ಜ್ಯೋತಿಷ್ಯ

ಏಪ್ರಿಲ್ ನಲ್ಲಿ ಹುಟ್ಟಿದ ತಿಂಗಳು ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೀಗಿರುತ್ತೆ ನೋಡಿ!

180

ಏಪ್ರಿಲ್ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳಲ್ಲಿ ಕಾಣುವಂತಹ ಗುಣಗಳು ಯಾವುದು. ಹಾಗೇ ಅವರು ಯಾವ ಗುಣಗಳಿಂದಾಗಿ ಬೇರೆಯವರಿಗಿಂತ ತುಂಬಾ ಭಿನ್ನವಾಗಿ ನಿಲ್ಲುವರು ಅಂತ ತಿಳಿಯೋಣ.

* ಈ ತಿಂಗಳಲ್ಲಿ ಹುಟ್ಟಿರುವ ಜನರು ತುಂಬಾ ಸ್ವತಂತ್ರರಾಗಿರುವರು. ಈ ವ್ಯಕ್ತಿಗಳು ಯಾವುದಾದರೂ ಉದ್ಯಮವನ್ನು ಆರಂಭಿಸುವರು ಮತ್ತು ಅದರಲ್ಲಿ ಇವರು ಉನ್ನತಿ ಪಡೆಯುವರು.

* ಇವರು ತಮ್ಮದೇ ಆದ ದಾರಿಯಲ್ಲಿ ಸಾಗುವರು. ಇವರಲ್ಲಿ ಇರುವಂತಹ ಆಕರ್ಷಣೀಯ ಗುಣವು ಬೇರೆಯವರನ್ನು ಆಕರ್ಷಣೆ ಮಾಡುವುದು.

* ಹಣ ಸಂಪಾದನೆ ಮಾಡಬೇಕು ಎಂದು ಬಯಸುವಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಾಧಿಸಲು ತುಂಬಾ ಕಠಿಣವಾಗಿ ಕೆಲಸ ಮಾಡುವರು.

* ಇವರು ತುಂಬಾ ಹಠವಾದಿಗಳು. ಬಲಶಾಲಿ ಮನಸ್ಸನ್ನು ಹೊಂದಿರುವ ಕಾರಣದಿಂದಾಗಿ ತಮ್ಮ ಮಾತಿನ ಬಗ್ಗೆ ದೃಢವಾದ ನಂಬಿಕೆ ಹೊಂದಿರುವರು. ಆದರೆ ಚರ್ಚೆ ಮಾಡುವಂತಹ ವ್ಯಕ್ತಿಯಲ್ಲ. ತಮ್ಮ ನಿಲುವನ್ನು ಇವರು ಯಾವತ್ತೂ ಬದಲಾವಣೆ ಮಾಡುವುದಿಲ್ಲ.

* ಇವರು ತುಂಬಾ ಪ್ರಬಲ ಎದುರಾಳಿಗಳಾಗಿರುವರು ಮತ್ತು ಇವರಿಗೆ ಸರಿಹೊಂದುವ ಹೋರಾಟ ನೀಡುವುದು ತುಂಬಾ ಕಠಿಣವಾಗಿರುವುದು.

* ಇವರು ಪ್ರಕೃತಿ ಸ್ನೇಹಿ.

* ಇವರು ಹಲವಾರು ಮಂದಿ ಸ್ನೇಹಿತರನ್ನು ಸಂಪಾದಿಸುವರು. ಈ ಸ್ನೇಹಿತರು ಇವರ ಅತ್ಯುತ್ಸಾಹವನ್ನು ಸ್ವಾಗತಿಸುವರು ಮತ್ತು ಜೊತೆಯಾಗಿ ಪ್ರಯಾಣಿಸಲು ಇಷ್ಟಪಡುವರು.

* ಇವರು ಜನ್ಮತಃ ಪ್ರವಾಸಿಗರು ಆಗಿರುವರು. ಇವರಿಗೆ ನೈಸರ್ಗಿಕವಾಗಿ ಸಾಹಸ ಮತ್ತು ಪ್ರಯಾಣಿಸುವ ಗುಣವು ಬಂದಿರುವ ಕಾರಣದಿಂದಾಗಿ ಇವರು ಹೊಸ ಹೊಸ ಪ್ರದೇಶಗಳಿಗೆ ಹೋಗಲು ಇಷ್ಟಪಡುವರು.

* ಇವರು ತುಂಬಾ ಕುತೂಹಲಿಗರು. ಈ ವ್ಯಕ್ತಿಗಳು ಯಾವಾಗಲೂ ಏನಾದರೂ ಮಾಹಿತಿ ಪಡೆಯಲು ಬಯಸುವರು. ಹೊಸ ಹೊಸ ವಿಚಾರಗಳನ್ನು ಕಲಿಯಲು ತುಂಬಾ ಉತ್ಸುಕರಾಗಿರುವರು.

* ಯಾರಾದರೂ ಇವರನ್ನು ಕಾಯಿಸಿದರೆ ಆಗ ತಾಳ್ಮೆ ಕಳೆದುಕೊಳ್ಳುವರು ಮತ್ತು ಇದರಿಂದ ತುಂಬಾ ಸುಲಭವಾಗಿ ನಿರಾಶೆಗೆ ಒಳಗಾಗುವರು.

* ಇವರದ್ದು ವಿಶ್ರಾಂತಿಯಿಲ್ಲದೆ ಇರುವ ವ್ಯಕ್ತಿತ್ವ ಆಗಿರುವ ಕಾರಣದಿಂದಾಗಿ ಯಾವಾಗಲೂ ಏನಾದರೂ ಕೆಲಸವನ್ನು ಬೇಗನೆ ಮುಗಿಸಲು ಬಯಸುವರು. ಆದರೆ ಈ ಒಂದು ಗುಣದಿಂದಾಗಿ ಇವರು ಕೆಲವೊಂದು ಸಲ ಸಂಕಷ್ಟಕ್ಕೆ ಸಿಲುಕುವುದು ಇದೆ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ