ಸುದ್ದಿ

ಪುಟ್ಟ ಮಗುವಿಗೆ ತುತ್ತು ತಿನ್ನಿಸಿ ಮಗುವಿನೊಂದಿಗೆ ಮಗುವಾಗಿ ಎಂಜಾಯ್. ವಿಡಿಯೋ ವೈರಲ್!

204

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಅವರು ನಟ ಎನ್ನುವುದಕ್ಕಿಂತ ಒಂದೊಳ್ಳೆ ಮನಸ್ಸಿರುವ ವ್ಯಕ್ತಿ ಎಂದರೂ ತಪ್ಪಿಲ್ಲ. ಆದ್ದರಿಂದ ಅಭಿಮಾನಿಗಳ ಬಳಿ ಪ್ರೀತಿಯಿಂದ ಯಜಮಾನ, ಡಿ ಬಾಸ್​, ಗಜ, ಯೋಧ, ದಚ್ಚು ಎಂದೆಲ್ಲಾ ಕರೆಸಿಕೊಳ್ಳುತ್ತಾರೆ.ಪ್ರಾಣಿ ಪಕ್ಷಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ದರ್ಶನ್,  ಮೈಸೂರು ರಸ್ತೆಯಲ್ಲಿ ದೊಡ್ಡ ಫಾರಂ ಹೌಸ್ ಹೊಂದಿದ್ದಾರೆ.

ಸ್ವಲ್ಪ ಬಿಡುವು ದೊರೆತರೆ ಸಾಕು ಫಾರಂ ಹೌಸ್​​​​​ಗೆ ತೆರಳುವ ಅವರು, ಪ್ರೀತಿಯ ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾರೆ. ಫಾರಂಹೌಸ್​​​ನಲ್ಲಿ ಪ್ರಾಣಿಗಳಿಗಾಗಿ ಹುಲ್ಲು ಕತ್ತರಿಸುತ್ತಾರೆ, ಹಾಲು ಕರೆಯುತ್ತಾರೆ, ಕುದುರೆಗಳ ಮಾಲಿಶ್ ಮಾಡುತ್ತಾರೆ, ಫಾರಂಹೌಸ್ ಕ್ಲೀನ್ ಮಾಡುತ್ತಾರೆ, ಕುದುರೆ ಸವಾರಿ ಮಾಡುತ್ತಾರೆ.ಇದೀಗ ದರ್ಶನ್ ಪುಟ್ಟ ಮಗುವಿಗೆ ತುತ್ತು ತಿನ್ನಿಸಿ ಮಗುವಿನೊಂದಿಗೆ ಮಗುವಾಗಿ ಎಂಜಾಯ್ ಮಾಡಿದ್ದಾರೆ.

‘ಜಯಮ್ಮನ ಮಗ’ ಚಿತ್ರದ ನಿರ್ಮಾಪಕ ರಮೇಶ್ ದರ್ಶನ್ ಅವರಿಗೆ ಆತ್ಮೀಯರು. ರಮೇಶ್ ಅವರ ಅಳಿಯ ಚೇತನ್ ರಾಜ್​ ಕೂಡಾ ‘ಕಮರೊಟ್ಟು ಚೆಕ್​​ಪೋಸ್ಟ್’ ಚಿತ್ರವನ್ನು ನಿರ್ಮಿಸಿದ್ದಾರೆ. ರಮೇಶ್ ಅವರ ಮನೆಯಲ್ಲಿ ಏನೇ ಕಾರ್ಯಕ್ರಮ ಜರುಗಿದರೂ ದರ್ಶನ್​​ಗೆ ಆಹ್ವಾನವಿರುತ್ತದೆ. ಇತ್ತೀಚೆಗಷ್ಟೇ ದರ್ಶನ್ ಅವರಿಗೆ ರಮೇಶ್ ನಾನ್​​​​​ವೆಜ್ ಊಟಕ್ಕಾಗಿ ಆಹ್ವಾನಿಸಿದ್ದಾರೆ. ದರ್ಶನ್ ಕೂಡಾ ರಮೇಶ್ ಅವರ ಆಹ್ವಾನಕ್ಕೆ ಗೌರವ ನೀಡಿ ಪ್ರೀತಿಯಿಂದಲೇ ಅವರ ಮನೆಗೆ ಹೋಗಿದ್ದಾರೆ.

ರಮೇಶ್​ ಅವರ ಮನೆಯಲ್ಲಿ ಅವರ ಮೊಮ್ಮಗುವಿನೊಂದಿಗೆ ದರ್ಶನ್ ಆಟವಾಡಿದ್ದಾರೆ. ಮಗುವನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು ಅದಕ್ಕೆ ತುತ್ತು ತಿನ್ನಿಸಿದ್ದಾರೆ. ಊಟ ಆದ ನಂತರ ಕೂಡಾ ಮಗುವಿನೊಂದಿಗೆ ಸ್ವಲ್ಪ ಹೊತ್ತು ಆಟವಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಾನೊಬ್ಬ ಸ್ಟಾರ್ ಎಂಬ ಅಹಂ ಸ್ವಲ್ಪವೂ ಇಲ್ಲದೆ ಮಗುವಿನೊಂದಿಗೆ ಮಗುವಾಗಿರುವ ದರ್ಶನ್ ಅವರ ಸರಳತೆಯನ್ನು ನೋಡಿ ನೆಟಿಜನ್ಸ್ ಫಿದಾ ಆಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಭಾರತದ ಮೋಸ್ಟ್ ವಂಡರ್, ಈ 10 ಸೂರ್ಯೋದಯ-ಸೂರ್ಯಾಸ್ತದ ಸ್ಥಳಗಳು…

    ಪ್ರಕೃತಿಯ ಅನೇಕ ಸುಂದರವಾದ ಉಡುಗೊರೆಗಳಲ್ಲಿ ಸೂರ್ಯೋದಯ-ಸೂರ್ಯಾಸ್ತದ ಸೊಬಗು ತುಂಬಾ ಅದ್ಭುತ.ಈ ಸೂರ್ಯೋದಯ-ಸೂರ್ಯಾಸ್ತವನ್ನು ನೋಡುವುದರಿಂದ ಮನಸ್ಸು ಪ್ರಪುಲ್ಲಗೊಳ್ಳುತ್ತದೆ.ಈ ಸೌಂದರ್ಯ

  • ಉಪಯುಕ್ತ ಮಾಹಿತಿ

    ಅತಿ ಸುಲಭವಾಗಿ ತಯಾರಿಸುವ ಈರುಳ್ಳಿ ದೋಸೆ ರೆಸಪಿ, ನೀವು ಒಮ್ಮೆ ಮಾಡಿ ಸವಿಯಿರಿ.

    ಈರುಳ್ಳಿ ದೋಸೆಯನ್ನು ನಿಮ್ಮ ಮನೆಯಲ್ಲೇ ರುಚಿಯಾಗಿ ಈ ಸರಳ ವಿಧಾನದ ಮೂಲಕ ತಯಾರಿಸಿ ಸವಿಯಿರಿ. ದೋಸೆಯನ್ನು ಹೇಗೆ ಮಾಡುವುದು ಅನ್ನೋ ಚಿಂತೆ ಬಿಡಿ ಈ ವಿಧಾನ ಅನುಸರಿಸಿ… ತಯಾರಿಸಲು ಬೇಕಾಗುವ ಸಾಮಗ್ರಿಗಳುಎರಡು ಕಪ್ ಹುಳಿ ಬಂದ ದೋಸೆ ಹಿಟ್ಟು2-3 ಈರುಳ್ಳಿ3-4 ಹಸಿಮೆಣಸಿನ ಕಾಯಿಸ್ವಲ್ಪ ಕರಿಬೇವು ಸ್ವಲ್ಪ ಕೊತ್ತಂಬರಿ ಸೊಪ್ಪುಎರಡು ಚಮಚ ತುರಿದ ಕ್ಯಾರೇಟ್ರುಚಿಗೆ ತಕ್ಕಷ್ಟು ಉಪ್ಪುಎರಡು ಚಮಚ ಎಣ್ಣೆ ತಯಾರಿಸುವ ವಿಧಾನ: ಮೊದಲನೆಯದಾಗಿ ಹುಳಿ ಬಂದ ದೋಸೆ ಹಿಟ್ಟಿಗೆ ಈರುಳ್ಳಿ, ಹಸಿಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು, ತುರಿದ…

  • ಸುದ್ದಿ

    ನೂತನ ಸ್ಪೀಕರ್ ಆಗಿ​ ವಿಶ್ವೇಶ್ವರ ಹೆಗಡೆ ಕಾಗೇರಿ ಆಯ್ಕೆ

    ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿನ್ನೆ ಸದನದಲ್ಲಿ ಬಹುಮತ ಕೂಡ ಸಾಬೀತು ಮಾಡಿದ್ದಾರೆ. ಬಿಎಸ್​ವೈ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸ್ಪೀಕರ್​ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಸ್ಪೀಕರ್​ ಆಗಿ ಆಯ್ಕೆಯಾಗಿದ್ದು, ನಾಳೆ ಸದನದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ. ಕಾಂಗ್ರೆಸ್​  ಮತ್ತು ಜೆಡಿಎಸ್​ ನಾಯಕರು ಸ್ಪೀಕರ್​ ಚುನಾವಣೆಯಿಂದ ಹಿಂದೆ ಸರಿದಿದ್ದು, ಯಾವುದೇ ನಾಮಪತ್ರ ಸಲ್ಲಿಸಿರಲಿಲ್ಲ. ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರು. ಹೀಗಾಗಿ ಕಾಗೇರಿ…

  • ಜ್ಯೋತಿಷ್ಯ

    ದಿನ ಭವಿಷ್ಯ ಶನಿವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 19 ಜನವರಿ, 2019 ಇತರರ ಮೇಲೆ ಪ್ರಭಾವ ಬೀರಲು ತುಂಬಾ ವೆಚ್ಚ ಮಾಡಬೇಡಿ. ನಿಮಗೆ ಗೊತ್ತಿದ್ದ…

  • Animals

    ಹೆಚ್ಚು ಬುದ್ಧಿಶಾಲಿಯಾಗಿರುವ ಜರ್ಮನ್ ಶೆಫರ್ಡ್

    ಜರ್ಮನ್ ಶೆಫರ್ಡ್: ಜರ್ಮನಿಯಲ್ಲಿ ಹುಟ್ಟಿದ ಮಧ್ಯಮದಿಂದ ದೊಡ್ಡ ಗಾತ್ರದ ಕೆಲಸ ಮಾಡುವ ನಾಯಿಯ ತಳಿಯಾಗಿದೆ. ಇಂಗ್ಲಿಷ್ ಭಾಷೆಯಲ್ಲಿ, ತಳಿಯ ಅಧಿಕೃತವಾಗಿ ಗುರುತಿಸಲ್ಪಟ್ಟ ಹೆಸರು ಜರ್ಮನ್ ಶೆಫರ್ಡ್ ಡಾಗ್ (ಜಿಎಸ್ಡಿ). ಈ ತಳಿಯನ್ನು ಅಧಿಕೃತವಾಗಿ ಯುಕೆ ನಲ್ಲಿ ಅಲ್ಸಟಿಯನ್ ಎಂದು ಕರೆಯಲಾಗುತ್ತಿತ್ತು, ಮೊದಲ ವಿಶ್ವಯುದ್ಧದ ನಂತರ 1977 ರವರೆಗೆ ಅದರ ಹೆಸರನ್ನು ಜರ್ಮನ್ ಶೆಫರ್ಡ್ ಎಂದು ಬದಲಾಯಿಸಲಾಯಿತು. ಅದರ ಪ್ರಾಚೀನ, ತೋಳದ ತರಹದ ನೋಟದ ಹೊರತಾಗಿಯೂ, ಜರ್ಮನ್ ಶೆಫರ್ಡ್ ತುಲನಾತ್ಮಕವಾಗಿ ಆಧುನಿಕ ತಳಿಯ ನಾಯಿಯಾಗಿದ್ದು, ಅವುಗಳ ಮೂಲವು 1899…

  • Uncategorized

    ಮಾಲೂರಿನ ಯಶವಂತಪುರ ರಾಜ್ಯದ ಮೊದಲ ಡಿಜಿಟಲ್ ಹಳ್ಳಿ

    ಮಾಲೂರಿನ ‘ಯಶವಂತಪುರ’ ಗ್ರಾಮ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ರೂಪಿಸಿರುವ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಇದನ್ನು ಮಾಲೂರಿನ ಶಾಸಕ ಎಸ್.ಮಂಜುನಾಥ್ ಗೌಡ ಉದ್ಘಾಟನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು.