ಯಮುನಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಬಸ್ ವೊಂದು ಜಾರಿ ಹದಿನೈದು ಅಡಿ ಆಳದ ದೊಡ್ಡ ಮೋರಿಯಲ್ಲಿ ಬಿದ್ದ ಪರಿಣಾಮ ಇಪ್ಪತ್ತೊಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ನೂರಾ ಅರವತ್ತೈದು ಕಿ.ಮೀ. ಉದ್ದ ಎಕ್ಸ್ ಪ್ರೆಸ್ ಹೈವೆ ಉತ್ತರಪ್ರದೇಶದಲ್ಲಿ ನೋಯ್ಡಾ ಹಾಗೂ ಆಗ್ರಾದ ಮಧ್ಯೆ ಸಂಪರ್ಕ ಕಲ್ಪಿಸುತ್ತದೆ.ರಾಜ್ಯ ರಸ್ತೆ ಸಾರಿಗೆ ಬಸ್ ಸ್ಕಿಡ್ ಆಗಿ 50 ಅಡಿ ಆಳದ ಚರಂಡಿಗೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ 29 ಮಂದಿ ಪ್ರಯಾಣಿಕರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಚಾಲಕ ನಿದ್ದೆ ಮಂಪರಿನಲ್ಲಿದ್ದನು,ಹೀಗಾಗಿ ಬಸ್ ಸ್ಕಿಡ್ ಆಗಿ ಆಗ್ರಾ ಎಕ್ಸ್ಪ್ರೆಸ್ವೇ ಬಳಿ ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಆಳದ ಚರಂಡಿಗೆ ಬಿದ್ದಿದೆ. ಈ ವರೆಗೆ ಇಪ್ಪತ್ತು ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ವರದಿ ಪ್ರಕಾರ, ಈ ಭಾರೀ ವಾಹನದ ನಿಯಂತ್ರಣ ಕಳೆದುಕೊಳ್ಳುವ ಮುನ್ನ ಚಾಲಕ ನಿದ್ರೆಗೆ ಜಾರಿದ್ದ.
ಪರಿಣಾಮ 29 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 17 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ಪಡೆದ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಅಪಘಾತವಾದ ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡ ಚರಂಡಿಗೆ ಇಳಿದು ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ಸದ್ಯಕ್ಕೆ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿರುವ ಮೃತದೇಹವನ್ನು ಹೊರತೆಗೆಯಲಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಸ್ ದುರಂತಕ್ಕೆ ಸಂತಾಪ ಸೂಚಿಸಿದ್ದು, ಗಾಯಗೊಂಡವರಿಗೆ ಮತ್ತು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಎಲ್ಲ ರೀತಿಯ ಸಹಾಯವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಸರ್ಕಾರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಫೋಷಿಸಿದೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಆಹಾರಗಳನ್ನು ತಾಜಾರೂಪದಲ್ಲಿ ಸೇವಿಸಿದಷ್ಟೂಉತ್ತಮ. ಏಕೆಂದರೆ ಒಮ್ಮೆ ತಯಾರಿಸಿದ ಆಹಾರ ಕೊಂಚಹೊತ್ತಿನ ಬಳಿಕ ಹಳಸಲು ತೊಡಗುತ್ತದೆ. ಈ ಹಳಸುವಿಕೆಯನ್ನುತಡವಾಗಿಸಲು ಈಗ ನಮ್ಮೆಲ್ಲರ ಮನೆಗಳಲ್ಲಿ ಫ್ರಿಜ್ಜುಗಳಿವೆ. ಆದ್ದರಿಂದ ನಾವೆಲ್ಲಾ ಕೊಂಚ ಹೆಚ್ಚಿನ ಪ್ರಮಾಣವನ್ನುತಯಾರಿಸಿ ಫ್ರಿಜ್ಜಿನಲ್ಲಿಟ್ಟು ಮುಂದಿನ ಒಂದೆರಡು ದಿನಗಳವರೆಗೆ ಸೇವಿಸುತ್ತೇವೆ. ಆದರೆ ಫ್ರಿಜ್ಜಿನಲ್ಲಿಟ್ಟಆಹಾರವನ್ನೇ ಪ್ರತಿ ಬಾರಿ ಸೇವಿಸಲು ಮೂರು ಅಥವಾ ನಾಲ್ಕು ಬಾರಿ ಬಿಸಿ ಮಾಡಿ ಮತ್ತೆ ತಣಿಸಿ ಇಡುವುದುಖಂಡಿತಾ ಆರೋಗ್ಯಕರವಲ್ಲ. ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ! ಫ್ರಿಜ್ಜಿನಲ್ಲಿಟ್ಟರೂಪ್ರತಿ ಆಹಾರವಸ್ತು ತಾಜಾ ಇರುವ ಅವಧಿ ಬೇರೆಬೇರೆಯಾಗಿರುತ್ತದೆ. ಕೆಲವು ಒಂದೆರಡು…
ಲೂಸಿಯಾ, ಯೂ ಟರ್ನ್ ಮುಂತಾದ ಯಶಸ್ವೀ ಚಿತ್ರಗಳ ನಿರ್ದೇಶಕ ಪವನ್ ಕುಮಾರ್ ಹೊಸದೊಂದು ಚಿತ್ರವನ್ನು ನಿರ್ಮಿಸಿದ್ದಾರೆ. ಆ ಚಿತ್ರದ ಹೆಸರು ‘ಒಂದು ಮೊಟ್ಟೆಯ ಕಥೆ’. ಹಾಗಂತ ಇದು ಕೋಳಿ ಮೊಟ್ಟೆಯ ಕಥೆಯಲ್ಲ. ನಮ್ಮ ನಿಮ್ಮೆಲರ ನಡುವೆ ಓಡಾಡೋ ಹಲವಾರು ಮೊಟ್ಟೆ ತಲೆಗಳ ಕಥೆ. ಅಂದ್ರೆ ತಲೆಯ ಮೇಲೆ ಕೂದಲಿಲ್ಲದೇ ಎಲ್ಲರಿಂದ ‘ಮೊಟ್ಟೆ, ಬಾಲ್ಡಿ, ಚೊಂಬು, ಟಕ್ಲು’ ಎಂದೆಲ್ಲಾ ಕರೆಸಿಕೊಳ್ಳುವವರ ಕಥೆ.
ಸೆಲ್ಫಿ ಫೋಟೋ, ಇದರ ಬಗ್ಗೆ ನಿಮಗೆ ಹೇಳೋ ಅವಶ್ಯಕತೆಯಿಲ್ಲ. ಇವತ್ತಿನ ದಿನಗಳಲ್ಲಿ ಅಸ್ಟೊಂದು ಕ್ರೇಜ್ ಆಗಿದೆ ಈ ಸೆಲ್ಫಿ. ಅದರಲ್ಲೂ ಈ ನಮ್ಮ ಯುವ ಸುಮೂಹದಲ್ಲಿ ಹೆಚ್ಚಾಗಿದೆ. ಎಲ್ಲಿ ಚೆಂದ ಕಾಣುತ್ತೋ ಅಲ್ಲಿ ಸೆಲ್ಫಿ ಫೋಟೋ ತೆಗೆದುಕೊಳ್ಳತಾರೆ.
ಎಲ್ಲಿ ನೋಡಿದರು ಸೆಲ್ಫಿ ಸೆಲ್ಫಿ ಅದರಲ್ಲೂ ಚಂದ ಚಿಹ್ನದ ಕಾಣುವ ಹೊಲದಲ್ಲಿ ಗಿಡ ಮರಗಳ ಮದ್ಯೆ ಹೀಗೆ ಎಲ್ಲಿ ಅಂದರೆ ಅಲ್ಲಿ ಸೆಲ್ಫಿ ಕ್ರೇಜ್.
ನಿಮ್ಮಲ್ಲಿ ಬಹಳಷ್ಟು ಜನ ಈ ಹಣ್ಣನ್ನ ತಿಂದೇ ಇರುವುದಿಲ್ಲ. ಇನ್ನೂ ಕೆಲವರು ಈ ಹಣ್ಣನ್ನು ತಿಂದರೂ ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಈ ಹಣ್ಣನ್ನ ಸ್ಟಾರ್ ಫ್ರೂಟ್ ಅಂತ ಕರೆಯುತ್ತಾರೆ. ಈ ಹಣ್ಣು ಸಾಮಾನ್ಯವಾಗಿ ಎಲ್ಲಾ ಊರುಗಳಲ್ಲಿ ಸಿಗುವುದಿಲ್ಲ. ಈ ಹಣ್ಣು ನಮ್ಮ ದೇಶದೇ ಆದರೂ ಸಹ ಕೇವಲ ಕೆಲವು ಊರುಗಳಲ್ಲಿ ಮಾತ್ರ ಈ ಹಣ್ಣನ್ನ ಬೆಳೆಯುತ್ತಾರೆ. ಇನ್ನೂ ನಮ್ಮ ದೇಶದಿಂದ ಬೇರೆ ದೇಶಗಳಿಗೆ ಈ ಹಣ್ಣು ಎಕ್ಸ್ಪೋರ್ಟ್ ಕೂಡ ಆಗುತ್ತದೆ. ಈ ಸ್ಟಾರ್ ಫ್ರೂಟ್ ಅನ್ನ…
ಬಿಹಾರದ ಮುಜಾಫರ್ ನಗರದ ರೈಲ್ವೆ ನಿಲ್ದಾಣವೊಂದರಲ್ಲಿ ಶ್ರಮಿಕ್ ರೈಲಿನಲ್ಲಿ ಬಂದಿಳಿದ ಮಹಿಳೆಯೊಬ್ಬಳು ಹಸಿವು, ಸುಸ್ತಿನಿಂದ ರೈಲ್ವೆ ನಿಲ್ದಾಣದಲ್ಲೇ ಸಾವನ್ನಪ್ಪಿದ್ದಳು. ಆ ಮಹಿಳೆ ಸಾವನ್ನಪ್ಪಿರುವ ವಿಷಯ ಗೊತ್ತಾಗುತ್ತಿದ್ದಂತೆ ಜೊತೆಗಿದ್ದ ಸಂಬಂಧಿಕರು ಆಕೆಯ ಮೃತದೇಹವನ್ನು ಮುಜಾಫರ್ ನಗರದ ರೈಲ್ವೆ ನಿಲ್ದಾಣದಲ್ಲೇ ಬಟ್ಟೆಯಿಂದ ಸುತ್ತಿ ಇರಿಸಿದ್ದರು. ಆದರೆ, ಆ ಬಟ್ಟೆಯನ್ನು ಎಳೆದು ತೆಗೆದ ಆಕೆಯ ಮಗು ಅಮ್ಮನನ್ನು ಎಬ್ಬಿಸಲು ಪರದಾಡುತ್ತಿತ್ತು. 23 ವರ್ಷದ ಬಿಹಾರ ಮೂಲದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಗುಜರಾತ್ನ ಅಲಹಾಬಾದ್ನಲ್ಲಿ ವಾಸವಾಗಿದ್ದಳು. ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಆಕೆಗೆ ಲಾಕ್ಡೌನ್…
ನಗರದ ಇಸ್ಕಾನ್ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪ್ರತೀ ವರ್ಷ ಹಬ್ಬದಂತೆ ಆಚರಿಸುವ ಈ ದಿನವನ್ನ ಈ ಬಾರಿ ತುಂಬಾನೆ ವಿಶಿಷ್ಟವಾಗಿ ಆಚರಿಸಲಾಯಿತು. ಭಾರಿ ಮಳೆಯಿಂದಾಗಿ ದ್ವಾರಕವೇ ಮುಳುಗುತ್ತಿದ್ದಾಗ, ಶ್ರೀ ಕೃಷ್ಣ ತನ್ನ ಕಿರು ಬೆರಳಲ್ಲಿ ಗೋವರ್ಧನ ಬೆಟ್ಟವನ್ನ ಎತ್ತಿ ಹಿಡಿದು, ದ್ವಾರಕೆಯ ಜನರನ್ನ ರಕ್ಷಿಸುತ್ತಾನೆ. ಅಂದಿನಿಂದ ಈ ದಿನದಂದು ಗೋವರ್ಧನಗಿರಿ ಪೂಜೆ ಮಾಡಲಾಗುತ್ತೆ. ಇನ್ನು ಪ್ರತೀ ವರ್ಷ ಈ ದಿನವನ್ನ ಸಂಭ್ರಮದಿಂದ ನಗರದ ಇಸ್ಕಾನ್ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಮಾಡಲಾಗಿದ್ದು ಈ ಬಾರಿ ಬಹಳ ವಿಶಿಷ್ಟವಾಗಿ…