ಸ್ಪೂರ್ತಿ

ಸಂಕಷ್ಟದಲ್ಲಿದ್ದಗಲೇ ಕೈ ಬಿಟ್ಟ ಸಿ ಎಂ ಧೋಸ್ತಿ….!

37

ರಾಜ್ಯದಲ್ಲಿ ಸಂಕಷ್ಟದ ಪರಿಸ್ಥಿತಿ ಇದ್ದಾಗಲೇ ಸಚಿವ ಡಿಕೆ ಶಿವಕುಮಾರ್ ಅವರು ವಿದೇಶಕ್ಕೆ ಹೊರಟಿದ್ದು, ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೌದು. ಏನೇ ಸಮಸ್ಯೆ ಇದ್ದರೂ ನಾನೀದ್ದೇನೆ ಎಂದು ಹೇಳುತ್ತಾ, ಸರ್ಕಾರದ ಹಿತ ಕಾಯಲು ನಿಂತಿದ್ದ ಟ್ರಬಲ್ ಶೂಟರ್ ಸಂಕಷ್ಟದ ಸಮಯದಲ್ಲೇ ಕೈ ಕೊಟ್ರಾ ಅನ್ನೋ ಅನುಮಾನವೊಂದು ಮೂಡಿದೆ. ರಾಜ್ಯ ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಇನ್ನು 7 ದಿನಗಳ ಕಾಲ ನಾಟ್ ರೀಚೆಬಲ್‍ನಲ್ಲಿ ಇರಲಿದ್ದಾರೆ.


ಭಾನುವಾರ ರಾತ್ರಿ ದೆಹಲಿಯಿಂದ ಕುಟುಂಬ ಸಮೇತ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ. ಮೇ 27ರವರೆಗೆ ಆಸ್ಟ್ರೇಲಿಯಾ ಪ್ರವಾಸ ಮಾಡಲಿರುವ ಡಿಕೆಶಿ, ಸಂಪೂರ್ಣವಾಗಿ ರಾಜಕಾರಣ ಮರೆತು ಕುಟುಂಬದೊಂದಿಗೆ ಕಾಲ ಕಳೆಯಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಮೇ 23 ರ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಅನ್ನುವ ಸ್ಥಿತಿ ಇದೆ. ಇಂತಹ ಸಮಯದಲ್ಲೇ ಡಿ.ಕೆ.ಶಿವಕುಮಾರ್ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ. ಡಿಕೆಶಿ ಅವರು ಸರ್ಕಾರಕ್ಕೆ ಸಂಕಷ್ಟ ಬಂದಾಗ ದೋಸ್ತಿಗಳ ನಡುವೆ ಭಿನ್ನಾಭಿಪ್ರಾಯ ಬಂದಾಗೆಲ್ಲ ಮುಂದೆ ನಿಂತು ಸರಿಪಡಿಸಿದ್ದರು.


ಲೋಕ ಸಮರದ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಆತಂಕವಿದ್ದು, ಅದರಲ್ಲೂ ಮೈತ್ರಿ ಸರ್ಕಾರದ ಅಸ್ತಿತ್ವವೇ ಅಲ್ಲಾಡಬಹುದು ಎಂಬ ಮಾತು ಜೋರಾಗಿಯೇ ಕೇಳಿ ಬರುತ್ತಿದೆ. ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಆಸ್ಟ್ರೇಲಿಯಾ ಪ್ರವಾಸ ಕಾಕತಾಳಿಯವೋ ಅಥವಾ ಉದ್ದೇಶ ಪೂರಕವೋ ಅನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸೌಂದರ್ಯ

    ತಲೆಹೊಟ್ಟಿನ ತಲೆನೋವಿಗೆ ಇಲ್ಲಿದೆ ಮನೆಮದ್ದು….

    ತಲೆಹೊಟ್ಟು ಎಲ್ಲ ರೀತಿಯ ವಯೋಮಾನದವರನ್ನು ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಹಾಗೂ ಶ್ಯಾಂಪೂ ಗಳನ್ನು ಪ್ರಯೋಗ ಮಾಡಿದ್ರೂ ತಲೆಹೊಟ್ಟು ಹೋಗ್ತಾಯಿಲ್ಲ ಎನ್ನುವವರಿದ್ದಾರೆ

  • ಜ್ಯೋತಿಷ್ಯ

    ಭಗವಾನ್ ಶಿವನ ಕೃಪೆಯಿಂದ ಈ ರಾಶಿಗಳಿಗೆ ಶುಭಯೋಗವಿದ್ದು ನಿಮ್ಮ ರಾಶಿಯೂ ಇದೆಯಾ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(25 ಫೆಬ್ರವರಿ, 2019) ಬಹಳ ಪ್ರಯೋಜನಕಾರಿ ದಿನವಲ್ಲ- ಆದ್ದರಿಂದ ನಿಮ್ಮ ಹಣದ ಪರಿಸ್ಥಿತಿಯನ್ನುಪರಿಶೀಲಿಸಿ ಮತ್ತು ನಿಮ್ಮ ವೆಚ್ಚಗಳ…

  • ಸುದ್ದಿ

    ಜುಲೈ 2ಕ್ಕೆ ಸೂರ್ಯ ಗ್ರಹಣ; ಕಡ್ಡಾಯವಾಗಿ ಅನುಸರಿಸಬೇಕಾದ ನಿಯಮಗಳೇನು?

    ಜುಲೈ 2, 2019ರಂದು ಸಂಪೂರ್ಣ ಸೂರ್ಯ ಗ್ರಹಣ ಆಗಲಿದೆ. ಈ ಸೂರ್ಯ ಗ್ರಹಣವು ರಾತ್ರಿ 10.25ಕ್ಕೆ (ಭಾರತೀಯ ಕಾಲಮಾನ) ಸಂಭವಿಸಲಿದೆ. ಈ ಗ್ರಹಣವು 4.33 ನಿಮಿಷಗಳ ಕಾಲ ಸಂಭವಿಸಲಿದೆ. ಆ ಸಂದರ್ಭದಲ್ಲಿ ಸೂರ್ಯ ಸಂಪೂರ್ಣವಾಗಿ ಚಂದ್ರನ ನೆರಳಲ್ಲಿ ಮರೆಯಾಗುತ್ತದೆ. ಈ ಗ್ರಹಣವು ಚಿಲಿ, ಅರ್ಜೆಂಟೀನಾ ಹಾಗೂ ದಕ್ಷಿಣ ಪೆಸಿಫಿಕ್ ಸಾಗರದಿಂದ ಗೋಚರವಾಗುತ್ತದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಗ್ರಹಣದ ವೇಳೆ ಭೂಮಿಯಲ್ಲಿ ವಾತಾವರಣ ಕಲುಷಿತ ಆಗುತ್ತದೆ. ಆದ್ದರಿಂದ ಯಾವುದೇ ನಕಾರಾತ್ಮಕ ಅಡ್ಡ ಪರಿಣಾಮಗಳು ಸಂಭವಿಸಬಾರದು ಅಂದರೆ ಕೆಲವು…

  • ಸುದ್ದಿ

    14ನೇ ವಯಸ್ಸಿನಲ್ಲಿ ಮುಸುರೆ ತಿಕ್ಕುತ್ತಿದ್ದವ, 24ನೇ ವಯಸ್ಸಿಗೆ ಮರ್ಸಿಡೆಸ್ ಕಾರು ಖರೀದಿಸಿದ, ಮತ್ತೀಗ ಗೋವಾ ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ..!

    ಮಾರ್ಗೋವಾ: ಆ ಹುಡುಗ ತನ್ನ 14ನೇ ವಯಸ್ಸಿಗೆ ಮುಸುರೆ ತಿಕ್ಕುವ ಕೆಲಸ ಮಾಡಿಕೊಂಡಿದ್ದ. 24ನೇ ವಯಸ್ಸಿಗೆ ಮರ್ಸಿಡೆಸ್ ಕಾರು ಖರೀದಿಸಿ, ಪ್ರವಾಸೋದ್ಯಮದಲ್ಲಿ ಯಶಸ್ವಿ ಬ್ಯುಸಿನೆಸ್‌ಮ್ಯಾನ್ ಆಗಿ ಬೆಳೆದ ಆ ವ್ಯಕ್ತಿ ಈಗ ಗೋವಾ ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ. ಗುರುವಾರ ಫತೋರ್ಡಾದ ಡಾನ್ ಬಾಸ್ಕೊ ಕಾಲೇಜ್ ಆಫ್ ಎಂಜಿನಿಯರಿಂಗ್‌ನ, ಕಂಪ್ಯೂಟರ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮುಂದೆ, ಚಿಂದಿ ಆಯುವ ಬದುಕಿಂದ ಆರಂಭವಾಗಿ- ಸಿರಿವಂತನಾಗಿ ಬೆಳೆದ ತಮ್ಮ ಬದುಕಿನ ಕಥೆಯನ್ನು ತೆರೆದಿಟ್ಟರು ಸಚಿವ ಮೈಕೆಲ್ ಲೋಬೊ . ಎರಡು ದಿನಗಳ…

  • ಸಿನಿಮಾ, ಸುದ್ದಿ

    ಯಶ್​ಗೆ ಅಂಬಿ, ರವಿಚಂದ್ರನ್ ಜನ್ಮದಿನವೇ ಮರೆತುಹೋಯಿತೇ? ಸಿಟ್ಟಾದ್ರು ರೆಬೆಲ್​ ಸ್ಟಾರ್ ಹಾಗೂ ಕ್ರೇಜಿ ಸ್ಟಾರ್​ ಫ್ಯಾನ್ಸ್.

    ದರ್ಶನ್, ಪುನೀತ್ ರಾಜ್ಕುಮಾರ್, ಸುದೀಪ್ ಸೇರಿ ಎಲ್ಲರೂ ಟ್ವೀಟ್ ಮಾಡುವ ಮೂಲಕ ಅಂಬಿ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ಆದರೆ, ಓರ್ವ ಸ್ಟಾರ್ ನಟನನ್ನು ಬಿಟ್ಟು! ಕನ್ನಡ ಚಿತ್ರರಂಗದ ದೊಡ್ಡಣ್ಣನಂತೆ ಕೆಲಸ ಮಾಡಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಸಿನಿಮಾ ರಂಗದಲ್ಲಿ ಯಾವುದೇ ತೊಂದರೆ ಆದರೂ ಅದನ್ನು ಪರಿಹಾರ ಮಾಡುತ್ತಿದ್ದರು. ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ. ಮೇ 29 ಅವರ ಜನ್ಮದಿನ. ಮೇ 30 ರವಿಚಂದ್ರನ್​ ಜನ್ಮದಿನ. ಈ ವೇಳೆ ಕನ್ನಡ ಚಿತ್ರರಂಗದ ಎಲ್ಲ ಗಣ್ಯರೂ ಯಶ್ ಅವರನ್ನು…