ಸುದ್ದಿ

400 ವರ್ಷಗಳಿಗೊಮ್ಮೆ ಅರಳುವ ಅಪರೂಪದ ವಿಸ್ಮಯಕಾರಿ ಹೂವು..! ಎಲ್ಲಿ ಸಿಗುತ್ತದೆ ಗೊತ್ತಾ?

56

ಚಿಕ್ಕ ಚಿಕ್ಕ ಹೂಕೋಸನ್ನು ಮಂಟಪದಂತೆ ಜೋಡಿಸಿಟ್ಟಂತೆ ಕಾಣುವ ಫೋಟೋವೊಂದನ್ನು ಪೋಸ್ಟ್‌ ಮಾಡಿ, ಇದು ಹೂಕೋಸಲ್ಲ. ಹಿಮಾಲಯದಲ್ಲಿ 400 ವರ್ಷಗಳಿಗೊಮ್ಮೆ ಅರಳುವ ಅಪರೂಪದ ಹೂವು ಎಂದು ಹೇಳಲಾಗಿದೆ. ಇದರ ಹೆಸರು ಪಗೋಡ ಅಂದರೆ ಗೋಪುರ ಎಂದರ್ಥ. ಕೆನೆ ಬಣ್ಣದ ಕೋನ್‌ ಆಕಾರದಲ್ಲಿ ಹೂವಿನ ಸುತ್ತ ಹಸಿರು ಎಲೆಗಳು ಆವರಿಸಿಕೊಂಡಿದ್ದು, ನೋಡಲು ಸುಂದರವಾಗಿದೆ.

ಆದರೆ ನಿಜಕ್ಕೂ ಇದು ಹಿಮಾಲಯದಲ್ಲಿ 400 ವರ್ಷಗಳಿಗೊಮ್ಮೆ ಮಾತ್ರ ಅರಳುವ ಪಗೋಡ ಹೂವೇ ಎಂದು ಪರಿಶೀಲಿಸಿದಾಗ ಇದು ಪಗೋಡಾ ಅಲ್. ಅಥವಾ ಅಪರೂಪಕ್ಕೆ ಅರಳುವ ಹೂವೂ ಅಲ್ಲವೆಂದು ತಿಳಿದುಬಂದಿದೆ. ಈ ಹಿಂದೆಯೂ ಇದೇ ಫೋಟೋವನ್ನು ಪೋಸ್ಟ್‌ ಮಾಡಿ, 400 ವರ್ಷಗಳಿಗೊಮ್ಮೆ ಹಿಮಾಲಯದಲ್ಲಿ ಮಾತ್ರ ಅರಳುವ ಮಹಾಮೇರು ಪುಷ್ಪ ಎಂದು ಸುಳ್ಳುಸುದ್ದಿ ಹರಡಲಾಗಿತ್ತು.

ವಾಸ್ತವವಾಗಿ ವೈರಲ್‌ ಆಗಿರುವ ಹೂವು ಹಿಮಾಲಯದ ಸ್ಥಳೀಯ ದೈತ್ಯ ಮೂಲಿಕೆಯ ಸಸ್ಯವಾದ ರೇಯುಮ್‌ ನೋಬಲ. ಸಸ್ಯದ್ದು. ಭೂತಾನ್‌, ಅಷ್ಘಾನಿಸ್ತಾನ, ಮ್ಯಾನ್ಮಾರ್‌, ಪಾಕಿಸ್ತಾನ ಭಾರತದ ಸಿಕ್ಕಿಂ, ನೇಪಾಳದಲ್ಲಿ ಬೆಳೆಯುತ್ತದೆ. 4000-4800 ಮೀಟರ್‌ ಎತ್ತರದ ಪ್ರದೇಶಗಳಲ್ಲಿ 1-2 ಮೀಟರ್‌ ಎತ್ತರದ ವರೆಗೆ ಬೆಳೆಯುತ್ತದೆ.

ಆದರೆ ಇದೇನು ಅಪರೂಪದ ಹೂವಿನ ಜಾತಿಯಲ್ಲ, ಆಗಾಗ ಬೆಳೆಯುತ್ತಿರುತ್ತದೆ. 2019ರ ಜುಲೈನಲ್ಲಿ ‘ಆಲ್ಫಿನ್‌ ಗಾರ್ಡನ್‌ ಸೊಸೈಟಿ ರೇಯುಮ್‌ ನೊಬೆಲ್‌ ಸಸ್ಯದ ಫೋಟೋವನ್ನು ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಿತ್ತು.

About the author / 

admin

Categories

Date wise

  • ರಾಜ್ಯದಲ್ಲಿ ಟಫ್ ರೂಲ್ಸ್ ಮತ್ತೆ ಜಾರಿ

    ರಾಜ್ಯ ಸರ್ಕಾರವು ಇಂದಿನಿಂದ ನೈಟ್ ಕರ್ಫ್ಯೂ & ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ.ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಮುಂದಿನ 2ವಾರಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.ವಾರಾಂತ್ಯದ ಕರ್ಫ್ಯೂವನ್ನು ದಿನಾಂಕ 7ರಿಂದ ಶುಕ್ರವಾರ ರಾತ್ರಿ 10 ಗಂಟೆಯಿಂದ 10 ರ ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿ ಮಾಡಲಾಗಿದೆ   ಸರ್ಕಾರಿ ಕಚೇರಿಗಳು ಮಾಲ್​ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. * ಚಿತ್ರಮಂದಿರ, ಮಾಲ್,…

     743,715 total views,  2,743 views today

ಏನ್ ಸಮಾಚಾರ