ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಂಗಳೂರು: ರೈತನೊಬ್ಬ ಅಡಕೆ ಮರವನ್ನು ಯಂತ್ರವೊಂದರ ಸಹಾಯದಿಂದ ಹತ್ತುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅಡಕೆ ಮರಕ್ಕೆ ಅತ್ಯಂತ ಸುಲಭವಾಗಿ ಹತ್ತಿ ಅಡಕೆ ಕೀಳುವ ಬೈಕ್ ಮಾದರಿಯ ಯಂತ್ರವೊಂದನ್ನು ಬಂಟ್ವಾಳದ ಪ್ರಗತಿಪರ ಕೃಷಿಕ ಗಣಪತಿ ಭಟ್ ಆವಿಷ್ಕರಿಸಿದ್ದು, ಇದಕ್ಕೀಗ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಂದಲೂ ಮೆಚ್ಚುಗೆಯಿಂದ ಟ್ವೀಟ್ ಮಾಡಿದೆ.
ಸಜೀಪಮೂಡ ಗ್ರಾಮದ ಕೋಮಾಲಿ ನಿವಾಸಿ, ಗಣಪತಿ ಭಟ್ ಅವರ ಯಂತ್ರದ ಮೂಲಕ ಮಹಿಳೆಯರೂ ಮರ ಏರಲು ಸಾಧ್ಯವಾಗಿದೆ. ಯುವತಿಯೋರ್ವಳು ಮರ ಏರುತ್ತಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಈಗ ಯಂತ್ರಕ್ಕೆ ದೇಶ ಹಾಗೂ ಹೊರದೇಶಗಳಿಂದಲೂ ಬೇಡಿಕೆ ಬರುತ್ತಿದೆ.
ಈಗ ಮರ ಹತ್ತಿ ಕೆಲಸ ಮಾಡಲು ನುರಿತ ಕಾರ್ಮಿಕರು ಸಿಗುತ್ತಿಲ್ಲ ಎಂಬುದು ಕರಾವಳಿಯ ಅಡಕೆ ಬೆಳೆಗಾರರ ಅಳಲು. ಮರ ಹತ್ತಲು ಹಲವು ಯಂತ್ರಗಳ ಆವಿಷ್ಕಾರಗಳು ಕಾಲಕಾಲಕ್ಕೆ ನಡೆಯುತ್ತಲೇ ಇವೆ. ಇದಕ್ಕೊಂದು ಸೇರ್ಪಡೆ ಮರ ಹತ್ತುವ ಬೈಕ್. ಇದರ ಮೂಲ ಉದ್ದೇಶವೇ ಯಾರ ಸಹಾಯವೂ ಇಲ್ಲದೆ ಮರ ಹತ್ತುವುದು. ಸದ್ಯಕ್ಕೆ ಅಡಕೆ ಮರ ಹತ್ತಲು ಉಪಯೋಗವಾಗುತ್ತಿರುವ ಈ ಯಂತ್ರವನ್ನು ಪರಿಷ್ಕರಿಸಿ, ತೆಂಗಿನ ಮರ ಹತ್ತುವಂತೆ ಮಾಡುವ ಯೋಜನೆಯನ್ನು ಗಣಪತಿ ಭಟ್ ಹಾಕಿಕೊಂಡಿದ್ದಾರೆ.
ಬೈಕ್ ಮಾದರಿ ಯಂತ್ರ ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗಿದೆ. ಇದನ್ನು ಗಮನಿಸಿರುವ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಂತ್ರದ ಉತ್ಪಾದನೆ ಹಕ್ಕನ್ನು ಪಡೆಯಲು ಉತ್ಸುಕರಾಗಿದ್ದಾರೆ. ಮಹೀಂದ್ರಾ ಮಾತ್ರವಲ್ಲ, ನಾನು ಯಾವುದೇ ಕಂಪನಿಗೆ ಈ ಯಂತ್ರದ ಉತ್ಪಾದನೆ ಹಕ್ಕು ನೀಡಲು ಸಿದ್ಧನಿಲ್ಲ. ನಾನೇ ಉತ್ಪಾದಿಸಿ ರೈತರಿಗೆ ತಲುಪಿಸುತ್ತೇನೆ. ಅದಕ್ಕಾಗಿ ಪ್ರತ್ಯೇಕ ತಂಡ ರೂಪಿಸುತ್ತೇನೆ ಎಂದು ತಿಳಿಸಿದ್ದಾರೆ. ಅಡಕೆ ಮರ ಏರುವ ಯಂತ್ರಕ್ಕೆ ಜಿಲ್ಲೆ, ಹೊರ ಜಿಲ್ಲೆಗಳು ಸೇರಿದಂತೆ ಕೇರಳದಿಂದಲೂ ಬೇಡಿಕೆ ಬರುತ್ತಿದೆ. ಪ್ರತಿ ಯಂತ್ರಕ್ಕೆ 75 ಸಾವಿರ ರು ದರ ನಿಗದಿ ಪಡಿಸಿದ್ದಾರೆ, ಇದಕ್ಕಾಗಿ ಬಿಸಿ ರೋಡ್ ನಲ್ಲಿ ಶಾಪ್ ಕೂಡ ತೆರದಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉಪಚುನಾವಣೆಗೆ ನಾವು ತಯಾರಾಗಿದ್ದೇವೆ. ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಪಕ್ಷಾಂತರಿಗಳಿಗೆ ಜನ ಯಾವಾಗಲು ಕ್ಷಮಿಸುವುದಿಲ್ಲ. ಈ ಚುನಾವಣೆ ಮೂಲಕ ತಕ್ಕ ಪಾಠಕಲಿಸುತ್ತಾರೆ. ಉಪಚುನಾವಣೆಯನ್ನು ವಿಶ್ವಾಸದಿಂದ ನಡೆಸುತ್ತೇವೆ. ೧೫ ಕ್ಷೇತ್ರಗಲ್ಲಿ ಅಭ್ಯರ್ಥಿಗಳ ಗೆಲ್ಲಿಸುತ್ತೇವೆ. ಈ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದರು. ಕುಮಾರಸ್ವಾಮಿ ಪಾಪ ಏನು ಮಾತನಾಡುತ್ತಾರೆ ಎಂಬುದು ಅವರಿಗೆ ಗೊತ್ತಾಗುತ್ತಿಲ್ಲ. ಆದರೆ ಮಾತನಾಡುವ ಮೊದಲು ಪ್ರಜ್ಞೆ ಇಟ್ಟುಗೊಂಡು ಮಾತನಾಡಲಿ. ಜಿಟಿ…
ಕೋನೆಗೂ ಕಪ್ಪು ಗೆದ್ದ ಬೆಂಗಳೂರು ಹೌದು VIVO Pro Kabaddi Season 6 ರಲ್ಲಿ ಕೋನೆಗೂ ಕಪ್ಪು ನಮ್ದೇ, ಇಂದು ನಡೆದ prokabaddi ಗುಜರಾತ್ ವಿರುದ್ಧ 5 ಅಂಕ 38-33 ರಲ್ಲಿ ಗೆದ್ದಿದೆ. ಪವನ್ ಕುಮಾರ್ ರವರಿಂದ ವಿರೋಚಿತ ಆಟ Man of the match ಅವರಿಗೆ ಸಿಕ್ಕಿದೆ. ಮ್ಯಾನ್ of the series 24match 282pts, 11.8 avarege ನಲ್ಲಿ 15 ಲಕ್ಷ ರೂ ಗೆದ್ದರು. ಕಪ್ಪು ಗೆದ್ದ ಬೆಂಗಳೂರು bulls ಇಂದ ಎಲ್ಲ ಜನ…
ನಟ ಉಪೇಂದ್ರ ರಾಜಕೀಯಕ್ಕೆ ಬರುವ ವಿಷಯ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕರು ಉಪ್ಪಿ ರಾಜಕೀಯಕ್ಕೆ ಬರಲಿ ಎಂದು ಸ್ವಾಗತಿಸುತ್ತಿದ್ದರೇ, ಇನ್ನೂ ಕೆಲವರು ಇದು ಸಿನಿಮಾದಷ್ಟು ಸುಲಭವಲ್ಲ ಎಂದು ಹೇಳುತ್ತಿದ್ದಾರೆ.
ಎಲ್ಲ ಪ್ರಮುಖ ರೈಲ್ವೆ ನಿಲ್ದಾಣಗಳು, ಬಸ್ ಡಿಪೋಗಳು, ಏರ್ಪೋರ್ಟ್ಗಳು ಮತ್ತು ಮಾಲ್ಗಳಲ್ಲಿ ನೀವು ‘ಟೀ’ಯನ್ನು ಮಣ್ಣಿನ ಲೋಟಗಳಲ್ಲಿ(ಕುಲ್ಹಾದ್) ಕುಡಿಯುವ ಅವಕಾಶ ಸದ್ಯದಲ್ಲೇ ಸಿಗಲಿದೆ. ಇಂಥದ್ದೊಂದು ವ್ಯವಸ್ಥೆ ಜಾರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಲವು ತೋರಿಸಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಬೇಡಿಕೆಗೆ ಅನುಗುಣವಾಗಿ ಮಣ್ಣಿನ ಲೋಟಗಳ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುವಂತೆ ಖಾದಿ ಮತ್ತು ಗ್ರಾಮೋದ್ಯಮ ಆಯೋಗಕ್ಕೂ ನಿರ್ದೇಶನ ನೀಡಿದ್ದಾರೆ ಮಣ್ಣಿನ ಲೋಟಗಳನ್ನು ಬಳಸುವ ಪರಿಸರಸ್ನೇಹಿ ವ್ಯವಸ್ಥೆಯನ್ನು ದೇಶದ ಪ್ರಮುಖ100 ರೈಲ್ವೆ…
ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ. ಮದುವೆಯಾದ ಮಹಿಳೆ ಕಾಲುಂಗುರ ಧರಿಸಿದರೆ ಶೋಭೆ. ಇದು ಮದುವೆಯ ಪ್ರತೀಕ ಎಂದು ಕೆಲವರು ತಿಳಿದಿದ್ದರೆ ಮತ್ತೆ ಕೆಲವರು ಇದೊಂದು ಸಂಪ್ರದಾಯವೆಂದು ನಂಬುತ್ತಾರೆ. ಆದರೆ ಇದಕ್ಕೊಂದು ವೈಜ್ಞಾನಿಕ ಕಾರಣ ಇದೆ. ಅದರ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿದೆ.
ಇಂದು ಸೋಮುವಾರ, 19/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…