ಸುದ್ದಿ

‘ಮಿಸ್ ಸೌತ್ ಇಂಡಿಯಾ’ ಕಿರೀಟ ತನ್ನದಾಗಿಸಿಕೊಂಡ ಕಿರುತೆರೆ ನಟಿ ಕುಲವಧು ಧನ್ಯಾ….

89

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಎಂದೇ ಖ್ಯಾತಿ ಪಡೆದಿರುವ ದೀಪಿಕಾ ಇತ್ತೀಚೆಗಷ್ಟೆ ‘ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019’ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ನಟಿ ದೀಪಿಕಾ ಅವರು ಈ ಬಗ್ಗೆ ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ತಾವು ವಿನ್ನರ್ ಆದ ತಕ್ಷಣದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅದನ್ನು ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಮತ್ತು ತಮ್ಮ ಗೆಳೆಯನಿಗೆ ಧನ್ಯವಾದ ತಿಳಿಸಿದ್ದಾರೆ.

“ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಅದರಲ್ಲೂ ನಾನು ‘ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019’ ಕಿರೀಟವನ್ನು ಗೆದ್ದಿದ್ದಕ್ಕೆ ತುಂಬಾ ಖುಷಿಯಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು ವೇದಿಕೆ ಮೇಲೆ ರ‍್ಯಾಂಪ್‌ ಮಾಡಲು ನನಗೆ ಆತ್ಮವಿಶ್ವಾಸ ತುಂಬಿದ ಹಾಗೂ ಎಲ್ಲ ಹಂತದಲ್ಲೂ ಸಪೋರ್ಟ್ ಮಾಡಿದ ಅಭಿಮಾನಿಗಳಿಗೆ ಧನ್ಯವಾದಗಳು” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೆ “ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಜೀವನದ ವಿಶೇಷ ವ್ಯಕ್ತಿಗೆ ಧನ್ಯವಾದಗಳು ಎಂದು ತಮ್ಮ ಗೆಳೆಯ ಆಕರ್ಶ್ ಅವರಿಗೆ ಸಮರ್ಪಿಸಿದ್ದಾರೆ. ನಿಮ್ಮ ಬೆಂಬಲ ಇಲ್ಲದಿದ್ದರೆ ನನ್ನಿಂದ ಈ ಗೆಲವು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಸಹಕಾರದಿಂದಲೇ ಈ ಸಾಧನೆ ಮಾಡಿದ್ದೇನೆ” ಧನ್ಯವಾದಗಳು ಮೈ ಸ್ವೀಟ್ ಎಂದು ಹೇಳಿಕೊಂಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ತನ್ನ ವಿಶೇಷ ಅಭಿಮಾನಿಯೋಬ್ಬರನ್ನ ಭೇಟಿ ಮಾಡಲು ಮುಂದಾಗಿರುವ ಕಿಚ್ಚಾ ಸುದೀಪ್!ಏಕೆ ಗೊತ್ತಾ..?

    ಹಲವಾರು ನಟರು ತಮ್ಮನ್ನು ಇಷ್ಟಪಡುವ ಅಭಿಮಾನಿಗಳ ಕಷ್ಟಕ್ಕೂ ಕೂಡ ಸ್ಪಂದಿಸುತ್ತಾರೆ.ತಮ್ಮ ಕೈ ಲಾದ ಸಹಾಯವನ್ನು ಕೂಡ ಮಾಡುತ್ತಾರೆ.ಇಂತಹ ನಟರಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರು.ನಟ ಕಿಚ್ಚ ಸುದೀಪ್ ಅವರು ಸಹಾಯ ಕೇಳಿದವರಿಗೆ ತಮ್ಮ ಕೈಲಾಗುವ ಸಹಾಯವನ್ನು ಮಾಡುತ್ತಾರೆ. ಈಗ ಸುದೀಪ್ ಅವರು ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ವಿಶೇಷ ಅಭಿಮಾನಿಯನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಅರೆ ಇದೇನಿದು ಸುದೀಪ್ ಗೆ ಲಕ್ಷಾಂತರ ಅಭಿಮಾನಿಗಳಿದ್ದು, ಅದರಲ್ಲಿ ವಿಶೇಷ ಅಭಿಮಾನಿ ಎಂದರೆ ಏನು ಎಂದು ನೀವು ಕೇಳಬಹುದು. ಆದರೆ ಇಲ್ಲಿನ ವಿಶೇಷ…

  • ಸುದ್ದಿ

    ಕಂಡಕ್ಟರ್‌ನಿಂದ ಬಸ್ಸಲ್ಲೇ ಸಂಗೀತ ಸುರಿಮಳೆ – ಯಾದಗಿರಿಯ ಪರಶುರಾಮ್ ಈಗ ಪಬ್ಲಿಕ್ ಹೀರೋ……

    ಕುರಿಗಾಯಿ ಹನುಮಂತ ಆಯಿತು, ಕೊಪ್ಪಳದ ಗಂಗಮ್ಮ ಆಯಿತು. ಈಗ ಇವರ ಸಾಲಿಗೆ ಮತ್ತೊಂದು ಗಾನ ಕೋಗಿಲೆ ಸೇರಿಕೊಂಡಿದೆ. ಸರ್ಕಾರಿ ನೌಕರಿ ಮಾಡುತ್ತಲೇ, ಸಂಗೀತ ಸರಸ್ವತಿಯ ಸೇವೆ ಮಾಡುತ್ತಾ ಯಾದಗಿರಿಯ ಬಸ್ ಕಂಡಕ್ಟರ್ ಪರಶುರಾಮ್ ಪಬ್ಲಿಕ್ ಹೀರೋ ಆಗಿದ್ದಾರೆ. ಹೌದು. ಯಾದಗಿರಿ- ಕಲಬುರಗಿ ಮಧ್ಯೆ ಸಂಚರಿಸುತ್ತಿರುವ ಈಶಾನ್ಯ ಸಾರಿಗೆ ಬಸ್ ಹತ್ತಿದರೆ ನಿಮಗೆ ಫುಲ್ ಎಂಟರ್‌ಟೈನ್‌ಮೆಂಟ್ ಸಿಗೋದು ಗ್ಯಾರಂಟಿ. ಯಾಕಂದ್ರೆ ಬಸ್‍ನ ಕಂಡಕ್ಟರ್ ಕಂಠದಿಂದ ಹೊರಹೊಮ್ಮುವ ಹಾಡುಗಳು ಎಲ್ಲರ ಮನಸೋರೆಗೊಳ್ಳುತ್ತವೆ. ಬಸ್ಸಲ್ಲೇ ಕರೋಕೆ ಮ್ಯೂಸಿಕ್ ಹಾಕಿಕೊಂಡು ಕೈಯಲ್ಲಿ ಮೈಕ್…

  • ಸಿನಿಮಾ

    “ಸಂಜಯ್ ದತ್”ಗೂ “ವಿಲನ್”ಗೂ ಸಂಬಂಧವೇನು ???

    ಜೋಗಿ ಪ್ರೇಮ್ ನಿರ್ದೇಶನದ “ದಿ ವಿಲನ್” ಈಗಾಗಲೇ ಬಾರಿ ಸುದ್ದಿ ಮಾಡುತ್ತಿದೆ. ಇದರಲ್ಲಿ ಅಭಿನಯಿಸುತ್ತಿರುವ ಶಿವರಾಜ್ ಕುಮಾರ್ ಹಾಗೂ ಕಿಚ್ಹ ಸುದೀಪ್ ವಿಭಿನ್ನ ಹೇರ್ ಸ್ಟೈಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದೇ ಅದಕ್ಕೆ ಕಾರಣ.

  • ಉದ್ಯೋಗ

    ಸಾಫ್ಟ್ ವೇರ್ ಉದ್ಯೋಗಿಗಳಲ್ಲಿ ಕವಿದ ಆತಂಕದ ಕಾರ್ಮೋಡ!!!

    ಆತ ಸಾಫ್ಟವೇರ್ ಟೆಕ್ಕಿ. ಒಳ್ಳೆಯ ಪ್ಯಾಕೇಜ್‌ನ ಸಂಬಳ. ಪ್ರತಿಷ್ಠಿತ ಶಾಲೆಯಲ್ಲಿ ಓದುವ ಇಬ್ಬರು ಮುದ್ದಾದ ಮಕ್ಕಳ ಸಂಸಾರ. ಸಕಲ ಆಧುನಿಕ ಸೌಲಭ್ಯಗಳಿರುವ ಅಪಾರ್ಟ್‌ಮೆಂಟ್‌ನಲ್ಲಿ ಬ್ಯಾಂಕ್ ಸಾಲದಿಂದ ಖರೀದಿಸಿದ ಮೂರು ಬೆಡ್ ರೂಮ್‌ನ ಐಷಾರಾಮಿ ಫ್ಲ್ಯಾಟ್. ಸದಾ ಚಟುವಟಿಕೆಯಿಂದ, ನಗುವಿನಿಂದ ತುಂಬಿರುತ್ತಿದ್ದ ಮನೆಯಲ್ಲಿ ಇತ್ತೀಚೆಗೆ ಸ್ವಲ್ಪ ಆತಂಕ ಕಾಣುತ್ತಿದೆ. ಮಕ್ಕಳ ವಿದ್ಯಾಭ್ಯಾಸ, 30-40 ಲಕ್ಷದಷ್ಟಿರುವ ಗೃಹಸಾಲ ಅವನನ್ನು ಅಣಕಿಸುತ್ತಿವೆ. ಸಹೋದ್ಯೋಗಿಗಳು ಬಿಟ್ಟು ಹೋದ ತಿರುಗುವ ಕುರ್ಚಿಗಳು ಅವನನ್ನು ಬೆವರಿಸುತ್ತವೆ. ತನ್ನ ಕುರ್ಚಿಯೂ ಹೀಗೆ ಬರಿದಾಗಬಹುದೇನೋ ಎನ್ನುವ ಅವ್ಯಕ್ತ ಭಯ ಅವನನ್ನು ಕಾಡಲು ಶುರು ಮಾಡಿದೆ. ಸಂಜೆ ಆಫೀಸು ಮುಗಿಯುವಾಗ ಬರುವ ಇ ಮೇಲ್ ತೆರೆಯುವಾಗ ಕೈ ನಡುಗುತ್ತದೆ. ಹಾಗೆಯೇ ಮುಂಜಾನೆ ಆಫೀಸಿನಲ್ಲಿ ಲಾಗ್ ಇನ್ ಮಾಡುವಾಗ ಎಸಿ ಕ್ಯಾಬಿನ್‌ನಲ್ಲಿಯೂ ಬೆವರುತ್ತಾನೆ.

  • ಸಿನಿಮಾ

    ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ನಟಿ ವಿಜಯಲಕ್ಷ್ಮಿ ವಿರುದ್ದವೇ ದೂರು ಕೊಟ್ಟ ನಟ..!

    ಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಿದ ನಟ ರವಿ ಪ್ರಕಾಶ್ ಅವರ ವಿರುದ್ಧ ನಟಿ ವಿಜಯಲಕ್ಷ್ಮಿ ಲೈಂಗಿಕ ಕಿರುಕುಳ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತಾಗಿ ನಟ ರವಿಪ್ರಕಾಶ್ ಸ್ಪಷ್ಟನೆ ನೀಡಿದ್ದು, ತಾವು ಯಾವುದೇ ಕಿರುಕುಳ ನೀಡಿಲ್ಲ. ಅವರಿಗೆ ಹಣಕಾಸು ನೆರವು ನೀಡಿ, ಅವರನ್ನು 2  ಬಾರಿ ಭೇಟಿ ಮಾಡಿದ್ದೇನೆ ಹೊರತು, ಯಾವುದೇ ಕಿರುಕುಳ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದಾದ ಬಳಿಕ ರವಿಪ್ರಕಾಶ್ ಅವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟಿ…

  • ಸೌಂದರ್ಯ

    ‘ಮೊಡವೆ’ ಸಮಸ್ಯೆಗೆ ಇಲ್ಲಿದೆ ಮನೆಮದ್ದು…!

    ಮೊಡವೆ ಸಮಸ್ಯೆ ಹರೆಯದಲ್ಲಿ ಬಹುತೇಕರನ್ನು ಕಾಡುತ್ತದೆ. ಒತ್ತಡ, ಹಾರ್ಮೋನ್ ಸಮಸ್ಯೆ, ಔಷಧಗಳ ಅಡ್ಡ ಪರಿಣಾಮ ಸೇರಿದಂತೆ ಇನ್ನೂ ಹಲವು ಕಾರಣಗಳಿಂದ ಉಂಟಾಗುವ ಮೊಡವೆಗಳ ಕಲೆಗಳು ಉಳಿಯುವ ಸಾಧ್ಯತೆ ಇದೆ.ಆದ್ದರಿಂದ ಹಲವರು ಮೊಡವೆಗಳ ನಿವಾರಣೆಗೆ ರಾಸಾಯನಿಕ ವಸ್ತುಗಳನ್ನು ಬಳಸುತ್ತಾರೆ. ಅವುಗಳು ತಾತ್ಕಾಲಿಕ ಪರಿಹಾರ ನೀಡಿದರೂ ಸಮಸ್ಯೆಯನ್ನು ನಿವಾರಿಸುವುದಿಲ್ಲ. ಆದ್ದರಿಂದ ಮನೆಮದ್ದನ್ನು ಟ್ರೈಮಾಡಿ. ಪರಿಣಾಮ ನಿಧಾನವಾದರೂ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಪ್ರತಿದಿನ ಕನಿಷ್ಠ ಎರಡರಿಂದ ಮೂರು ಲೀಟರ್ ನಷ್ಟು ನೀರು ಕುಡಿಯಬೇಕು. ಪ್ರತಿದಿನ ತಪ್ಪದೆ ಆರರಿಂದ ಎಂಟು ಬಾರಿ…