ಸಿನಿಮಾ

ಕ್ಷುಲ್ಲಕ ಕಾರಣಕ್ಕೆ ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಟಿ ಜಯಪ್ರದಾ!

281

ಖ್ಯಾತ ನಟ ರೆಬಲ್ ಸ್ಟಾರ್ ಅಂಬರೀಶ್ ಶನಿವಾರ ರಾತ್ರಿ ವಿಧಿವಶರಾಗಿದ್ದು, ಆ ಕ್ಷಣದಿಂದ ಅಂತ್ಯಸಂಸ್ಕಾರದವರೆಗೆ ಬೆಂಗಳೂರು ಪೊಲೀಸರು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರತಿಯೊಂದು ಹಂತದಲ್ಲೂ ಕರ್ನಾಟಕ ಪೊಲೀಸರು ಸಂಯಮ ತೋರಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳೇ ಖುದ್ದಾಗಿ ನಿಂತು ತಮ್ಮ ಅಧೀನ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡುವ ಮೂಲಕ ಮಾದರಿಯಾಗಿದ್ದಾರೆ.

ಇಂತಹ ಸಂದರ್ಭದಲ್ಲಿ ಮಾಜಿ ಸಂಸದೆ ಜಯಪ್ರದಾ, ಕ್ಷುಲ್ಲಕ ಕಾರಣಕ್ಕೆ ಖಡಕ್ ಪೊಲೀಸ್ ಅಧಿಕಾರಿ ಎಂದೇ ಹೆಸರಾಗಿರುವ ಅಣ್ಣಾಮಲೈ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿತ್ತು. ಈ ವೇಳೆ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಆದ್ದರಿಂದ ಬೆಂಗಳೂರು ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದರು. ಆಗ ಕಂಠೀರವ ಸ್ಟುಡಿಯೋದ ಗೇಟ್ ಬಳಿ ಜಯಪ್ರದಾ ಅವರು ನಿಂತಿದ್ದರು. ನೂಕುನುಗ್ಗಲು ಉಂಟಾಗುತ್ತಿದ್ದಂತೆ ಅಣ್ಣಾಮಲೈ, ಕಾರಿನಲ್ಲಿ ಕುಳಿತುಕೊಳ್ಳುವಂತೆ ಜಯಪ್ರದಾ ಅವರಿಗೆ ಸೂಚಿಸಿದ್ದಾರೆ.

ಡಿಸಿಪಿ ಅಣ್ಣಾಮಲೈ ಅವರು ಹೇಳಿದ್ದ ಮಾತನ್ನು ತಪ್ಪಾಗಿ ತಿಳಿದುಕೊಂಡ ನಟಿ ಜಯಪ್ರದಾ, ಸ್ಥಳದಲ್ಲಿಯೇ ಅವರ ವಿರುದ್ಧ ಕೂಗಾಡಿದ್ದಾರೆ. ಅಣ್ಣಾಮಲೈ ಡಿಸಿಪಿ ಆದರೆ ನಾನು ಮಾಜಿ ಸಂಸದೆಯಾಗಿದ್ದಾನೆ. ಅದರಲ್ಲೂ ನಾನೊಬ್ಬ ಮಹಿಳೆ. ನಮಗೆ ಭದ್ರತೆ ಒದಗಿಸಬೇಕು ಅವರು. ಯಾವುದೇ ತೊಂದರೆಯಾಗದಂತೆ ಭದ್ರತೆ ನೀಡುವುದು ಪೊಲೀಸರ ಕರ್ತವ್ಯವಾಗಿದೆ ಎಂದು ಹೇಳುವ ಮೂಲಕ ಅಣ್ಣಾಮಲೈ ವಿರುದ್ಧ ಜಯಪ್ರದಾ ಕಿಡಿಕಾರಿದ್ದಾರೆ.ಇದಕ್ಕೆ ಈಗ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ರಾಜಕೀಯ

    ದೇಶವನ್ನು ನಡೆಸುವ ಪ್ರಮುಖ ವ್ಯಕ್ತಿಗಳ ತಿಂಗಳ ಸಂಬಳ ಎಷ್ಟು ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ದೇಶವನ್ನು ನಡೆಸಕ್ಕೆ ಒಂದಿಷ್ಟು ಜನ ತುಂಬಾನೆ ಮುಖ್ಯ, ಈ ಗಣ್ಯ ವ್ಯಕ್ತಿಗಳ ಸಂಬಳ ಎಷ್ಟು ಅಂತ ನಿಮಗೆ ಗೊತ್ತಾ? ಪ್ರಧಾನಿ, ರಾಷ್ಟ್ರಪತಿ ಹೀಗೆ ಎಲ್ಲರಿಗೂ ಇಂತಿಷ್ಟು ಅಂತ ತಿಂಗಳಿಗೆ ಸಂಬಳ ಇರತ್ತೆ ಜೊತೆಗೆ ಆಯಾ ಹುದ್ದೆಗೆ ತಕ್ಕಂತೆ ರಿಯಾಯತಿ ಸಹ ಇರತ್ತೆ.

  • Sports

    2ನೇ ಟೆಸ್ಟ್ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

    2ನೇ ಟೆಸ್ಟ್ ಪಂದ್ಯ  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ಕೆಎಲ್ ರಾಹುಲ್ ಈ ಪಂದ್ಯಕ್ಕೆ ನಾಯಕ.  ಬೆನ್ನುನೋವಿನ ಸೆಳೆತದಿಂದ ವಿರಾಟ್ ಕೊಹ್ಲಿ ಅಲಭ್ಯ,ಹನುಮ ವಿಹಾರಿ ಕಣಕ್ಕೆ ಅಂತಿಮ 11ರ ಬಳಗ  ಭಾರತ ಮಾಯಾಂಕ್ ಅಗರ್ವಾಲ್ ಕೆ ಎಲ್ ರಾಹುಲ್(ನಾಯಕ) ಚೇತೇಶ್ವರ ಪೂಜಾರಾ ಅಜಿಂಕ್ಯ ರಹಾನೆ ಹನುಮ ವಿಹಾರಿ ರಿಷಭ್ ಪಂತ್ (ವಿ.ಕೀ) ರವಿಚಂದ್ರನ್ ಅಶ್ವಿನ್ ಶಾರ್ದೂಲ್ ಠಾಕೂರ್ ಮೊಹಮ್ಮದ್ ಶಮಿ ಜಸ್ಪ್ರೀತ್ ಬುಮ್ರಾ ಮೊಹಮ್ಮದ್ ಸಿರಾಜ್ ದಕ್ಷಿಣ ಆಫ್ರಿಕಾ ಡೀನ್ ಎಲ್ಗರ್(ನಾಯಕ) ಐಡೆನ್…

    Loading

  • ಉಪಯುಕ್ತ ಮಾಹಿತಿ

    ಮನೆಯಲ್ಲಿ ನೀವು ಇಡಬೇಕಾದ ವಾಸ್ತು ಗಿಡಗಳು ಮತ್ತು ಅದರ ಪರಿಣಾಮಗಳು; ನೀವು ತಪ್ಪದೇ ತಿಳಿಯಬೇಕಾದ ಸಂಗತಿಗಳು….

    ವಾಸ್ತುಶಾಸ್ತ್ರವೆನ್ನುವುದು ಶತಮಾನಕ್ಕಿಂತಲೂ ಹಿಂದಿನಿಂದಲೂ ಇತ್ತು. ಆಗಿನ ಕಾಲದಲ್ಲಿ ಕಟ್ಟಡ, ಮನೆ ಹಾಗೂ ಯಾವುದೇ ರೀತಿಯ ನಿರ್ಮಾಣ ಮಾಡಬೇಕಿದ್ದರೂ ವಾಸ್ತು ಪ್ರಕಾರವೇ ಅದನ್ನು ಮಾಡಿಕೊಂಡು ಬರಲಾಗುತ್ತಿತ್ತು. ಇಂದಿನ ದಿನಗಳಲ್ಲಿ ಪ್ರತಿಯೊಂದು ವಿಚಾರವೂ ವಾಣಿಜ್ಯೀಕರಣವಾಗಿರುವ ಹಿನ್ನೆಲೆಯಲ್ಲಿ ವಾಸ್ತು ಶಾಸ್ತ್ರವು ಹಾಗೆ ಆಗಿದೆ. ವಾಸ್ತುಶಾಸ್ತ್ರವು ಅತಿಯಾಗಿ ಜನಪ್ರಿಯತೆ ಪಡೆದುಕೊಂಡಿದೆ. ಇದರಿಂದ ಇಂದು ಯಾವುದೇ ಮನೆ ಅಥವಾ ವಾಣಿಜ್ಯ ಕಟ್ಟಡವನ್ನು ನಿರ್ಮಾಣ ಮಾಡಬೇಕಿದ್ದರೂ ಅಲಂಕಾರ ಅಥವಾ ಯಾವುದೇ ಪೀಠೋಪಕರಣ ಇಡಬೇಕಿದ್ದರೂ ಅದನ್ನು ವಾಸ್ತುಶಾಸ್ತ್ರದ ಪ್ರಕಾರ ಮಾಡಲಾಗುತ್ತದೆ. ಮನೆ ಅಥವಾ ಕಟ್ಟಡದಲ್ಲಿ ಸುಖ, ಸಮೃದ್ಧಿ ನೆಲೆಸಬೇಕಿದ್ದರೆ…

  • ಸುದ್ದಿ

    ಕೋಲಾರದಲ್ಲಿ ಹೆರಿಗೆ ನೋವಿಂದ ಆಸ್ಪತ್ರೆಯಲ್ಲಿ ನೆಲದ ಮೇಲೆ 4 ಗಂಟೆ ನರಳಿದ ಮಹಿಳೆ, ವೀಡಿಯೋ ವೈರಲ್….!

    ಚಿನ್ನದ ನಾಡು ಕೆಜಿಎಫ್ ನ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬಳು ಹೆರಿಗೆ ನೋವಿನಿಂಡ ಬಳಲುತ್ತಿದ್ದರೂ ಸೂಕ್ತ ಸಮಯಕ್ಕೆ ವೈದ್ಯರು ಶುಶ್ರೂಷೆ ಮಾಡದ ಕಾರಣ ತಾಯಿಯೊಬ್ಬಳು ತನ್ನ ಮಗುವನ್ನು ಕಳೆದುಕೊಂಡ ಅಮಾನವೀಯ ಘಟನೆ ನಡೆದಿದೆ. ಗರ್ಭಿಣಿ ಮಹಿಳೆ ಹೆರಿಗೆ ನೋವಿನಿಂದ ಒದ್ದಾಡುತ್ತಿರುವ ವೀಡಿಯೋ ದೃಶ್ಯಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೆಜಿಎಫ್ 8ನೇ ಬ್ಲಾಕ್‍ನ ರಿಯಾಜ್ ಎಂಬವರ ಪತ್ನಿ ಸಮೀನಾ ಅವರಿಗೆ ಸೋಮವ್ರ ಮಧ್ಯಾಹ್ನ ಹೆರಿಗೆ ನೋವು ಕಾಣಿಸಿದೆ. ಆಕೆಯನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ…

  • ಸುದ್ದಿ

    ಹುಷಾರ್…..!ಸ್ಮಾರ್ಟ್‌ ಟೀವಿಯನ್ನು ಹ್ಯಾಕ್‌ ಮಾಡಿ, ದಂಪತಿಯ ಲೈಂಗಿಕ ಕ್ರಿಯೆ ದೃಶ್ಯ ಸೆರೆ…!

    ಕಂಪ್ಯೂಟರ್‌ಗಳು, ಕಂಪನಿಯ ಸರ್ವರ್‌ಗಳನ್ನು ಹ್ಯಾಕ್‌ ಮಾಡುವುದನ್ನು ಕೇಳಿದ್ದೇವೆ. ಆದರೆ ಸೂರತ್‌ನಲ್ಲಿ ಕಂಡುಕೇಳರಿಯದ ಪ್ರಕರಣವೊಂದು ವರದಿಯಾಗಿದೆ. ಮನೆಯೊಂದರ ಬೆಡ್‌ರೂಂನಲ್ಲಿ ಅಳವಡಿಸಲಾಗಿದ್ದ ಸ್ಮಾರ್ಟ್‌ ಟೀವಿಯನ್ನು ಹ್ಯಾಕ್‌ ಮಾಡಿ, ದಂಪತಿಯ ಲೈಂಗಿಕ ಕ್ರಿಯೆ ದೃಶ್ಯಗಳನ್ನು ಸೆರೆ ಹಿಡಿದು, ಅಶ್ಲೀಲ ಜಾಲತಾಣಕ್ಕೆ ಅಪ್‌ಲೋಡ್‌ ಮಾಡಲಾಗಿರುವ ಘಟನೆ ನಡೆದಿದೆ. ತನ್ನದೇ ವಿಡಿಯೋ ಆನ್‌ಲೈನ್‌ ಅಶ್ಲೀಲ ಜಾಲತಾಣದಲ್ಲಿರುವುದನ್ನು ಪತಿ ನೋಡಿದ ಬಳಿಕ ಈ ಅಕ್ರಮ ಬಯಲಾಗಿದೆ. ಇದು ಸ್ಮಾರ್ಟ್‌ ಟೀವಿ ಬಳಕೆದಾರರಿಗೆ ಎಚ್ಚರಿಕೆ ಗಂಟೆಯಾಗಿದೆ. ಪೊಲೀಸರಿಗೆ ದೂರು ನೀಡಿದರೆ ಮುಜುಗರಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಈ…

  • ಉಪಯುಕ್ತ ಮಾಹಿತಿ

    ಅತಿ ಶೀಘ್ರದಲ್ಲೇ ಮತ್ತೊಮ್ಮೆ ಮಂಜಿನ ಯುಗ ಬರಲಿದೆ ಎಂದ ವಿಜ್ಞಾನಿಗಳು..!ತಿಳಿಯಲು ಈ ಲೇಖನ ಓದಿ..

    ಅತಿ ಶೀಘ್ರದಲ್ಲೇ ಮತ್ತೊಮ್ಮೆ ಮಂಜಿನ ಯುಗ ನಮ್ಮನ್ನು ಆವರಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಯಾಕೆಂದರೆ ಮುಂದಿನ 30 ವರ್ಷಗಳಲ್ಲಿ ಭೂಮಿ ಮೇಲೆ ಮಂಜು ಯುಗ ಎಂಬುದು ಬರಲಿದೆ. ಮಂಜಿನ ಯುಗ ಇದು ಇತಿಹಾಸ