ಸುದ್ದಿ

ಸಿಹಿ ಸುದ್ದಿ : ಗ್ಯಾಸ್ ಸಿಲಿಂಡರ್ ಜೊತೆ ಸಿಗುತ್ತೆ 50 ಲಕ್ಷ ರೂ. ಉಚಿತ ವಿಮೆ

52

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಪಡೆಯುವವರಿಗೆ ಸಿಲಿಂಡರ್ ಜೊತೆ 50 ಲಕ್ಷ ರೂಪಾಯಿವರೆಗೆ ವಿಮೆ ಸಂಪೂರ್ಣ ಉಚಿತವಾಗಿ ಸಿಗಲಿದೆ. ಅಂದ್ರೆ ಅಡುಗೆ ಮಾಡುವ ವೇಳೆ ಸಿಲಿಂಡರ್ ಸ್ಫೋಟಿಸಿ ಅನಾಹುತ ಸಂಭವಿಸಿದ್ರೆ ಕುಟುಂಬಕ್ಕೆ 50 ಲಕ್ಷ ರೂಪಾಯಿಯವರೆಗೆ ಪರಿಹಾರ ಸಿಗಲಿದೆ.

ಸರ್ವೆಯೊಂದರ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 100ಕ್ಕೂ ಹೆಚ್ಚು ಮಂದಿ ಸಿಲಿಂಡರ್ ಸ್ಫೋಟಿಸಿ ಸಾವನ್ನಪ್ಪುತ್ತಾರೆ. ಆದ್ರೆ ಅನೇಕ ಬಾರಿ ಜನರು ಇದ್ರ ಪರಿಹಾರವನ್ನು ಪಡೆಯುವುದಿಲ್ಲ. ಪರಿಹಾರದ ಬಗ್ಗೆ ಅವ್ರಿಗೆ ಮಾಹಿತಿಯಿಲ್ಲದಿರುವುದು ಇದಕ್ಕೆ ಕಾರಣ.

ಈ ಪರಿಹಾರವನ್ನು ವಿಮೆ ಕಂಪನಿ ನೀಡುತ್ತದೆ. ಎಲ್ಪಿಜಿ ಕಂಪನಿಗಳು ವಿಮಾ ಕಂಪನಿಗಳಿಂದ ಸಾರ್ವಜನಿಕ ಹೊಣೆಗಾರಿಕೆ ಪಾಲಿಸಿ ಪಡೆಯುತ್ತವೆ. ಇದು ಮೂರನೇ ವ್ಯಕ್ತಿಯ ವಿಮೆ. ಇದಕ್ಕಾಗಿ ಎಲ್ಪಿಜಿ ಕಂಪನಿಗಳು ವಿಮೆ ಕಂಪನಿಗಳಿಗೆ ಹಣ ನೀಡಬೇಲಾಗುತ್ತದೆ.

ಇದಕ್ಕೆ ಗ್ರಾಹಕ ಹಣ ಪಾವತಿ ಮಾಡಬೇಕಾಗಿಲ್ಲ. ಹಾಗೆ ದುರ್ಘಟನೆಗೊಳಗಾದ ವ್ಯಕ್ತಿ ಕುಟುಂಬಕ್ಕೆ ವಿಮೆ ಸಿಗುತ್ತದೆ. ವ್ಯಕ್ತಿ ಹೆಸರಿನಲ್ಲಿ ಯಾವುದೇ ವಿಶೇಷ ವಿಮೆ ಇರುವುದಿಲ್ಲ. ದುರ್ಘಟನೆ ನಡೆದ ನಂತ್ರ ಬಲಿಪಶು ವ್ಯಕ್ತಿ ವಯಸ್ಸು, ಆದಾಯ ಮತ್ತು ಷರತ್ತುಗಳನ್ನು ಪರಿಶೀಲಿಸಿ ಹಣ ನಿಗದಿ ಮಾಡಲಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ