ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡ ಸಿನಿಪ್ರಿಯರ ಬಹುದಿನಗಳ ಕನಸು ಏನೆಂದರೆ, ದರ್ಶನ್ ಮತ್ತು ಸುದೀಪ್ ಒಟ್ಟಿಗೆ ನಟಿಸುವುದು! ಬೆಳ್ಳಿತೆರೆ ಮೇಲೆ ಅವರಿಬ್ಬರನ್ನು ಏಕಕಾಲಕ್ಕೆ ನೋಡಲು ಅಭಿಮಾನಿಗಳು ಕಾದಿದ್ದಾರೆ.

ಇಬ್ಬರು ಕನ್ನಡದ ಸ್ಟಾರ್ ನಟರು. ಅವರದ್ದೇ ಆದ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಿರುವಾಗ ಅವರಿಬ್ಬರು ಒಟ್ಟಿಗೆ ನಟಿಸಿಬಿಟ್ಟರೆ? ಅದು ಅಭಿಮಾನಿಗಳಿಗೆ ಹಬ್ಬವೇ ಸರಿ. ಅದಿನ್ನೂ ಸಾಧ್ಯವಾಗಿಲ್ಲ. ಮುಂದೆ ಯಾವತ್ತು ಆಗುತ್ತದೆಯೋ ಅದು ಗೊತ್ತಿಲ್ಲ. ಆದರೆ, ಬಹುವರ್ಷಗಳ ಈ ಹಿಂದೆ ಸ್ಟಾರ್ ನಟರನ್ನು ಒಟ್ಟಿಗೆ ಇಟ್ಟುಕೊಂಡು ಸಿನಿಮಾ ಮಾಡುವ ಪ್ರಯತ್ನವೊಂದು ನಡೆದಿತ್ತು! ಅವರಿಬ್ಬರು ಒಟ್ಟಿಗೆ ನಟಿಸಬೇಕಾಗಿದ್ದ ಸಿನಿಮಾಕ್ಕೆ ಇಂದ್ರಜಿತ್ ಲಂಕೇಶ್ ನಿರ್ದೇಶಕರಾಗಿ ಕೆಲಸ ಮಾಡಬೇಕಿತ್ತು!

ಆಗತಾನೇ ಚಿತ್ರರಂಗದಲ್ಲಿ ಸುದೀಪ್ ಮತ್ತು ದರ್ಶನ್ ಎಂಟ್ರಿ ಕೊಟ್ಟ ಸಮಯ. ಹಿಟ್ ಸಿನಿಮಾಗಳನ್ನು ನೀಡುತ್ತ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರುತ್ತಿದ್ದರು. ಇಂದ್ರಜಿತ್ ಲಂಕೇಶ್ ಕೂಡ ಅದೇ ಸಮಯಕ್ಕೆ ನಿರ್ದೇಶರಕಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು. ಅವರಿಗೆ ಹಿಂದಿಯ ‘ದೀವಾರ್’ ಸಿನಿಮಾ ಭಾರೀ ಇಷ್ಟವಾಗಿ ಬಿಟ್ಟಿತ್ತು. ಅದನ್ನು ಕನ್ನಡಕ್ಕೆ ರಿಮೇಕ್ ಮಾಡುವ ಸಲುವಾಗಿ ಅದರ ಹಕ್ಕಗಳನ್ನು ಅವರು ಪಡೆದುಕೊಂಡು ಬಂದಿದ್ದರು.

‘ದೀವಾರ್’ನಲ್ಲಿ ಅಮಿತಾಭ್ ಬಚ್ಚನ್ ಮತ್ತು ಶಶಿ ಕಪೂರ್ ಪ್ರಮುಖ ಪಾತ್ರವನ್ನು ಮಾಡಿದ್ದರು. ವಿಜಯ್ ವರ್ಮ-ರವಿ ವರ್ಮ ಎಂಬ ಸಹೋದರರ ಪಾತ್ರಗಳಲ್ಲಿ ಅವರಿಬ್ಬರು ನಟಿಸಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಅಬ್ಬರದ ಕಲೆಕ್ಷನ್ ಮಾಡಿದ ‘ದೀವಾರ್’ ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ರಿಮೇಕ್ ಆಗಿತ್ತು. ಕನ್ನಡದಲ್ಲಿ ಇಬ್ಬರು ನಿಭಾಯಿಸಿದ್ದ ಪಾತ್ರಗಳನ್ನು ಯಾರು ಮಾಡಲಿದ್ದಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ‘ಅಮಿತಾಭ್ ಬಚ್ಚನ್ ಅವರು ನಿಭಾಯಿಸಿದ ಪಾತ್ರವನ್ನು ಮಾಡುವಂತೆ ನಾನು ಸುದೀಪ್ ಅವರ ಬಳಿ ಕೇಳಿಕೊಂಡೆ. ಅವರು ತುಂಬ ಖುಷಿಯಿಂದಲೇ ಒಪ್ಪಿಕೊಂಡಿದ್ದರು’ ಎಂದಿದ್ದಾರೆ ಇಂದ್ರಜಿತ್.

ಶಶಿ ಕಪೂರ್ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡುವುದು ಎಂಬ ಚರ್ಚೆ ಶುರುವಾಯಿತು. ‘ಆ ಪಾತ್ರಕ್ಕಾಗಿ ನಾನು ನಟ ದರ್ಶನ್ ಅವರನ್ನು ಅಪ್ರೋಚ್ ಮಾಡಿದೆ. ಅವರು ಸಿನಿಮಾದ ಕಥೆ ಕೇಳಿ, ನಟಿಸಲು ಒಪ್ಪಿಕೊಂಡರು. ಆದರೆ, ಅವರಿಗೂ ಅಮಿತಾಭ್ ಬಚ್ಚನ್ ನಿಭಾಯಿಸಿದ್ದ ಪಾತ್ರವೇ ತುಂಬ ಇಷ್ಟವಾಗಿಬಿಟ್ಟಿತ್ತು. ಇಬ್ಬರು ಬಚ್ಚನ್ ಅವರ ಆ್ಯಂಗ್ರಿಮ್ಯಾನ್ ಪಾತ್ರವನ್ನೇ ಮಾಡುವುದಕ್ಕೆ ಇಷ್ಟಪಟ್ಟರು. ಆ ಸಿನಿಮಾ ಟೇಕ್ ಆಫ್ ಆಗದೇ ಇರುವುದಕ್ಕೆ ಇದೇ ಕಾರಣ. ಈಗಲೂ ಆ ಸಿನಿಮಾ ಹಕ್ಕಗಳು ನನ್ನ ಬಳಿ ಇವೆ’ ಎಂದು ಮಾಹಿತಿ ನೀಡಿದ್ದಾರೆ ಇಂದ್ರಜಿತ್ ಲಂಕೇಶ್. ಒಂದುವೇಳೆ, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಅಂದೇ ಕನ್ನಡ ಸಿನಿಪ್ರಿಯರು ದರ್ಶನ್ ಮತ್ತು ಸುದೀಪ್ ಅವರನ್ನು ಒಟ್ಟಿಗೆ ತೆರೆಮೇಲೆ ನೋಡಬಹುದಿತ್ತು!
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು, ಮೇ 25: ಮುಂದಿನ ತಿಂಗಳಿನಿಂದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಹಾಲಿ ಟಿಕೆಟ್ ದರಕ್ಕಿಂತ ಶೇ 20ರಷ್ಟು ದರವನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಕಾರ್ಮಿಕರ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ. ಬಸವರಾಜ್ ಹೇಳಿದ್ದಾರೆ. ಕಳೆದ ಏಳು ವರ್ಷಗಳಿಂದ ಬಸ್ ಪ್ರಯಾಣ ದರದಲ್ಲಿ ಏರಿಕೆ ಮಾಡಿಲ್ಲ. ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಭಾರಿ ಹೆಚ್ಚಳವಾಗಿವೆ. ಸಾರಿಗೆ ಸಂಸ್ಥೆಗಳ ವೆಚ್ಚ,…
ನಿಮ್ಮ ಮನೆಗೆ ಧಿಡೀರ್ ಅಂತ ಅತಿಥಿಗಳು ಬಂದರೆ ಇಲ್ಲಿದೆ ನೋಡಿ ಬಿಸಿ ಬಿಸಿ ತುಪ್ಪಾನ್ನ ಮಾಡುವ ವಿಧಾನ
ನಾವು ದಿನನಿತ್ಯ ಹಾಲನ್ನು ಕುಡಿಯುತ್ತೇವೆ. ಹಾಗೆಯೇ ಬೆಳ್ಳುಳ್ಳಿಯನ್ನು ಸಹ ಊಟದ ಮುಖಾಂತರ ಸೇವಿಸುತ್ತೇವೆ. ಆದ್ರೆ ಅದೇ ಬೆಳ್ಳುಳ್ಳಿಯನ್ನು ಜಜ್ಜಿ ಹಾಲಿನ ಮುಖಾಂತರ ಸೇವಿಸಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?
ಪ್ರಮಂಚದಲ್ಲಿ ಮಹಿಳೆಯರು ಸುಂದರವಾಗಿ ಕಾಣಲು ಅಲಂಕಾರ ಮಾಡಿಕೊಳ್ಳುತ್ತಾರೆ. ಅಲಂಕಾರ ಮಾಡಿಕೊಳ್ಳದೆ ಮಹಿಳೆಯರ ದಿನ ಪೂರ್ಣವಾಗುವುದಿಲ್ಲ. ಅಲಂಕಾರ ಹಾಗೂ ಒಡವೆಗಳಿಗಾಗಿ ಸಾಕಷ್ಟು ಹಣವನ್ನು ಖರ್ಚುಮಾಡಲು ಹಿಂಜರಿಯುವುದಿಲ್ಲ. ಆದರೇ ನಮ್ಮ ಭಾರತೀಯ ಮಹಿಳೆಯರು ಅಲಂಕಾರಕ್ಕಾಗಿ ಧರಿಸುವ ಆಭರಣಗಳ ಹಿಂದಿರುವ ವೈಜ್ಞಾನಿಕ ಕಾರಣಗಳು ಏನೆಂದು ತಿಳಿಯೋಣ.
ಹಸಿ ಕೊತ್ತಂಬರಿ ಸೊಪ್ಪನ್ನು ಪ್ರತಿದಿನ ಆಹಾರದಲ್ಲಿ ಬಳಸುವುದರಿಂದ ಎ.ಬಿ1, ಬಿ2, ಸಿ ಜೀವಸತ್ವಗಳು ಮತ್ತು ಕಬ್ಬಿಣ ಇವುಗಳ ಅಭಾವದಿಂದ ತಲೆದೋರುವ ವ್ಯಾಧಿಗಳ ಭಯವಿರುವುದಿಲ್ಲ. ಒಂದು ಟೀ ಚಮಚ ಕೊತ್ತಂಬರಿ ಸೊಪ್ಪಿನ ರಸವನ್ನು ಅಷ್ಟೇ ಪ್ರಮಾಣದ ಜೇನುತುಪ್ಪ ದೊಂದಿಗೆ ಮಿಶ್ರಮಾಡಿ ಪ್ರತಿದಿನ ರಾತ್ರಿ ಸೇವಿಸುತ್ತ್ತಿದ್ದರೆ ಮೆದುಳಿನ ಕ್ರಿಯಾಶಕ್ತಿ ಹೆಚ್ಚುವುದು. ಕಣ್ಣು, ಕಿವಿ, ಹೃದಯ, ಶ್ವಾಸಕೋಶ ಕ್ರಿಯೆ ಚುರುಕಿನಿಂದ ನಡೆಯುವುದು. ಕ್ಷಯ ಮತ್ತು ಉಬ್ಬಸ ರೋಗಗಳ ಬಾಧೆ ಇರುವುದಿಲ್ಲ. ಕೊತ್ತಂಬರಿ ಸೊಪ್ಪನ್ನು ಹಲ್ಲುಗಳಿಂದ ಅಗಿಯುವುದರಿಂದ ದಂತಕ್ಷಯ ನಿವಾರಣೆಯಾಗುವುದು. ಬಾಯಿಯಿಂದ ದುರ್ಗಂಧ…
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಮಾತಿನ ಬಗ್ಗೆ ಸದಾ ಜಾಗೃತಿಯನ್ನು ಹೊಂದಬೇಕಾಗುವುದು. ನೀವು ಆಡಿದ ತಮಾಷೆ ಮಾತು ಪತಿಪತ್ನಿಯರಲ್ಲಿ ವಿರಸವುಂಟು ಮಾಡುವ ಸಾಧ್ಯತೆ ಇದೆ. ಹಾಗಾಗಿ ಎರಡು ಬಾರಿ ಚಿಂತಿಸಿ ಮಾತನ್ನು ಆಡಿ. ಒಳಿತಾಗುವುದು..ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ…