ಸಿನಿಮಾ

ಸ್ಯಾಂಡಲ್ ವುಡ್ ತಾರಾ ಜೋಡಿ ದಿಗಂತ್-ಐಂದ್ರಿತಾ ಮದುವೆಗೆ ಹೋಗುವ ಅತಿಥಿಗಳು ಈ ಷರತ್ತನ್ನು ಪಾಲಿಸಬೇಕು..!

385

ಚಂದನವನದ ಈ ಕ್ಯೂಟ್ ಜೋಡಿ ಬಗ್ಗೆ ಹಲವಾರು ಸುದ್ದಿಗಳು ಬರುತ್ತಲೇ ಇದ್ದವು. ಇವರಿಬ್ಬರು ಲವ್ ಮಾಡ್ತಿದ್ದಾರೆ, ಮದುವೆ ಆಗ್ತಾರೆ ಎಂಬ ಸುದ್ದಿಗಳು ಆಗಾಗ ಬರ್ತಾ ಇತ್ತು. ಆ ಕ್ಯೂಟ್ ಜೋಡಿಗಳೇ ದುದ್ ಪೇಡಾ ದಿಗಂತ್ ಮತ್ತು ಐಂದ್ರಿತಾ ರೈ. ಈಗ ಜೋಡಿ ಮದುವೆಯಾಗಿ ನವಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ.

ಬೆಂಗಳೂರು ನಗರದ ರಾಜರಾಜೇಶ್ವರಿ ನಗರದ ಸುಭಾಷ್ ಭವನದಲ್ಲಿ ಈ ನವ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ದಾವಾಗಿದ್ದು, ಸಿಂಪಲ್ ಆಗಿ ಮಾಡುವೆ ಆಗಲಿದ್ದಾರಂತೆ.ಈಗಾಗಲೇ ಕುಟುಂಬದವರು ಇವರ ಮದುವೆಗೆ ಬಂಬಂಧು ಮಿತ್ರರನ್ನು ಕರೆಯಲು ಎರಡು ರೀತಿಯಲ್ಲಿ ಮಾಡುವೆ ಆಮಂತ್ರಣ ಪತ್ರಿಕೆ ರೆಡಿಯಾಗಿದೆಯಂತೆ.

ದಿಗಂತ್ ಮತ್ತು ಐಂದ್ರಿತಾ ರೈ ಮನಸಾರೆ ಚಿತ್ರದ ಚಿತ್ರೀಕರಣ ಸಂಧರ್ಭದಲ್ಲಿ ಇಬ್ಬರ ಪರಿಚಯವಾಗಿ ಬಳಿಕ ಒಬ್ಬೊಬ್ಬರನ್ನು ಅರ್ಥ ಮಾಡಿಕೊಂಡು ಲವ್ ಮಾಡಲು ಶುರು ಮಾಡಿದ್ದೆವು ಎಂದು ಹೇಳಿದ್ದಾರೆ.

ಈಗಾಗಲೇ ನಟ ದಿಗಂತ್ ಶ್ರೀಲಂಕಾದಲ್ಲಿ ಬ್ಯಾಚೂಲರ್ ಪಾರ್ಟಿ ಮುಗಿಸಿದ್ದು, ಇದೇ ತಿಂಗಳು 16ರಂದು ಅಂದ್ರೆ ಅವರ ಮದುವೆಗೆ ಮುನ್ನ ತಮ್ಮ ಗೆಳೆಯರಿಗಾಗಿ ವಿಶೇಷ ಪಾರ್ಟಿಯನ್ನು ದಿಗಂತ್-ಐಂದ್ರಿತಾ ಆಯೋಜನೆ ಮಾಡಿದ್ದಾರಂತೆ.

ಮದುವೆಗೆ ಬರೋ ಅತಿಥಿಗಳಿಗೆ ಷರತ್ತು ..!

ತಮ್ಮ ಮದುವೆಗೆ ಬಂದು ಮಿತ್ರರನ್ನು ಆಹ್ವಾನಿಸಿರುವ ಇವರು ಮದುವೆಗೆ ಆಗಮಿಸುವವರು ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕೆಂದು ಈ ತಾರಾ ಜೋಡಿ ಮನವಿ ಮಾಡಿಕೊಂಡಿದ್ದಾರಂತೆ.ಹಾಗೂ ಇವರ ಮಾಡುವೆ ಕರ್ನಾಟಕ ಮತ್ತು ಬಂಗಾಳಿ ಸಂಪ್ರದಾಯದಂತೆ ನಡೆಯಲಿದೆ.

ತಮ್ಮ ಮದುವೆ ಮೂಲಕ ಸ್ಪೂರ್ತಿ ಆಗಲಿದ್ದಾರೆ ಈ ತಾರಾ ಜೋಡಿ..

ತಮ್ಮ ಮದುವೆಯಲ್ಲಿ ಆದರ್ಶ ತೋರಿರುವ ಈ ಜೋಡಿ ಆದ್ದುರಿಯಾಗಿ ಮದ್ವೆ ಆಗೋದಿಲ್ಲ ಎಂದು ಹೇಳಿದ್ದಾರೆ.ಅದ್ದೂರಿ ಮದುವೆಗೆ ಖರ್ಚು ಮಾಡುವ ಹಣವನ್ನು ದತ್ತಿ ಸಂಸ್ಥೆಗಳಿಗೆ ದಾನ ಮಾಡುತ್ತೇವೆ ಎಂದು ಹೇಳಿದ್ದಾರೆ.ಡಿಸೆಂಬರ್ 11 ರಂದು ಅರಿಶಿಣ ಶಾಸ್ತ್ರದ ಸಮಾರಂಭವನ್ನು ಏರ್ಪಡಿಸಿದ್ದೇವೆ. ಡಿಸೆಂಬರ್ 12 ರಂದು ಮದುವೆ ನಡೆಯಲಿದೆ ಮತ್ತು ಸಿನಿಮಾರಂಗದ ಸ್ನೇಹಿತರಿಗೆ ಪಾರ್ಟಿ ಆಯೋಜನೆ ಮಾಡಿದ್ದೇವೆ ಎಂದು ಐಂದ್ರಿತಾ ಹೇಳಿದ್ದರು.

About the author / 

Basavaraj Gowda

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ