ಸಾಧನೆ, ಸುದ್ದಿ, ಸ್ಪೂರ್ತಿ

ಆಟೋ ಓಡಿಸುತ್ತಿರುವ ಈ ಮಹಿಳೆ ನಿಜಾಂಶ ಹೊರಬರುತ್ತಿದ್ದಂತೆ ಎಲ್ಲರೂ ಶಾಕ್. ಅಸಲಿಗೆ ಈ ಮಹಿಳೆ ಯಾರು?

75

ಈ ಮಹಿಳೆ ಈ ಕೆಲಸ ಮಾಡಲು ಕಾರಣ ತಿಳಿದು ಪ್ರತಿಯೊಬ್ಬರು ಕೂಡ ಶಾಕ್ ಆದರು. ಇಷ್ಟೊಂದು ಈಕೆ ಫೇಮಸ್ ಆಗಲು ಕಾರಣವಾದರೂ ಏನು? ಈ ಸುದ್ದಿ ಬಂದಿದ್ದು ಅಹಮದಾಬಾದ್ನಿಂದ. 35 ವರ್ಷದ ಅಂಕಿತ ಆಟೋ ಓಡಿಸುತ್ತಾ ಇದ್ದಾಳೆ. ಈಕೆ ಆಟೋ ಓಡಿಸಲು ಕಾರಣ ಅವರ ತಂದೆ. ಅವರ ತಂದೆ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಅವರಿಗೆ ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್ ಕಾಯಿಲೆ ಬಂದ ಕಾರಣ ಅಂಕಿತಾಳೇ ಮನೆಯ ಎಲ್ಲಾ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡಳು. ಅಂಕಿತಾಳಿಗೆ ಇಬ್ಬರು ತಂಗಿಯರು ಕೂಡ ಇದ್ದಾರೆ.ಅವರ ಓದು, ಮದುವೆಯ ಜವಾಬ್ದಾರಿ ಎಲ್ಲವನ್ನೂ ಕೂಡ ಅಂಕಿತಾಳೆ ಹೆಗಲಮೇಲೆ ಹಾಕಿಕೊಂಡಿದ್ದಾಳೆ.

ನೀವು ಅಂದುಕೊಳ್ಳಬಹುದು ಇದೇನಿದು ದೊಡ್ಡ ವಿಷಯಾನ ಈ ರೀತಿಯ ನೂರಾರು ಘಟನೆಗಳನ್ನು ಟಿ.ವಿ.ಗಳಲ್ಲಿ ನಾವು ಪೇಪರ್ ಗಳಲ್ಲಿ ಓದಿರುತ್ತೀವಿ, ನೋಡಿರುತ್ತೀವಿ ಅಂತ. ಆದರೆ ನಿಮಗೆ ಗೊತ್ತಿಲ್ಲದೇ ಇರುವ ವಿಷಯವೇನೆಂದರೆ ಚಿಕ್ಕ ವಯಸ್ಸಿನಲ್ಲಿಯೇ ಪೋಲಿಯೋ ಕಾರಣದಿಂದಾಗಿ ಅಂಕಿತಾಳ ಬಲಗಾಲನ್ನು ತೆಗೆಯಬೇಕಾಗಿತ್ತು. ಕೇವಲ ಒಂದು ಕಾಲಿನಿಂದಲೇ ತನ್ನ ಕುಟುಂಬದ ಭಾರವನ್ನು ಹೊರುತ್ತಿದ್ದಾಳೆ ಈ ಅಂಕಿತ.
ಈ ‌ಹಿಂದೆ ಅಂಕಿತ ಕಾಲ್ ಸೆಂಟರ್ ನಲ್ಲಿ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಳು. ಆದರೆ ತಿಂಗಳಿಗೆ ಕೇವಲ 8 ಸಾವಿರ ರೂಪಾಯಿ ಮಾತ್ರ ಸಂಬಳ ಸಿಗುತ್ತಿತ್ತು. ಬರುವ ಸಂಬಳದಲ್ಲಿ ಮನೆಯ ಬಾಡಿಗೆ,ತಂದೆಯ ಔಷಧಿಗಳಿಗೆ,ತಂಗಿಯರ ವಿದ್ಯಾಭ್ಯಾಸಕ್ಕೆ, ಮನೆಯ ದಿನಸಿಗೆ ಸಾಲುತ್ತಿರಲಿಲ್ಲ. ಅದಕ್ಕೆ ಆ ಕೆಲಸವನ್ನು ಬಿಟ್ಟು ಲೋನ್ ಪಡೆದುಕೊಂಡು ಒಂದು ಆಟವನ್ನು ತೆಗೆದುಕೊಂಡಳು.

ಇದರಲ್ಲಿ ಕೇವಲ ಎಂಟು ಗಂಟೆಗಳ ಕಾಲ ಕೆಲಸ ಮಾಡಿದರು ಸಹ ತಿಂಗಳಿಗೆ 20 ರಿಂದ 24 ಸಾವಿರ ರೂಪಾಯಿ ದುಡಿಯುತ್ತಿದ್ದಾಳೆ ಮತ್ತು ತನ್ನ ಕುಟುಂಬವನ್ನು ಸಂತೋಷವಾಗಿ ನೋಡಿಕೊಳ್ಳುತ್ತಿದ್ದಾಳೆ ಈ ಅಂಕಿತ. ಕೈಕಾಲು ಗಟ್ಟಿಮುಟ್ಟಾಗಿದ್ದರು ಸಹ ಕೆಲಸ ಮಾಡಲು ಹಲವರು ಸೋಂಬೇರಿಗಳಾಗಿ ಬಿಡುತ್ತಾರೆ.ಆದರೆ ಇಂತಹವರನ್ನು ನೋಡಿದಾಗ ನಮಗೂ ಕೂಡ ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸಲೇಬೇಕೆಂಬ ಛಲ ಹುಟ್ಟಿಬರುತ್ತದೆ ಮತ್ತು ಜೀವನದಲ್ಲಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಿಯೇ ತೀರಬೇಕು ಇಲ್ಲವಾದರೆ ನಾವು ಹುಟ್ಟಿದಕ್ಕೆ ಯಾವುದೇ ಪ್ರಯೋಜನವೂ ಇರುವುದಿಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಈ ಜಾಗದಲ್ಲಿ ವಾಸಿಸುವವರಿಗೆ ಸಿಗುತ್ತೆ ಭಾರೀ ಹಣ…!

    ಅದು ಇಟಲಿಯ ಒಂದು ಪ್ರಾಂತ್ಯ. ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಕಡಿಮೆಯಾಗುತ್ತಲೇ ಇತ್ತು. ಸರ್ಕಾರಕ್ಕೂ ಇದನ್ನು ನೋಡಿ ತಲೆ ಕೆಟ್ಟು ಹೋಗಿತ್ತು. ಹಾಗಾಗಿ ಒಂದು ಭರ್ಜರಿ ಆಫರ್ ನೀಡಿದೆ. ಈ ಪ್ರದೇಶಕ್ಕೆ ಯಾರೇ ಹೋಗಿ ನೆಲೆಸಿದರೂ ಅವರಿಗೆ 22000 ಪೌಂಡ್ ಕೊಡಲಾಗುತ್ತದೆ ಎಂದು ಘೋಷಿಸಿದೆ. ಆದರೆ ಷರತ್ತುಗಳು ಅನ್ವಯ. ಇದು ಇಟಲಿಯ ಮೊಲೀಸ್ ಪ್ರಾಂತ್ಯ. ಸದ್ಯ ಈ ಪ್ರದೇಶದಲ್ಲಿ 2000ಕ್ಕಿಂತ ಕಡಿಮೆ ಮಂದಿ ವಾಸವಾಗಿದ್ದಾರೆ. ಕಳೆದ 5 ವರ್ಷದಲ್ಲಿ ಸುಮಾರು 9000 ದಷ್ಟು ಮಂದಿ ಈ ಪ್ರಾಂತ್ಯವನ್ನು ತೊರೆದಿದ್ದಾರೆ….

  • ಸಿನಿಮಾ

    ಕೇವಲ 80 ದಿನಗಳ ಕಾಲ್ ಶೀಟ್ ಗೆ ನಟಿ ರಾಧಿಕಾ ಕುಮಾರಸ್ವಾಮಿ ಪಡೆದ ಸಂಭಾವನೆ ಎಷ್ಟು ಗೊತ್ತಾ..?

    ಚಂದನವನಕ್ಕೆ ರಾಧಿಕಾ ಮತ್ತೆ ಬ್ಯಾಕಪ್ ಆಗಿದ್ದಾರೆ.ಈಗ ದಮಯಂತಿ’ ಚಿತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಈ ಚಿತ್ರದಲ್ಲಿನ ವಿಭಿನ್ನ ಪಾತ್ರಕ್ಕಾಗಿ ರಾಧಿಕಾ ಕುಮಾರಸ್ವಾಮಿ ಬರೋಬ್ಬರಿ 10 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ. ಈಗಾಗಲೇ ಚಿತ್ರದ ಶೇಕಡ 80 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.ತಾವು ನಟಿಸುತ್ತಿರುವ ದಮಯಂತಿ ಚಿತ್ರಕ್ಕಾಗಿ 80 ದಿನಗಳ ಕಾಲ ಕಾಲ್ ಶೀಟ್ ಕೊಟ್ಟಿದ್ದು, ಇದಕ್ಕಾಗಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರಂತೆ. ಈಗಾಗಲೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ…

  • ಆರೋಗ್ಯ

    ಧೂಮಪಾನ ಮತ್ತು ತಂಬಾಕು ಸೇವನೆಯಿಂದ ಆಗುವ ತೊಂದರೆಗೆ ಬಾಳೆಹಣ್ಣು ರಾಮಬಾಣ.!

    ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತಿನಂತೆ ನಾವು ತಿನ್ನುವ ಆಹಾರದ ಮೇಲೆ ನಮ್ಮ ಆರೋಗ್ಯದ ಸ್ಥಿತಿಗತಿ ನಿರ್ಧರಿತವಾಗುತ್ತದೆ. ಊಟದ ವಿಷಯದಲ್ಲಿ ನಾವು ಎಷ್ಟು ಕಾಳಜಿ ವಹಿಸುತ್ತೇವೋ ಹಾಗೆಯೇ ನಾವು ಸೇವಿಸುವ ಹಣ್ಣುಗಳ ಬಗ್ಗೆಯೂ ಮುತುವರ್ಜಿ ವಹಿಸಬೇಕಾಗುತ್ತಾದೆ.ಬಾಳೆಹಣ್ಣಿನಲ್ಲಿ ಹೇರಳವಾದ ವಿಟಮಿನ್‌ಗಳು, ಕಾರ್ಬೋಹೈಡ್ರೇಟ್ಸ್. ನಾರಿನಾಂಶ, ಕ್ಯಾಲ್ಸಿಯಂ, ಪ್ರೋಟೀನ್, ಎಲ್ಲದಕ್ಕಿಂತಲೂ ಮುಖ್ಯವಾಗಿ ಪೊಟ್ಯಾಶಿಯಂನ್ನು ಹೊಂದಿರುವುದರಿಂದ ಇದು ಹೃದ್ರೋಗ ಹಾಗೂ ರಕ್ತದೊತ್ತಡದ ತೊಂದರೆಯುಳ್ಳವರಿಗೆ ಉಪಕಾರಿಯೆನಿಸಿದೆ. ಬಾಳೆಹಣ್ಣು ಧಾರ್ಮಿಕ ವಿಧಿವಿಧಾನಗಳಲ್ಲಿ ಅತಿಥಿ ಸತ್ಕಾರಗಳಲ್ಲಂತೂ ಬಾಳೆ ಇಲ್ಲದಿರುವುದೇ ಇಲ್ಲ. ರಕ್ತಹೀನತೆಯಿಂದ…

  • ಸುದ್ದಿ

    ಹಾಸನ SSLC ಫಲಿತಾಂಶದಲ್ಲಿ ರಾಜ್ಯಕ್ಕೆ ಫಸ್ಟ್ ಪ್ಲೇಸ್ ಬರಲು ಕಾರಣ ನನ್ನ ಹೆಂಡತಿಯೇ ಹೊರತು ರೋಹಿಣಿ ಸಿಂಧುರಿ ಅಲ್ಲ ಎಂದ ರೇವಣ್ಣ..!

    ಹಾಸನದಲ್ಲಿ ಎಸ್‍ಎಸ್‍ಎಲ್‍ಸಿ ಉತ್ತಮ ಫಲಿತಾಂಶ ಬರಲು ಡಿಸಿ ರೋಹಿಣಿ ಸಿಂಧೂರಿಯಲ್ಲ, ನನ್ನ ಪತ್ನಿ ಭವಾನಿ ರೇವಣ್ಣ ಕಾರಣ ಎಂದು ಲೋಕೋಪಯೋಗಿ ಸಚಿವ ಹೆಚ್‍ಡಿ ರೇವಣ್ಣ ಹೇಳಿದ್ದಾರೆ. ಹಿಂದಿನ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕೊಡುಗೆ ಹೆಚ್ಚಿದೆ ಎಂದು ನಿನ್ನೆ ಮಾಧ್ಯಮಗಳ ಪ್ರಕಟವಾದ ಬೆನ್ನಲ್ಲೇ ಇದೀಗ ರೇವಣ್ಣ ಅವರು ರೋಹಿಣಿ ಸಿಂಧೂರಿ ಅವರ ಕೊಡುಗೆ ಏನು ಇಲ್ಲ. ನನ್ನ ಪತ್ನಿ ಭವಾನಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದು ಹಾಸನ ಪ್ರಥಮ ಸ್ಥಾನಕ್ಕೇರಲು 3-4 ಬಾರಿ…

  • ಸುದ್ದಿ

    ನೀವ್ ನಂಬಲ್ಲ…ಈ ರಾಜ್ಯದಲ್ಲಿ ಅತ್ಯಾಚಾರ ಮಾಡೋದು ತಪ್ಪೇ ಅಲ್ವಂತೆ..!ಅತ್ಯಾಚಾರ ಮಾಡಿದವನಿಗೆ ಏನ್ ಮಾಡ್ತಾರೆ ಎಂದು ತಿಳಿದ್ರೆ ನೀವ್ ಶಾಕ್ ಆಗ್ತೀರಾ…

    ಸೋಮಾಲಿಲ್ಯಾಂಡ್ ಒಂದು ಸ್ವಯಂ ಅಂಗೀಕೃತ ರಾಜ್ಯವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸೋಮಾಲಿಯಾ ಗುರುತಿಸಲ್ಪಟ್ಟಿದೆ. ಆದರೆ ಸೋಮಾಲಿಲ್ಯಾಂಡ್’ಗೆ ದೇಶದ ಅನುಕೂಲ ಇನ್ನು ಸಿಕ್ಕಿಲ್ಲ. ಈ ರಾಜ್ಯದಲ್ಲಿ ಅತ್ಯಾಚಾರ ಒಂದು ಕಾನೂನುಭಂಗ ವಾಗಿರಲಿಲ್ಲ.