ಸಿನಿಮಾ

ಮೊದಲ ಬಾರಿಗೆ ತನ್ನ ಅಭಿಮಾನಿ ಮೇಲೆಯೇ ಗರಂ ಆದ ದಾಸ ದರ್ಶನ್..!ಕಾರಣ ಏನು ಗೊತ್ತಾ..?

227

ಮಾಸ್ಟರ್ ಹಿರಣ್ಣಯ್ಯನವರ ಅಗಲಿಕೆಯ ಕಂಬನಿ ಮಿಡಿದಿರುವ ದರ್ಶನ್ ‘ಗಜ’ ಚಿತ್ರದಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರೊಂದಿಗೆ ಅಭಿನಯಿಸಿದ ನೆನಪುಗಳು ಸದಾ ನನ್ನೊಂದಿಗೆ ಇರುತ್ತವೆ ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

ಹಿರಿಯ ಕಲಾವಿದ ಮಾಸ್ಟರ್ ಹಿರಣ್ಣಯ್ಯ ನಿಧನದ ಹಿನ್ನೆಲೆಯಲ್ಲಿ ಸಂತಾಪಗಳ ಮಹಾಪೂರವೇ ಹರಿದು ಬಂದಿದೆ. ಅನೇಕ ಕಲಾವಿದರು ಮಾಸ್ಟರ್ ಹಿರಣ್ಣಯ್ಯ ಅವರ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದ್ದಾರೆ. ಅಂತೆಯೇ ನಟ ದರ್ಶನ್ ಕೂಡ ಹಿರಣ್ಣಯ್ಯ ಅವರ ದರ್ಶನ ಪಡೆದು ನಮನ ಸಲ್ಲಿಸಿದ್ದಾರೆ.

ಕನ್ನಡ ರಂಗಭೂಮಿಯ ಹಿರಿಯ ಕಲಾವಿದರಾದ ಮಾಸ್ಟರ್ ಹಿರಣಯ್ಯ ಅವರು ವಿಧಿವಶರಾಗಿದ್ದಾರೆ. ದುಃಖ ತಡೆದುಕೊಳ್ಳುವ ಶಕ್ತಿಯನ್ನು ಕುಟುಂಬ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ‘ಗಜ’ ಚಿತ್ರದಲ್ಲಿ ಅವರೊಂದಿಗೆ ಅಭಿನಯಿಸಿದ ನೆನಪುಗಳು ಸದಾ ನನ್ನೊಂದಿಗೆ ಇರುತ್ತವೆ ಎಂದು ಹೇಳಿದ್ದಾರೆ.

ಹಿರಣ್ಣಯ್ಯ ಅವರ ಅಂತಿಮ ದರ್ಶನ ಪಡೆದು ದರ್ಶನ್ ವಾಪಸ್ ತೆರಳುವ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಡಿ ಬಾಸ್ ಎಂದು ಘೋಷಣೆ ಕೂಗಲು ಮುಂದಾಗಿದ್ದು, ಇದರಿಂದ ಕೋಪಗೊಂಡ ದರ್ಶನ್ ಸುಮ್ಮನಿರುವಂತೆ ತಿಳಿಸಿದ್ದಾರೆ. ಅಭಿಮಾನಿ ಮೇಲೆ ಗರಂ ಆಗಿದ್ದಾರೆ ಎನ್ನಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿ ಆನ್‌ಲೈನ್ ಮೂಲಕ ಪಡೆಯಬಹುದು ಹೇಗೆ..?ತಿಳಿಯಲು ಈ ಲೇಖನ ಓದಿ..

    ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಂತರ್ಜಾಲ ಸಂಪರ್ಕವನ್ನು ಕಲ್ಪಿಸಲಾಗುತ್ತಿದ್ದು, ಅಂತರ್ಜಾಲದ ಮೂಲಕ ಪಡಿತರ ಚೀಟಿ ಪಡೆಯಬಹುದಾಗಿದೆ. ಜೊತೆಗೆ ರಾಜ್ಯದ ಯಾವುದೇ ಮೂಲೆಯಲ್ಲಿ ವಾಸವಾಗಿದ್ದರೂ, ಆ ಪ್ರದೇಶದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳ ಬಹುದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.

  • ಉಪಯುಕ್ತ ಮಾಹಿತಿ

    ಸದ್ಯದಲ್ಲೇ “ಗೋವು ” ಆನ್ಲೈನ್ ಮಾರುಕಟ್ಟೆ ..!ತಿಳಿಯಲು ಈ ಲೇಖನ ಓದಿ ..

    ಹಳೆಯ ವಸ್ತುಗಳು ಇದ್ದರೆ “ಮಾರಿ ಬಿಡಿ’ ಎನ್ನುವುದು ವೆಬ್ ಸೈಟ್ ಒಂದರ ಜಾಹೀರಾತು. ಅದೇ ರೀತಿ ಗೋವುಗಳ ಮಾರಾಟಕ್ಕೆ ಪ್ರತ್ಯೇಕವಾದ ವೆಬ್ಸೈಟ್ ಇದ್ದರೆ ಹೇಗಿರುತ್ತದೆ. ಇನ್ನು ಆರು ತಿಂಗಳು ಕಾದು ಕುಳಿತರೆ ಅದೂ ಸಿದ್ಧವಾಗಿ ಬಿಡುತ್ತದೆ. ಅದೂ ಓಎಲ್‌ಎಕ್ಸ್, ಕ್ವಿಕರ್ ಮಾದರಿಯಲ್ಲಿಯೇ.

  • ಸುದ್ದಿ

    ಅನ್ನದಾತನಿಗೆ ಬಂಪರ್ ಆಫರ್!ಪ್ರತೀ ರೈತನ ಅಕೌಂಟ್’ಗೆ ಬೀಳಲಿದೆ 10,000.!ಏನಿದು ಯೋಜನೆ ಮುಂದೆ ಓದಿ…

    ಮುಖ್ಯಮಂತ್ರಿ ಸಿದ್ದರಾಮಯ್ಯನವರು 2018-19ನೇ ಸಾಲಿನ ಬಜೆಟ್ ಮಂಡಿಸಿದ್ದು,ಹಲವಾರು ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ.ಇದರಲ್ಲಿ ರೈತರಿಗೂ ಹಲವಾರು ಯೋಜನೆಗಳನ್ನು ಪ್ರಕಟಿಸಿದ್ದು,ಕೃಷಿಗೆ ಹೆಚ್ಚು ಮಾನ್ಯತೆ ನೀಡಿದ್ದಾರೆ.

  • ಸುದ್ದಿ

    ಕೊಡಗು ನೆರೆ ಸಂತಸ್ತರಿಗೆ ನಿರ್ಮಿಸುತ್ತಿರೋ ಮನೆಗಳು ಚೆನ್ನಾಗಿಲ್ಲ ಎಂದು ಹೇಳಿಕೆ ನೀಡಿದ ಹರ್ಷಿಕಾ ಪೂಣಚ್ಚ….!

    ಕೊಡಗು ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ನಿರ್ಮಿಸುತ್ತಿರುವ ಮನೆಗಳು ಚೆನ್ನಾಗಿಲ್ಲ ಎಂದು ಸ್ಯಾಂಡಲ್‍ವುಡ್‍ನಟಿ, ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಬೇಸರ ವ್ಯಕ್ತಪಡಿಸಿದ್ದಾರೆ.ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಇತ್ತೀಚೆಗೆ ಕೊಡಗು ನೆರೆ ಸಂತ್ರಸ್ತರಿಗೆ ನಿರ್ಮಿಸುತ್ತಿರುವ ಮನೆಯ ಮಾದರಿಯನ್ನು ನೋಡಿದೆ. ಅದು ಚೆನ್ನಾಗಿಲ್ಲ. ಅವರಿಗೆ ಒಳ್ಳೆಯ ಮನೆ ನಿರ್ಮಿಸಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ಪ್ರವಾಹ ನೈಸರ್ಗಿಕವಾಗಿ ಸಂಭವಿಸಿದೆ. ಯಾರೋ ತಾವಾಗಿಯೇ ಮಾಡಿಕೊಂಡಿದ್ದಲ್ಲ. ಹೀಗಾಗಿ ನೆರೆ ಸಂತ್ರಸ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಘಟನೆಯ ಬಳಿಕ ರಾಜ್ಯ ಸರ್ಕಾರ ಶೀಘ್ರವೇ ಮನೆ…

  • ಕರ್ನಾಟಕದ ಸಾಧಕರು

    ಸಿಂಪಲ್ ಕನ್ನಡಿಗನ ಮೇರು ಸಾಧನೆ.!ಇವರು ವಿಶಿಷ್ಟ ಶೈಲಿಯ ಸಂಗೀತಗಾರನಾಗಿದ್ದೇ ರೋಚಕ.!ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    ಹೊಸ ತಲೆಮಾರಿನ ಸಂಗೀತ ಸಂಯೋಜಕ ಗಾಯಕರಲ್ಲಿ ರಘು ದೀಕ್ಷಿತ್ ಅವರದು ಒಂದು ವಿಶಿಷ್ಟ ಸ್ಥಾನ. ಕನ್ನಡದ ಇಂಟರ್ ನ್ಯಾಷನಲ್ ರಾಕ್ ಸ್ಟಾರ್’ ಆಗುವ ಮೂಲಕ ವಿಶ್ವದಾದ್ಯಂತ ಕನ್ನಡ ಕೀರ್ತಿ ಪತಾಕೆ ಹಾರಿಸಿದ್ದಾರೆ.ಇವರು ನಮ್ಮ ಕನ್ನಡದ ಹೆಮ್ಮೆ ಅಂತ ಹೇಳಿದ್ರೆ ತಪ್ಪಾಗಲಾರದು.ಇಂತಹ ಮಹಾನ್ ಸಾಧಕ ಬೆಳೆದು ಬಂದದ್ದೆ ಒಂದು ರೋಚಕ… ರಘು ದೀಕ್ಷಿತ್ ವೈಯುಕ್ತಿಕ ಜೀವನದ ಬಗ್ಗೆ… ನವೆಂಬರ್ 11, 1974ರಂದು, ಮಹಾರಾಷ್ಟ್ರದ ನಾಸಿಕ್’ನಲ್ಲಿ, ರಘು ದೀಕ್ಷಿತ್’ರವರ ಜನನವಾಯಿತು.ಇವರ ಪೂರ್ತಿ ಹೆಸರು ರಘುಪತಿ ದ್ವಾರಕನಾಥ್ ದೀಕ್ಷಿತ್ ಎಂದು. ತಂದೆ ದಿವಂಗತ ಕೆ.ವಿ.ದ್ವಾರಕನಾಥ್…

  • ಸುದ್ದಿ

    ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ 9 ನಕಲಿ ವಿದ್ಯಾರ್ಥಿಗಳು ಅರೆಸ್ಟ್……!

    ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಅಭ್ಯರ್ಥಿ ಬದಲಾಗಿ ಪರೀಕ್ಷೆ ಬರೆಯುತ್ತಿದ್ದ 9 ನಕಲಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಶಿವರಾಜ ಜಾಳಿಹಾಳ, ಮಂಜುನಾಥ ಕಡೆಮನಿ, ನಿಂಗಪ್ಪ ಕಂಬಳಿ, ಮೈಲಾರಪ್ಪ, ಫಕೀರಪ್ಪ ಸೇರಿದಂತೆ 9 ಮಂದಿ ನಕಲಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯಲ್ಲಿ ಅವರು ಬೇರೆಯವರ ಹೆಸರಲ್ಲಿ ಪರೀಕ್ಷೆ ಬರೆದ ಹಿನ್ನೆಲೆಯಲ್ಲಿ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪರೀಕ್ಷಾ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು ಕೊಠಡಿ ಮೇಲ್ವಿಚಾರಕರು ಸೇರಿ ನಾಲ್ವರು ಅಧಿಕಾರಿಗಳನ್ನು ಪರೀಕ್ಷೆ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದ್ದು, ಕ್ರಮಕ್ಕೆ ಆದೇಶಿಸಲಾಗಿದೆ ಎಂದು…