ಸುದ್ದಿ

ಹುಟ್ಟುತ್ತಲೇ ದಾಖಲೆಯನ್ನ ನಿರ್ಮಿಸಿದ ಪುಟ್ಟ ಮಗು, ಮಗುವನ್ನ ನೋಡಿ ಶಾಕ್.

45

ಸ್ನೇಹಿತರೆ ಪ್ರಪಂಚದಲ್ಲಿ ಅನೇಕ ಅದ್ಭುತಗಳು ನಡೆಯುತ್ತಲೇ ಇರುತ್ತದೆ, ಇನ್ನು ಕೆಲವು ಅದ್ಬುತಗಳನ್ನ ಮನುಷ್ಯ ಸೃಷ್ಟಿ ಮಾಡಿದರೆ ಇನ್ನು ಕೆಲವು ಅದ್ಬುತಗಳನ್ನ ದೇವರು ಸೃಷ್ಟಿ ಮಾಡುತ್ತಾನೆ. ತುಂಬಾ ಕತ್ತಲು ಮತ್ತು ಏನೇನೋ ಶಬ್ದಗಳ ನಡುವೆ ಒಂದು ಮಗು ತಾಯಿಯ ಹೊಟ್ಟೆಯಲ್ಲಿ 9 ತಿಂಗಳುಗಳ ಕಾಲ ಇದ್ದು ಆಚೆ ಬರುತ್ತದೆ, ಸ್ನೇಹಿತರೆ ಈಗ ತಾನೇ ಹುಟ್ಟಿದ ಮಗು ಏನು ದಾಖಲೆಯನ್ನ ಮಾಡಲು ಸಾಧ್ಯ ನೀವೇ ಹೇಳಿ, ಆದರೆ ನಾವು ಹೇಳುವ ಈ ಮಗು ಹುಟ್ಟುವಾಗಲೇ ದೊಡ್ಡ ದಾಖಲೆಯನ್ನ ಮಾಡಿದ್ದು ವೈದ್ಯಲೋಕಕ್ಕೆ ಶಾಕ್ ಕೊಟ್ಟಿದೆ. ಹಾಗಾದರೆ ಆ ಪುಟ್ಟ ಮಗುವ ಹುಟ್ಟುವಾಗ ಮಾಡಿದ ಸಾಧನೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಗುವಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಸ್ನೇಹಿತರೆ ಒಂದು ಸಾಮಾನ್ಯ ಮಗು ಹುಟ್ಟುವಾಗ ಆ ಮಗುವಿನ ಸಾಮಾನ್ಯವಾಗಿ ತೂಕ 7.5 ಫೌಂಡ್ ಅಂದರೆ 3.5 ಕೆಜಿ ತೂಕ ಇರುತ್ತದೆ, ಆದರೆ ಸ್ನೇಹಿತರೆ ಒಮ್ಮೊಮ್ಮೆ ಸೃಷ್ಟಿಯ ಮಹಿಮೆನೋ ಅಥವಾ ದೇವರ ಮಹಿಮೆನೋ ಅನಿಸುತ್ತದೆ ಮಕ್ಕಳು ಬಹಳ ವಿಶೇಷವಾಗಿ ಜನಿಸುತ್ತಾರೆ. ಸ್ನೇಹಿತರೆ ಇದು ದೇವರ ಮಹಿಮೆ ಅನಿಸುತ್ತದೆ, ಹೌದು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಸಾಮಾನ್ಯ ಮಕ್ಕಳಿಗಿಂತ ಹೆಚ್ಚಿನ ತೂಕವನ್ನ ಹೊಂದಿರುವ ಮಗು ಜನಿಸಿದ್ದು ನೋಡುಗರ ಗಮನವನ್ನ ತನ್ನತ್ತ ಸೆಳೆದಿದೆ. ಹಾಸನದ ಒಂದು ಮಗು ಬಿಟ್ಟರೆ ಕರ್ನಾಟಕದಲ್ಲಿ ಹೆಚ್ಚು ತೂಕವನ್ನ ಹೊಂದಿರುವ ಮಗು ಇದಾಗಿದೆ ಮತ್ತು ಈ ಮಗು ಹುಟ್ಟುವಾಗ 5.9 ಕೆಜಿ ತೂಕ ಇದೆ ವೈದ್ಯರು ಹೇಳಿದ್ದಾರೆ.

ಇನ್ನು ಮಗು ಭೀಮಬಲದ ಮಗು ಅನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ, ಯೋಗೇಶ್ ಮತ್ತು ಸರಸ್ವತಿ ದಂಪತಿಗಳು ಮೂಲಕತಃ ದರ್ಜಿಲಿನ್ ನಗರದವರಾಗಿದ್ದು ಬೆಂಗಳೂರಿನ ಯಲಹಂಕದಲ್ಲಿ ಕಳೆದ ಸುಮಾರು 16 ವರ್ಷಗಳಿಂದ ವಾಸವಾಗಿದ್ದಾರೆ, ಇನ್ನು ಈ ದಂಪತಿಗೆ ಈಗಾಗಲೇ 14 ವರ್ಷದ ಒಂದು ಮಗು ಇದ್ದು ಈಗ ಎರಡನೆಯ ಮಗು ಜನವರಿ 18 ನೇ ತಾರೀಕಿನಂದು ಜನಿಸಿದ್ದು ಸುಮಾರು 6 ಕೆಜಿ ತೂಕವನ್ನ ಹೊಂದಿದ್ದು ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಈ ಹಿಂದೆ ಹಾಸನದಲ್ಲಿ ಹುಟ್ಟಿದ ಒಂದು ಮಗು 7.25 ಕೆಜಿ ತೂಕವನ್ನ ಹೊಂದಿದ್ದು ಭಾರತದ ಮೊದಲ ಬಿಗ್ ಬೇಬಿ ಎಂದು ದಾಖಲೆಯನ್ನ ಮಾಡಿತ್ತು, ಇನ್ನು ಈ ಮಗು ಈಗ ಎರಡನೆಯ ಬಿಗ್ ಬೇಬಿ ಅನ್ನುವ ದಾಖಲೆಗೆ ಸಾಕ್ಷಿಯಾಗಿದೆ.

ಇನ್ನು ವಿಶ್ವದಲ್ಲಿ ಆಗತಾನೆ ಹುಟ್ಟಿದ ಮಗುವಿನ ತೂಕ 10.2 ಕೆಜಿ ತೂಕ ಇರುವುದು ಗಿನ್ನಿಸ್ ದಾಖಲೆಯಾಗಿದೆ, ಒಂದು ಸಾಮಾನ್ಯ ಮಗುವಿನ ತೂಕ 2.5 ಕೆಜಿ ತೂಕದಿಂದ 4.5 ಕೆಜಿ ತೂಕದ ವರೆಗೆ ಇರುತ್ತದೆ ಮತ್ತು ಹೆಣ್ಣು ಶಿಶುವಿಗೆ ಹೋಲಿಕೆ ಮಾಡಿದರೆ ಗಂಡು ಶಶುವಿನ ತೂಕ ಕೊಂಚ ಜಾಸ್ತಿ ಇರುತ್ತದೆ, ಇನ್ನು ಇಂತಹ ಮಕ್ಕಳು ಹುಟ್ಟುವುದು ಬಹಳ ಅಪರೂಪ ಎಂದು ಹೇಳುತ್ತಿದ್ದಾರೆ ವೈದ್ಯರು. ತಾಯಿ ಮಗುವನ್ನ ಎಲ್ಲಾ ಪರೀಕ್ಷೆಗೆ ಒಳಪಡಿಸಿದ ವೈದ್ಯರು ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ದೃಢಪಡಿಸಿದ್ದಾರೆ, ಸ್ನೇಹಿತರೆ ಈ ಮಗುವಿನ ತೂಕದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

About the author / 

Basavaraj Gowda

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ