ಸುದ್ದಿ

ಬಾದಾಮಿಗೂ ಹೊಟ್ಟೆ ಉಬ್ಬರಕ್ಕೂ ಸಂಬಂಧವಿದೆಯೇ …..?

48

ಸಾಮಾನ್ಯವಾಗಿ ಮನುಷ್ಯನ ದೇಹಕ್ಕೆ ಎಂದಾದರೂ ಪೋಷಕಾಂಷಕಾಂಶಗಳ ಕೊರತೆ ಕಂಡು ಬಂದರೆ ವೈದ್ಯರು ಥಟ್ಟನೆ ಸೂಚಿಸುವುದು ಡ್ರೈ ಫ್ರೂಟ್ಸ್ ಬಳಸಲು . ಏಕೆಂದರೆ ಅವುಗಳಲ್ಲಿರುವಷ್ಟು ಒಟ್ಟು ಪೌಷ್ಟಿಕಾಂಶಗಳು ಬೇರೆಲ್ಲೂ ಅಷ್ಟು ಸುಲಭವಾಗಿ ಸಿಗುವುದಿಲ್ಲ . ಒಣ ದ್ರಾಕ್ಷಿ , ಖರ್ಜೂರ , ಗೋಡಂಬಿ ಮತ್ತು ಬಾದಾಮಿ ಹೀಗೆ . ಒಂದಕ್ಕಿಂತ ಒಂದು ಹೆಚ್ಚು . ಅದರಲ್ಲೂ ಬಾದಾಮಿ ಯಲ್ಲಿ ನ್ಯೂಟ್ರಿಯೆಂಟ್ ಗಳ ಜೊತೆಗೆ ಮೆಗ್ನೀಷಿಯಂ , ವಿಟಮಿನ್ ‘ ಈ ‘ ಮತ್ತು ಫೈಬರ್ ನ ಅಂಶ ಅಗಾಧವಾಗಿದೆ . ಇದು ಆಂಟಿ ಆಕ್ಸಿಡಾಂಟ್ ಆಗಿ ಕೂಡ ಕೆಲಸ ಮಾಡುತ್ತದೆ . ಬಾದಾಮಿ ಜೀರ್ಣ ಕ್ರಿಯೆಯಲ್ಲಿ ಬಹಳ ಸಹಾಯ ಮಾಡುತ್ತದೆ . ಆದರೆ ಇದರಲ್ಲಿ ಅಡಗಿರುವ ಹೆಚ್ಚು ಪ್ರೋಟೀನ್ ಅಂಶ ಹೊಟ್ಟೆಯಲ್ಲಿ ಸ್ವಲ್ಪ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡಿ ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ .

ಕೆಲವರಿಗೆ ಬಾದಾಮಿ ಎಂದರೆ ಸಾಕು ಒಂದು ತರ ಅಲರ್ಜಿ . ಅಂತಹವರು ಬಾದಾಮಿಯಿಂದ ಸ್ವಲ್ಪ ದೂರವೇ ಉಳಿಯುವುದು ಒಳ್ಳೆಯದು . ಆದರೆ ಬಾದಾಮಿ ತಿನ್ನದೇ ಇರುವಾಗ ಕೂಡ ಅತಿಯಾದ ಗ್ಯಾಸ್ಟ್ರಿಕ್ ಆದಂತೆ ಕಂಡು ಬಂದು ಹೊಟ್ಟೆ ಉಬ್ಬರದ ಅನುಭವವಾದರೆ ಅದಕ್ಕೆ ಬೇರೆಯದೇ ಕಾರಣವಿದ್ದು ಜೀರ್ಣಾಂಗದಲ್ಲಿ ಸಮಸ್ಯೆ ಇದೆ ಎಂದೇ ಅರ್ಥ . ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಫೈಬರ್ ಅಂಶದಿಂದ ಉಂಟಾಗುವ ಸಮಸ್ಯೆ ಹಾರ್ವಾರ್ಡ್ ಸ್ಕೂಲ್ ಓಫ್ ಪಬ್ಲಿಕ್ ಹೆಲ್ತ್ ನ ಪ್ರಕಾರ ಮಕ್ಕಳಿಂದ ಹಿಡಿದು ದೊಡ್ಡವರೂ ಕೂಡ ದಿನ ನಿತ್ಯ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಸುಮಾರು 20 ರಿಂದ 30 ಗ್ರಾಂ ನಷ್ಟು ಫೈಬರ್ ಯುಕ್ತ ಆಹಾರವನ್ನು ಸೇವಿಸಬೇಕು . ಇದರಿಂದ ಮಲಬದ್ಧತೆ ನಿವಾರಣೆ ಆಗುತ್ತದೆ . ಒಂದು ಕಪ್ ಬಾದಾಮಿಯಲ್ಲಿ ಸುಮಾರು 18 ಗ್ರಾಂ ನಷ್ಟು ಫೈಬರ್ ಅಂಶ ಇರುತ್ತದೆ . ಪ್ರತಿದಿನ ಇದನ್ನು ಸೇವಿಸುತ್ತಾ ಬಂದಿದ್ದೇ ಆದರೆ ಬೇರೆ ಯಾವ ಫೈಬರ್ ಅಂಶವಿರುವ ಆಹಾರದ ಮೊರೆ ಹೋಗುವ ಅವಶ್ಯಕತೆ ಇರುವುದಿಲ್ಲ. ಆದರೆ ಮೊದಲೇ ಹೇಳಿದಂತೆ ಇಷ್ಟು ಪ್ರಮಾಣದ ಬಾದಾಮಿ ಒಮ್ಮೆಲೇ ತಿಂದರೆ ಗ್ಯಾಸ್ಟ್ರಿಕ್ ಆಗುವ ಸಮಸ್ಯೆ ಸ್ವಲ್ಪ ಹೆಚ್ಚಿಗೆ ಇರುತ್ತದೆ . ಇದಕ್ಕೆ ಅಂಟಿಕೊಂಡಂತೆ ಹೊಟ್ಟೆ ಉಬ್ಬರ ಮತ್ತು ಹೊಟ್ಟೆ ಹಿಡಿದುಕೊಂಡಂತೆ ಕೂಡ ಆಗಬಹುದು . ಮೊದಲಿನಿಂದಲೂ ಅಭ್ಯಾಸವಿಲ್ಲದವರು ಈ ರೀತಿ ಫೈಬರ್ ಅಂಶವನ್ನು ಒಮ್ಮೆಲೇ ತಿಂದರೆ ಈ ಪಜೀತಿಯಾದೀತು ಜೋಕೆ !!! ನಿಧಾನವಾಗಿ ಬೇಕಾದರೆ ಅಭ್ಯಾಸ ಮಾಡಿಕೊಳ್ಳಬಹುದು.

ಮೇಲಿನ ಸಮಸ್ಯೆಗಳಿಗೆ ಪರಿಹಾರಗಳೇನಾದರೂ ಇದೆಯೇ? ಸೌಮ್ಯ ರೀತಿಯ ಹೊಟ್ಟೆ ಉಬ್ಬರಕ್ಕೆ ಪರಿಹಾರ ಎಂದರೆ ನಿಧಾನವಾಗಿ ನೀವು ತಿನ್ನುವ ಬಾದಾಮಿಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದು . ಇನ್ನು ಬಾದಾಮಿ ತಿಂದು ಅಭ್ಯಾಸವೇ ಇಲ್ಲ ಎನ್ನುವವರಿಗೆ ನಿಧಾನವಾಗಿ ಬಾದಾಮಿಯನ್ನು ತಮ್ಮ ಉಪಹಾರದ ಜೊತೆಗೆ ಸೇರಿಸಿ ತಿಂದು ಅದಕ್ಕೆ ಅಡ್ಜಸ್ಟ್ ಆಗುವುದು . ಇದು ಕೆಲವು ವಾರಗಳೇ ಹಿಡಿಯಬಹುದು ಮತ್ತು ಇದರಿಂದ ನಿಧಾನವಾಗಿ ನಿಮ್ಮ ಹೊಟ್ಟೆ ಉಬ್ಬರ ಸಮಸ್ಯೆ ಕಡಿಮೆ ಆಗುತ್ತಾ ಬರುತ್ತದೆ . “ಸಿಮೆಥಿಕೋನ್” ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಂಡರೆ ಕರುಳಿನಲ್ಲಿ ಅಡಗಿರುವ ಗ್ಯಾಸ್ ಅನ್ನೂ ಹೊರ ಹಾಕಬಹುದು . ಇದರಿಂದಲೂ ಹೊಟ್ಟೆ ಉಬ್ಬರ ಕಡಿಮೆ ಆಗುತ್ತದೆ. ಆದರೆ ನಮ್ಮದೊಂದು ಸಲಹೆ ಏನೆಂದರೆ , ಹೊಟ್ಟೆ ಉಬ್ಬರ ಮತ್ತು ಹೊಟ್ಟೆಗೆ ಸಂಬಂಧ ಪಟ್ಟಂತೆ ಅಜೀರ್ಣದ ಸಮಸ್ಯೆಯಿಂದ ಧೀರ್ಘ ಕಾಲದಿಂದ ಬಳಲುತ್ತಿದ್ದರೆ , ದಯವಿಟ್ಟು ಕಡೆಗಣಿಸಬೇಡಿ . ಆದಷ್ಟು ಬೇಗನೆ ವೈದ್ಯರನ್ನು ಕಂಡು ಅವರಿಂದ ರೋಗ ಲಕ್ಷಣಗಳನ್ನು ಪತ್ತೆ ಹಚ್ಚಿಸಿ ಚಿಕಿತ್ಸೆ ಪಡೆದುಕೊಳ್ಳಿ .

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ