ಸಿನಿಮಾ, ಸುದ್ದಿ, ಸ್ಪೂರ್ತಿ

ಡಿ-ಬಾಸ್ ಮನವಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ ಅಭಿಮಾನಿಗಳು.

68

 ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮನೆ ಮುಂದೆ ದೊಡ್ಡ ಬೋರ್ಡ್ ಹಾಕುವ ಮೂಲಕ ತಮ್ಮ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಈಗ ದರ್ಶನ್ ಅವರ ಮನವಿಗೆ ಅಭಿಮಾನಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.

ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬವಿದ್ದು, ಡಿ-ಬಾಸ್ ಜನ್ಮದಿನವನ್ನು ಅಭಿಮಾನಿಗಳು ದೊಡ್ಡ ಹಬ್ಬದಂತೆ ಆಚರಿಸುತ್ತಾರೆ. ಆದರೆ ಬ್ಯಾನರ್, ಕೇಕ್, ಹಾರ ತಂದು ಅದ್ಧೂರಿಯಾಗಿ ನನ್ನ ಹುಟ್ಟುಹಬ್ಬ ಆಚರಿಸಬೇಡಿ ಎಂದು ಅಭಿಮಾನಿಗಳಿಗೆ ದರ್ಶನ್ ಮನವಿ ಮಾಡಿದ್ದರು.

ಕಳೆದ ವರ್ಷ ದರ್ಶನ್ ತಮ್ಮ ಹುಟ್ಟುಹಬ್ಬಕ್ಕೆ ಬ್ಯಾನರ್, ಕೇಕ್, ಹಾರಕ್ಕೆ ಹಣವನ್ನು ಖರ್ಚು ಮಾಡುವ ಬದಲು ಆ ಹಣದಲ್ಲಿ ದವಸ ಧಾನ್ಯ ನೀಡುವಂತೆ ಮನವಿ ಮಾಡಿದ್ದರು. ದರ್ಶನ್ ಮಾತಿಗೆ ಬೆಲೆ ಕೊಟ್ಟು ಅಭಿಮಾನಿಗಳು ಅಕ್ಕಿ, ಬೇಳೆ ಸೇರಿದಂತೆ ಹಲವು ಪದಾರ್ಥಗಳನ್ನು ದಾನ ನೀಡುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿದ್ದರು. ಈ ವರ್ಷವು ಕೂಡ ದರ್ಶನ್ ಅವರು ಅದೇ ರೀತಿ ಮನವಿ ಮಾಡಿಕೊಂಡಿದ್ದು, ಅಭಿಮಾನಿಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.

ದರ್ಶನ್ ಅವರು ಮನವಿ ಮಾಡಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇಂದು ಬೆಳಗ್ಗೆಯಿಂದಲೂ ಹಲವು ಅಭಿಮಾನಿಗಳು ದರ್ಶನ್ ಅವರನ್ನು ಭೇಟಿ ಮಾಡಿ ದವಸ ಧಾನ್ಯವನ್ನು ನೀಡುತ್ತಿದ್ದಾರೆ. ಅಭಿಮಾನಿಗಳು ದರ್ಶನ್ ಅವರಿಗೆ ದವಸ ಧಾನ್ಯ ನೀಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸದ್ಯ ಅಡುಗೆ ಸಾಮಾಗ್ರಿಗಳನ್ನು ನೀಡಿದ ಬಳಿಕ ಅಭಿಮಾನಿಗಳು ದರ್ಶನ್ ಅವರ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಡುತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಉಪಯುಕ್ತ ಮಾಹಿತಿ

    ಯಾವ ರೀತಿ ಆಹಾರ ಸೇವನೆ ಮಾಡಿದರೆ ಕರೋನ ವೈರಸ್ ಬರುತ್ತದೆ ಮತ್ತು ಬರುವುದಿಲ್ಲ ಗೊತ್ತಾ, ತಿಳಿದುಕೊಳ್ಳಿ.

    ಚೀನಾದ ಒಂದು ಸೀ ಫುಡ್ ಮಾರ್ಕೆಟ್ ನಿಂದ ಹರಡಿರುವ ರೋಗ ಈ ಕರೋನ ವೈರಸ್ ಆಗಿದೆ ಮತ್ತು ಈ ಒಂದು ಕಾರಣಕ್ಕೆ ನಮ್ಮ ಭಾರತ ದೇಶದವರು ಸಮುದ್ರದಲ್ಲಿ ಸಿಗುವ ಆಹಾರವನ್ನ ಸೇವನೆ ಮಾಡಬಾರದು ಅನ್ನುವುದು ನಿರ್ಧಾರಕ್ಕೆ ಬಂದಿದ್ದಾರೆ. ಸ್ನೇಹಿತರೆ ನೀವು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯ ಇಲ್ಲ ಮತ್ತು ಈ ಸಮುದ್ರದ ಆಹಾರಕ್ಕೂ ಮತ್ತು ಕರೋನ ವೈರಸ್ ಗೂ ಯಾವುದೇ ಸಂಬಂಧ ಇದೆ ಎಂದು ಎಲ್ಲಯೂ ಕೂಡ ಸಾಭೀತಾಗಿಲ್ಲ ಮತ್ತು ನೀವು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯ…

  • ದೇಶ-ವಿದೇಶ

    ಇವು ಜಿಎಸ್ಟಿ ಅಡಿಯಲ್ಲಿ ಕಡಿಮೆಯಾಗಲಿವೆ.ಏನು ಅಂತ ಗೊತ್ತಾ ನಿಮಗೆ ???

    ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಜುಲೈ 1 ರೊಳಗೆ ಜಿಎಸ್ಟಿ ಹೊರತರಲು  ಕೇಂದ್ರ ಮತ್ತು ರಾಜ್ಯಸರ್ಕಾರಗಳು ನಿರ್ಧರಿಸಿವೆ. ಹಾಗಾದರೆ GST ಎಂದರೇನು?                                                                                  …

  • ಸುದ್ದಿ

    ಜೋಡೆತ್ತುಗಳ ಸದ್ದು, ಗೋಶಾಲೆಗೆ ಬೆಳಕಾದ ದರ್ಶನ್, ಯಶ್.

    ಜಿಲ್ಲೆಯಲ್ಲಿ ಮತ್ತೆ ಜೋಡೆತ್ತು ಸದ್ದು ಮಾಡಿದ್ದು, ರಾಜಕೀಯವಾಗಿ ಅಲ್ಲದೆ ಜೋಡೆತ್ತುಗಳು ಮಾನವೀಯತೆ ಮೆರೆದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಗೋಮಾತೆ ಸೇವೆಗೆ ಸಿದ್ಧರಾಗಿದ್ದಾರೆ. ನಟ ದರ್ಶನ್ ಕಳೆದ ದಿನ ಚೈತ್ರ ಗೋಶಾಲೆಗೆ ಸುಮಾರು 15 ಟ್ರ್ಯಾಕ್ಟರ್ ಭತ್ತದ ಹುಲ್ಲನ್ನು ಅನುದಾನ ಮಾಡಿದ್ದರು. ಇದೀಗ ನಟ ಯಶ್ ಕೂಡ ಚೈತ್ರ ಗೋಶಾಲೆಗೆ ಸಹಾಯ ಮಾಡುತ್ತಿದ್ದಾರೆ. ಈ ಮೂಲಕ ಮಂಡ್ಯದ ಚೈತ್ರ ಗೋಶಾಲೆಗೆ ದರ್ಶನ್ ಮತ್ತು ಯಶ್ ಬೆಳಕಾಗಿದ್ದಾರೆ. ಯಶ್ ಪಾಂಡವಪುರದ ತಾಲೂಕಿನ ದೊಡ್ಡಬ್ಯಾಡರಹಳ್ಳಿಯಲ್ಲಿರುವ ಚೈತ್ರ ಗೋಶಾಲೆಯ…

  • ರಾಜಕೀಯ

    ಅಮಿತ್ ಶಾ, ಸಿ ಎಂ ಸಿದ್ದುಗೆ ಠಕ್ಕರ್ ನೀಡಲು ಸಕತ್ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿಕೊಂಡಿದ್ದಾರೆ.!ಏನು ಗೊತ್ತಾ?ತಿಳಿಯಲು ಈ ಲೇಖನ ಓದಿ…

    ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ದೆಹಲಿಯಿಂದ ರಾಜಕೀಯ ಘಟಾನುಘಟಿಗಳು ನ ಮುಂದು ತಾ ಮುಂದು ಎಂಬಂತೆ ಆಗಮಿಸುತ್ತಿದ್ದಾರೆ. ಇನ್ನು ಈ ಬಾರಿಯ ಚುನಾವಣೆಯನ್ನು ತಮ್ಮ ಸ್ವ ಪ್ರತಿಷ್ಠೆಯೆಂದು ತೆಗೆದುಕೊಂಡಿರುವ ಪ್ರದಾನ ಮಂತ್ರಿ ನರೇಂದ್ರ ಮೋದಿ ಹಾಗು ಬಿಜೆಪಿ ಪಕ್ಷದ ಮಾಸ್ಟರ್ ಮೈಂಡ್ ಕರ್ನಾಟಕ ರಾಜ್ಯದ ಚುನಾವಣೆಯ ಬಗ್ಗೆ ಸಕತ್ ಪ್ಲಾನ್ ಮಾಡುತಿದ್ದರೆ. ಇನ್ನು ಈ ಹಿನ್ನೆಲೆಯಲ್ಲಿ ಅಮಿತ್ ಶಾ ರವರು ಸಿ ಎಂ ಸಿದ್ದರಾಮಯ್ಯ ರವರಿಗೆ ಠಕ್ಕರ್ ನೀಡಲು ಸಕತ್ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿಕೊಂಡಿದ್ದಾರೆ….

  • ಕಾನೂನು

    ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-20 ಸಾವಿರ ದಂಡ

    ಕೋಲಾರ: ಶ್ರೀನಿವಾಸಪುರ ಪೊಲೀಸ್ ಠಾಣೆ ವ್ಯಾಪ್ತಿಯ, ರಾಯಲ್ಪಾಡು ಹೋಬಳಿ, ಎ.ಕೊತ್ತೂರು ಗ್ರಾಮದ ನವೀನ್ ಕುಮಾರ್ ಬಿನ್ ರವಣಪ್ಪ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿರುವುದು ರುಜುವಾತಾದ ಹಿನ್ನಲೆ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ಆರೋಪಿಗೆ 20 ವರ್ಷ ಸಜೆ ತೀರ್ಪು ನೀಡಿದ್ದಾರೆ. ಸದರಿ ಆರೋಪಿಯ ವಿರುದ್ದ ಶ್ರೀನಿವಾಸಪುರ ಪೊಲೀಸ್ ಠಾಣೆ ನಿರೀಕ್ಷಕರಾದ ಸಿ.ರವಿಕುಮಾರ್ 6 ಮತ್ತು 16 ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸಿ ಆರೋಪಿತನ ವಿರುದ್ದ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದು, ವಿಚಾರಣೆ ನಡೆಸಿದ…