ಸಿನಿಮಾ

ರೆಬೆಲ್ ಸ್ಟಾರ್ ಅಂಬಿ ಅಂತ್ಯಕ್ರಿಯೆಗೆ, ರಮ್ಯ ಬಾರದೆ ಇರಲು ಕಾರಣವೇ ಇದು!

410

ಶನಿವಾರದಂದು ವಿಧಿವಶರಾದ ಕನ್ನಡ ಚಿತ್ರರಂಗದ ಖ್ಯಾತ ನಟ ಅಂಬರೀಶ್ ಅವರ ಅಂತ್ಯಕ್ರಿಯೆ, ಸೋಮವಾರದಂದು ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ.ಅಂಬರೀಶ್ ನಿಧನದ ಸಂದರ್ಭದಲ್ಲಿ ಸಂತಾಪ ಕೋರಿ ಟ್ವೀಟ್ ಮಾಡಿದ್ದ ನಟಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ರಮ್ಯಾ, ಅಂತ್ಯಕ್ರಿಯೆಗೆ ಬಾರದಿರುವುದು ಅಂಬರೀಶ್ ಅಭಿಮಾನಿಗಳನ್ನು ಕೆರಳಿಸಿತ್ತು.

ಅಂಬರೀಶ್ ಸಾವಿಗೀಡಾದ ಸುದ್ದಿ ತಿಳಿದಾಗಿನಿಂದಲೂ ಇಡೀ ಕನ್ನಡ ಚಿತ್ರೋದ್ಯಮ ಮಾತ್ರವಲ್ಲದೆ ಹಲವು ಭಾಷೆಗಳ ಚಿತ್ರರಂಗದ ಖ್ಯಾತನಾಮರು, ಅಂತಿಮ ದರ್ಶನದಿಂದ ಅಂತ್ಯಸಂಸ್ಕಾರದವರೆಗೆ ಹಾಜರಾಗಿದ್ದರೂ ರಮ್ಯಾ ಮಾತ್ರ ಕಾಣಿಸಿಕೊಂಡಿರಲಿಲ್ಲ.
ರಮ್ಯ ಅಂಬರೀಶ್ ಅಂತಿಮ ದರ್ಶನಕ್ಕೆ ಬಾರದಿರಲು ಕಾರಣ?

ರಮ್ಯಾ ಅವರು ಆಸ್ಟಿಯೋಕ್ಲ್ಯಾಟೋಮಾ(Osteoclastoma) ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಸ್ಟಿಯೋಕ್ಲ್ಯಾಟೋಮಾ ಎನ್ನುವುದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದೆ. ರಮ್ಯಾ ಅವರ ಕಾಲಿನ ಎಲುಬುಗಳ ನಡುವೆ ಉಂಟಾಗಿರುವ ಸಮಸ್ಯೆ ಇದಾಗಿದ್ದು, ಕೊಂಚ ನಿರ್ಲಕ್ಷ್ಯ ವಹಿಸಿದ್ರು ಮಾರಕ ಕಾಯಿಲೆ ಕ್ಯಾನ್ಸರ್ ಗೆ ತುತ್ತಾಗುತ್ತಿದ್ರಂತೆ. ಹೀಗಾಗಿ ಅವರು ಚಿಕಿತ್ಸೆ ಪಡೆದು ಅಕ್ಟೊಬರ್ ನಿಂದ ವಿಶ್ರಾಂತಿ ಪಡೆಯುತ್ತಿದ್ದಾರಂತೆ. ಈ ಕುರಿತು ಸ್ವತಃ ರಮ್ಯಾ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಕಾಲಿನ ಚಿತ್ರ ಹಾಕಿ ಬರೆದುಕೊಂಡಿದ್ದಾರೆ.

ಆಸ್ಟಿಯೋಕ್ಲ್ಯಾಟೋಮಾ ಎಂಬುದು ಒಂದು ಅಪರೂಪದ ಕಾಯಿಲೆಯಾಗಿದ್ದು, ಇದೀಗ ಮಾಜಿ ಸಂಸದೆ ಈ ರೋಗಕ್ಕೆ ತುತ್ತಾಗಿದ್ದಾರೆ. ಈ ಕಾಯಿಲೆ 10 ಲಕ್ಷ ಮಂದಿಯಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತದೆ.ದಿವ್ಯ ಸ್ಪಂದನ ಎಂಬ ಹುಡುಗಿ ಸ್ಯಾಂಡಲ್‍ವುಡ್‍ನಲ್ಲಿ ರಮ್ಯಾ ಆಗಿ ಬೆಳೆಯುವಲ್ಲಿ ಅಂಬಿ ಆಶೀರ್ವಾದವಿತ್ತು. ಅಲ್ಲದೇ ನಟಿಯಾಗಿದ್ದ ರಮ್ಯಾ ಮಂಡ್ಯದಲ್ಲಿ ಗೆದ್ದು ಸಂಸದೆಯಾಗಿದ್ದರು. ಆದರೆ ಅಂಬರೀಶ್ ನಿಧನಕ್ಕೆ ಕೇವಲ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದರು. ಇದರಿಂದ ಸಿಟ್ಟಿಗೆದ್ದ ಅಂಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಮ್ಯಾಗೆ ಛೀಮಾರಿ ಹಾಕಿದ್ದರು. ಅಲ್ಲದೇ ಮಂಡ್ಯದ ಜನತೆ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬಿಎಂಟಿಸಿ ಸಾರಿಗೆ ಇಲಾಖೆ ಇಂದ ಮಹಿಳಾ ಪ್ರಯಾಣಿಕರಿಗೊಂದು’ಸಂತಸದ ಸುದ್ದಿ’…!

    ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆಯ ಅಭಯ ನೀಡಲು ಬಿಎಂಟಿಸಿ ಮುಂದಡಿ ಇಟ್ಟಿದೆ. ಬಸ್‌ಗಳು ಮತ್ತು ನಿಲ್ದಾಣಗಳನ್ನು ಮಹಿಳಾ ಸ್ನೇಹಿಯನ್ನಾಗಿಸಿ, ಸುರಕ್ಷತೆಯ ಭಾವನೆ ಮೂಡಿಸಲು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಬಿಎಂಟಿಸಿ ನಿಲ್ದಾಣಗಳಲ್ಲಿ ಹಲವು ಸೌಲಭ್ಯ ಒಳಗೊಂಡ ಮಹಿಳಾ ವಿಶ್ರಾಂತಿ ಗೃಹ ನಿರ್ಮಿಸಲು ಯೋಜಿಸಲಾಗಿದೆ. ಖರ್ಚಾಗದೇ ಉಳಿದಿರುವ ನಿರ್ಭಯಾ ನಿಧಿಯನ್ನು ಬಳಕೆ ಮಾಡಿಕೊಳ್ಳಲು ಬಿಎಂಟಿಸಿಯಿಂದ ಮಹಿಳೆಯರ ವಿಶ್ರಾಂತಿ ಗೃಹ ಆರಂಭಿಸಲಾಗುವುದು. ಕೇಂದ್ರ ಸರಕಾರವು ‘ನಿರ್ಭಯಾ’ ಯೋಜನೆಯಡಿ 56.50 ಕೋಟಿ ರೂ. ಅನುದಾನವನ್ನು ಬಿಎಂಟಿಸಿಗೆ ಮಂಜೂರು ಮಾಡಿದೆ. ಈ ಅನುದಾನದಲ್ಲಿ ಮಹಿಳಾ ಪ್ರಯಾಣಿಕರಿಗೆ…

  • ಜ್ಯೋತಿಷ್ಯ

    ಇದ್ದಕಿದ್ದಂತೆ ನಿಮ್ಮ ಜೇಬಿನಲ್ಲಿರುವ ನಾಣ್ಯ ಅಥ್ವಾ ನೋಟು ಕೆಳಗಡೆ ಬಿದ್ರೆ ಏನಾಗುತ್ತೆ ಗೊತ್ತಾ..?

    ಜೇಬಿನಿಂದ ಪೆನ್ ಅಥವಾ ಮತ್ತ್ಯಾವುದೋ ಚೀಟಿ ತೆಗೆಯುವಾಗ ನಾಣ್ಯ ಅಥವಾ ನೋಟು ಕೆಲವೊಮ್ಮೆ ಕೆಳಗೆ ಬೀಳುತ್ತದೆ. ಕೆಳಗೆ ಬಿದ್ದ ನೋಟನ್ನು ಅನೇಕರು ಕೋಪ ಮಾಡಿಕೊಂಡು ಕಿರಿಕಿರಿ ಮಾಡ್ತಾ ಎತ್ತಿಕೊಳ್ತಾರೆ. ಆದ್ರೆ ಇನ್ಮುಂದೆ ಹಾಗೆ ಮಾಡಬೇಡಿ. ನಿಮ್ಮ ಜೇಬಿನಿಂದ ಕೆಳಗೆ ಬಿದ್ದ ಹಣವನ್ನು ಖುಷಿಯಿಂದ ಎತ್ತಿಕೊಳ್ಳಿ. ಜೇಬಿನಿಂದ ಹಣ ಬೀಳೋದು ಯಾವುದರ ಮುನ್ಸೂಚನೆ ಎಂಬುದನ್ನು ತಿಳಿದುಕೊಂಡ್ರೆ ಯಾವಾಗ ಜೇಬಿನಿಂದ ಹಣ ಬೀಳುತ್ತೆ ಅಂತಾ ನೀವು ಕಾಯೋದ್ರಲ್ಲಿ ಸಂಶಯವಿಲ್ಲ. ನಿಮ್ಮ ಜೇಬಿನಿಂದ ಬಿದ್ದ ನಾಣ್ಯವನ್ನು ಎತ್ತಿಕೊಳ್ಳುವ ಮೊದಲು ಅದ್ರಿಂದಾಗುವ ಶುಭ…

  • Health

    ನಿಮ್ಮ ದೇಹದ ಶಾಖವನ್ನು ಕಡಿಮೆ ಮಾಡಲು ಈ ಆಹಾರ ಕ್ರಮಗಳನ್ನು ಅನುಸರಿಸಿ…ತಿಳಿಯಲು ಈ ಲೇಖನಿ ಓದಿ…

    ದೇಹದಲ್ಲಿ ಬಿಸಿಯಾಗಲು ಮತ್ತು ಶರೀರ ತಾಪಮಾನ ಏರಿಕೆಗೆ ಹಲವು ಕಾರಣಗಳಿವೆ. ನಿಮ್ಮ ಸುತ್ತಲಿನ ಪರಿಸರದ ಕಾರಣದಿಂದಾಗಿ ನಿಮ್ಮ ದೇಹದಲ್ಲಿನ ಶಾಖಕ್ಕೆ ಕಾರಣ.

  • ವಿಸ್ಮಯ ಜಗತ್ತು

    ಮನಷ್ಯ ಪ್ರಾಣಿ ಮಾಡದ ಕೆಲಸವನ್ನು,10 ವರ್ಷದಿಂದ ಈ ಪ್ರಾಣಿ ಮಾಡಿದೆ..!

    ನಾವು ಮನುಷ್ಯರು ತಾವು ವಾಸವಿರುವ ಮನೆಯನ್ನೇ ಸ್ವಚ್ಚವಾಗಿಡುವುದಕ್ಕೆ, ಸೋಮಾರಿತನ ತೋರುತ್ತಾರೆ. ಇನ್ನು ಅಕ್ಕ ಪಕ್ಕದ ಜಾಗ ಅಥವಾ ಬೇರೆ ಜಾಗಗಳನ್ನು ಸ್ವಚ್ಚವಾಗಿದುವುದರ ಬಗ್ಗೆ ಯೋಚಿಸೋದು ತಂಬಾ ದೂರ ಬಿಡಿ.

  • ಉಪಯುಕ್ತ ಮಾಹಿತಿ

    ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭ!

    ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,೦೦೦ ರೂ ಹಣ ಸಂದಾಯ ಮಾಡುವ ಗೃಹಲಕ್ಷ್ಮಿ ಯೋಜನೆಗೆ  ನೋಂದಣಿ ಆರಂಭ ಮಾಡಲಾಗುವುದು, ಕುಟುಂಬಗಳಿಗೆ ಹಣ ಸಂದಾಯ ಮಾಡುವ ಮೊದಲು ಎಸ್.ಎಂ.ಎಸ್ ಮಾಹಿತಿ ನೀಡಲಾಗುತ್ತದೆ  ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1.28 ಕೋಟಿ ಕುಟುಂಬಗಳಿದ್ದು ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿಗೆ ಹಣ ಸಂದಾಯ ಅಗಲಿದೆ ಎಂದು ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಜುಲೈ 19 ನೋಂದಣಿ ಆರಂಭ…