ಸುದ್ದಿ

BPL ಕಾರ್ಡ್ ಇದ್ದವರು ರೆಷೆನ್ ಬೇಕೆಂದರೆ ಜುಲೈ 31 ಒಳಗೆ ಈ ಕೆಲಸ ಮಾಡಬೇಕು…..!

272

ಪಡಿತರ ಸೋರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ, ಇದನ್ನು ತಡೆಯಲು ಆಹಾರ ನಾಗರಿಕ ಸರಬರಾಜು ಇಲಾಖೆ ಕ್ರಮ ಕೈಗೊಂಡಿದ್ದು ನೈಜ ಫಲಾನುಭವಿಗಳಿಗೆ ಮಾತ್ರ ಪಡಿತರ ವಿತರಿಸಲು ಮುಂದಾಗಿದೆ. ಹೀಗಾಗಿ ನೀವು ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದ್ದು ನಿಮಗೆ ಪಡಿತರ ಕೂಡ ಸಿಗುವುದಿಲ್ಲ.

ಹೌದು, ಜುಲೈ 31ರ ಒಳಗೆ ನೀವು ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಬೇಕು. ಒಂದು ವೇಳೆ ನೀವು ಇ-ಕೆವೈಸಿ ಮಾಡಿಸದಿದ್ದಲ್ಲಿ ನಿಮ್ಮ ಕಾರ್ಡ್ ರದ್ದಾಗಲಿದ್ದು, ಆಗಸ್ಟ್ ನಿಂದ ನಿಮಗೆ ರೇಷನ್ ಕೂಡ ಸಿಗುವುದಿಲ್ಲ.
ರೇಷನ್ ಕಾರ್ಡ್ ನಲ್ಲಿ ಹೆಸರು ಹೊಂದಿರುವ ಪ್ರತಿಯೊಬ್ಬರೂ ಜುಲೈ 31 ರೊಳಗೆ ಆಧಾರ್ ದೃಡೀಕರಣ ಮಾಡಿಸಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆದೇಶ ಹೊರಡಿಸಿದೆ.

ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರು ಇ-ಕೆವೈಸಿ ಮಾಡಿಸಲು ಯಾವುದೇ ರೀತಿಯ ಹಣ ಕೊಡಬೇಕಾಗಿಲ್ಲ. ಇದು ಸಂಪೂರ್ಣ ಉಚಿತವಾಗಿದ್ದು, ಪಡಿತರ ಪಡೆಯುವ ಎಲ್ಲಾ ನ್ಯಾಯಬೆಲೆ(ರೇಷನ್ ಶಾಪ್) ಅಂಗಡಿಗಳಲ್ಲಿ ಆಧಾರ್ ಧೃಡೀಕರಣ ಮಾಡಿಸಿಕೊಳ್ಳಬಹುದಾಗಿದೆ.

ಜುಲೈ 31ರ ಒಳಗೆ ರೇಷನ್ ಕಾರ್ಡ್ ನಲ್ಲಿ ಹೆಸರು ಹೊಂದಿರುವ ಕುಟುಂಬದ ಎಲ್ಲಾ ಸದಸ್ಯರು ನ್ಯಾಯಬೆಲೆ ಅಂಗಡಿಗೆ ಹೋಗಿ ಖಡ್ಡಾಯವಾಗಿ ಬಯೋಮೆಟ್ರಿಕ್ ನೀಡಬೇಕಿದೆ. ಬಯೋಮೆಟ್ರಿಕ್ ನೀಡಿದವರಿಗೆ ಮಾತ್ರ ರೇಷನ್ ಸಿಗಲಿದೆ ಎಂದು ಹೇಳಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ