ಸುದ್ದಿ

ಬಿಡುಗಡೆಯಾಯ್ತು BJP ಪಕ್ಷದ ಪ್ರಣಾಳಿಕೆ..ರೈತರಿಗೆ ಪಿಂಚಣಿ ಸೇರಿದಂತೆ ಪ್ರಣಾಳಿಕೆಯಲ್ಲಿ ಏನೆಲ್ಲಾ ಇದೆ ಗೊತ್ತಾ.?

95

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆ `ಸಂಕಲ್ಪ ಪತ್ರ’ ಬಿಡುಗಡೆ ಮಾಡಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಣಾಳಿಕೆ ಬಿಡುಗಡೆ ಮಾಡುವ ಮೊದಲು ಸರ್ಕಾರ ಐದು ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಜನರ ಮುಂದಿಟ್ಟರು. ಪ್ರಣಾಳಿಕೆಯಲ್ಲಿ ಬಿಜೆಪಿ ಎಲ್ಲ ವರ್ಗದ ಜನರನ್ನು ಖುಷಿಗೊಳಿಸುವ ಪ್ರಯತ್ನ ನಡೆಸಿದೆ.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೊತೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರುಗಳಾದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಂ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು. ಬಿಜೆಪಿ ಪ್ರಣಾಳಿಕೆಗೆ ಸಂಕಲ್ಪ ಭಾರತ್ ಸಶಕ್ತ ಭಾರತ್ ಎಂದು ಶೀರ್ಷಿಕೆ ನೀಡಿದೆ.

ಏಕರೂಪ ನಾಗರಿಕ ಸಂಹಿತೆ, ಅಕ್ರಮ ನುಸುಳುವಿಕೆಗೆ ತಡೆ, ಭಯೋತ್ಪಾದನೆ ವಿರುದ್ಧ ಶೂನ್ಯ ಸಹನೆ, ಪೌರತ್ವ ವಿಧೇಯಕ ಅಂಗೀಕಾರ, ಮಂದಿರ ನಿರ್ಮಾಣಕ್ಕೆ ಪ್ರಣಾಳಿಕೆಯಲ್ಲಿ ಒತ್ತು ನೀಡಲಾಗಿದೆ. ಕೃಷಿಕರ ಆದಾಯ ದ್ವಿಗುಣಗೊಳಿಸಲು ಕ್ರಮ, ಭೂ ದಾಖಲೆಗಳ ಡಿಜಿಟಲೀಕರಣ, ಗ್ರಾಮೀಣ ಅಭಿವೃದ್ಧಿಗೆ 25 ಲಕ್ಷ ಕೋಟಿ ರೂಪಾಯಿ ಯೋಜನೆ ಪ್ರಣಾಳಿಕೆಯಲ್ಲಿದೆ.

ಮಹತ್ವದ ವಿಷ್ಯವೆಂದ್ರೆ ಪ್ರಣಾಳಿಕೆಯಲ್ಲಿ ಎಲ್ಲ ವರ್ಗದವರನ್ನು ಖುಷಿಪಡಿಸುವ ಪ್ರಯತ್ನ ನಡೆದಿದೆ. ಜೊತೆಗೆ ರೈತರಿಗೆ ಹೆಚ್ಚು ಒತ್ತು ನೀಡಲಾಗಿದೆ. ಎಲ್ಲ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 60 ವರ್ಷದ ಬಳಿಕ ಪಿಂಚಣಿ ಯೋಜನೆ ಖಾತ್ರಿಪಡಿಸುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದೆ. ಕಿಸಾನ್ ಸಮ್ಮಾನ ನಿಧಿ ಯೋಜನೆಯನ್ನು ಬೇಧವಿಲ್ಲದೆ ದೇಶದ ಎಲ್ಲ ರೈತರಿಗೂ ಜಾರಿಗೊಳಿಸುವುದಾಗಿ ಬಿಜೆಪಿ ಹೇಳಿದೆ.  ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಿಜೆಪಿ ಬದ್ಧವಾಗಿದೆ. ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ರಾಮ ಮಂದಿರ ನಿರ್ಮಾಣದ ಎಲ್ಲ ಸಾಧ್ಯತೆಗಳಿಗೆ ಒತ್ತು ನೀಡುತ್ತೇವೆ. ಆದಷ್ಟು ಬೇಗ ಶಾಂತ ವಾತಾವರಣದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಒತ್ತು. ಕಿಸಾನ್ ಕಾರ್ಡ್ ನಲ್ಲಿ ಸಿಗುವ 1 ಲಕ್ಷದವರೆಗಿನ ಸಾಲ ಐದು ವರ್ಷಗಳವರೆಗೆ ಬಡ್ಡಿ ರಹಿತವಾಗಲಿದೆ. ಭಾರತದಪ್ರಾದೇಶಿಕ ಅಸಮತೋಲನವನ್ನು ಸಂಪೂರ್ಣವಾಗಿ ನಿವಾರಿಸುತ್ತೇವೆ.

2020 ರ ಹೊತ್ತಿಗೆ ದೇಶದ ಎಲ್ಲಾ ರೈಲ್ವೆ ಟ್ರ್ಯಾಕ್ ಗಳಲ್ಲಿ  ವಿದ್ಯುದೀಕರಣ ಪೂರ್ಣಗೊಳ್ಳಲಿದೆ. ರಫ್ತುಗಳನ್ನು ದ್ವಿಗುಣಗೊಳಿಸಲು ಕ್ರಮ. ಪ್ರತಿ ವ್ಯಕ್ತಿಗೆ 5 ಕಿಲೋಮೀಟರ್ ಒಳಗೆ ಬ್ಯಾಂಕ್ ಸೌಲಭ್ಯ ನೀಡಲು ಪ್ರಯತ್ನ, ತ್ರಿವಳಿ ತಲಾಕ್ ವಿರುದ್ಧ ಕಾನೂನು ರಚಿಸಿ ಮುಸ್ಲಿಂ ಮಹಿಳೆಯರಿಗೆ ನ್ಯಾಯ ನೀಡುವ ಯತ್ನ ನಡೆಸುತ್ತೇವೆಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

About the author / 

admin

Categories

Date wise

  • ರಾಜ್ಯದಲ್ಲಿ ಟಫ್ ರೂಲ್ಸ್ ಮತ್ತೆ ಜಾರಿ

    ರಾಜ್ಯ ಸರ್ಕಾರವು ಇಂದಿನಿಂದ ನೈಟ್ ಕರ್ಫ್ಯೂ & ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ.ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಮುಂದಿನ 2ವಾರಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.ವಾರಾಂತ್ಯದ ಕರ್ಫ್ಯೂವನ್ನು ದಿನಾಂಕ 7ರಿಂದ ಶುಕ್ರವಾರ ರಾತ್ರಿ 10 ಗಂಟೆಯಿಂದ 10 ರ ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿ ಮಾಡಲಾಗಿದೆ   ಸರ್ಕಾರಿ ಕಚೇರಿಗಳು ಮಾಲ್​ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. * ಚಿತ್ರಮಂದಿರ, ಮಾಲ್,…

     220,333 total views,  1,581 views today

ಏನ್ ಸಮಾಚಾರ