inspirational

ವಾಟ್ಸಪ್ ಗ್ರೂಪ್ ಸ್ನೇಹಿತರಿಂದ ನೆರೆ ಸಂತ್ರಸ್ತ ಪ್ರದೇಶದ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ…!

38

ಹೊಳೆ ನರಸೀಪುರ ಪಟ್ಟಣದ ಪ್ರೈಂ ಕ್ಲಬ್ ಮತ್ತು ಗೆಳೆಯರ ಬಳಗ ಈ ಶ್ಲಾಘನೀಯ ಕೆಲಸವನ್ನು ಮಾಡಿದೆ. ತಮ್ಮ ತಮ್ಮ ವಾಟ್ಸಪ್ ಗ್ರೂಪ್‌ನ ಸ್ನೇಹಿತರೆಲ್ಲ ಒಂದಾಗಿ ನೆರೆ ಪೀಡಿತ ಪ್ರದೇಶಗಳಾದ ಹಾವೇರಿಯ ಕೂಡಲ ಗ್ರಾಮ ಮತ್ತು ಬೆಳಗಾವಿಯ ರಾಮದುರ್ಗ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಿದ್ದಾರೆ. ಎರಡು ಜಿಲ್ಲೆಗಳ ಒಟ್ಟು ಮೂರು ಸರ್ಕಾರಿ ಶಾಲೆಗಳ 350ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪಠ್ಯ ಪುಸ್ತಕಗಳನ್ನು ವಿತರಿಸಿದ್ದಾರೆ.

ಸ್ನೇಹಿತರೆಲ್ಲ ತಮ್ಮ ಶಕ್ತಿಯಾನುಸಾರ ಹಣ ಸಂಗ್ರಹಿಸಿ ನಂತರ ಹೋಲ್ ಸೇಲ್ ದರದಲ್ಲಿ ವಿತರಣಾ ವಸ್ತುಗಳನ್ನು ಖರೀದಿಸಿದ್ದಾರೆ. ನಂತರ ಒಂದು ತಂಡ ನೆರೆ ಪೀಡಿತ ಜಿಲ್ಲೆಗೆ ತಲುಪಿದ್ದಾರೆ. ಮೊದಲಿಗೆ ಹಾವೇರಿಯ ಕೂಡಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದ್ದು, ಸೋಮುವಾರ ಬೆಳಗಾವಿ ಜಿಲ್ಲೆಯಲ್ಲಿ ವಿತರಣೆ ಮಾಡುತ್ತೇವೆ ಎಂದು ಆಯೋಜಕರು ಮಾಹಿತಿನೀಡಿದ್ದಾರೆ.

ಒಂದು ವಿದ್ಯಾರ್ಥಿಗೆ ಒಂದು ಬ್ಯಾಗ್, ನೀರಿನಬಾಟೆಲ್ ಮತ್ತು ಜಾಮೆಟ್ರಿ ಬಾಕ್ಸ್ ಎಂಟು ನೂರು ರೂಪಾಯಿಯಂತೆ ಒಟ್ಟು ಮುನ್ನೂರು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತಿದೆ. ಪ್ರೈಂ ಕ್ಲಬ್ ಮತ್ತು ಗೆಳೆಯರ ಸಂಯುಕ್ತ ಆಶ್ರಯದಲ್ಲಿ ಮಾಡುತ್ತಿರುವ ಕೆಲಸಕ್ಕೆ ಶಾಲಾ ಮುಖ್ಯ ಶಿಕ್ಷಕ ಶಿವಪ್ಪ ಕೂಡ ಸಂತಸ ವ್ಯಕ್ತಪಡಿಸಿದ್ದು, ಯುವಕರ ತಂಡದ ಸಮಾಜ ಸೇವೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಹಾನಗಲ್ ತಾಲೂಕಿನ ಕೂಡಲ ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಲಾಯಿತು ಸರ್ಕಾರಿ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಶಿವಪ್ಪ, ಪ್ರೈಂ ಕ್ಲಬ್ ಸದಸ್ಯರಾದ ಅಶೋಕ್ ಗೌಡ, ಜಾಯ್ಬ್ರಿಗಾಂಝ, ಮೋಹನ್ ಮತ್ತು ಮಹಮದ್ಶಫಿ ಸೇರಿದಂತೆ ಇತರರು ಹಾಜರಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಶ್ರೀ ರಾಘವೇಂದ್ರ ಸ್ವಾಮಿಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what ಮೇಷ ರಾಶಿಒಳ್ಳೆಯ…

  • ಸುದ್ದಿ

    ಕೇವಲ 12 ವರ್ಷಗಳಲ್ಲಿ 9 ಸಿನಿಮಾ ; ಶಂಕ್ರಣ್ಣ ನಿರ್ದೇಶಿಸಿದ ಸಿನಿಮಾಗಳಿಗೆ ಸಿಕ್ಕಿದ ಬಿರುದುಗಳೆಷ್ಟು ಗೊತ್ತಾ?

    ಶಂಕರ್ ನಾಗ್ ನಟಿಸಿದ್ದ ಬಹುತೇಕ ಸಿನಿಮಾಗಳು ಕಮರ್ಷಿಯಲ್‌ ಮಾದರಿಯಲ್ಲೇ ಇದ್ದವು. ಆದರೆ, ಅವರು ನಿರ್ದೇಶನಕ್ಕೆ ಆಯ್ದುಕೊಳ್ಳುತ್ತಿದ್ದ ಕಥಾ ವಸ್ತುಗಳು ಮಾತ್ರ ಭಿನ್ನವಾಗಿರುತ್ತಿದ್ದವು. ಜತೆಗೆ ಆ ಸಿನಿಮಾಗಳಿಗೆ ಅನೇಕ ಪ್ರಶಸ್ತಿಗಳು ಸಿಕ್ಕಿದ್ದವು. ಶಂಕರ್ ನಾಗ್  ಬದುಕಿದ್ದರೆ, ಇಂದು ಅವರಿಗೆ 65 ವರ್ಷ ತುಂಬುತ್ತಿತ್ತು. 1954ರ ನವೆಂಬರ್ 9 ರಂದು ಹೊನ್ನಾವರದಲ್ಲಿ ಜನಿಸಿದ ಶಂಕರ್‌, ತಮ್ಮ 36ನೇ ವಯಸ್ಸಿನಲ್ಲೇ ಅಪಘಾತದಲ್ಲಿ ಮರಣ ಹೊಂದಿದರು. ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ ಎರಡೇ ವರ್ಷಗಳಲ್ಲಿ ‘ಮಿಂಚಿನ ಓಟ’ ಸಿನಿಮಾ ಮೂಲಕ ನಿರ್ದೇಶಕರಾದರು. ಮೊದಲ…

  • ಸುದ್ದಿ

    ಕೊಡಗಿನಲ್ಲಿ ಕಂಪಿಸಿದ ಭೂಮಿ, ಜಲ ಪ್ರಳಯಕ್ಕೆ ಸಿಲುಕಿದ ಜನರು…!

    ಮಡಿಕೇರಿ, ಮೇ 26: ಕೊಡಗಿನಲ್ಲಿ ಮತ್ತೆ ಭಯದ ವಾತಾವರಣ ನಿರ್ಮಾಣವಾಗಿದೆ. ಕಳೆದ ವರ್ಷ ಉತ್ತರ ಕೊಡಗಿನಲ್ಲಿ (ಮಡಿಕೇರಿ ಭಾಗ) ಭೂಮಿ ಕಂಪಿಸಿದ ಅನುಭವವಾಗಿತ್ತು. ಜತೆಗೆ ನಿಗೂಢ ಶಬ್ದ ಕಿವಿಗೆ ಬಡಿದಿತ್ತು. ಅದಾದ ಬಳಿಕ ಆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಏನಾಯಿತು ಎಂಬುದು ಎಲ್ಲರ ಮುಂದಿದೆ. ಈ ಬಾರಿ ಮತ್ತೆ ಭೂಮಿ ಕಂಪಿಸಿದ್ದು, ಅದು ಉತ್ತರ ಕೊಡಗಿನಿಂದ ದಕ್ಷಿಣ ಕೊಡಗಿನತ್ತ ವರ್ಗಾವಣೆಗೊಂಡಿದೆ. ಇದು ಭಯಕ್ಕೆ ಕಾರಣವಾಗಿದೆ. ಕಳೆದ ವರ್ಷ ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿ, ಜಲಪ್ರಳಯವಾಗಿ ಭಾರೀ ಅನಾಹುತ…

  • ಸುದ್ದಿ

    ಹೊಸದಾಗಿ ಪ್ರದರ್ಶಿತವಾದ ಎವಾನ್ ಎಲೆಕ್ಟ್ರಿಕ್ ಸ್ಕೂಟರ್ ಇದರ ವೈಶಿಷ್ಯತೆ ಏನು ಗೊತ್ತಾ,.!

    ಎವಾನ್ ಮೋಟಾರ್ಸ್ ಎರಡು ಕಾನ್ಸೆಪ್ಟ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಪುಣೆ ಮೋಟಾರ್ ಶೋದಲ್ಲಿ ಪ್ರದರ್ಶಿಸಿದೆ. ಪ್ರದರ್ಶಿಸಲಾದ ಈ ಎರಡು ಸ್ಕೂಟರ್‍‍ಗಳ ಪೈಕಿ, ಟಾಪ್ ಎಂಡ್ ಸ್ಕೂಟರ್‍, ಸಿಂಗಲ್ ಜಾರ್ಜ್‍‍ನಿಂದ 200 ಕಿ.ಮೀ ದೂರ ಚಲಿಸಲಿದೆ. ಫ್ಲಾಗ್‍‍ಶಿಪ್ ಸ್ಕೂಟರ್ 72 ವಿ 22ಎ‍ಎಚ್ ಲಿಥಿಯಂ-ಅಯಾನ್ ಬ್ಯಾಟರಿ ಮತ್ತು 1200ಡಬ್ಲ್ಯು ಮೋಟರ್ ಹೊಂದಿದೆ. ಈ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 60 ಕಿ.ಮೀಗಳಾಗಿದೆ. ಲೊವರ್-ಸ್ಪೆಕ್ ಮಾದರಿಯನ್ನು ಪೂರ್ತಿಯಾಗಿ ಜಾರ್ಚ್ ಮಾಡಿದರೆ 80 ಕಿ.ಮೀ ಚಲಿಸುತ್ತದೆ. ಎಂಟ್ರಿ-ಲೆವೆಲ್ ಸ್ಕೂಟರ್ 60 ವಿ…

  • ಸಿನಿಮಾ, ಸುದ್ದಿ

    ಯಶ್​ಗೆ ಅಂಬಿ, ರವಿಚಂದ್ರನ್ ಜನ್ಮದಿನವೇ ಮರೆತುಹೋಯಿತೇ? ಸಿಟ್ಟಾದ್ರು ರೆಬೆಲ್​ ಸ್ಟಾರ್ ಹಾಗೂ ಕ್ರೇಜಿ ಸ್ಟಾರ್​ ಫ್ಯಾನ್ಸ್.

    ದರ್ಶನ್, ಪುನೀತ್ ರಾಜ್ಕುಮಾರ್, ಸುದೀಪ್ ಸೇರಿ ಎಲ್ಲರೂ ಟ್ವೀಟ್ ಮಾಡುವ ಮೂಲಕ ಅಂಬಿ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ಆದರೆ, ಓರ್ವ ಸ್ಟಾರ್ ನಟನನ್ನು ಬಿಟ್ಟು! ಕನ್ನಡ ಚಿತ್ರರಂಗದ ದೊಡ್ಡಣ್ಣನಂತೆ ಕೆಲಸ ಮಾಡಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಸಿನಿಮಾ ರಂಗದಲ್ಲಿ ಯಾವುದೇ ತೊಂದರೆ ಆದರೂ ಅದನ್ನು ಪರಿಹಾರ ಮಾಡುತ್ತಿದ್ದರು. ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ. ಮೇ 29 ಅವರ ಜನ್ಮದಿನ. ಮೇ 30 ರವಿಚಂದ್ರನ್​ ಜನ್ಮದಿನ. ಈ ವೇಳೆ ಕನ್ನಡ ಚಿತ್ರರಂಗದ ಎಲ್ಲ ಗಣ್ಯರೂ ಯಶ್ ಅವರನ್ನು…

  • ರಾಜಕೀಯ

    ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ..ನಿಮ್ಮ ಕ್ಷೇತ್ರದ ಅಭ್ಯರ್ಥಿ ಯಾರು..?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಚುನಾವಣಾ ರಣರಂಗ ದಿನೇ ದಿನೇ ಹೆಚ್ಚು ಹಾಮಾನಾ ಸೆಳೆಯುತ್ತಿದ್ದು, ಮತದಾನ ಮಾಡುವುದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದವು. ಆದರೆ ಕಾಂಗ್ರೆಸ್ ಮಾತ್ರ ತಾಳ್ಮೆ ತೆಗೆದುಕೊಂಡಿತ್ತು.. ಆದರೆ ನೆನ್ನೆ ಸಂಜೆ ವೇಳೆಗೆ ತನ್ನ ಮೊದಲ ಪಟ್ಟಿಯಲ್ಲಿ ಬಹುತೇಕ ಕರ್ನಾಟಕ ರಾಜ್ಯದ ವಿಧಾನಸಭಾ ಅಭ್ಯರ್ಥಿಗಳ ಹೆಸರನ್ನು ಒಂದೇ ಪಟ್ಟಿಯಲ್ಲಿ ಬಿಡುಗಡೆ ಮಾಡಿದೆ. ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಬಂಡ ಜಿ…