ಸುದ್ದಿ

36 ಗಂಟೆಯಲ್ಲಿ ದುಬೈ ತೋರಿಸುವ ಹೊಸ ಸ್ಟಾಪ್‍ಓವರ್ ಪಾಸ್…!

88

ಬೆಂಗಳೂರು, : ದುಬೈನ ಪ್ರವಾಸೋದ್ಯಮಮತ್ತು ವಾಣಿಜ್ಯ ಮಾರುಕಟ್ಟೆ (ದುಬೈ ಟೂರಿಸಂ) ತನ್ನ ದೇಶದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವನಿಟ್ಟಿನಲ್ಲಿ ಹೊಸ ಯೋಜನೆಯಾದ ದುಬೈ ಸ್ಟಾಪ್‍ಓವರ್ ಪಾಸ್ ಅನ್ನು ಪ್ರಕಟಿಸಿದೆ. ಇದು ವಿಶೇಷವಾಗಿ ದುಬೈನಲ್ಲಿಕಡಿಮೆ ಅವಧಿವರೆಗೆ ಭೇಟಿ ನೀಡಲಿರುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಯೋಜನೆಯಾಗಿದೆ.ಅಲ್ಲಿನ ಆಕರ್ಷಕ ತಾಣಗಳನ್ನು ಕಡಿಮೆ ದರದಲ್ಲಿ ವೀಕ್ಷಿಸಿ ಕಣ್ತುಂಬಿಕೊಳ್ಳುವ ಯೋಜನೆ ಇದು. ಅರೇಬಿಯನ್ಟ್ರಾವೆಲ್ ಮಾರ್ಕೆಟ್ 2019 (ಎಟಿಎಂ)ನಲ್ಲಿ ಈ ಹೊಸ ಯೋಜನೆಯನ್ನು ಪ್ರಕಟಿಸಲಾಗಿದೆ.

ದುಬೈ ಸ್ಟಾಪ್‍ಓವರ್ ಪಾಸ್ ಪ್ರವಾಸಿಗರಿಗೆ ಸಮಯ ಮತ್ತು ಹಣವನ್ನು ಉಳಿತಾಯ ಮಾಡಲಿದೆ.ಈ ಮೂಲಕ 36 ಗಂಟೆಗಳಲ್ಲಿ ಎರಡು, ಮೂರು ಅಥವಾ ನಾಲ್ಕು ಆಕರ್ಷಣೆಗಳನ್ನು ವೀಕ್ಷಿಸಬಹುದಾಗಿದೆ. ಇದುಪ್ರೀಪೇಯ್ಡ್ ಮಾದರಿಯ ಯೋಜನೆಯಾಗಿದ್ದು, ಅತ್ಯಲ್ಪ ಅವಧಿಯಲ್ಲಿ ಪ್ರವಾಸಿಗರು ದುಬೈನ ಸೌಂದರ್ಯಗಳನ್ನುಕಣ್ತುಂಬಿಕೊಳ್ಳಬಹುದು. ಪಾಸ್ ವಯಸ್ಕರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕ ದರದಲ್ಲಿರುತ್ತದೆ. ವಯಸ್ಕರರಿಗೆ 199 ಎಇಡಿಯಾದರೆ, ಮಕ್ಕಳಿಗೆ 169 ಎಇಡಿಯಾಗಿದೆ. ಮೊದಲ ಬಾರಿಗೆ ಭೇಟಿ ನೀಡುವ ಮತ್ತು ಮತ್ತೆ ಮತ್ತೆಬರುವ ಅಂತಾರಾಷ್ಟ್ರೀಯ ಅತಿಥಿಗಳಿಗೆ ವೈವಿಧ್ಯಮಯವಾದ ಅನುಭವಗಳನ್ನು ನಾವು ನೀಡುತ್ತಿದ್ದೇವೆ. ವ್ಯಕ್ತಿಗತವಾದಅನುಭವಗಳನ್ನು ಹೊಂದಬೇಕೆಂದು ಬಯಸುವ ಪ್ರವಾಸಿಗರಿಗೆ ಅಂಥ ಅನುಭವಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ.ಈ ದಿಸೆಯಲ್ಲಿ ನಮ್ಮ ಪಾಲುದಾರರು, ಅತ್ಯಲ್ಪ ಅವಧಿಯಲ್ಲಿ ಈ ಅನುಭವಗಳನ್ನು ಪ್ರವಾಸಿಗರಿಗೆ ನೀಡಲಿದ್ದಾರೆಎಂದು ದುಬೈ ಕಾರ್ಪೊರೇಷನ್ ಫಾರ್ ಟೂರಿಸಂ ಅಂಡ್ ಕಾಮರ್ಸ್ ಮಾರ್ಕೆಟಿಂಗ್ ಹೇಳಿದೆ.

ಶೇ.60 ರವರೆಗೆ ಉಳಿತಾಯ ಮಾಡಬಹುದಾಗಿದೆ ದುಬೈಗೆ ತಲುಪುವ ಮುನ್ನ ಸ್ಟಾಪ್‍ಓವರ್ಪಾಸ್ ಅನ್ನು ಖರೀದಿಸುವ ಪ್ರವಾಸಿಗರಿಗೆ ರೆಗ್ಯುಲರ್ ಕಂಬೈನ್ಡ್ ಎಂಟ್ರೆನ್ಸ್ ದರದಲ್ಲಿ ಶೇ.60 ರವರೆಗೆಉಳಿತಾಯ ಮಾಡಬಹುದಾಗಿದೆ. ಈ ಪಾಸ್ ದುಬೈನಲ್ಲಿ ಅತ್ಯಂತ ಮೌಲ್ಯವರ್ಧಿತ ಆಫರ್‍ಗಳನ್ನು ನೀಡಲಿದ್ದು,ಪ್ರವಾಸಿಗರು ಬುಜ್ ಖಲೀಫಾ (ಮೇಲೆ), ದುಬೈ ಫೌಂಟೇನ್ ಶೋ ಮತ್ತು ಲೇಕ್ ರೈಡ್, ಸಿಟಿ ಸೈಟ್‍ಸೀಯಿಂಗ್ಹಾಪ್ ಆನ್ ಹಾಪ್ ಆಫ್ ಬಸ್, ಮರೀನಾ ಧೋ ಕ್ರ್ಯೂಸ್ ಡಿನ್ನರ್, ದುಬೈ ಅಕ್ವೇರಿಯಂ & ಅಂಡರ್‍ವಾಟರ್ಝೂ ಮತ್ತು ದುಬೈ ಫ್ರೇಂಗಳನ್ನು ವೀಕ್ಷಿಸಬಹುದಾಗಿದೆ.

ಅಹ್ಮದ್ ಅಲ್ ಖಾಜಾ ಅವರು ಮಾತನಾಡಿ ದುಬೈ ಫೆಸ್ಟಿವಲ್ಸ್ ಅಂಡ್ ರೀಟೇಲ್ ಎಸ್ಟಾಬ್ಲಿಷ್‍ಮೆಂಟ್(ಡಿಎಫ್‍ಆರ್‍ಇ)ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಹ್ಮದ್ ಅಲ್ ಖಾಜಾ ಅವರು ಮಾತನಾಡಿ, “ದುಬೈ ಸ್ಟಾಪ್‍ಓವರ್ಪಾಸ್ ಅನ್ನು ಪರಿಚಯಿಸುವುದರೊಂದಿಗೆ ಪ್ರವಾಸಿಗರಿಗೆ ಅತ್ಯುತ್ತಮವಾದ ರೀತಿಯಲ್ಲಿ ನಗರದ ಪ್ರವಾಸಿತಾಣಗಳಆಕರ್ಷಣೆಯ ಅನುಭವವನ್ನು ವಿಶೇಷವಾಗಿ ಪಡೆಯುವಂತಹ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. 36 ಗಂಟೆಗಳಲ್ಲಿಎಮಿರೇಟ್ಸ್‍ನ ಲೀಸರ್ ಪ್ರಪೋಶನ್ ಅನ್ನು ಅನುಭವಿಸಬಹುದಾಗಿದೆ. ನಗರದಾದ್ಯಂತ ಅಭಿವೃದ್ಧಿಗೆ ಭಾರೀ ಮಟ್ಟದಲ್ಲಿಹೂಡಿಕೆ ಮಾಡಿರುವ ನಮ್ಮ ಪಾಲುದಾರರಿಗೆ ಬೆಂಬಲವಾಗಿ ನಿಲ್ಲುತ್ತೇವೆ, ಇಡೀ ವಿಶ್ವಕ್ಕೆ ಮಾದರಿಯಾಗಬಲ್ಲಂತಹಪ್ರವಾಸಿ ತಾಣವನ್ನಾಗಿ ನಾವು ದುಬೈ ಅನ್ನು ಅಭಿವೃದ್ಧಿಪಡಿಸುತ್ತೇವೆ” ಎಂದು ತಿಳಿಸಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ವಾಹನ ಸಂಖ್ಯೆ ಯಾವ ಜಿಲ್ಲೆಯದ್ದು ಅಂತ ತಿಳ್ಕೊಳೋದು ಗೊತ್ತಾ..

    KA-01 ಬೆಂಗಳೂರು ಕೇಂದ್ರ , ಕೋರಮಂಗಲ KA-02 ಬೆಂಗಳೂರು ಪಶ್ಚಿಮ, ರಾಜಾಜಿನಗರ KA-03 ಬೆಂಗಳೂರು ಪೂರ್ವ, ಇಂದಿರಾನಗರ KA-04 ಬೆಂಗಳೂರು ಉತ್ತರ, ಯಶವಂತಪುರ KA-05 ಬೆಂಗಳೂರು ದಕ್ಷಿಣ, ಜಯನಗರ 4th ಬ್ಲಾಕ್ KA-06 ತುಮಕೂರು KA-07 ಕೋಲಾರ KA-08 ಕೋಲಾರ್ ಗೋಲ್ಡ್ ಫೀಲ್ಡ್ಸ್ (KGF) KA-09 ಮೈಸೂರು ಪಶ್ಚಿಮ KA-10 ಚಾಮರಾಜ್ನಗರ KA-11 ಮಂಡ್ಯ KA-12 ಮಡಿಕೇರಿ KA-13 ಹಾಸನ KA-14 ಶಿವಮೊಗ್ಗ KA-15 ಸಾಗರ KA-16 ಚಿತ್ರದುರ್ಗ KA-17 ದಾವಣಗೆರೆ KA-18 ಚಿಕ್ಕಮಗಳೂರು KA-19 ಮಂಗಳೂರು…

  • ಸುದ್ದಿ

    ಸ್ವಾತಂತ್ರ್ಯ ಬಂದು 72 ವರ್ಷಗಳಾದರೂ ಈ ಗ್ರಾಮಕ್ಕಿಲ್ಲ ವಿದ್ಯುತ್, ಆದರೆ ವಿದ್ಯುತ್ ಬಿಲ್ಮಾತ್ರ ತಲುಪುತ್ತದೆ, ಹೇಗೆ ಗೊತ್ತಾ, ಇದನ್ನೊಮ್ಮೆ ಓದಿ,.!

    ಸ್ವಾತಂತ್ರ್ಯಪಡೆದ 72 ವರ್ಷಗಳಾದರೂ ಬಲರಾಂಪುರ್ ಜಿಲ್ಲೆಯ ಗ್ರಾಮಕ್ಕೆ ವಿದ್ಯುತ್ತಲುಪಿಲ್ಲ. ಆದರೆ ವಿದ್ಯುತ್ ಬಿಲ್ಮಾತ್ರ ತಲುಪಿದೆ. ಈ ಗ್ರಾಮಸ್ಥರು ರಾತ್ರಿವೇಳೆ ಲ್ಯಾಂಟರ್ನ್ ಮತ್ತು ಧಿಬ್ರಿಗಳನ್ನು ಬಳಸುತ್ತಾರೆ.ಇದು ಬಿಜೆಪಿ ಆಳ್ವಿಕೆಯಲ್ಲಿ ಸಚಿವರಾಗಿದ್ದ ಮತ್ತು ಪ್ರಸ್ತುತ ರಾಜ್ಯಸಭಾ ಸಂಸದ ರಾಮ್‌ವಿಚಾರ್ನೇತಮ್‌ಗೆ ಸೇರಿದ ಗ್ರಾಮವಾಗಿದೆ. ರಾಜ್ಯಸಭಾ ಸಂಸದ ರಾಮ್‌ವಿಚಾರ್ ನೇತಮ್ಅವರ ಮನೆ ಇಲ್ಲಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ ಎಂದು ಪತ್ರಿ ಪಾರಿಗ್ರಾಮಸ್ಥರು ಹೇಳುತ್ತಾರೆ. ಇಲ್ಲಿಯವರೆಗೆ ವಿದ್ಯುತ್‌ ನೀಡುವ ಬಗ್ಗೆ ಕೇವಲ ಭರವಸೆ ದೊರೆತಿದೆ ಅಷ್ಟೇ, ಆದರೆ ವಿದ್ಯುತ್ಮಾತ್ರ ತಲುಪಿಲ್ಲ ಎಂದು ಅವರು…

  • ವಿಚಿತ್ರ ಆದರೂ ಸತ್ಯ

    ಗೊಂದಲದಲ್ಲಿ ಸಿಲುಕಿ ಈ ವ್ಯಕ್ತಿ ತನ್ನ ಲಿಂಗವನ್ನು ಎಷ್ಟು ಸಲ ಬದಲಾಯಿಸಿಕೊಂಡ ಗೊತ್ತಾ..?ತಿಳಿಯಲು ಈ ಲೇಖನ ಓದಿ

    ಆ ವ್ಯಕ್ತಿಯೇ ರಿಯಾ ಕೂಪರ್. ಆತ ತನ್ನ ಲಿಂಗದ ಗೊಂದಲದಲ್ಲಿ ಮೂರು ಸಲ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾನೆ. ರಿಯಾ ಕೂಪರ್ ಇಂಗ್ಲೆಂಡಿನಲ್ಲಿ ಅತೀ ಸಣ್ಣ ವಯಸ್ಸಿನಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡವ ಎನ್ನುವ ಪ್ರಸಿದ್ಧಿಗೆ ಒಳಗಾದ. ಆತ ಕೇವಲ 15 ವರ್ಷದಲ್ಲಿ ಮಹಿಳೆಯಾಗಿ ಲಿಂಗ ಪರಿವರ್ತನೆ ಮಾಡಿ ಕೊಂಡ ಮತ್ತು ಇದರಿಂದ ಬೇಸತ್ತು ಮತ್ತೆ ಲಿಂಗ ಪರಿವರ್ತನೆಗೆ ಮುಂದಾದ.

  • ಸಿನಿಮಾ

    ದನದ ಮಾಂಸ ತಿನ್ನುತ್ತಿದ್ದ, ಯಾರಿಗೆ ಟೀ ತಂದುಕೊಡುತ್ತಿದ್ದ ಅಂತ ಗೊತ್ತಿದೆ ಅಂತ ದರ್ಶನ್ ವಿರುದ್ದ ವಾಗ್ದಾಳಿ ನಡೆಸಿದ ಶಾಸಕ..!

    ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣಕ್ಕಿಳಿದಿದ್ದು, ಅವರ ಬೆಂಬಲಕ್ಕೆ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಮಂದಿ ನಿಂತಿದ್ದಾರೆ. ಅದರಲ್ಲೂ ದರ್ಶನ್ ಹಾಗೂ ಯಶ್ ಸುಮಲತಾ ಅಂಬರೀಶ್ ಅವರ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದು, ಇದು ಜೆಡಿಎಸ್ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಂಡ್ಯದಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರ ಗೆಲುವಿಗೆ ಇದು ಅಡ್ಡಗಾಲಾಗಬಹುದೆಂಬ ಆತಂಕ…

  • KOLAR NEWS PAPER

    ಕೆಎಂಎಫ್ ನಂದಿನಿ ಅಮುಲ್ ಜತೆ ವಿಲೀನದ ಪ್ರಸ್ತಾಪಕ್ಕೆ ಖಂಡನೆ

    ಕೋಲಾರ;- ಕೋಟ್ಯಾಂತರ ರೈತರ ಆಸ್ತಿಯಾಗಿರುವ ನಂದಿನಿಯನ್ನು ಯಾವುದೇ ಕಾರಣಕ್ಕೂ ಅಮುಲ್ ಜೊತೆ ವಿಲೀನ ಮಾಡಬಾರದೆಂದು ರೈತಸಂಘದಿOದ ಕೋಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ನೀಡಿ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೈತರು ನೆಲ ಜಲ ನುಡಿಯ ಮೇಲೆ ಸದಾ ತಮ್ಮ ಪ್ರತಾಪವನ್ನು ತೋರಿಸುತ್ತಿರುವ ಕೇಂದ್ರ ಸರ್ಕಾರ ಈಗ ರಾಜ್ಯದಲ್ಲಿ ತನ್ನದೇ ಆದ ಪ್ರಾಬಲ್ಯ ಅಸ್ತಿತ್ವವನ್ನು ಹೊಂದಿರುವ ನಂದಿನಿ ಹಾಲಿನ ಮೇಲೆ ಗುಜರಾತಿನ ಹುಳಿ ಇಂಡಲು ಮುಂದಾಗಿರುವುದು ಖಂಡನೀಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕನ್ನಡಿಗರ ತಾಳ್ಮೆಯನ್ನೇ ಕೆಣಕಲು…