ಸಿನಿಮಾ

ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೀರ್ತಿ ತಂದ ನಟ ಅರುಣ್ ಸಾಗರ್ ಪುತ್ರ..

207

ಸಾಮಾನ್ಯವಾಗಿ ನಟರ ಮಕ್ಕಳು ತಂದೆಯಂತೆಯೇ ಸಿನಿಮಾ ಕ್ಷೇತ್ರದ ಮೇಲೆ ಹೆಚ್ಚಿನ ಆಶಕ್ತಿ ಹೊಂದಿರುತ್ತಾರೆ. ಆದರೆ ನಟ ಅರುಣ್ ಸಾಗರ್ ಪುತ್ರ ಸಿನಿಮಾ ಬಿಟ್ಟು ಕ್ರೀಡಾ ವಿಭಾಗದಲ್ಲಿ ಆಶಕ್ತಿ ಹೊಂದಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ವಿದೇಶಿ ಕ್ರೀಡೆ ಮಾಕ್ಸ್ ಮೌಥಾಯ್‍ಯಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಹೌದು, ಅಂತರಾಷ್ಟ್ರೀಯ ಮಟ್ಟದ ಮಾಕ್ಸ್ ಮೌಥಾಯ್ ಸ್ಪರ್ಧೆ ಥಾಯ್ಲಂಡ್‍ನ ಪಟಾಯಲ್ಲಿ ನಡೆದಿತ್ತು. ಇದರಲ್ಲಿ ವಿವಿಧ ದೇಶಗಳು ಭಾಗಿಯಾಗಿದ್ದವು. ಇದೇ ರೀತಿ ಈ ಸ್ಪರ್ಧೆಯಲ್ಲಿ ಅರುಣ್ ಪುತ್ರ ಸೂರ್ಯ ಭಾರತದಿಂದ ಸ್ಪರ್ಧೆ ಮಾಡಿದ್ದರು.

ಸ್ಪರ್ಧೆಯಲ್ಲಿ ಥಾಯ್ ಫೈಟರ್ ಅರ್ಪಿಂಗ್ ಚಿತಾಂಗ್ ವಿರುದ್ಧ ಸೂರ್ಯ ಗೆಲುವು ಸಾಧಿಸಿದ್ದರು. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಮಾಕ್ಸ್ ಮೌಥಾಯ್ ಸ್ಪರ್ಧೆಯಲ್ಲಿ ಭಾರತಕ್ಕೆ ಗೆಲುವು ಸಿಕ್ಕಿದೆ.

ಸೂರ್ಯ ಮೌಥಾಯ್ ನಲ್ಲಿ ಮೂರು ವರ್ಷಗಳಿಂದ ಮೈಸೂರಿನ ವಿಕ್ರಮ್ ನಾಗರಾಜ್ ಬಳಿ ತರಬೇತಿ ಪಡೆಯುತ್ತಿದ್ದಾರೆ. ಈಗ ಥಾಯ್ಲಂಡ್ ನಲ್ಲಿ ನಡೆದ ಸ್ಪರ್ಧೆ ಗೆದ್ದಿರುವ ಸೂರ್ಯನಿಗೆ ಒಲಂಪಿಕ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆಯಿದೆಯಂತೆ. ಹೀಗಾಗಿ ಸೂರ್ಯ ಈಗಿನಿಂದಲೇ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ತಂದೆ ಅರುಣ್ ಅವರು ಮಾತನಾಡಿ, “ಮಕ್ಕಳು ಯಾವುದರಲ್ಲಿ ಆಶಕ್ತಿ ಹೊಂದಿರುತ್ತಾರೋ ಅದಕ್ಕೆ ನಾವು ಸಪೋರ್ಟ್ ಮಾಡಬೇಕು. ಅದೇ ರೀತಿ ನನ್ನ ಮಗ ಸೂರ್ಯ ಮೌಥಾಯ್ ನಲ್ಲಿ ತರಬೇತಿ ಪಡೆಯುತ್ತೇನೆ ಎಂದಾಗ ತುಂಬಾ ಖುಷಿಯಾಗಿತ್ತು. ಇದೀಗ ಈಗ ಅವನು ಭಾರತವೇ ಹೆಮ್ಮೆ ಪಡುವಂಥ ಕೆಲಸ ಮಾಡಿದ್ದಾನೆ” ಎಂದು ಪುತ್ರನ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರಿಯಲ್ ಸ್ಟಾರ್ ಉಪ್ಪಿ ಅಭಿಮಾನಿಗಳಿಗೊಂದು ಸಂತಸದ ಸುದ್ದಿ…!

    ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಿರ್ದೇಶಕ ಆರ್. ಚಂದ್ರು ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ‘ಐ ಲವ್ ಯು’ ಭರ್ಜರಿ ಯಶಸ್ಸು ಕಂಡಿದೆ. ಈ ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರ ಮೂಡಿಬರಲಿದೆ. ಈ ಹಿಂದೆ ಉಪೇಂದ್ರ ಅಭಿನಯದ ಆರ್. ಚಂದ್ರು ನಿರ್ದೇಶನದ ಬ್ರಹ್ಮ, ನಂತರ ‘ಐ ಲವ್ ಯು’ ಯಶಸ್ಸು ಕಂಡಿದ್ದು, ಮುಂದಿನ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ. ಅಂದ ಹಾಗೆ, ಈ ಹೊಸ ಚಿತ್ರ ಭೂಗತ ಜಗತ್ತಿನ ಕಥಾಹಂದರವನ್ನು ಹೊಂದಿದ್ದು, ಘಟಾನುಘಟಿ ಕಲಾವಿದರು ಅಭಿನಯಿಸಲಿದ್ದಾರೆ. ಹೈಬಜೆಟ್ ನಲ್ಲಿ…

  • ಆರೋಗ್ಯ

    ಈ ತರಕಾರಿಗಳನ್ನು ಸೇವಿಸಿದ್ರೆ ಮಹಿಳೆಯರಿಗೆ ಕಿಡ್ನಿ ಸಮಸ್ಯೆ ಯಾವತ್ತು ಬರುವುದಿಲ್ಲ…!ತಿಳಿಯಲು ಈ ಲೇಖನ ಓದಿ..

    ಇತ್ತೀಚಿನ ದಿನಗಳಲ್ಲಿ ಎಲ್ಲರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಕಿಡ್ನಿ ಸಮಸ್ಯೆ, ಅದರಲ್ಲೂ ಮಹಿಳೆಯರನ್ನು ಹೆಚ್ಚು ಕಾಡಿಸುವ ಕಾಯಿಲೆಗಳಲ್ಲಿ ಕಿಡ್ನಿ ಸಮಸ್ಯೆಯೂ ಒಂದು. ಮೂತ್ರಕೋಶದಲ್ಲಿ ಸೋಂಕು ಮತ್ತು ಕಲ್ಲುಗಳು ಇತ್ಯಾದಿ ಸಮಸ್ಯೆಗಳು ಇವರಲ್ಲಿ ಸಾಮಾನ್ಯ

  • ಸಂಬಂಧ

    ನಾಗಿಣಿ ಡ್ಯಾನ್ಸ್ ಮಾಡಿದ್ರಿಂದ, ಆಗಬೇಕಿದ್ದ ಮದುವೇನೇ ನಿಂತುಹೋಯಿತು!ಶಾಕ್ ಆಗ್ಬೇಡಿ,ಈ ಲೇಖನಿ ಓದಿ..

    ಈಗಿನ ಮದುವೆಗಳ ಟ್ರೆಂಡೇ ಬದಲಾಗಿದೆ.ಮದುವೆ ಸಮಾರಂಭಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಜೊತೆಗೆ,ವಧು-ವರರು ಡ್ಯಾನ್ಸ್ ಮಾಡುವುದು ಸಾಮಾನ್ಯ.ಆದ್ರೆ ಇಲ್ಲೊಂದು ಮದುವೆಯಲ್ಲಿ ವರ ಡ್ಯಾನ್ಸ್ ಮಾಡಿದ್ದರಿಂದ, ವಧು ಮದುವೆಯನ್ನೇ ತಿರಸ್ಕರಿಸಿದ ಘಟನೆ ನಡೆದಿದೆ.

  • ಸುದ್ದಿ

    ಅಲಿಯಾ ಅಂಡರ್‌ವಾಟರ್ ಫೋಟೋಶೂಟ್ ; ಹೇಗಿದೆ ಗೊತ್ತಾ,?

    ಬಾಲಿವುಡ್ ನಟಿ  ಅಲಿಯಾ ಭಟ್ ಇದೀಗ ಅಂಡರ್‌ವಾಟರ್ ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋಗಳಲ್ಲಿ ಮಿಂಚುತ್ತಿರುವ ಅಲಿಯಾ ಭಟ್  ಈಗ  ವೈರಲ್ ಆಗುತ್ತಿದ್ದಾರೆ. ಇತ್ತೀಚೆಗೆ ಅಲಿಯಾ ವೋಗ್ ಮ್ಯಾಗಜೀನ್‌ಗಾಗಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳನ್ನು ಅಲಿಯಾ ಹಾಗೂ ವೋಗ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಫೋಟೋದಲ್ಲಿ ಅಲಿಯಾ ಚಿಕ್ ಮೊನೊಕಿನಿ ಧರಿಸಿದ್ದಾರೆ. ಅಲಿಯಾ ಫೋಟೋಶೂಟ್‌ನಲ್ಲಿ ನಿಯಾನ್ ಗ್ರೀನ್, ಶಿಮರಿ ಬ್ಲೂ ಹಾಗೂ ಗುಲಾಬಿ ಬಣ್ಣದ ಮೊನೊಕಿನಿಯನ್ನು ಧರಿಸಿದ್ದಾರೆ. ಅಂಡರ್‌ವಾಟರ್‌ನಲ್ಲಿ ಫೋಟೋಗಳಿಗೆ ಬೇರೆ ಬೇರೆ ರೀತಿ ಪೋಸ್‌ಗಳನ್ನು ನೀಡುವ ಮೂಲಕ ಹಾಟ್ ಆಗಿ…

  • ಸುದ್ದಿ

    ಇ-ಕೆವೈಸಿ ಮಾಡಿಸದಿದ್ದರೆ ರದ್ದಾಗಲಿದೆ ರೇಷನ್ ಕಾರ್ಡ್: ಆಗಸ್ಟ್ ನಿಂದ ಸಿಗಲ್ಲ ಪಡಿತರ…!

    ಪಡಿತರ ಸೋರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ, ಇದನ್ನು ತಡೆಯಲು ಆಹಾರ ನಾಗರಿಕ ಸರಬರಾಜು ಇಲಾಖೆ ಕ್ರಮ ಕೈಗೊಂಡಿದ್ದು ನೈಜ ಫಲಾನುಭವಿಗಳಿಗೆ ಮಾತ್ರ ಪಡಿತರ ವಿತರಿಸಲು ಮುಂದಾಗಿದೆ. ಹೀಗಾಗಿ ನೀವು ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದ್ದು ನಿಮಗೆ ಪಡಿತರ ಕೂಡ ಸಿಗುವುದಿಲ್ಲ. ಹೌದು, ಜುಲೈ 31ರ ಒಳಗೆ ನೀವು ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಬೇಕು. ಒಂದು ವೇಳೆ ನೀವು ಇ-ಕೆವೈಸಿ ಮಾಡಿಸದಿದ್ದಲ್ಲಿ ನಿಮ್ಮ ಕಾರ್ಡ್ ರದ್ದಾಗಲಿದ್ದು, ಆಗಸ್ಟ್ ನಿಂದ ನಿಮಗೆ ರೇಷನ್ ಕೂಡ…