ಸಾಧನೆ, ಸುದ್ದಿ, ಸ್ಪೂರ್ತಿ

ಆಟೋ ಓಡಿಸುತ್ತಿರುವ ಈ ಮಹಿಳೆ ನಿಜಾಂಶ ಹೊರಬರುತ್ತಿದ್ದಂತೆ ಎಲ್ಲರೂ ಶಾಕ್. ಅಸಲಿಗೆ ಈ ಮಹಿಳೆ ಯಾರು?

72

ಈ ಮಹಿಳೆ ಈ ಕೆಲಸ ಮಾಡಲು ಕಾರಣ ತಿಳಿದು ಪ್ರತಿಯೊಬ್ಬರು ಕೂಡ ಶಾಕ್ ಆದರು. ಇಷ್ಟೊಂದು ಈಕೆ ಫೇಮಸ್ ಆಗಲು ಕಾರಣವಾದರೂ ಏನು? ಈ ಸುದ್ದಿ ಬಂದಿದ್ದು ಅಹಮದಾಬಾದ್ನಿಂದ. 35 ವರ್ಷದ ಅಂಕಿತ ಆಟೋ ಓಡಿಸುತ್ತಾ ಇದ್ದಾಳೆ. ಈಕೆ ಆಟೋ ಓಡಿಸಲು ಕಾರಣ ಅವರ ತಂದೆ. ಅವರ ತಂದೆ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಅವರಿಗೆ ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್ ಕಾಯಿಲೆ ಬಂದ ಕಾರಣ ಅಂಕಿತಾಳೇ ಮನೆಯ ಎಲ್ಲಾ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡಳು. ಅಂಕಿತಾಳಿಗೆ ಇಬ್ಬರು ತಂಗಿಯರು ಕೂಡ ಇದ್ದಾರೆ.ಅವರ ಓದು, ಮದುವೆಯ ಜವಾಬ್ದಾರಿ ಎಲ್ಲವನ್ನೂ ಕೂಡ ಅಂಕಿತಾಳೆ ಹೆಗಲಮೇಲೆ ಹಾಕಿಕೊಂಡಿದ್ದಾಳೆ.

ನೀವು ಅಂದುಕೊಳ್ಳಬಹುದು ಇದೇನಿದು ದೊಡ್ಡ ವಿಷಯಾನ ಈ ರೀತಿಯ ನೂರಾರು ಘಟನೆಗಳನ್ನು ಟಿ.ವಿ.ಗಳಲ್ಲಿ ನಾವು ಪೇಪರ್ ಗಳಲ್ಲಿ ಓದಿರುತ್ತೀವಿ, ನೋಡಿರುತ್ತೀವಿ ಅಂತ. ಆದರೆ ನಿಮಗೆ ಗೊತ್ತಿಲ್ಲದೇ ಇರುವ ವಿಷಯವೇನೆಂದರೆ ಚಿಕ್ಕ ವಯಸ್ಸಿನಲ್ಲಿಯೇ ಪೋಲಿಯೋ ಕಾರಣದಿಂದಾಗಿ ಅಂಕಿತಾಳ ಬಲಗಾಲನ್ನು ತೆಗೆಯಬೇಕಾಗಿತ್ತು. ಕೇವಲ ಒಂದು ಕಾಲಿನಿಂದಲೇ ತನ್ನ ಕುಟುಂಬದ ಭಾರವನ್ನು ಹೊರುತ್ತಿದ್ದಾಳೆ ಈ ಅಂಕಿತ.
ಈ ‌ಹಿಂದೆ ಅಂಕಿತ ಕಾಲ್ ಸೆಂಟರ್ ನಲ್ಲಿ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಳು. ಆದರೆ ತಿಂಗಳಿಗೆ ಕೇವಲ 8 ಸಾವಿರ ರೂಪಾಯಿ ಮಾತ್ರ ಸಂಬಳ ಸಿಗುತ್ತಿತ್ತು. ಬರುವ ಸಂಬಳದಲ್ಲಿ ಮನೆಯ ಬಾಡಿಗೆ,ತಂದೆಯ ಔಷಧಿಗಳಿಗೆ,ತಂಗಿಯರ ವಿದ್ಯಾಭ್ಯಾಸಕ್ಕೆ, ಮನೆಯ ದಿನಸಿಗೆ ಸಾಲುತ್ತಿರಲಿಲ್ಲ. ಅದಕ್ಕೆ ಆ ಕೆಲಸವನ್ನು ಬಿಟ್ಟು ಲೋನ್ ಪಡೆದುಕೊಂಡು ಒಂದು ಆಟವನ್ನು ತೆಗೆದುಕೊಂಡಳು.

ಇದರಲ್ಲಿ ಕೇವಲ ಎಂಟು ಗಂಟೆಗಳ ಕಾಲ ಕೆಲಸ ಮಾಡಿದರು ಸಹ ತಿಂಗಳಿಗೆ 20 ರಿಂದ 24 ಸಾವಿರ ರೂಪಾಯಿ ದುಡಿಯುತ್ತಿದ್ದಾಳೆ ಮತ್ತು ತನ್ನ ಕುಟುಂಬವನ್ನು ಸಂತೋಷವಾಗಿ ನೋಡಿಕೊಳ್ಳುತ್ತಿದ್ದಾಳೆ ಈ ಅಂಕಿತ. ಕೈಕಾಲು ಗಟ್ಟಿಮುಟ್ಟಾಗಿದ್ದರು ಸಹ ಕೆಲಸ ಮಾಡಲು ಹಲವರು ಸೋಂಬೇರಿಗಳಾಗಿ ಬಿಡುತ್ತಾರೆ.ಆದರೆ ಇಂತಹವರನ್ನು ನೋಡಿದಾಗ ನಮಗೂ ಕೂಡ ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸಲೇಬೇಕೆಂಬ ಛಲ ಹುಟ್ಟಿಬರುತ್ತದೆ ಮತ್ತು ಜೀವನದಲ್ಲಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಿಯೇ ತೀರಬೇಕು ಇಲ್ಲವಾದರೆ ನಾವು ಹುಟ್ಟಿದಕ್ಕೆ ಯಾವುದೇ ಪ್ರಯೋಜನವೂ ಇರುವುದಿಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಹೆಂಡತಿಯ ಹತ್ತಿರ 20 ಸಾವಿರ ಸಾಲ ಪಡೆದ ಪತಿ, 28.45 ಕೋ.ರೂ ಗೆದ್ದ…!

    ತೆಲಂಗಾಣ: ಅದೃಷ್ಟ ಯಾವತ್ತೂ ಬೇಕಾದರೂ ಖುಲಾಯಿಸಬಹುದು ಎಂಬ ಮಾತಿದೆ. ಉದ್ಯೋಗ ಹುಡುಕಿಕೊಂಡು ಹೈದರಾಬಾದ್ನ ವ್ಯಕ್ತಿಯೊಬ್ಬ ದುಬೈ ವಿಮಾನ ಹತ್ತಿದ್ದರು. ಆದರೆ ಉದ್ಯೋಗ “ಅದೃಷ್ಟವಶಾತ್’ ಕೈ ಕೊಟ್ಟಿತ್ತು. ಹಾಗಂತ ಅವನು ಬರೀ ಕೈಯಲ್ಲಿ ಬಂದಿಲ್ಲ. ಬರುವಾಗ ಅದೂ ಹೆಂಡತಿ ಕೈಯಿಂದ ಸಾಲ ಪಡೆದು, ಅದೃಷ್ಟ ಚೀಟಿ “ರಾಫೆಲ್’ ಅನ್ನು ಖರೀದಿಸಿದ್ದರು. ಆದರೆ ಅವರ ಅದೃಷ್ಟ ‘ರಾಫೆಲ್ ಚೀಟಿಯಲ್ಲೇ ಭದ್ರವಾಗಿತ್ತು. ಹೌದು ತೆಲಂಗಾಣದ ನಿಜಾಮಬಾದ್‌ನ ಜಾಕ್ರನ್ಪಳ್ಳಿಗ್ರಾಮಕ್ಕೆ ಸೇರಿದ ವಿಲಾಸ್‌ ರಿಕ್ಕಳ ಎಂಬವರು ಈ ಅದೃಷ್ಟದ ನಾಯಕ. ಮೂಲತಃ ಕೃಷಿ ಕುಟುಂಬ. ಕೆಲವು…

  • ಆಧ್ಯಾತ್ಮ

    ಹೆಣ್ಣುಮಕ್ಕಳು ತಮ್ಮ ಪತಿಯ ಒಳಿತಗಾಗಿ ಮಾಡುವ ವ್ರತವಿದು!ಈ ವ್ರತದ ಹಿನ್ನಲೆ ಏನು ಗೊತ್ತಾ???

    ಪತಿಗೆ ಆಯಸ್ಸು ಆರೋಗ್ಯ, ಅಭಿವೃದ್ಧಿ ನೀಡಲೆಂದು ಬೇಡಿಕೊಂಡು ದೀರ್ಘಕಾಲ ಸುಮಂಗಲಿಯಾಗಿರುವಂತೆ ಹರಸಲು ಬೇಡುವ ಹಬ್ಬವೇ ‘ಭೀಮನ ಅಮವಾಸ್ಯೆ.

  • inspirational, ಸುದ್ದಿ

    ಇಲ್ಲಿದೆ ನೋಡಿ ರಾಜ್ಯದ ಎಲ್ಲಾ ರೈತರಿಗೆ ಸುಪ್ರೀಂಕೋರ್ಟ್ ಗುಡ್ ನ್ಯೂಸ್ ನೀಡಿದೆ. ಇದನ್ನೊಮ್ಮೆ ಓದಿ…!

    ನವದೆಹಲಿ, ಕೊಡಗುಜಿಲ್ಲೆಯಲ್ಲಿ ವರ್ಗಭೂಮಿ ಹೊಂದಿರುವವರಿಗೆ ಲಭ್ಯವಾಗುವಬಾಣೆ ಜಮೀನು ಹಂಚಿಕೊಳ್ಳುವ ಅಧಿಕಾರವನ್ನುಸುಪ್ರೀಂ ಕೋರ್ಟ್‌ ನೀಡಿದೆ. ಈ ಮೂಲಕ ಬಾಣೆ ಜಮೀನು ಕೂಡ ಸೀಮಿತ ಆಸ್ತಿ ಹಕ್ಕಿನ ವ್ಯಾಪ್ತಿಯನ್ನು ಹೊಂದಿದೆಎಂಬ ವಾದಕ್ಕೆ ಸುಪ್ರೀಂನ ಮುದ್ರೆ ಬಿದ್ದಂತಾಗಿದೆ. ಕೊಡಗಿನ ಬಾಣೆ ಭೂಮಿಗೆ ಸಮಾನಂತರವಾಗಿ ವ್ಯಾಖ್ಯಾನಿಸಲಾಗುವ ಕುಮ್ಕಿ, ಕಾಣೆ, ಬೆಟ್ಟಭೂಮಿ, ಹಾದಿ ಭೂಮಿ, ಕಾನ್‌ ಮತ್ತು ಸೊಪ್ಪಿನ ಬೆಟ್ಟ, ಜಮ್ಮಾ ಮತ್ತು ಮೊಟಸ್ಥಳಗಳನ್ನು ಹೊಂದಿರುವ ರಾಜ್ಯದ ಉದ್ದಗಲದಲ್ಲಿನ ಲಕ್ಷಾಂತರ ರೈತರಿಗೆ ಸುಪ್ರೀಂಕೋರ್ಟ್‌ನ ಈ ಆದೇಶ ತುಸು ನೆಮ್ಮದಿಯನ್ನು ನೀಡಿದೆ. ಕೊಡಗಿನ ಕೋಟಿಯಂಗದ ಬಿ. ಮೋಟಯ್ಯ…

  • ಸುದ್ದಿ

    ಲಕ್ಷ ಲಕ್ಷ ದುಡಿಯುತ್ತಿದ್ದ ಈ ನಟ ಆ ಕೆಲಸವನ್ನು ಬಿಟ್ಟು, ಬಿಗ್ ಬಾಸ್ ಮನೆಗೆ ಹೋಗಿದ್ದು ಯಾಕೆ?

    ಮಜಾ ಟಾಕೀಸ್ ಕಾಮಿಡಿ ಕಾರ್ಯಕ್ರಮದಿಂದ ಕನ್ನಡಿಗರ ಮನೆಮಾತಾದವರು ಕುರಿ ಪ್ರತಾಪ್. ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೊದಲು ಕುರಿಗಳು ಸಾರ್ ಕುರಿಗಳು, ಹಾಸ್ಯಕ್ಕೊಂದು ವಿಷಯ ಹೀಗೆ ಬೇರೆ ಬೇರೆ ವಾಹಿನಿಯಲ್ಲಿ, ಹಾಸ್ಯದ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದರು. ಆದರೆ ಯಾವಾಗ ಈ ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಂಡರೋ, ಅವರ ನಸೀಬೇ ಬದಲಾಯಿತು ಎನ್ನಬಹುದು. ಕಾರ್ಯಕ್ರಮದಲ್ಲಿ ಅವರ ಪಂಚಿಂಗ್ ಡೈಲಾಗ್ಸ್, ಹಾಸ್ಯ ಪ್ರಜ್ಞೆ ಮತ್ತು ಅವರ ನಟನಾ ಕೌಶಲ್ಯತೆ, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ಬಿಟ್ಟಿತ್ತು. ಅನೇಕ ನೆಟ್ಟಿಗರು, ಕುರಿ ಇಲ್ಲವಾದರೆ…

  • ಸುದ್ದಿ

    ಯುವಕನ ಕಣ್ಣೀರು ನೋಡಿ ಕರಗಿದ ಕಳ್ಳರು, ಕಿತ್ತುಕೊಂಡ ಹಣ ಮತ್ತು ವಸ್ತುಗಳು ವಾಪಸ್.

    ಕಷ್ಟ ಕಂಡರೇ ಕಟುಕನು ಮರುಗುತ್ತಾನೆ ಎಂಬ ಮಾತಿದೆ. ಈ ವಿಡಿಯೋ ನೋಡಿದರೆ ಅದು ನಿಜ ಎನಿಸುತ್ತದೆ. ಈ ಸಿಸಿಟಿವಿ ವಿಡಿಯೋ ಪಾಕಿಸ್ತಾನದ ಕರಾಚಿಯಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋದಲ್ಲಿ ದರೋಡೆಕೋರರಿಬ್ಬರು ಬೈಕಿನಲ್ಲಿ ಬಂದು ಓರ್ವ ಯುವಕನ ಬಳಿ ದರೋಡೆ ಮಾಡುವ ದೃಶ್ಯ ಸೆರೆಯಾಗಿದೆ. ಕೇವಲ 59 ಸೆಕೆಂಡ್ ಇರುವ ಈ ವಿಡಿಯೋದಲ್ಲಿ, ಒಂದು ಮನಮಿಡಿಯುವ ಸ್ಟೋರಿ ಇದೆ. ಮೊದಲಿಗೆ ಫುಡ್ ಡೆಲಿವರಿ ಯುವಕನೊಬ್ಬ ಅಂಗಡಿಯಿಂದ ತನ್ನ ಬೈಕ್ ಬಳಿ ಬರುತ್ತಾನೆ. ಈ ವೇಳೆ ಅಲ್ಲಿಗೆ ಬೈಕಿನಲ್ಲಿ ಬಂದ ಇಬ್ಬರು…

  • ಸುದ್ದಿ

    ರೈಲ್ವೆ ನಿಲ್ದಾಣದಲ್ಲಿ ಹೂವು ಮಾರುತ್ತಿದ್ದ ಬಾಲಕಿಯನ್ನು ವಸತಿ ಶಾಲೆಗೆ ಸೇರಿಸಿ ಸಚಿವ. ಈ ಸುದ್ದಿ ನೋಡಿ.!

    ಸಿಲಿಕಾನ್ ಸಿಟಿಯ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಹೂವು ಮಾರುತ್ತಿದ್ದ ಬಾಲಕಿಯನ್ನು ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಸಂಗೀತಾಳ ತಂದೆ, ತಾಯಿಯ ಮನವೊಲಿಸಿ ಕೊನೆಗೂ ಬಾಲಕಿಗೆ ಶಿಕ್ಷಣ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಾಲಕಿ ರಾಮನಗರದ ಕೈಲಾಂಚದಲ್ಲಿರುವ ವಸತಿ ಶಾಲೆಯಲ್ಲಿ 7ನೇ ತರಗತಿಗೆ ದಾಖಲಾತಿ ಪಡೆದಿದ್ದಾಳೆ. ಮನೆಯಲ್ಲಿ ಕಡು ಬಡತನವಿರುವ ಕಾರಣಕ್ಕೆ ತಂದೆ ತಾಯಿ ಇದ್ದರೂ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಸಂಗೀತಾ ಹೂವು ಮಾರುತ್ತಿದ್ದಳು. ಸಂಗೀತ ತಂದೆ…