ಸೌಂದರ್ಯ

ತರಕಾರಿ,ಹಣ್ಣು ಸಿಪ್ಪೆ ಬಿಸಾಡಬೇಡಿ – ಇದರಿಂದಾಗುವ ಉಪಯೋಗಗಳು…..

64

ತರಕಾರಿ ಅಥವಾ ಹಣ್ಣುಗಳ ಸಿಪ್ಪೆಗಳಿಂದ ಹಲವಾರು ಪ್ರಯೋಜನಗಳಿವೆ. ಇವುಗಳನ್ನು ಬಿಸಾಡುವ ಬದಲು ಅವುಗಳಿಂದ ಲಾಭಗಳನ್ನು ಪಡೆದುಕೊಳ್ಳಿ. ಯಾವ ಸಿಪ್ಪೆಯಲ್ಲಿ ಏನು ಲಾಭ ಎಂಬುದರ ವಿವರ ಇಲ್ಲಿದೆ.
ನಿಂಬೆ ಸಿಪ್ಪೆ : ಹಳದಿ ಬಣ್ಣದ ಈ ಸಿಪ್ಪೆಯಲ್ಲಿ ನಾರು, ವಿಟಮಿನ್‌ ಸಿ, ಬಿ6, ಕ್ಯಾಲ್ಷಿಯಂ, ಐರನ್‌ ಮತ್ತು ಮೆಗ್ನೀಷಿಯಂಗಳಿವೆ. ಇವುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನಿಂಬೆ ಸಿಪ್ಪೆಯ ರುಚಿ ನಾಲಿಗೆಯ ರುಚಿ ಹೆಚ್ಚುವಂತೆ ಮಾಡುತ್ತದೆ.

ಕಲ್ಲಂಗಡಿ ಸಿಪ್ಪೆ : ಇದರ ಹಸಿರು ಸಿಪ್ಪೆಯಲ್ಲಿರುವ ಸಿಟ್ರಲ್ಲೈನ್‌ ಎಂಬ ಅಮಿನೊ ಆ್ಯಸಿಡ್‌ ರಕ್ತದ ಪರಿಚಲನೆಯನ್ನು ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಸ್ನಾಯುಗಳ ದಣಿವನ್ನು ಕಡಿಮೆಗೊಳಿಸುತ್ತದೆ. ಕಲ್ಲಂಗಡಿ ಸಿಪ್ಪೆಯಲ್ಲಿ ವಿಟಮಿನ್‌ ಸಿ ಮತ್ತು ಬಿ6 ಕೂಡಾ ಇವೆ.
ಕಿವಿ ಸಿಪ್ಪೆ : ಕಂದು ಬಣ್ಣದ ಈ ಸಿಪ್ಪೆ ನಿಂಬೆ ಸಿಪ್ಪೆಯಷ್ಟು ಒಳ್ಳೆಯದು. ವಿಟಮಿನ್‌ ಸಿ, ನಾರು ಹೆಚ್ಚಿರುವ ಈ ಸಿಪ್ಪೆ ಚರ್ಮದ ಆರೋಗ್ಯಕ್ಕೆ ಉತ್ತಮ.

ಈರುಳ್ಳಿ ಸಿಪ್ಪೆ : ಕೆಂಪು, ಹಳದಿ, ಬಿಳಿ ಈರುಳ್ಳಿಯ ಸಿಪ್ಪೆಯಲ್ಲಿ ಕ್ವೆರ್ಸಿಟಿನ್‌ ಎಂಬ ಫ್ಲೆವನಾಯ್ಡ್‌ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಉರಿಯನ್ನು ಕಡಿಮೆ ಮಾಡಿ ರಕ್ತದೊತ್ತಡ ನಿಯಂತ್ರಿಸುತ್ತದೆ. ಹೃದಯದ ಆರೋಗ್ಯಕ್ಕೂ ಈರುಳ್ಳಿ ಸಿಪ್ಪೆ ಬೆಸ್ಟ್‌.

ಬಾಳೆಹಣ್ಣು ಸಿಪ್ಪೆ : ಈ ಸಿಪ್ಪೆಯಲ್ಲಿ ಟ್ರೈಪ್ಟೊಫನ್‌ ಇದ್ದು, ಇದು ಸೆರೊಟನಿನ್‌ ಎಂಬ ಹ್ಯಾಪಿನೆಸ್‌ ಹಾರ್ಮೋನ್‌ ಉತ್ಪಾದನೆ ಮಾಡುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜೈ ಶ್ರೀ ರಾಮ
    ದೇವರು-ಧರ್ಮ

    ಇಂದು ಶ್ರೀರಾಮ ನವಮಿ…ಮಾಡಬೇಕಾಗಿರುವ ಪೂಜಾ ವಿಧಾನದ ಬಗ್ಗೆ ತಿಳಿದುಕೊಳ್ಳಿ…ಎಲ್ಲರಿಗೂ ಶೇರ್ ಮಾಡಿ…

    ಪ್ರತಿವರ್ಷ ಚೈತ್ರ ಮಾಸದ ಶುಧ್ಧ ನವಮಿಯಂದು ಶ್ರೀರಾಮ ನವಮಿ ಮಾಡುತ್ತೇವೆ. ಆದರೆ ಶ್ರೀರಾಮನವಮಿ ಎಂಬುದು ಯಾಕೆ ಬಂದಿದೆ ಎಂದರೆ, ಇದೇ ನವಮಿಯಂದು ಶ್ರೀ ರಾಮಚಂದ್ರ ಹುಟ್ಟಿದ್ದು, ಇದೇ ನವಮಿಯಂದು ಸೀತಾ ಮಾತೆಯನ್ನು ಮದುವೆ ಮಾಡಿಕೊಂಡು ಸೀತರಾಮನಾದ. ಹಾಗೆಯೇ 14 ವರ್ಷಗಳ ವನವಾಸದ ನಂತರ ಸೀತಾದೇವಿಯನ್ನು ರಾವಣನನಿಂದ ಬಿಡಿಸಿ ಅದೇ ದಿನ ಅಯೋಧ್ಯೆ ಮಹಾರಾಜನಾಗಿ ಶ್ರೀರಾಮನು ಪಟ್ಟಾಭಿಷೇಕ ಆದ ದಿನ. ಹಾಗಾಗಿ ಅದೇ ನವಮಿಯ ದಿನ ರಾಮನ ಜನ್ಮದಿನದ ಜೊತೆಗೆ ಸೀತಾರಾಮ ಕಲ್ಯಾಣ ಮಹೋತ್ಸವ ನೋಡಿದರೆ ಜನ್ಮಜನ್ಮದ ಪುಣ್ಯ…

  • ಸಿನಿಮಾ

    ಸ್ಟಾರ್ ನಟ ನಟಿಯ ಕಿಸ್ಸಿಂಗ್ ಫೋಟೋ ಬಯಲು ಮಾಡಿ ಬಿರುಗಾಳಿ ಎಬ್ಬಿಸಿದ ನಟಿ!

    ಚಿತ್ರರಂಗದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ವಿರುದ್ಧ ಧ್ವನಿ ಎತ್ತಿ ಹಲವಾರು ಖ್ಯಾತ ನಟರ ವಿರುದ್ಧ ಗಂಭೀರ ಆರೋಪ ಮಾಡಿದ್ದ ನಟಿ ಶ್ರೀರೆಡ್ಡಿ ಮತ್ತೊಮ್ಮೆ ಬಿರುಗಾಳಿ ಎಬ್ಬಿಸಿದ್ದಾರೆ. ಸಾಕ್ಷಿ ಸಮೇತವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡಿರುವ ಶ್ರೀ ರೆಡ್ಡಿ ಹಲ್ ಚಲ್ ಸೃಷ್ಟಿಸಿದ್ದಾರೆ. ‘ಬಾಹುಬಲಿ’ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಮತ್ತು ಬಹುಭಾಷಾ ನಟಿ ತ್ರಿಶಾ ಅವರು ಪರಸ್ಪರ ಚುಂಬಿಸುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ಅದರೊಂದಿಗೆ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್ ದಗ್ಗುಬಾಟಿ ತಮ್ಮನ್ನು…

  • ಆರೋಗ್ಯ, ಉಪಯುಕ್ತ ಮಾಹಿತಿ

    ಪ್ರತೀ ದಿನ ಒಂದು ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

    ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಫಿಟ್ನೆಸ್ ಗೆ ಮಹತ್ವ ನೀಡ್ತಾರೆ. ಆರೋಗ್ಯವಾಗಿರಲು ಪ್ರಯತ್ನಿಸ್ತಾರೆ. ಆದ್ರೆ ಸಮಯದ ಅಭಾವ ಹಾಗೂ ಕೆಲಸದ ಒತ್ತಡದಿಂದಾಗಿ ಪ್ರತಿದಿನ ವ್ಯಾಯಾಮ, ಆಹಾರ ಪದ್ಧತಿಯನ್ನು ಅನುಸರಿಸುವುದು ಕಷ್ಟ. ದೇಹ ಫಿಟ್ ಆಗಿರಲು ಅನೇಕರು ಹಣ್ಣುಗಳನ್ನು ತಿನ್ನುತ್ತಾರೆ. ಇದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಹಿಳೆಯರಿಗೆ ತಮ್ಮ ಆರೋಗ್ಯದ ಬಗ್ಗೆ ಗಮನ ನೀಡಲು ಸಮಯ ಸಿಗುವುದಿಲ್ಲ. ಕೆಲಸ, ಮಕ್ಕಳು, ಅಡುಗೆಯಲ್ಲಿ ಬ್ಯುಸಿಯಾಗಿರುವ ಅವರು ಆರೋಗ್ಯದ ಬಗ್ಗೆ ಲಕ್ಷ್ಯ ನೀಡುವುದಿಲ್ಲ. ಇಂತ ಮಹಿಳೆಯರು ದಿನಕ್ಕೊಂದರಂತೆ ಬಾಳೆ ಹಣ್ಣು ತಿಂದರೆ…

  • ಹಣ

    ಸ್ಲಮ್ ಮಕ್ಕಳಿಗೆ ಆದ ಅವಮಾನ…! ತಿಳಿಯಲು ಈ ಲೇಖನ ಓದಿ…

    ಮೆರಿನಾ ಗಾರ್ಡನ್‌ ದಕ್ಷಿಣ ಮುಂಬಯಿಯ ಶ್ರೀಮಂತರ ದುರಹಂಕಾರದ ವರ್ತನೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರತಿಷ್ಠಿತ ಗಾರ್ಡನ್‌ಗೆ ಸ್ಲಮ್‌ ಮಕ್ಕಳು ಆಡಲು ಬರಬಾರದೆಂದು ಕಫ್ ಪರೇಡ್ ಪ್ರದೇಶದ ನಿವಾಸಿಗಳು ಪೊಲೀಸ್‌ ಕಂಪ್ಲೇಂಟ್‌ ಮಾಡಿರುವ ಅಮಾನವೀಯ ಘಟನೆ ನಡೆದಿದೆ.