ಸುದ್ದಿ

ಖೋಟಾನೋಟು ಚಲಾವಣೆ ಮಾಡುತ್ತಿದ್ದ ವಿದೇಶಿ ಪ್ರಜೆ ಬಂಧನ, 33 ಲಕ್ಷ ರೂ ವಶ, ಬೆಂಗಳೂರಿನ ಬಾಣಸವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…!

44

ಬೆಂಗಳೂರು: ನಗರದಲ್ಲಿ ಖೋಟಾನೋತು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಆಫ್ರಿಕಾ ಪ್ರಜೆಯೊಬ್ಬನನ್ನು ಸಿಸಿಬಿ ಪೋಲೀಸರು ಬಂಧಿಸಿದ್ದು ಆರೋಪಿಯಿಂದ 2 ಸಾವಿರ ಮುಖಬೆಲೆಯ 33.70 ಲಕ್ಷ ರೂ. ಖೋಟಾನೋತು ವಶಕ್ಕೆ ಪಡೆದಿದ್ದಾರೆ.

ಬಂಧಿತನನ್ನು ಕ್ಯಾಮರೂನ್ ದೇಶದ ಡಿಯೊಡೊನೆ ಕ್ರಿಸ್ಪೊಲ್(35) ಎಂದು ಗುರುತಿಸಲಾಗಿದೆ.ಈತ ಬಾಣಸವಾಡಿ ಸುಬ್ಬಯ್ಯನ ಪಾಳ್ಯದಲ್ಲಿ ವಾಸವಾಗಿದ್ದ.ಈತನೊಡನೆ ಇನ್ನೂ ಹಲವರು ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರೆನ್ನಲಾಗಿದೆ. ಈ ಸಂಬಂಧ ತನಿಖೆ ತೀವ್ರಗೊಳಿಸಿರುವ ಪೋಲೀಸರು ಇನ್ನಷ್ಟು ತೀವ್ರವಾಗಿ ತನಿಖೆ ಕೈಗೊಂಡಿದ್ದಾರೆ.

ಬಂಧಿತ ಕ್ರಿಸ್ಪೊಲ್ನ ಮನೆ ಮೇಲೆ ದಾಳಿ ಮಾಡಿದ್ದ ಪೋಲೀಸರು ಖೋತಾನೋತಿನ ಜತೆಗೆ ಎರಡು ಕಲರ್ ಪ್ರಿಂಟರ್‍ಗಳು, ಖಾಲಿ ಪೇಪರ್‍ಗಳು, ಸ್ಟಿಕರ್ ಕಟ್ಟರ್,ಮೊಬೈಲ್ ಹಾಗೂ ಆರೋಪಿಯ ಪಾಸ್‍ಪೋರ್ಟ್‍ ಜಪ್ತಿ ಮಾಡಿದ್ದಾರೆ.

2017ರಲ್ಲಿ ಪ್ರವಾಸಿ ವೀಸಾದ ಮೂಲಕ ಬಾರತಕ್ಕೆ ಆಗಮಿಸಿದ್ದ ಈತ ವೀಸಾವನ್ನು ನವೀಕರಣ ಮಾಡದೆ ಇಲ್ಲೇ ನೆಲೆಸಿದ್ದಾನೆ.ಅಲ್ಲದೆ ಇಲ್ಲಿನ ಹಣವನ್ನು ಕಲರ್‍ಪ್ರಿಂಟರ್ ಮೂಲಕ ನಕಲಿ ಮುದ್ರಣ ಮಾಡಿ ಚಲಾವಣೆ ಮಾಡುತ್ತಿದ್ದ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರಾತ್ರಿಹೊತ್ತು ಪಾಳಿ ಸೆಕ್ಯೂರಿಟಿಯಾಗಿ ದುಡಿಯುತ್ತಿದ್ದ ವಿದ್ಯಾರ್ಥಿ ಈಗ ಇನ್ಫೋಸಿಸ್ ಎಂಜಿನಿಯರ್‌,.!

    ಕಾರ್ಕಳ ತಾಲೂಕು ಕಾಂತಾವರ ಶಾರದಾ ನಗರದ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ರಾತ್ರಿ ಪಾಳಿಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ಇನ್ಫೋಸಿಸ್ ಇಂಜಿನಿಯರ್ ಆಗಿ ಸಾಧನೆ ಮಾಡಿದ್ದಾನೆ. ಈ ಸಾಧನೆ ಮಾಡಿ ಮೆಚ್ಚುಗೆಗೆ ಪಾತ್ರನಾದ ಯುವಕ ಅಂಕಿತ್‌. ಈತ ದೆಹಲಿಯವನಾಗಿದ್ದು, ಕಾರ್ಕಳ ತಾಲೂಕು ಕಾಂತಾವರ ಶಾರದಾ ನಗರದ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ರಾತ್ರಿ ಪಾಳಿಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಹಗಲು ನಿಟ್ಟೆ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆದರೆ, ರಾತ್ರಿ ಪಾಳಿಯ ದುಡಿಮೆ ಎನ್ನುವ ಕಾರಣಕ್ಕೆ ಆತ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ…

  • ಸಿನಿಮಾ

    ಮಂಡ್ಯದ ಗಂಡು ತಮ್ಮ ಹುಟ್ಟುಹಬ್ಬದಲ್ಲಿ ಅಭಿಮಾನಿಗಳಿಗೆ ಹೇಳಿದ್ದಾದರೂ ಏನು ???

    ಹಿರಿಯ ನಟ ಕಮ್ ಶಾಸಕ ರೆಬೆಲ್ ಸ್ಟಾರ್ ಅಂಬರೀಶ್‍ರವರಿಗಿಂದು ಹುಟ್ಟುಹಬ್ಬದ ಸಂಭ್ರಮ. 65 ನೇ ವರ್ಷಕ್ಕೆ ಕಾಲಿಟ್ಟಿರೋ ಅಂಬರೀಶ್ ಇತ್ತೀಚೆಗೆ ಸಿನಿಮಾಗಳಲ್ಲಿ ಅಭಿನಯಿಸುತ್ತಿಲ್ಲವಾದ್ರೂ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

  • ಸುದ್ದಿ

    ಲಾಲ್‌ಬಾಗ್ ಪುಷ್ಪ ಪ್ರದರ್ಶನದಲ್ಲಿ ಈ ಬಾರಿಯ ವಿಶೇಷತೆಯೇನು ಗೊತ್ತ?

    ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಆಗಸ್ಟ್ 9ರಿಂದ ಆರಂಭವಾಗಲಿದೆ. ದೇಶ ಸ್ವಾತಂತ್ರ್ಯಗೊಂಡ ನಂತರ ರಾಜಸಂಸ್ಕೃತಿಯನ್ನು ಭಾರತದಲ್ಲಿ ಮೊದಲ ಬಾರಿಗೆ ವಿಲೀನಗೊಳಿಸಿದ್ದ ಕೀರ್ತಿಗೆ ಪಾತ್ರರಾಗಿದ್ದ ಜಯಚಾಮರಾಜ ಒಡೆಯರ್ ಅವರ ಜೀವನ ಚರಿತ್ರೆಯನ್ನು ಫಲಪುಷ್ಪಗಳಿಂದ ಅನಾವರಣಗೊಳಿಸಲಾಗುತ್ತದೆ. ಅವರ ಶತಮಾನೋತ್ಸವ ಅಂಗವಾಗಿ ಅವರ ಬಾಲ್ಯ , ಶಿಕ್ಷಣ ಮತ್ತು ಆಡಳಿತದಲ್ಲಿ ರಾಜ್ಯಕ್ಕೆ ಸಲ್ಲಿಸಿದ ಸೇವೆ ಕುರಿತು ಸಾರ್ವಜನಿಕರಿಗೆ ತಿಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಮೈಸೂರು ಸಂಸ್ಥಾನದ ಕೊನೆಯ ದೊರೆಯಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಜೀವನ ಚರಿತ್ರೆ ಅವರು ರಾಜ್ಯಕ್ಕೆ…

  • ಸುದ್ದಿ

    ಅಪಘಾತದಲ್ಲಿ ಮೃತಪಟ್ಟವರು ದೆವ್ವಗಳಾಗುತ್ತಾರಾ ಎನ್ನುವುದಕ್ಕೆ ಇಲ್ಲಿದೆ ನೋಡಿ ಉತ್ತರ,.!ನೋಡಿದ್ರೆ ಬೆಚ್ಚಿ ಬೀಳ್ತಿರಾ,..!!

    ಮಂಡ್ಯ: ಗುತ್ತಲು ರಸ್ತೆಯಲ್ಲಿ 2018ರ ಅ.2ರ ಸಂಜೆ ಸಂಭವಿಸಿದ್ದ ಲಾರಿ ಅಪಘಾತದಲ್ಲಿ ಮೃತಪಟ್ಟವರು ದೆವ್ವಗಳಾಗಿದ್ದಾರೆ. ಆ ದೆವ್ವಗಳ ಚಿತ್ರಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ ಎಂಬ ಚಿತ್ರಸಹಿತ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿವೆ. ಇತ್ತೀಚೆಗೆ ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಬಳಿ ಬಿಳಿ ಬಟ್ಟೆ ತೊಟ್ಟಿದ್ದ ಮಹಿಳೆಯಂತೆ ನಿಂತು ಡ್ರಾಪ್ ಕೇಳುವ ವಿಡಿಯೋ ವೈರಲ್ ಆಗಿ. ಅದು ದೆವ್ವವೇ ಇರಬೇಕು ಎಂಬ ಚರ್ಚೆಗಳು ನಡೆದಿದ್ದವು. ಅದರ ಬೆನ್ನಲ್ಲೇ ನಗರದ ಗುತ್ತಲು ರಸ್ತೆ ಬದಿಯಲ್ಲಿ ಮತ್ತು ಬೇಕರಿಯೊಂದರ ಪಕ್ಕ ದೆವ್ವಗಳು…

  • ಸಿನಿಮಾ

    ಅಂಜನಿಪುತ್ರನಿಗೆ ಕೋರ್ಟ್ ಶಾಕ್..!

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ಅಂಜನಿಪುತ್ರ’ ಚಿತ್ರ ಪ್ರದರ್ಶನಕ್ಕೆ ಸೆಷೆನ್ಸ್ ಕೋರ್ಟ್ ಶನಿವಾರ ತಡೆಯಾಜ್ಞೆ ನೀಡಿದೆ.ಅಂಜನಿಪುತ್ರ ಚಿತ್ರದಲ್ಲಿ ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇರುವ ಹಿನ್ನೆಲೆಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಸಿವಿಲ್ ಕೋರ್ಟ್ ತಡೆ ನೀಡಿದೆ.