Animals

ಹಸುವಿನ ಹೊಟ್ಟೆಯಲ್ಲಿ ಇತ್ತು ಬರೋಬರಿ 15 ಕೆಜಿ !!!!!!!!!

87

ಕೋಲಾರದ ನಗರದಲ್ಲಿ ವಿದೇಶಿ ಎಚ್‌ಎ- ತಳಿಯ ಹಸುವೊಂದು ದಿಢೀರನೇ ಮೇವು ತಿನ್ನುವುದು ನಿಲ್ಲಿಸಿ ಹಾಲು ಇಳುವರಿಯನ್ನು ಕಡಿತಗೊಳಿಸಿತ್ತು. ಮೇವು ತಿನ್ನುವುದು ನಿಲ್ಲಿಸಿದ್ದರಿಂದ ಹಸು ಬಡಕಲಾಗುತ್ತಾ ಹೋಯಿತು. ಹೊತ್ತಿಗೆ ಸುಮಾರು 1೦ ಲೀಟರ್ ಹಾಲು ನೀಡಿದ್ದ ಹಸು ಕೇವ ಮೂರು ನಾಲ್ಕು ಲೀಟರ್ ಹಾಲು ನೀಡಲು ಶುರುವಿಟ್ಟುಕೊಂಡಿತ್ತು. ಹಸು ಸಾಕುತ್ತಿದ್ದ ಮನೆಯವರು ಹಸುವಿಗೆ ಸಾಕಷ್ಟು ಚಿಕಿತ್ಸೆ ಮಾಡಿಸಿದರೂ ಪ್ರಯೋಜನವಾಗಿರಲಿಲ್ಲ. ಇದೇ ಪರಿಸ್ಥಿತಿ ಕಳೆದರೆ ಹಸು ಪ್ರಾಣ ಕಳೆದುಕೊಳ್ಳುವ ಆತಂಕ ಎದುರಾಗಿತ್ತು. ಇಂತ ಆತಂಕದ ಪರಿಸ್ಥಿತಿಯಲ್ಲಿ ಹಸುವಿನ ನೆರವಿಗೆ ಬಂದವರು ಪಶು ಶಸ್ತ್ರಚಿಕಿತ್ಸಕ ಡಾ.ರಾಹುಲ್ ಮತ್ತು ಪಶು ವೈದ್ಯಾಧಿಕಾರಿ ಡಾ.ರಘುನಾಥ್.

ತೀರಾ ನಿತ್ರಾಣ ಸ್ಥಿತಿಯಲ್ಲಿದ್ದ ಹಸುವಿಗೆ ಇನ್ಯಾವುದು ಚಿಕಿತ್ಸೆ ಫಲಕಾರಿಯಾಗುವುದಿಲ್ಲ ಎಂಬುದನ್ನು ಅರಿತುಕೊಂಡು ಶಸ್ತ್ರಚಿಕಿತ್ಸೆಗೆ ಮುಂದಾದರು. ಬಲಹೀನ ಪರಿಸ್ಥಿತಿಯಲ್ಲಿಯೂ ಹಸು ಶಸಚಿಕಿತ್ಸೆಯನ್ನು ತಡೆದುಕೊಂಡಿತ್ತಲ್ಲದೆ ತನ್ನದೇ ಹೊಟ್ಟೆಯಲ್ಲಿ ಸುಮಾರು ಎರಡು ವರ್ಷಗಳಿಂದಲೂ ಸೇರಿಕೊಂಡಿದ್ದ ——- ಸುಮಾರು ೧೫ ಕೆಜಿ ಯನ್ನು ಹೊರತೆಗೆಯಲು ಸಹಕರಿಸಿತ್ತು.

ಹಸು ಮೇವಿನ ಜೊತೆ ಅನೇಕ ರೀತಿಯ ತ್ಯಾಜ್ಯವನ್ನು ತಿಂದಿರುವುದು ಶಸ್ತ್ರಚಿಕಿತ್ಸೆ ನಂತರ ಪತ್ತೆಯಾಗಿತ್ತು. ಸುಮಾರು ಎರಡು ವರ್ಷಗಳಿಂದಲೂ ಈ ಮಟ್ಟದ ತ್ಯಾಜ್ಯವು ಹಸುವಿನ ಕರುಳುಗಳಲ್ಲಿ ಸುತ್ತಿಕೊಂಡು ಮೇವು ಜೀರ್ಣವಾಗದೇ ಇದ್ದರೂ ಆರೋಗ್ಯಕರವಾಗಿ ಬದುಕಿದ್ದೇ ಆಶ್ಚರ್ಯ ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದರು.

ಯಶಸ್ವಿ ಶಸ್ತ್ರಚಿಕಿತ್ಸೆ ಯ ನಂತರ ಹಸು ಈಗ ಚೇತರಿಸಿಕೊಳ್ಳುತ್ತಿದ್ದು, ಕ್ರಮೇಣ ಮೇವು ತಿನ್ನುವುದು ಮತ್ತು ಯಥಾ ಪ್ರಕಾರ ಗುಣಮಟ್ಟದ ಅಷ್ಟೇ ಪ್ರಮಾಣದ ಹಾಲು ನೀಡಲು ಸಿದ್ಧವಾಗುತ್ತಿರುವುದು ಹಸು ಸಾಕಾಣಿಕೆದಾರರ ಸಂತಸಕ್ಕೆ ಕಾರಣವಾಗಿದೆ.

ಹಸುಗಳಿಗೆ ಮೇವು ತಿನ್ನಲು ಹೊರಗೆ ಬಿಡುವ ಸಂದರ್ಭದಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ಹೊಟ್ಟೆ ಸೇರದಂತೆ ಎಚ್ಚರವಹಿಸುವುದು ಪ್ರತಿಯೊಬ್ಬ ಹಸು ಸಾಕಾಣಿಕೆದಾರರ ಜವಾಬ್ದಾರಿಯಾಗಬೇಕು, ಇಲ್ಲವಾದರೆ ಲಕ್ಷಾಂತರ ರೂಪಾಯಿ ಮೌಲ್ಯದ ಉತ್ತಮ ತಳಿಯ ರಾಸುಗಳನ್ನು ಕಳೆದುಕೊಳ್ಳಬೇಕಾಗುತ್ತದೆಯೆಂದು ಪಶು ಶಸಚಿಕಿತ್ಸಕ ಡಾ.ರಾಹುಲ್ ಮತ್ತು ಡಾ.ರಘುನಾಥ್ ಪಶು ಸಾಕಾಣಿಕೆದಾರರಿಗೆ ಸಲಹೆ ನೀಡಿದ್ದಾರೆ.

ಸುಮಾರು ಎರಡು ವರ್ಷಗಳಿಂದಲೂ ಸುಮಾರು ೧೫ ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊಟ್ಟೆಯಲ್ಲಿಟ್ಟುಕೊಂಡು ಅಚ್ಚರಿಯಾಗಿ ಬದುಕಿದ್ದ ಹಸುವೊಂದಕ್ಕೆ ನಗರದಲ್ಲಿ ಪಶು ವೈದ್ಯರು ಯಶಸ್ವಿ ಚಿಕಿತ್ಸೆ ಮಾಡಿ ಹಸುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ