ಸಿನಿಮಾ

ನಾಯಕ ನಟ ದುನಿಯಾ ವಿಜಿ ರವರಿಗೆ ಕೋಲಾರದಲ್ಲಿ ಭರ್ಜರಿ ಸ್ವಾಗತ

324

ಕೋಲಾರ: ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಚಲನಚಿತ್ರದ ಪ್ರಚಾರಕ್ಕಾಗಿ ಭಾನುವಾರ ಕೋಲಾರ ನಗರಕ್ಕೆ ಆಗಮಿಸಿದ ದುನಿಯಾ ವಿಜಿ ಮತ್ತು ಚಿತ್ರದ ನಿರ್ದೇಶದ ಗೋಪಿಚಂದ್ ಮಲಿನೇನಿ ಅವರಿಗೆ ಎನ್‌ಬಿಕೆ ಹೆಲ್ಪಿಂಗ್ ಹ್ಯಾಂಡ್ಸ್ ಮತ್ತು ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು. ವೀರಸಿಂಹಾರೆಡ್ಡಿ ಚಿತ್ರದ ನಿರ್ದೇಶಕ ಗೋಪಿಚಂದ್ ಮಲಿನೇನಿ ಮತ್ತು ಜಗನ್ ಶನಿವಾರ ರಾತ್ರಿಯೇ ಕೋಲಾರಕ್ಕೆ ಆಗಮಿಸಿ ನಗರದ ಹೊರವಲಯದ ನಾಗಾರ್ಜುನ ಹೋಟೆಲ್‌ನಲ್ಲಿ ವಾಸ್ತವ್ಯಹೂಡಿದ್ದರು. ಭಾನುವಾರ ಬೆಳಿಗ್ಗೆ ಬೆಂಗಳೂರಿನಿಂದ ಆಗಮಿಸಿದ್ದ ದುನಿಯಾ ವಿಜಿ ಅವರನ್ನು ಸೇರಿಕೊಂಡರು. ಉಪಹಾರದ ನಂತರ ಇವರನ್ನು ಕೋಲಾರದ ಬಸ್ ನಿಲ್ದಾಣ ವೃತ್ತಕ್ಕೆ ಕರೆ ತರಲಾಯಿತು.

ಅಲ್ಲಿ ಅಭಿಮಾನಿಗಳು ಮತ್ತು ಎನ್‌ಬಿಕೆ ಹೆಲ್ಪಿಂಗ್ ಹ್ಯಾಂಡ್ಸ್ ಮುಖ್ಯಸ್ಥ ರಮೇಶ್‌ಯಾದವ್ ಇತರರು ಬೃಹತ್ ಆಪಲ್ ಮತ್ತು ಹೂವಿನ ಹಾರವನ್ನು ಕ್ರೇನ್ ಮೂಲಕ ಹಾಕಿ ಸ್ವಾಗತಿಸಿದರು. ಅಲಂಕೃತ ತೆರೆದ ಜೀಪಿನಲ್ಲಿ ಬಸ್ ನಿಲ್ದಾಣ ವೃತ್ತದಿಂದ ಭವಾನಿ ಚಿತ್ರ ಮಂದಿರದವರೆವಿಗೂ ಅವರನ್ನು ಹೂಗಳ ಸುರಿಮಳೆಯ ಸ್ವಾಗತ, ಡಿಜೆ ಮತ್ತು ಬ್ಯಾಂಡ್‌ಸೆಟ್ ಸಾರಥ್ಯದಲ್ಲಿ ಕಿಕ್ಕಿರಿದು ನೆರೆದಿದ್ದ ಅಭಿಮಾನಿಗಳು ಕರೆ ತಂದರು.

ಚಿತ್ರ ಮಂದಿರದಲ್ಲಿಯೂ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳತ್ತ ಕೈಬೀಸುತ್ತಾ ಚಿತ್ರದ ತಂಡ ಚಿತ್ರಮಂದಿರವನ್ನು ಪ್ರವೇಶಿಸಿತು. ಚಿತ್ರಮಂದಿರದಲ್ಲಿ ರಮೇಶ್‌ಯಾದವ್ ತಂಡವು ಅವರಿಗೆ ಆತ್ಮೀಯ ಸ್ವಾಗತಕೋರಿ ಕೇಕ್ ಕತ್ತರಿಸಿ, ಆಗಮಿಸಿದ್ದ ಚಿತ್ರ ತಂಡದ ಸದಸ್ಯರಿಗೆ ಸನ್ಮಾನ ಮಾಡಿದರು.

ಕೆಲ ಹೊತ್ತು ಅಭಿಮಾನಿಗಳೊಂದಿಗೆ ವೀರಸಿಂಹಾರೆಡ್ಡಿ ಚಿತ್ರ ವೀಕ್ಷಿಸಿದ ದುನಿಯಾವಿಜಿ ಮತ್ತು ಚಿತ್ರದ ತಂಡ ಕೋಲಾರದ ಅಭಿಮಾನಿಗಳ ಸ್ವಾಗತಕ್ಕೆ ಮನಸೋತರು. ನಿರ್ದೇಶಕ ಗೋಪಿಚಂದ್ ಮಲಿನೇನಿಮಾತನಾಡಿ, ಮುಂದಿನ ದಿನಗಳಲ್ಲಿ ಬಾಲಕೃಷ್ಣರನ್ನು ಕೋಲಾರಕ್ಕೆ ಕರೆ ತರುವುದಾಗಿ ಘೋಷಿಸಿದರು.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕೇವಲ 21 ವರ್ಷಕ್ಕೆ ಜಗತ್ತಿನ ಎಲ್ಲ ‘ದೇಶ’ ಸುತ್ತಿ ಬಂದಂತಹ ಯುವತಿ…!

    ನಮ್ಮ ದೇಶದಲ್ಲಿ ಮಕ್ಕಳು 21 ವರ್ಷದವರಾದರೆ ಅವರು ಇನ್ನು ಬಹುತೇಕ ಕಾಲೇಜಿನಲ್ಲಿರುತ್ತಾರೆ. ಪ್ರಮುಖವಾಗಿ ತಮ್ಮ ಓದನ್ನು ಮುಗಿಸಿಕೊಳ್ಳುವ ಒತ್ತಡವಿರುತ್ತದೆ. ಪ್ರವಾಸವೊಂದು ಐಷಾರಾಮಿ ಬದುಕಾಗಿರುತ್ತದಷ್ಟೇ. ಆದರೆ ಅಮೆರಿಕದ ಲೆಕ್ಸಿ ಅಲ್ಫೋರ್ಡ್ ಎನ್ನುವ ಯುವತಿ 21 ವರ್ಷ ದಾಟುವಷ್ಟರಲ್ಲಿ 196 ದೇಶಗಳಲ್ಲಿ ಹೋಗಿ ಜಗತ್ತಿನ ಎಲ್ಲ ದೇಶಗಳಲ್ಲಿ ಪ್ರಯಾಣಿಸಿದ, ಅತ್ಯಂತ ಕಿರಿಯ ವ್ಯಕ್ತಿ ಎಂದು ಗಿನ್ನಿಸ್ ಬುಕ್ ಆಫ್ ರೇಕಾರ್ಡ್ಸ್‌ನಲ್ಲಿ ಸೇರಿದ್ದಾರೆ. ಮೇ 31ರಂದು ಉತ್ತರ ಕೊರಿಯಾ ಪ್ರವೇಶಿಸಿದ ನಂತರ ಅವರು ಈ ದಾಖಲೆಗೆ ಭಾಜನರಾಗಿದ್ದಾರೆ. ಈ ಹಿಂದೆ ಈ…

  • ಸುದ್ದಿ

    ಆನ್‌ ಲೈನ್‌ ವ್ಯಾಪಾರಕ್ಕೆ ಬೀಳಲಿದೆಯಾ ಬ್ರೇಕ್…?

    ಹಬ್ಬಗಳ ದಿನ ಇ-ಕಾಮರ್ಸ್ ಕಂಪನಿಗಳು ಭಾರಿ ರಿಯಾಯಿತಿ ನೀಡಿ ಸಾಮಾನ್ಯ ವ್ಯಾಪಾರಿಗಳಿಗೆ ಹೊಡೆತ ನೀಡುತ್ತಿವೆ ಎಂದು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ಭಾರತ ಸರ್ಕಾರಕ್ಕೆ ದೂರು ನೀಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ದೂರು ನೀಡಿದ್ದಾರೆ. ಸಿಎಐಟಿ ಅಧ್ಯಕ್ಷ ಬಿ.ಸಿ. ಭಾರತೀಯಾ ಹಾಗೂ ಕಾರ್ಯದರ್ಶಿ ಪ್ರವೀಣ್ ಖಂಡೇಲ್‌ವಾಲ್ ಇ-ಕಾಮರ್ಸ್ ಕಂಪನಿಗಳ ವಿರುದ್ಧ ಅಪಸ್ವರ ಎತ್ತಿದ್ದಾರೆ. ಇ-ಕಾಮರ್ಸ್ ಕಂಪನಿಗಳು ಕೇವಲ ಆನ್‌ಲೈನ್ ಮಾರುಕಟ್ಟೆಗಳಾಗಿದ್ದು, ಅವಾಗಿಯೇ ಸಾಮಾನುಗಳ ಸಂಗ್ರಹಣೆ ಹಾಗೂ…

  • ವಿಸ್ಮಯ ಜಗತ್ತು

    ವರ್ಷದ 365 ದಿನ ನಿರಂತರವಾಗಿ ಮಳೆ ಬೀಳುವ ಗ್ರಾಮ..!ತಿಳಿಯಲು ಈ ಲೇಖನ ಓದಿ..

    ಪ್ರತಿ ವರ್ಷವೂ ಮಾನ್ಸೂನ್‌ನ್ನು ಕಾಯಲಾಗುತ್ತದೆ. ಯಾಕೆಂದರೆ ಆಕಾಶದಿಂದ ಸುರಿಯು ಮಳೆಯಿಂದ ಹಸಿರು ಹರಡುತ್ತದೆ.ಆದರೆ ಜನರು ಆಕಾಶದಿಂದ ಮಳೆ ಸುರಿಯುವುದನ್ನು ಕಾಯದಂತಹ ಸ್ಥಳದ ಬಗ್ಗೆ ನಿಮಗೆ ಗೊತ್ತಿರಲಾರದು.

  • ಸುದ್ದಿ

    ವಾಟ್ಸಪ್ ಪಡೆದ ಆದಾಯವೇಷ್ಟು ಅಂತ ಗೊತ್ತಾದರೆ ಶಾಕ್ ಆಗುವುದಂತೂ ಖಂಡಿತಾ ,.!

    ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ವಾಟ್ಸಪ್ ಭಾರತದಲ್ಲಿ ತನ್ನ ಬಿಸಿನೆಸ್‌ ಆ್ಯಪ್‌ ಅನ್ನು ಬಿಡುಗಡೆಗೊಳಿಸಿದ ಮೊದಲ ವರ್ಷದಲ್ಲಿ  6.84 ಕೋಟಿ ರೂ. ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದೆ. ಅತ್ಯಧಿಕ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ದೇಶದಲ್ಲಿ ಈಗ ಆದಾಯ ಗಳಿಕೆಯ ಹಾದಿಯತ್ತ ಹೊರಳಿದೆ. ಬಿಸಿನೆಸ್ ಆವೃತ್ತಿ ಮೂಲಕ ವಾಟ್ಸಪ್ ಮೊದಲ ವರ್ಷದ ಗಳಿಕೆಯನ್ನು ಬಹಿರಂಗಪಡಿಸಿದೆ. ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌ಗೆ ವಾಟ್ಸಪ್ ಸಲ್ಲಿಸಿರುವ ದಾಖಲಾತಿಗಳ ಪ್ರಕಾರ, 2019 ರಲ್ಲಿಕಂಪನಿ 6.84 ಕೋಟಿ ರೂ. ಆದಾಯ ಮತ್ತು 57 ಲಕ್ಷ ರೂ. ಲಾಭ ಗಳಿಸಿದೆ. ತನ್ನ…

  • ಸುದ್ದಿ

    ನಟ ಯಶ್ ಕುಟುಂಬದ ವಿರುದ್ಧ ದೂರು ದಾಕಲೆ…ಕಾರಣ?

    ನಟ ರಾಕಿಂಗ್ ಸ್ಟಾರ್ ಯಶ್ 9 ವರ್ಷಗಳಿಂದ ಇದ್ದ ಬಾಡಿಗೆ ಮನೆಯನ್ನು ಖಾಲಿ ಮಾಡುವ ಸಂದರ್ಭದಲ್ಲಿ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಮೋಡ್, ಲೈಟಿಂಗ್ಸ್ ವೈರಿಂಗ್, ಡೋರ್ ಸೇರಿದಂತೆ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಲಾಗಿದೆ ಎಂದು ಹೇಳಲಾಗಿದ್ದು, ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ಮನೆ ಮಾಲೀಕರು ಮುಂದಾಗಿದ್ದಾರೆ. ಬಾಡಿಗೆ ಮನೆ ಡ್ಯಾಮೇಜ್ ವಿಚಾರಕ್ಕೆ ಸಂಬಂಧಿಸಿದಂತೆ ನಟ ಯಶ್ ಅವರ ತಾಯಿ ಪುಷ್ಪಾ ಮತ್ತು ಇತರರ ವಿರುದ್ಧ ದೂರು ದಾಖಲಿಸಲಾಗಿದೆ. ಗಿರಿನಗರ ಪೊಲೀಸ್…

  • ವ್ಯಕ್ತಿ ವಿಶೇಷಣ

    ರೋಗಿಗಳ ಹತ್ತಿರ ಬರಿ 2 ರೂ ಪಡೆದು ಈ ಡಾಕ್ಟರ್ ಉತ್ತಮ ಚಿಕೆತ್ಸೆಯನ್ನು ನೀಡುತ್ತಾರೆ ..!ತಿಳಿಯಲು ಈ ಲೇಖನ ಓದಿ..

    ಡಾ. ತಿರುವೆಂಗಡಮ್ ಚೆನ್ನೈನ ವ್ಯಾಸಾರ್ಪಡಿನ ಶ್ರೀ ಕಲ್ಯಾಣಪುರಂನಲ್ಲಿ ವೀರರಾಘವನ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನದಾಗಿ ಇವರು ಚಿಕಿತ್ಸೆಯನ್ನು ನೀಡುವುದು ಕಾರ್ಮಿಕ ವರ್ಗದ ಪ್ರದೇಶದಲ್ಲಿ ಜನರ ಸಾಂಕ್ರಾಮಿಕ ಕಾಯಿಲೆಗಳಿಗೆ.