ಇಂದು ನೀವು ತೋರಿಸುತ್ತಿರುವ ಪ್ರೀತಿಗೆ ನಮ್ಮ ಮೈಯಲ್ಲಿರುವ ರಕ್ತವನ್ನು ತೆಗೆದು ನಿಮ್ಮ ಕಾಲನ್ನು ತೊಳೆದರೂ ಅದು ಕಡಿಮೆಯೇ ಎಂದು ನಟ ದರ್ಶನ್ ಅವರು ಅಭಿಮಾನಿಗಳಿಗೆ ಹೇಳಿದ್ದಾರೆ.
ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ದರ್ಶನ್ ನಮ್ಮ ಬಗ್ಗೆ ಏನೇ ಮಾತಾಡಿದ್ರೂ ನಾವು ಕೋಪ ಮಾಡ್ಕೊಳಲ್ಲ, ಬೇಜಾರಿಲ್ಲ, ನೊಂದುಕೊಳ್ಳಲ್ಲ. ನಾವು ಅಂಬರೀಶ್ ಅವರಿಗಾಗಿ, ಸುಮಲತಾ ಅಮ್ಮನಿಗಾಗಿ ಬಂದಿದ್ದೇವೆ ಎಂದು ನಟ ದರ್ಶನ ಹೇಳಿದರು.
ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ದರ್ಶನ್, ಇವತ್ತು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಮೈಯಲ್ಲಿರುವ ರಕ್ತವನ್ನು ತೆಗೆದು ನಿಮ್ಮ ಕಾಲನ್ನು ತೊಳೆದರೂ ಅದು ಕಡಿಮೆನೇ. ಯಾಕೆಂದರೆ ಈ ಉರಿ ಬಿಸಿಲಲ್ಲಿ ಅಲ್ಲಿಂದ ನಮ್ಮ ಜೊತೆ ನಡೆದುಕೊಂಡು ಬಂದಿದ್ದೀರಿ. ನಾನು ತಲಾ ಇಷ್ಟಿಷ್ಟು ಅಂತ ಯಾರಿಗೂ ಕೊಟ್ಟಿಲ್ಲ. ಅಪ್ಪಾಜಿ ಮೇಲಿನ ಪ್ರೀತಿಯಿಂದ ನೀವು ಬಂದಿದ್ದೀರಿ ಎಂದು ಹೇಳಿದರು.
ಇವತ್ತಿಂದ 18 ತಾರೀಕಿನವರೆಗೂ ನಮ್ಮ ಪೆರೇಡ್ ನಡೆಯುತ್ತಿರುತ್ತದೆ.. ಅಣ್ಣಾ ನಿಮ್ಮ ಸೌಂಡ್ ಜಾಸ್ತಿ ಇದೆ, ಈ ಸೌಂಡ್ 18ರ ವರೆಗೂ ಹೀಗೇ ಇರಲಿ. 23ಕ್ಕೆ ರಿಸಲ್ಟ್ ದಿನ ಮತಗಳು ನಿಮಗೇ ಬಿದ್ದಿರುತ್ತವೆ ಎಂದು ಕಾರ್ಯಕರ್ತರೊಬ್ಬರಿಗೆ ಹೇಳಿದರು.
ಅಮ್ಮ ಇಲ್ಲಿಗೆ ಬಂದು ನಿಂತಿದ್ದಾರೆ. ಅವರ ಮೇಲೆ ನೀವು ತುಂಬಾ ಪ್ರೀತಿ ತೋರುತ್ತಿದ್ದೀರ. ಮೇ 23 ರಂದು ಪಟ ಪಟಾ ಮೇಲೆ ಹೋಗುತ್ತಿರಬೇಕು. ನಮ್ಮನ್ನ ಬೈದೋರು ಕೆಳಗೆ ಹೋಗಬೇಕು. ಅಷ್ಟೇ ನಾನು ಕೇಳಿಕೊಳ್ಳೋದು ಎಂದು ದರ್ಶನ್ ಹೇಳಿದರು.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಮತದಾನ ಪ್ರತಿಯೊಬ್ಬರ ಹಕ್ಕು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾದರೂ , ಮತದಾನದ ದಿನ ಎಷ್ಟೋ ಮಂದಿ ಮನೆಯಿಂದ ಹೊರಬರುವುದಿಲ್ಲ.. ಅದರಲ್ಲಿ ಕೆಲವರು ಯುವ ಜನತೆಯೂ ಕೂಡ ಸೇರಿರುತ್ತಾರೆ..
ಮದುವೆಯಾಗುವುದು ಪ್ರತಿಯೊಬ್ಬರ ಕನಸು. ತಮಗಿಷ್ಟವಾಗುವ ವ್ಯಕ್ತಿಯನ್ನು ಮದುವೆಯಾಗಲು ಪ್ರತಿಯೊಬ್ಬರೂ ಬಯಸ್ತಾರೆ. ದಾಂಪತ್ಯ ಜೀವನ ಪರ್ಯಂತ ಸುಖಕರವಾಗಿರಲೆಂದು ಅಳೆದು ತೂಗಿ ಮದುವೆ ಮಾಡ್ತಾರೆ. ಹಿಂದೂ ಸಂಪ್ರದಾಯದಲ್ಲಿ ಮದುವೆಗೂ ಮುನ್ನ ಜಾತಕ ನೋಡುವ ಪದ್ಧತಿಯಿದೆ. ಜಾತಕ ಹೊಂದಿಕೆಯಾದ್ರೆ ಮದುವೆ ಮಾತುಕತೆ ಮುಂದುವರೆಯುತ್ತದೆ.ಸಾಮಾನ್ಯವಾಗಿ ಒಂದೇ ಗೋತ್ರದವರು ಮದುವೆಯಾಗುವುದಿಲ್ಲ. ಗೋತ್ರ ನೋಡಿಯೇ ಜಾತಕ ತೆಗೆದುಕೊಳ್ತಾರೆ. ಒಂದೇ ಗೋತ್ರದವರನ್ನು ಮದುವೆಯಾಗದಿರಲು ಮುಖ್ಯ ಕಾರಣವಿದೆ. ಸನಾತದ ಧರ್ಮದ ಪ್ರಕಾರ ಒಂದೇ ಗೋತ್ರದವರು ಸಹೋದರ-ಸಹೋದರಿಯಾಗಿರುತ್ತಾರೆ ಎಂಬ ನಂಬಿಕೆಯಿದೆ. ಹಾಗಾಗಿ ಒಂದೇ ಗೋತ್ರದವರನ್ನು ಮದುವೆಯಾಗುವುದಿಲ್ಲ. ಇದಲ್ಲದೆ ಒಂದೇ ಗೋತ್ರದಲ್ಲಿ…
ಯಶ್ ಕುಟುಂಬಕ್ಕೆ ಅಂಬಿ ಆತ್ಮೀಯರು.ದರ್ಶನ್ ಪುನೀತ್ ಹಾಗೂ ಸುದೀಪ್ ಅಂತೆ ಅವರು ಸಹ ಅವರ ಕುಟುಂಬದೊಂದಿಗೆ ಒಳ್ಳೆಯ ಒಡನಾಟವನ್ನು ಇಟ್ಟುಕೊಂಡಿದ್ದರು. ಅಂಬಿ ನಿಧನವಾದ ಆಗಲಂತೂ ಆಸ್ಪತ್ರೆಯಿಂದ ಹಿಡಿದು ಅಂತ್ಯಸಂಸ್ಕಾರದ ವಿಧಿವಿಧಾನಗಳು ಎಲ್ಲವೂ ಪೂರ್ಣಗೊಳ್ಳುವವರೆಗೂ ಯಶ್ ಅಂಬಿಗ್ ಕುಟುಂಬದ ಜೊತೆಯಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ರಾಧಿಕ ಶ್ರೀಮಂತ ಸಮಾರಂಭದಲ್ಲಿ ಸುಮಲತಾ ಹಾಗೂ ಅಂಬರೀಶ್ ಪಾಲ್ಗೊಂಡಿದ್ದರು. ಆದರೆ ಆಗ ಅವರು ರಾಧಿಕಾಗೆ ಏನು ಬಿಡುಗಡೆ ನೀಡಿರಲಿಲ್ಲ. ಆದರೆ ಅಂಬರೀಶ್ ಕೆಲವು ತಿಂಗಳುಗಳ ಹಿಂದೆ ಒಂದು ತೊಟ್ಟಿಲನ್ನು ಬುಕ್ ಮಾಡಿದ್ದರಂತೆ. ಈ ವಿಷಯ ಅಂಬರೀಶ್…
ಡಿಜಿಟಲ್ ಭಾಷಾತಂತ್ರಜ್ಞಾನ ಪರಿಹಾರಗಳ ಮುಂಚೂಣಿಯ ರೆವೆರೀ ಲಾಂಗ್ವೇಜ್ ಟೆಕ್ನಾಲಜೀಸ್ ಇಂಡಿಕ್ ಕ್ಯಾಲೆಂಡರ್ ಎಂಬ ಸುಲಭ ಬಳಕೆಯ ಕ್ಯಾಲೆಂಡರ್ಆಪ್ ಬಿಡುಗಡೆ ಮಾಡಿದೆ. ರೆವೆರೀಯ ಇಂಡಿಕ್ ಕ್ಯಾಲೆಂಡರ್ಆಪ್ ಪ್ರಸ್ತುತ ಗೂಗಲ್ ಪ್ಲೇಸ್ಟೋರ್ನಲ್ಲಿ ಲಭ್ಯವಿದ್ದು ಅವರ ಭಾಷೆ, ಸಂಸ್ಕೃತಿ, ಧಾರ್ಮಿಕತೆಗಳನ್ನು ಮೀರಿ ಭಾರತೀಯರಿಗೆಂದೇ ರೂಪಿಸಲಾಗಿದೆ.
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ನಟರಾದ ದರ್ಶನ್ ಮತ್ತು ಯಶ್ ಸಾಥ್ ನೀಡಿದ್ದಾರೆ. ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಕೆಯ ವೇಳೆ ಜನಸಾಗರವೇ ಹರಿದು ಬಂದಿದ್ದು, ಶಕ್ತಿ ಪ್ರದರ್ಶನದ ಮೂಲಕ ಸುಮಲತಾ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ದರ್ಶನ್, ನಾನು ಇಲ್ಲಿ ನಿಂತಿದ್ದಕ್ಕೆ ಹಳೆ ಮ್ಯಾಟರ್ ಓಪನ್ ಆಗುತ್ತಿದೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ, ಅದೂ ಆಗಲಿ, ಅದರಿಂದ ಖುಷಿ,…
ಜಿಲ್ಲೆಯಲ್ಲಿ ಜನವರಿ 15 ರಂದು ಬೆಳಿಗ್ಗೆ 6.00 ಗಂಟೆಗೆ ಕೋಲಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಯೋಗಥಾನ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಹಾಗೂ ಯೋಗ ತಾಲೀಮು ಪರಿಶೀಲಿಸಿ ಎಲ್ಲಾ ವ್ಯವಸ್ಥೆಗಳು ಸರಿಯಾಗಿವೆಯೇ ಎಂದು ಖುದ್ದು ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ಇಂದು ಪರಿಶೀಲನೆ ನಡೆಸಿದರು. 15ನೇ ಜನವರಿಯಂದು ಜಿಲ್ಲಾ ಮಟ್ಟದಲ್ಲಿ ನಡೆಯುವ ಯೋಗಥಾನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಆಯ್ದ ಶಾಲಾ ವಿದ್ಯಾರ್ಥಿಗಳು, ದೈಹಿಕ ಶಿಕ್ಷಕರು, ಯೋಗಪಟುಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ…