ಆರೋಗ್ಯ

ಫ್ಲೋರೋಸಿಸ್ ದುಷ್ಪರಿಣಾಮ

24

ಫ್ಲೋರೋಸಿಸ್ ಎಂಬದು ಅತಿಯಾದ ಫ್ಲೋರೈಡ್ ಸೇವನೆಯಿಂದ ಬರುತ್ತದೆ. ದುಷ್ಪರಿಣಾಮಕಾರಿ ಫ್ಲೋರೈಡ್ ಅಂತರ್ಜಲದಲ್ಲಿ ಕಂಡುಬರುತ್ತದೆ. ಕಲ್ಲುಬಂಡೆಗಳಲ್ಲಿರುವ ನೀರಿನಲ್ಲಿ ಹೆಚ್ಚಾಗಿ ಫ್ಲೋರೈಡ್ ಅಂಶ ದೃಢಪಟ್ಟಿರುತ್ತದೆ. ಜೀವರಾಶಿಗಳು ಫ್ಲೋರೈಡ್‌ಯುಕ್ತ ನೀರನ್ನು ಸೇವನೆ ಮಾಡುವುದರಿಂದ, ಫ್ಲೋರೋಸಿಸ್ ನಿಂದ ಬಳಲುತ್ತಾರೆ. ಸಂಶೋಧಕಗಳ ಪ್ರಕಾರ ಫ್ಲೋರೈಡ್ ಮಕ್ಕಳ ಬುದ್ಧಿಮತ್ತೆಯ ಪ್ರಮಾಣದಲ್ಲಿ ಪ್ರಭಾವ ಬೀರಿರುವುದನ್ನು ದಾಖಲಿಸಿದ್ದಾರೆ.

ದೀರ್ಘಕಾಲ ಫ್ಲೋರೈಡ್ ಸೇವನೆ ಮಾಡುವುದರಿಂದ ದಂತ ಮತ್ತುಮೂಳೆಗಳಲ್ಲದೆ, ಇತರೆ ಭಾಗದಲ್ಲೂ ದುಃಷ್ಪರಿಣಾಮಗಳು ಬೀರುತ್ತಿವೆ. ಸಕಲ ಅಂಗಾAಗಗಳ ಮೇಲೆಫ್ಲೋರೈಡ್ ಪ್ರಭಾವ ಬೀರುತ್ತದೆ ಹಾಗೂ ಪ್ರಮುಖವಾಗಿ ಹೃದಯ, ಸ್ವಾಶಕೊಶ, ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಮತ್ತು ಮೂತ್ರಪಿಂಡದಲ್ಲಿ ಕೂಡ ಇದರ ಪ್ರಭಾವವನ್ನುನೋಡಬಹುದು.
ಗರ್ಭಿಣಿಯರಲ್ಲಿ ಫ್ಲೋರೈಡ್ ನಿಂದ ಥೈರಾಯ್ಡ್, ಪ್ರಿ-ಎಕ್ಲಾ೦ಪ್ಸಿಯಾ ಹಾಗೂ ರಕ್ತಹೀನತೆಯ ಸಮಸ್ಯೆಗಳು ದಾಖಲೆಯಾಗಿದೆ. ಇಳಿವಯಸ್ಕರಲ್ಲಿ ಕೀಲುಗಳ ನೋವು, ಕಣ್ಣಿನ ದೃಷ್ಟಿದೋಷ, ಹಲ್ಲು ಉದುರುವುದು, ಬೆನ್ನುಬಾಗುವುದು, ಅಜೀರ್ಣ ಸಮಸ್ಯೆಗಳು ಹೆಚ್ಚಾಗುವುದರಲ್ಲಿ ಫ್ಲೋರೈಡ್‌ನ ಪಾತ್ರವೂ ಬಹಳವಾಗಿ ಕಂಡುಬರುತ್ತದೆ.

ನಾವು ಸೇವಿಸುವ ಆಹಾರ, ನೀರು ದೇಹದಲ್ಲಿ ಹೀರಿಕೊಂಡು ರಕ್ತನಾಳಗಳ ಮೂಲಕ ದೇಹದ ಎಲ್ಲಾ ಭಾಗಗಳಿಗೆ ತಲಪುತ್ತದೆ ಹಾಗೂ ಪ್ರಭಾವ ಬೀರುತ್ತದೆ. ಅತಿಯಾದಫ್ಲೋರೈಡ್ ಸೇವೆನಯಿಂದ ಮೂತ್ರಪಿಂಡಗಳಲ್ಲಿ ಸೂಸುವಿಕೆಗೊಂಡು ಮೂತ್ರವಿಸರ್ಜನೆ ಮೂಲಕ ಹೊರಬರುತ್ತದೆ. ಮೂತ್ರ, ರಕ್ತ ಹಾಗೂ ಇತರೆ ಜೈವಿಕ ಮಾದರಿಗಳ ಆಧಾರದ ಮೇಲೆ ಫ್ಲೋರೈಡ್ ಅಂಶವನ್ನು ಕಂಡು ಹಿಡಿಯಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಮೂಲಗಳ ಪ್ರಕಾರ 5ppm-1.5ppm ವರೆಗೂ ಫ್ಲೋರೈಡ್ ಅಂಶ ನಮಗೆ ಉಪಯೋಗಕಾರಿ; ಆದರೆ ಹೆಚ್ಚಿನ ಫ್ಲೋರೈಡ್ ಸೇವನೆಯು ದುಷ್ಪರಿಣಾಮಗಳ ಆಗರವಾಗಿ ಕಂಡುಬರುತ್ತದೆ.
ವಿಶ್ವಾದ್ಯ0ತ ಫ್ಲೋರೈಡ್ ನಿಯಂತ್ರಣಕ್ಕಾಗಿ ಹಲವಾರು ಸಂಶೋಧನೆಗಳು ನಡೆಯುತ್ತಿವೆ. ತಜ್ಞರ ಪ್ರಕಾರ ಫ್ಲೋರೈಡನ್ನು ಹತೋಟಿಯಲ್ಲಿ ಇಡಲು ಹಲವು ಪ್ರಾಕೃತಿಕ ವಿಧಾನಗಳನ್ನು ಸೂಚಿಸಿದ್ದಾರೆ. ಕ್ಯಾಲ್ಸಿಯಂ ಹೆಚ್ಚಾಗಿ ಇರುವಂತಹ ಆಹಾರ ಪದಾರ್ಥಗಳಾದ ಹಾಲು, ಸೊಪ್ಪು, ಕೋಸುಗಡ್ಡೆ, ವಿಟಮಿನ್ಸ್ ಇರುವ ಹುಣಸೆಹಣ್ಣು, ನಿಂಬೆಹಣ್ಣು ಆಹಾರ ಪದಾರ್ಥಗಳು, ಅರಿಸಿನ, ನುಗ್ಗೆಕಾಯಿಸೊಪ್ಪು ಮತ್ತು ಹಸಿರು ತರಕಾರಿಗಳನ್ನು ಹೆಚ್ಚಾಗಿ ತಿನ್ನುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಸಾಂದ್ರತೆಯನ್ನು ಹೆಚ್ಚಿಸಿ, ಫ್ಲೋರೈಡ್ನಿಂದ ಆಗುವ ಪರಿಣಾಮಗಳನ್ನು ಕಡಿಮೆ ಮಾಡಬಹುದು.

ವೈದ್ಯಕೀಯ ವಿದ್ಯಾಯಲದಲ್ಲಿ ಜೀವರಾಸಾಯನಶಾಸ್ತ್ರದ ಪ್ರಾಧ್ಯಾಪಕರ ತಂಡ ಪ್ರಾಯೋಗಿಕ ಅಧ್ಯಯನವನ್ನು ನಡೆಸಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಫ್ಲೋರೋಸಿಸ್ ಬಗ್ಗೆ ಜಾಗೃತಿ ಮೂಡಿಸಿ, ಈ ಅಸ್ವಸ್ಥತೆಯನ್ನು ಪೂರ್ಣವಾಗಿ ನಿರ್ಮೂಲನೆ ಮಾಡುವುದರಲ್ಲಿ ಶ್ರಮಿಸುತ್ತಿದ್ದಾರೆ. ನೀರಿನಲ್ಲಿ, ಹಾಲಿನಲ್ಲಿ, ಆಹಾರ ಪದಾರ್ಥಗಳಲ್ಲಿ ಹಾಗೂ ಇತರೆ ಜೈವಿಕ ಮಾದರಿಗಳಲ್ಲಿ ಫ್ಲೋರೈಡ್‌ನ್ನು ಕಂಡುಹಿಡಿಯುವುದು ಮತ್ತು ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಂಶೋಧನೆಗಳನ್ನು ನಡೆಸುತಿದ್ದಾರೆ

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಧೋನಿ ನಿವೃತ್ತಿಗೆ ಕೊಹ್ಲಿ ಪ್ರತಿಕ್ರಿಯೆ…..!

    ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಎಂ.ಎಸ್.ಧೋನಿ ಸ್ಲೋ ಬ್ಯಾಟಿಂಗ್ ಟೀಕೆಗೆ ಗುರಿಯಾಗಿತ್ತು. ಇಷ್ಟೇ ಅಲ್ಲ ಧೋನಿ ನಿವೃತ್ತಿಗೂ ಒತ್ತಡ ಕೇಳಿ ಬಂದಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಧೋನಿ ಎಲ್ಲಾ ಟೀಕಿಗೆ ಉತ್ತರಿಸಿದ್ದಾರೆ. 50 ರನ್ ಸಿಡಿಸೋ ಮೂಲಕ ಭಾರತದ ದಿಟ್ಟ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಆದರೆ ಪಂದ್ಯ ಗೆಲ್ಲಲಿಲ್ಲ ಅನ್ನೋ ಕೊರಗು ಇನ್ನು ಮಾಸಿಲ್ಲ. ಇದರ ನಡುವೆ ಮತ್ತೆ ಧೋನಿ ನಿವೃತ್ತಿ ಪಶ್ನೆ ಎದ್ದಿದೆ. ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ….

  • ಜ್ಯೋತಿಷ್ಯ

    ಶ್ರೀ ಸಾಯಿಬಾಬಾನನ್ನ ನೆನೆಯುತ್ತ ನಿಮ್ಮ ದಿನದ ರಾಶಿ ಭವಿಷ್ಯವನ್ನು ತಿಳಿಯಿರಿ

    ಮೇಷ ರಾಶಿ ಭವಿಷ್ಯ (Saturday, December 11, 2021) ನಿಮ್ಮ ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳು ಮಾಡಬಹುದು. ಆದರೆ ಒತ್ತಡವನ್ನು ನಿಭಾಯಿಸಲು ಆಸಕ್ತಿದಾಯಕವಾದದ್ದನ್ನೇನಾದರೂ ಓದುವ ಮೂಲಕ ಸ್ವಲ್ಪ ಮಾನಸಿಕ ವ್ಯಾಯಾಮ ಮಾಡಿಕೊಳ್ಳಿ. ತಮ್ಮ ವ್ಯಾಪರಕ್ಕಾಗಿ ಮನೆಯಿಂದ ಹೊರಗೆ ಹೋಗಿರುವ ವ್ಯಾಪಾರಿಗಳು, ತನ್ನ ಹಣವನ್ನು ಜಾಗರೂಕವಾಗಿಡಿ, ಹಣದ ಕಳ್ಳತನವಾಗುವ ಸಾಧ್ಯತೆ ಇದೆ. ನಿಮ್ಮ ಅತಿಯಾದ ಜೀವನಶೈಲಿ ಮನೆಯಲ್ಲಿ ಆತಂಕ ಸೃಷ್ಟಿಸಬಹುದು ಆದ್ದರಿಂದ ತಡರಾತ್ರಿಯನ್ನು ಹಾಗೂ ಇತರರ ಮೇಲೆ ಬಹಳ ಖರ್ಚು ಮಾಡುವುದನ್ನು ತಪ್ಪಿಸಿ. ತನ್ನ ಪ್ರೀತಿಪಾತ್ರರಿಂದ ದೂರವಿರುವ…

  • ಆರೋಗ್ಯ, ಜೀವನಶೈಲಿ

    ಫುಡ್ ಪಾಯಿಸನ್’ಗೆ ಇಲ್ಲಿದೆ ಸುಲಭ ಪರಿಹಾರ..!ತಿಳಿಯಲು ಈ ಲೇಖನ ಓದಿ…

    ತಿಂದ ಆಹಾರ ಸರಿಯಾಗ ಜೀರ್ಣವಾಗದೇ ವಿಷಮಯವಾಗುವುದನ್ನು ಫುಡ್ ಪಾಯಿಸನ್ ಎಂದು ಕರೆಯಲಾಗುತ್ತದೆ. ರಾಸಾಯನಿಕಗಳು, ಬ್ಯಾಕ್ಟೀರಿಯಾಗಳು, ಕೀಟಾಣುಗಳು ಸೇರಿಕೊಂಡಿರುವ ಆಹಾರವನ್ನು ತಿಂದ್ರೆ ಅದು ಜೀರ್ಣವಾಗದೇ ಫುಡ್ ಪಾಯಿಸನ್ ಉಂಟಾಗುತ್ತದೆ.

  • ಉಪಯುಕ್ತ ಮಾಹಿತಿ

    ಲೈಫಲ್ಲಿ ಗೆಲ್ಲಲೇಬೇಕು ಅನ್ನೋರು, ಇದನ್ನ ಮಿಸ್ ಮಾಡದೇ ಓದಿ..!

    ಸೋಲು.. ಯಾರಿಗಾಗಿಲ್ಲ..? ಎಷ್ಟು ಜನ ಎದುರಿಸಿಲ್ಲ..? ಸೋಲದೇ ಇದ್ದವನು ಗೆದ್ದ ಉದಾಹರಣೇನೇ ಇಲ್ಲ..! ಸೋತಾಗ ಸತ್ತೆ ಅನ್ಕೊಂಡ್ರೆ ನೀವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..! ತುಂಬಾ ಸೋತವನನ್ನು ಕೇಳಿನೋಡಿ…

  • ಸುದ್ದಿ

    ಸ್ಟೇಷನ್‌ ಮಾಸ್ಟರ್‌ ನಿರ್ಲಕ್ಷ್ಯಕ್ಕೆ ರೈಲ್ವೇ ಸಿಬ್ಬಂದಿ ಬಲಿ…!

    ರೈಲ್ವೆ ಹಳಿಯಲ್ಲಿ ನಿರ್ವಹಣೆ ಕೆಲಸ ಮಾಡುತ್ತಿದ್ದ ವೇಳೆ ಹೌರಾ- ಜಗದಾಲ್ಪುರ ಸಮಲೇಶ್ವರಿ ಎಕ್ಸ್‌ಪ್ರೆಸ್‌ ರೈಲು ಆಗಮಿಸಿದ್ದು ಅಪಘಾತಕ್ಕೆ ಕಾರಣವಾಗಿದೆ. ರೈಲ್ವೆ ಹಳಿ ನಿರ್ವಹಣೆ ಮಾಡುವ ನಿರ್ವಹಣಾ ಕಾರಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ಅದೇ ದಾರಿಯಲ್ಲಿ ಸಮಲೇಶ್ವರಿ ಎಕ್ಸ್ ಪ್ರೆಸ್ ಬಂದಿದೆ. ಈ ಘಟನೆಯಿಂದ ಸಮಲೇಶ್ವರಿ ಎಕ್ಸ್ಪ್ರೆಸ್ ರೈಲಿನ ಕೆಲವು ಬೋಗಿಗಳು ಹಳಿ ತಪ್ಪಿದ್ದು ಎಂಜಿನ್ ಗೆ ಹಾನಿಯಾಗಿದೆ. ಆದರೆ ರೈಲು ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎನ್ನಲಾಗಿದೆ. ರೈಲ್ವೆ ಹಳಿ ನಿರ್ವಹಣೆ ನಡೆಯುವಾಗಲೇ ರೈಲು ಸಂಚಾರಕ್ಕೆ…

  • ರಾಜಕೀಯ

    ಈ ಸಮೀಕ್ಷೆಯ ಪ್ರಖಾರ ದೇಶದ ಅತ್ಯಂತ ಜನಪ್ರಿಯ ವ್ಯಕ್ತಿ ಮತ್ತು ರಾಜಕಾರಣಿ ಯಾರು ಗೊತ್ತಾ..?

    ಇನ್ನೇನು ಲೋಕಸಭಾ ಚುನಾವಣಾ ಹತ್ತಿರ ಆಗುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದೆ. ಇದೇ ಸಮಯದಲ್ಲಿ ದೇಶದ ಅತ್ಯಂತ ಜನಪ್ರಿಯ ರಾಜಕಾರಣಿ ಯಾರೆಂದು ಸಮೀಕ್ಷೆ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ರಾಜಕಾರಣಿ ಎಂದು ಜನರ ಅಭಿಪ್ರಾಯವಾಗಿದೆ.   ರಾಜಕೀಯ ತಂತ್ರರೂಪಕ ಪ್ರಶಾಂತ್ ಕಿಶೋರ್ ನೇತೃತ್ವದ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ(ಐ-ಪ್ಯಾಕ್) ನಡೆಸಿದ ಸಮೀಕ್ಷೆಯಲ್ಲಿ ದೇಶದ 712 ಜಿಲ್ಲೆಗಳ 57 ಲಕ್ಷ ಮಂದಿ ಮತ ನೀಡಿದ್ದು ಪ್ರಧಾನಿ ಮೋದಿ ಅತಿ ಜನಪ್ರಿಯ ಮತ್ತು…