ಸಿನಿಮಾ

ಕ್ಷುಲ್ಲಕ ಕಾರಣಕ್ಕೆ ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಟಿ ಜಯಪ್ರದಾ!

279

ಖ್ಯಾತ ನಟ ರೆಬಲ್ ಸ್ಟಾರ್ ಅಂಬರೀಶ್ ಶನಿವಾರ ರಾತ್ರಿ ವಿಧಿವಶರಾಗಿದ್ದು, ಆ ಕ್ಷಣದಿಂದ ಅಂತ್ಯಸಂಸ್ಕಾರದವರೆಗೆ ಬೆಂಗಳೂರು ಪೊಲೀಸರು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರತಿಯೊಂದು ಹಂತದಲ್ಲೂ ಕರ್ನಾಟಕ ಪೊಲೀಸರು ಸಂಯಮ ತೋರಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳೇ ಖುದ್ದಾಗಿ ನಿಂತು ತಮ್ಮ ಅಧೀನ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡುವ ಮೂಲಕ ಮಾದರಿಯಾಗಿದ್ದಾರೆ.

ಇಂತಹ ಸಂದರ್ಭದಲ್ಲಿ ಮಾಜಿ ಸಂಸದೆ ಜಯಪ್ರದಾ, ಕ್ಷುಲ್ಲಕ ಕಾರಣಕ್ಕೆ ಖಡಕ್ ಪೊಲೀಸ್ ಅಧಿಕಾರಿ ಎಂದೇ ಹೆಸರಾಗಿರುವ ಅಣ್ಣಾಮಲೈ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿತ್ತು. ಈ ವೇಳೆ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಆದ್ದರಿಂದ ಬೆಂಗಳೂರು ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದರು. ಆಗ ಕಂಠೀರವ ಸ್ಟುಡಿಯೋದ ಗೇಟ್ ಬಳಿ ಜಯಪ್ರದಾ ಅವರು ನಿಂತಿದ್ದರು. ನೂಕುನುಗ್ಗಲು ಉಂಟಾಗುತ್ತಿದ್ದಂತೆ ಅಣ್ಣಾಮಲೈ, ಕಾರಿನಲ್ಲಿ ಕುಳಿತುಕೊಳ್ಳುವಂತೆ ಜಯಪ್ರದಾ ಅವರಿಗೆ ಸೂಚಿಸಿದ್ದಾರೆ.

ಡಿಸಿಪಿ ಅಣ್ಣಾಮಲೈ ಅವರು ಹೇಳಿದ್ದ ಮಾತನ್ನು ತಪ್ಪಾಗಿ ತಿಳಿದುಕೊಂಡ ನಟಿ ಜಯಪ್ರದಾ, ಸ್ಥಳದಲ್ಲಿಯೇ ಅವರ ವಿರುದ್ಧ ಕೂಗಾಡಿದ್ದಾರೆ. ಅಣ್ಣಾಮಲೈ ಡಿಸಿಪಿ ಆದರೆ ನಾನು ಮಾಜಿ ಸಂಸದೆಯಾಗಿದ್ದಾನೆ. ಅದರಲ್ಲೂ ನಾನೊಬ್ಬ ಮಹಿಳೆ. ನಮಗೆ ಭದ್ರತೆ ಒದಗಿಸಬೇಕು ಅವರು. ಯಾವುದೇ ತೊಂದರೆಯಾಗದಂತೆ ಭದ್ರತೆ ನೀಡುವುದು ಪೊಲೀಸರ ಕರ್ತವ್ಯವಾಗಿದೆ ಎಂದು ಹೇಳುವ ಮೂಲಕ ಅಣ್ಣಾಮಲೈ ವಿರುದ್ಧ ಜಯಪ್ರದಾ ಕಿಡಿಕಾರಿದ್ದಾರೆ.ಇದಕ್ಕೆ ಈಗ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಹಣ ಕಾಸು

    10 ರೂಪಾಯಿ ನಾಣ್ಯವನ್ನು ಹೊಂದಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್..!ತಿಳಿಯಲು ಈ ಲೇಖನ ಓದಿ..

    10 ರೂಪಾಯಿ ನಾಣ್ಯವನ್ನು ರದ್ದು ಮಾಡಿರದಿದ್ದರೂ, ಅನೇಕ ಕಡೆಗಳಲ್ಲಿ ವರ್ತಕರು, ಜನ ಸಾಮಾನ್ಯರು ಇವುಗಳನ್ನು ಸ್ವೀಕರಿಸಲು ಹಿಂದೇಟು ಹಾಕ್ತಾರೆ.ಇವೇ ಮೊದಲಾದ ಕಾರಣಗಳಿಂದಾಗಿ ಬ್ಯಾಂಕ್ ಗಳಲ್ಲಿ ನಾಣ್ಯ ಮೇಳ ನಡೆಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ವಾಣಿಜ್ಯ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ.

  • ವ್ಯಕ್ತಿ ವಿಶೇಷಣ

    ಭಗತ್ ಸಿಂಗ್’ರವರ ಬಾಲ್ಯದ, ಈ ರೋಚಕ ಕಥೆ ಓದಿದ್ರೆ ನೀವು ಶಾಕ್ ಆಗ್ತೀರಾ..!

    ಸ್ವಾತಂತ್ರ್ಯ ಪೂರ್ವದ ಘಟನೆ. ಪಂಜಾಬಿನ ಒಂದು ಹಳ್ಳಿ. 3 ವರ್ಷದ ಬಾಲಕನೊಬ್ಬ ತನ್ನ ತಂದೆಯೊಂದಿಗೆ ಸುತ್ತಾಡಿ ಬರಲು ಮನೆಯಿಂದ ಹೊರಟ. ಅವರೊಂದಿಗೆ ಅವನ ತಂದೆಯ ಮಿತ್ರರೊಬ್ಬರು ಇದ್ದರು. ಮೂವರೂ ಮಾತಾಡುತ್ತ ಮುಂದೆ ಮುಂದೆ ಹೋಗಿ ಅವರ ಊರಿನ ಗಡಿಯಾಚೆ ನಡೆದರು.

  • ಆರೋಗ್ಯ

    ನೀವು ಕಾಫಿ ಪ್ರಿಯರಾ? ಹಾಗೇನಾದರೂ ಆಗಿದ್ದರೆ ಹುಷಾರು.

    ಗರ್ಭಿಣಿಯರು ಹೆಚ್ಚಾಗಿ ಕಾಫಿ ಸೇವಿಸುವುದು ಅವರ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದಲ್ಲ. ದಿನಕ್ಕೊಮ್ಮೆಯೋ, ಎರಡು ಬಾರಿಯೋ ಕಾಫಿ ಸೇವಿಸಿದರೆ ಅದು ಚೈತನ್ಯ ನೀಡುವುದಲ್ಲದೆ, ಚಟುವಟಿಕೆಯಿಂದ ಇರಲು ಸಹಕರಿಸುತ್ತದೆ. ಆದರೆ ಇದೇ ಅಭ್ಯಾಸ ಅತಿಯಾಗಿ, ದಿನಕ್ಕೆ ಐದಾರು ಬಾರಿ ಅಥವಾ ಇನ್ನೂ ಹೆಚ್ಚು ಬಾರಿ ಕಾಫಿ ಸೇವಿಸುತ್ತಲೇ ಇರುವುದರಿಂದ ಶರೀರದ ಆರೋಗ್ಯ ಸಂಪೂರ್ಣ ಹದಗೆಡುವುದು ಖಂಡಿತ. ಮಾನಸಿಕ ಆರೋಗ್ಯದ ಮೇಲೂ ಇದು ಪ್ರಭಾವ ಬೀರುತ್ತದೆ ಎಂಬುದೂ ಸಹ ಇತ್ತೀಚೆಗೆ ದೃಢಪಟ್ಟಿದೆ. ಅತಿಯಾಗಿ ಕಾಫಿ ಸೇವಿಸುವ ವ್ಯಕ್ತಿ…

  • ಸುದ್ದಿ

    ರಾತ್ರಿ ವೇಳೆ ತಾಜ್ ಮಹಲ್ ನಲ್ಲಿ ಲೈಟ್ ಯಾಕೆ ಹಾಕುವುದಿಲ್ಲ ಗೊತ್ತಾ..!

    ವೀಕ್ಷಕರೇ ನಮ್ಮ ಭಾರತ ದೇಶವು ಸಾಂಸ್ಕೃತಿಕವಾಗಿ ತುಂಬಾ ಮುಂದುವರಿದ ದೇಶವಾಗಿದೆ ಈ ನಮ್ಮ ದೇಶದಲ್ಲಿ ಅನೇಕ ರೀತಿಯ ಅರಮನೆಗಳು ದೇವಸ್ಥಾನಗಳು ಪೂರಕವಾಗಿರುವಂತಹ ಶಿಲ್ಪಕಲೆಗಳನ್ನು ಹೊಂದಿರುವುದನ್ನು ನಾವು ಕಾಣಬಹುದಾಗಿದೆ. ಈ ರೀತಿ ಅರಮನೆಗಳು ಮತ್ತೆ ದೇವಾಲಯಗಳನ್ನು ನೋಡಲು ಸಾವಿರಾರು ಲಕ್ಷಾಂತರ ಪ್ರವಾಸಿಗರು ಬರುವುದನ್ನು ನಾವು ಕಾಣಬಹುದು. ಎಷ್ಟೊಂದು ಪ್ರವಾಸಿಗರು ರಾತ್ರಿ ವೇಳೆಯಲ್ಲಿ ಈ ರೀತಿ ಸ್ಥಳಗಳನ್ನು ನೋಡಲು ಬರುತ್ತಾರೆ ರಾತ್ರಿ ವೇಳೆಯಲ್ಲಿಯೇ ಬರುತ್ತಾರೆ ಏಕೆಂದರೆ ಈ ಸ್ಥಳಗಳಲ್ಲಿರುವ ಅತ್ಯುನ್ನತವಾದ ಅರಮನೆಗಳು ದೇವಾಲಯಗಳಿಗೆ ದೀಪಗಳಿಂದ ಅಲಂಕಾರವನ್ನು ಮಾಡಿರುತ್ತಾರೆ.  ಬೆಳಗ್ಗಿನ ಸಮಯದಲ್ಲಿ…

  • ಜ್ಯೋತಿಷ್ಯ

    ಶುಭ ಶುಕ್ರವಾರದ ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

    ಇಂದು ಶುಕ್ರವಾರ, 16/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಉದ್ಯೋಗಿಗಳು ನೂತನ ವೃತ್ತಿಯನ್ನು ಕೈಗೊಳ್ಳಬಹುದು. ಹೊಸ ಮನೆಗೆ ಹೋಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಆರೋಗ್ಯದಲ್ಲಿ ಏರುಪೇರಾಗ ಬಹುದು. ಜಾಗ್ರತೆ ವಹಿಸಬೇಕು. ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ತಂದೆ ಜತೆ ಸಮಾಲೋಚಿಸಿ ತೀರ್ಮಾನ ಸಾಧ್ಯತೆ. ತೀರ್ಥ ಕ್ಷೇತ್ರಗಳ ಪ್ರವಾಸಕ್ಕೆ ಮಕ್ಕಳು ನಿಮಗೆ ನೆರವಾಗಲಿದ್ದಾರೆ. ವೃಷಭ:- ರಾಜಕೀಯ ಸ್ಥಿತ್ಯಂತರ ಸಾಧ್ಯತೆಯಿದೆ. ಮುಖ್ಯವಾದ ಕೆಲಸವೊಂದಕ್ಕೆ ಸಲಹೆ ಪಡೆಯಲು ಪ್ರಸಿದ್ಧ ವ್ಯಕ್ತಿಯೊಬ್ಬರನ್ನು ಬೇಟಿಯಾಗುವ  ಸಾದ್ಯತೆ ಇದೆ. ಕಾರ್ಯನಿಮಿತ್ತವಾಗಿ ಸಂಚಾರವಿರುತ್ತದೆ. ಆರ್ಥಿಕವಾಗಿ…

  • ಆರೋಗ್ಯ

    ಈ ತರಕಾರಿಗಳನ್ನು ಸೇವಿಸಿದ್ರೆ ಮಹಿಳೆಯರಿಗೆ ಕಿಡ್ನಿ ಸಮಸ್ಯೆ ಯಾವತ್ತು ಬರುವುದಿಲ್ಲ…!ತಿಳಿಯಲು ಈ ಲೇಖನ ಓದಿ..

    ಇತ್ತೀಚಿನ ದಿನಗಳಲ್ಲಿ ಎಲ್ಲರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಕಿಡ್ನಿ ಸಮಸ್ಯೆ, ಅದರಲ್ಲೂ ಮಹಿಳೆಯರನ್ನು ಹೆಚ್ಚು ಕಾಡಿಸುವ ಕಾಯಿಲೆಗಳಲ್ಲಿ ಕಿಡ್ನಿ ಸಮಸ್ಯೆಯೂ ಒಂದು. ಮೂತ್ರಕೋಶದಲ್ಲಿ ಸೋಂಕು ಮತ್ತು ಕಲ್ಲುಗಳು ಇತ್ಯಾದಿ ಸಮಸ್ಯೆಗಳು ಇವರಲ್ಲಿ ಸಾಮಾನ್ಯ