಂದು ಮೇನಕಾ ಚಿತ್ರ ಮಂದಿರ ಮಾಲೀಕರಾದ ವಿಶ್ವನಾಥ್ ತಿಳಿಸಿದ್ದಾರೆ.
ನಾವು ಸಾಮಾನ್ಯವಾಗಿ ಬಾಳೆ ಹಣ್ಣನ್ನು ತಿಂದು ಸಿಪ್ಪೆಯನ್ನು ಬಿಸಾಕುತ್ತೆವೆ.ಆದರೆ ಬಾಳೆಹಣ್ಣಿನ ಸಿಪ್ಪೆಯಿಂದ ಆಗೋ ಉಪಯೋಗ ತಿಳಿದುಕೊಂಡರೆ ನೀವು ಸಿಪ್ಪೆಯನ್ನು ಎಸೆಯುವುದಿರಲಿ ಅದನ್ನೇ ಕಾಪಾಡಿಕೊಳ್ಳುತ್ತಿರ..ಹೇಗೆ ಉಪಯೋಗ ಅನ್ನೋ ಕುತೂಹಲವೇ ಇದನ್ನು ಓದಿ
ತನ್ನ ಯೋಧ ಪತಿಗಾಗಿ ಪತ್ನಿಯೊಬ್ಬರು ಬರೋಬ್ಬರಿ 19 ವರ್ಷದಿಂದ ಶಬರಿಯಾಗಿ ಕಾಯುತ್ತಿರುವ ಮನಕಲಕುವ ದೃಶ್ಯಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮ ಸಾಕ್ಷಿ ಆಗಿದೆ.ಅಮ್ಮತ್ತಿ ಗ್ರಾಮದ ಯೋಧನ ಪತ್ನಿ ಪಾರ್ವತಿ ಅವರ ಕರುಣಾಜನಕ ಕಥೆ ಇದಾಗಿದ್ದು, ಇವರು ತನ್ನ ಪತಿ ಉತ್ತಯ್ಯನ ಬರುವಿಕೆಗಾಗಿ 19 ವರ್ಷಗಳಿಂದ ಶಬರಿಯಂತೆ ಕಾಯುತ್ತಿದ್ದಾರೆ. 1985ರಲ್ಲಿ ಸೇನೆಗೆ ಸೇರಿದ್ದ ಉತ್ತಯ್ಯ 1999ರಲ್ಲಿ ರಜೆಗೆಂದು ಮನೆಗೆ ಬಂದು ವಾಪಾಸ್ ಹೋದವರು ಇಂದಿಗೂ ಹಿಂದಿರುಗಿ ಬಂದೇ ಇಲ್ಲ. ಹಾಗಂತ ಸೇನೆಯಲ್ಲೂ ಇಲ್ಲ, ಎಲ್ಲಿದ್ದಾರೆ ಅನ್ನೋದು…
ದಿನನಿತ್ಯದ ಚಟುವಟಿಕೆಯಲ್ಲಿ ನಿದ್ರೆಯೂ ಒಂದು. ಉತ್ತಮ ಆರೋಗ್ಯಕ್ಕೆ ಪೌಷ್ಟಿಕಾಂಶ ಭರಿತ ಆಹಾರ ಮುಖ್ಯವಾದಂತೆ ಉತ್ತಮ ನಿದ್ರೆಗೂ ನಾವು ಸೇವಿಸುವ ಆಹಾರ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.
ನಿಮ್ಮ ಖಾತೆಯು ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್ಬಿಐ) ಇದ್ದರೆ, ನೀವು ಈ ಸುದ್ದಿಯನ್ನು ಓದಬೇಕು. ವಾಸ್ತವವಾಗಿ, ಅಕ್ಟೋಬರ್ 1 ರಿಂದ ಎಸ್ಬಿಐ ಕೆಲವು ಸೇವಾ ಶುಲ್ಕದಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ. ಈ ಬದಲಾವಣೆಗಳು ದೇಶಾದ್ಯಂತ ಎಸ್ಬಿಐನ ಎಲ್ಲಾ 32 ಕೋಟಿ ಖಾತೆದಾರರ ಮೇಲೆ ಪರಿಣಾಮ ಬೀರುತ್ತವೆ. ಈ ಬದಲಾವಣೆಗಳ ಅಡಿಯಲ್ಲಿ, ಬ್ಯಾಂಕ್ ಮಾಸಿಕ ಸರಾಸರಿ ಸಮತೋಲನವನ್ನು (MAB) ನಿರ್ವಹಿಸದಿದ್ದರೆ ದಂಡವನ್ನು 80 ಪ್ರತಿಶತದಷ್ಟು ಕಡಿಮೆಗೊಳಿಸಲಾಗುತ್ತದೆ. ಇದಲ್ಲದೆ, ಬ್ಯಾಂಕ್ನಿಂದ ಅಕ್ಟೋಬರ್ 1 ರಿಂದ…