ಕನ್ನಡ ಚಿತ್ರರಂಗದ ನಟರು ಗೌರವದಿಂದ ಮನೆಯಲ್ಲಿ ಇರಬೇಕು. ಪ್ರಚಾರಕ್ಕೆ ಬಂದು ಜೆಡಿಎಸ್ ಪಕ್ಷ ಹಾಗೂ ನಾಯಕರ ವಿರುದ್ಧ ಬಾಯಿಬಿಟ್ಟರೆ ಪರಿಣಾಮ ಸರಿ ಇರುವುದಿಲ್ಲ ಎಂದು ಕೆ.ಆರ್. ಪೇಟೆ ಶಾಸಕ ನಾರಾಯಣಗೌಡ ಹೇಳಿದ್ದಾರೆ.
ಮಂಡ್ಯದಲ್ಲಿ ಕೆ.ಆರ್ ಪೇಟೆ ಸಮಾವೇಶದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಕಾಂಗ್ರೆಸ್ ಪರ ಪ್ರಚಾರ ಮಾಡಿದ ಅವರು ಅಂಬರೀಶ್ ಬಗ್ಗೆ ನಮಗೆ ಈಗಲೂ, ಮುಂದೆಯೂ ಗೌರವವಿದೆ. ಆದರೆ ಇತರ ಚಲನಚಿತ್ರ ಕಲಾವಿದರ ಬಗ್ಗೆ ನನಗೆ ಅಸಮಾಧಾನವಿದೆ. ದರ್ಶನ್ ಮತ್ತು ಯಶ್ ಅವರು ಒಬ್ಬ ವ್ಯಕ್ತಿಯ ಪರ ಪ್ರಚಾರ ನಡೆಸುವುದು ಸರಿಯಲ್ಲ. ರಾಜಕೀಯಕ್ಕೂ ಅವರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.
ನಾವು ಟಿಕೆಟ್ ಗೆ ಕೊಟ್ಟ ಹಣದಲ್ಲಿ ಅವರು ಜೀವನ ನಡೆಸುತ್ತಿದ್ದಾರೆ. ಗೌರವದಿಂದ ಇರುವುದನ್ನು ಬಿಟ್ಟು, ನಮ್ಮ ಪಕ್ಷದ ಮತ್ತು ನಾಯಕರ ಬಗ್ಗೆ ರಾಜಕಾರಣ ಮಾತನಾಡಿದರೆ ಸುಮ್ಮನಿರುವುದಿಲ್ಲ. ನಮ್ಮ ಪಕ್ಷ ಅಧಿಕಾರದಲ್ಲಿದ್ದು, ನಿಮ್ಮ ಅಕ್ರಮಗಳ ಜಾತಕ ಹೊರ ತರಬೇಕಾಗುತ್ತದೆ. ನಮ್ಮ ಪಕ್ಷದ ಮುಖಂಡರ ಬಗ್ಗೆ ಲಘುವಾಗಿ ಮಾತನಾಡಿದರೆ ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ನೀವು ಮನೆಯಲ್ಲಿ ಇದ್ದರೆ ನಿಮಗೆ ಗೌರವ, ಇಲ್ಲದಿದ್ದರೆ ದೇವೇಗೌಡ ಕುಟುಂಬದ ಬಗ್ಗೆ ಮಾತನಾಡಿದರೆ ನಿಮಗೆ ತಕ್ಕ ಪಾಠ ಕಲಿಸುತ್ತೇವೆ. ಸರ್ಕಾರ ನಮ್ಮದಿದೆ. ಸುಮ್ಮಿನಿದ್ರೆ ಸರಿ. ಇಲ್ಲಾಂದ್ರೆ ನಿಮ್ಮ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸ್ತೀವಿ. ಶೂಟಿಂಗ್ ಮಾಡ್ಕೊಂಡು ಗೌರವವಾಗಿ ಇರಿ. ರಾಜಕಾರಣದ ಬಗ್ಗೆ ಮಾತಾಡಲು ನಿಮಗೆ ಹಕ್ಕಿಲ್ಲ. ನೀವು ಭಾರತ ದೇಶವನ್ನೇ ನೋಡಿಲ್ಲ. ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಹೇಳುವ ಮೂಲಕ ಶಾಸಕರು, ದರ್ಶನ್ ಹಾಗೂ ಯಶ್‍ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಮಯೂನ್ ಎನ್ಬದುಕಿರುವ ಎಲ್ಲ ಜೀವಿಗಳೂ ಉಸಿರಾಡುತ್ತವೆ ಎಂಬ ವಿಷಯ ಯಾರಿಗೂ ಹೊಸತಲ್ಲ. ಮಾನವನು ಪ್ರತಿನಿಮಿಷಕ್ಕೆ ಹದಿನಾರು ಬಾರಿ ಉಸಿರಾಡುತ್ತಾನೆ. ಉಸಿರಾಟದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳವುದೇ ಇಲ್ಲ. ಏಕೆಂದರೆ ಉಸಿರಾಟ ನಮ್ಮಇಚ್ಛೆಗೆ ಕಾಯದೆ ಅನೈಚ್ಛಿಕವಾಗಿ ನಡೆಯುತ್ತಿರುತ್ತದೆ. ಜಗತ್ತಿನಲ್ಲಿ ಬಹಳಷ್ಟು ಜನರು ಉಸಿರಾಡುತ್ತಿರುವ ಕ್ರಮ ಸರಿಯಿಲ್ಲ. ಹೇಗೋ ಉಸಿರಾಡಿಕೊಂಡು ಬದುಕಿದ್ದಾರೆ ಎಂದು ಆಧುನಿಕ ವೈದ್ಯರು ಆರೋಪಣೆ ಮಾಡುತ್ತಿದ್ದಾರೆ.ನಿವು ಸರಿಯಾಗಿ ಉಸಿರಾಡುತಿದ್ತ್ದೀರ? ಇದನ್ನು ತಿಳಿದುಕೊಳ್ಳಲು ಒಂದು ಸರಳ ವಿಧಾನ ಇದೆ. ನೀವು ಈಗ ಎಲ್ಲೇ ಇರಿ. ಏನೇ ಮಾಡುತ್ತಿರಿ. ಒಮ್ಮೆ ಆಳವಾಗಿ…
ಬಿಗ್‍ಬಾಸ್ ಫಿನಾಲೆಗೆ ಉಳಿದಿರುವುದು ಇನ್ನೂ ಎರಡು ದಿನ ಮಾತ್ರ. ಈ ಸಂದರ್ಭದಲ್ಲಿ ಶೈನ್ ಮತ್ತು ಭೂಮಿ ನಡುವೆ ಮನಸ್ತಾಪ ಉಂಟಾಗಿದೆ. ಭೂಮಿ ಶೆಟ್ಟಿ ಮತ್ತು ಶೈನ್ ಶೆಟ್ಟಿ ಇಬ್ಬರೂ ಕುಂದಾಪುರದವರು. ಇವರಿಬ್ಬರು ಯಾವಾಗಲೂ ತಮಾಷೆಮಾಡಿಕೊಂಡು, ಹೊಡೆದಾಡಿಕೊಳ್ಳುತ್ತಾ, ತರ್ಲೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇವರಿಬ್ಬರ ಮಧ್ಯೆ ಒಳ್ಳೆಯ ಸ್ನೇಹ-ಬಾಂಧವ್ಯವಿದೆ. ಈ ವಿಚಾರ ಬಿಗ್‍ಬಾಸ್ ಮನೆಯ ಸದಸ್ಯರಿಗೂ ತಿಳಿದಿದೆ. ಆದರೆ ಬಿಗ್‍ಬಾಸ್ ಮುಗಿಯುತ್ತಿರುವ ಸಂದರ್ಭದಲ್ಲಿ ಶೈನ್ ಮತ್ತು ಭೂಮಿ ನಡುವೆ ಮನಸ್ತಾಪ ಉಂಟಾಗಿದೆ. ಶೈನ್, ದೀಪಿಕಾ, ಭೂಮಿ, ವಾಸುಕಿ, ಮತ್ತು ಕುರಿ…
ಮನುಧ್ಯನಿಗೆ ಆರೋಗ್ಯವೇ ಮಹಾ ಭಾಗ್ಯ ಎಂದು ಹೇಳಲಾಗುತ್ತೆ. ಆದ್ರೆ ಅಂತಹ ಆರೋಗ್ಯದ ಬಗ್ಗೆ ನಾವು ನಿರ್ಲಕ್ಷ್ಯ ಮಾಡಲೇಬಾರದು.ಅದರಲ್ಲೂ ಕೆಲವೊಂದು ಕಾಯಿಲೆಗಳ ಬಗ್ಗೆ ಎಚ್ಚರಿಕೆ ಇರಲೇಬೇಕು.ಹೃದಯಾಘಾತದಂತಹ ಅಪಾಯಕಾರಿ ರೋಗಗಳ ಬಗ್ಗೆ ಸದಾ ಎಚ್ಚರಕೆ ಇಂದ ಇರಲೇ ಬೇಕು. ಆದರೆ ಅನೇಕರಿಗೆ ಯಾವುದೇ ಮನುಷ್ಯನಿಗೆ ಹಾರ್ಟ್ ಅಟ್ಯಾಕ್ ಆದ ಕೂಡಲೇ ಪ್ರಥಮ ಚಿಕಿತ್ಸೆಯಾಗಿ ಏನು ಮಾಡಬೇಕು ಎಂದು ಗೊತ್ತಿರುವುದಿಲ್ಲ. ಗೊತ್ತಿದ್ದರೂ ಗಾಬರಿಯಿಂದ ಮಾಡಲು ಹೋಗುವುದಿಲ್ಲ.ಆದರೆ ಹೃದಯಾಘಾತವಾದ ಐದು ನಿಮಿಷದೊಳಗೆ ಈ ಕೆಲಸ ಮಾಡಿದ್ರೆ ಮನುಷ್ಯ ಬದುಕುವ ಸಾಧ್ಯತೆ ಹೆಚ್ಚಿರುತ್ತದೆ. *ಹಾರ್ಟ್…
ಹಾಗಲಕಾಯಿಯ ಹಲವು ರೀತಿಯಲ್ಲಿ ನಮ್ಮ ದೇಹಕ್ಕೆ ಉತ್ತಮವಾಗಿದೆ. ಪ್ರಮುಖವಾಗಿ ಇದರ ನಿಯಮಿತ ಸೇವನೆಯಿಂದ ಯಕೃತ್‌ನಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ಇದರ ನಿಯಮಿತ ಸೇವನೆಯಿಂದ ಮುಖದ ಮೊಡವೆಗಳೂ ಕಲೆನೀಡದೇ ಮಾಗಲು ಸಾಧ್ಯವಾಗುತ್ತದೆ… ಬನ್ನಿ ಹಾಗಲಕಾಯಿಯ ಆರೋಗ್ಯಕಾರಿ ಗುಣಗಳ ಬಗ್ಗೆ ತಿಳಿಯೋಣ. ಜೀರ್ಣಕ್ರಿಯೆಯಲ್ಲಿ ನೆರವಾಗುತ್ತದೆ : ಕೆಲವೊಮ್ಮೆ ಆಹಾರ ಜೀರ್ಣಗೊಳ್ಳಲು ಸಾಮಾನ್ಯಕ್ಕಿಂತಲೂ ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳುವುದರಿಂದ ಹೊಟ್ಟೆಯಲ್ಲಿಯೇ ಉಳಿದು ಹಲವು ವಾಯುಗಳು ಉತ್ಪತ್ತಿಯಾಗಿ ಉರಿ ತರಿಸುತ್ತವೆ. ಅಜೀರ್ಣವ್ಯಾಧಿ (dyspepsia) ಎಂದು ಕರೆಯಲಾಗುವ ಈ ತೊಂದರೆಗೆ ಹಾಗಲಕಾಯಿಯ ರಸ…
ರಾಘವ ಲಾರೆನ್ಸ್ ಈಗ ಟಾಲೀವುಡ್, ಕೋಲೀವುಡ್ ನಲ್ಲಿ ಉತ್ತಮ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಇವರು ನಿರ್ದೇಶಕರಾಗುವ ಮೊದಲು ಕೊರಿಯಾಗ್ರಾಫರ್ ಆಗಿ ತನ್ನ ಜೀವನವನ್ನು ಆರಂಭಿಸಿದ್ದರು. ಪ್ರಭುದೇವಾ ಟ್ರೂಪ್ ನಲ್ಲಿ ಒಬ್ಬನಾಗಿದ್ದು..ಎಲ್ಲರನ್ನೂ ಆಕರ್ಷಿಸುವಂತೆ ನೃತ್ಯ ಅಭಿನಯಿಸಿ ಮೆಗಾಸ್ಟಾರ್ ಗಮನ ಸೆಳೆದಿದ್ದೇ ತಡ ಮೆಗಾಸ್ಟಾರ್ ರವರ ಹಿಟ್ಲರ್ ಚಿತ್ರದಲ್ಲಿ ಅವಕಾಶ ನೀಡಿದರು.
‘ಸಾಯಿಪಲ್ಲವಿ’ಯನ್ನ ಸ್ಯಾಂಡಲ್ ವುಡ್ ಸಿನಿಮಾಗಾಗಿ ಕರೆತರಲು ಸಿನಿಮಾ ತಂಡವೊಂದು ಸಜ್ಜಾಗಿದೆ. ಚಿತ್ರತಂಡ ‘ಪ್ರಜ್ವಲ್ ದೇವರಾಜ್’ ಜೊತೆಯಲ್ಲಿ ‘ಪ್ರೇಮಂ’ ಬೆಡಗಿಯನ್ನ ಜೋಡಿ ಮಾಡಲು ಸಿದ್ದತೆ ನಡೆಸಿದೆ.