ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾಧಿಸುವವನಿಗೆ ಛಲ ಇದ್ರೆ ಖಂಡಿತ ಯಶಸ್ಸು ತನ್ನದಾಗಿಸಿ ಕೊಳ್ಳಬಹುದು ಹಾಗೂ ಅದಕ್ಕೆ ತಕ್ಕ ಪರಿಶ್ರಮ ಇದ್ರೆ ಖಂಡಿತ ಪ್ರತಿಫಲ ಸಿಕ್ಕೇ ಸಿಗುತ್ತದೆ ಅನ್ನೋದನ್ನ ಈ 23 ವಯಸ್ಸಿನ ಹೆಣ್ಣು ಮಗಳು ಸಾಧನೆ ಮಾಡಿ ತೋರಿಸಿದ್ದಾಳೆ. ಸಾಧನೆ ಅನ್ನೋದು ಬರಿ ಶ್ರೀಮಂತರಿಗೆ ಅಷ್ಟೇ ಅಲ್ಲ ಅನ್ನೋದನ್ನ ಕೂಡ ತೋರಿಸಿದ್ದಾಳೆ.
ಈಕೆಯ ಸಾಧನೆಯ ದಾರಿ ಹೇಗಿತ್ತು ಹಾಗೂ ಇದರ ಇಂದಿನ ಪರಿಶ್ರಮ ಹೇಗಿತ್ತು ಅನ್ನೋದನ್ನ ಈ ಮೂಲಕ ತಿಳಿಸುತ್ತೇವೆ ಬನ್ನಿ. ಈಕೆಯ ಹೆಸರು ಅನುಪ್ರಿಯಾ ಲಾಕ್ರಾ ಎಂಬುದಾಗಿ ಒಬ್ಬ ಸಾಮಾನ್ಯ ಪೊಲೀಸ್ ಕಾನ್ಸಟೇಬಲ್ ಮಗಳು ಇವರು ಒಂದು ಬುಡಕಟ್ಟು ಸಮುದಾಯಕ್ಕೆ ಸೇರಿದವರು.

ಚಿಕ್ಕ ವಯಸ್ಸಿನಲ್ಲೇ ತಾನು ಆಕಾಶದ ಎತ್ತರಕ್ಕೆ ಹಾರುವ ಕನಸನ್ನು ಬೆನ್ನಿಗೆ ಕಟ್ಟಿಕೊಂಡು ಬೆಳೆದವಳು ಆದ್ರೆ ತನ್ನ ಕನಸನ್ನು ಕನಸಾಗಿಯೇ ಉಳಿಸಿಕೊಳ್ಳದೆ ಅದನ್ನು ನನಸಾಗಿಸಿಕೊಂಡು ಸಾಧನೆಯ ಹಾದಿಯನ್ನು ತುಳಿದಿರುವ ದಿಟ್ಟ ಮಹಿಳೆ ಈ ಅನುಪ್ರಿಯಾ.
ಓಡಿಶಾದ ಬುಡಕಟ್ಟು ಸಮುದಾಯದ ಯುವತಿ ತಾನು ಕಡೆಗೂ ಪೈಲಟ್ ಆಗುವುದನ್ನು ಸಾಧಿಸಿ ತೋರಿಸಿದ್ದಾರೆ. ಸರಿಯಾದ ರಸ್ತೆ ಸಂಪರ್ಕವೂ ಇಲ್ಲದ ನಕ್ಸಲ್ ಬಾಂಧಿತ ಪ್ರದೇಶವಾಗಿದ್ದ ಮಲ್ಕಂಗಿರಿ ಜಿಲ್ಲೆಯವರಾಗಿರುವ ಅನುಪ್ರಿಯಾ ಅವರೀಗ ವಾಣಿಜ್ಯ ವಿಮಾನವೊಂದರ ಪೈಲಟ್ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ಈ ಸಾಧನೆ ಮಾಡಿರುವ ಮೊದಲ ಬುಡಕಟ್ಟು ಮಹಿಳೆಯೆಂದು ಗುರುತಿಸಿಕೊಂಡಿದ್ದಾರೆ.

ಆರು ವರ್ಷಗಳ ಕಾಲ ಬೆಂಗಳೂರು, ಮುಂಬೈ ಮತ್ತು ದೆಹಲಿಯ ವಿವಿಧ ತರಬೇತಿ ಸಂಸ್ಥೆಗಳಲ್ಲಿ ವಾಣಿಜ್ಯ ಪೈಲಟ್ ತರಬೇತಿ ಕೋರ್ಸ್‌ಗೆ ಸೇರಿ ತರಬೇತಿ ಹೊಂದಿದರು.ಇದಾಗಿ ಸುಮಾರು 200 ವೈಮಾನಿಕ ಗಂಟೆಗಳ ತರಬೇತಿ ಬಳಿಕ ವರು ಅಂತಿಮವಾಗಿ ಕಳೆದ ತಿಂಗಳು ವಾಣಿಜ್ಯ ಪೈಲಟ್‌ನ ಪ್ರಮಾಣಪತ್ರವನ್ನು ಪಡೆದರು. ಶೀಘ್ರದಲ್ಲೇ ಇಂಡಿಗೊ ವಿಮಾನಯಾನ ಸಂಸ್ಥೆಯಲ್ಲಿ ಸಹ ಪೈಲಟ್ ಆಗಿ ಸೇರಲು ಆಕೆ ಸಿದ್ದವಾಗಿದ್ದಾರೆ. ಇನ್ನು ಅನುಪ್ರಿಯಾ ತನ್ನ ಪೈಲಟ್ ತರಬೇತಿಗಾಗಿ ಕೇಂದ್ರ ಸರ್ಕಾರದಿಂದ ನೆರವು ಪಡೆಇದ್ದರು.
ಇವರ ಸಾಧನೆಯ ಬಗ್ಗೆ ತಂದೆ ಹೇಳಿದ್ದು ಹೀಗೆ ನಮ್ಮ ಮಗಳು ಚಿಕ್ಕಂದಿನಿಂದಲೂ ಪೈಲಟ್ ಆಗ್ವ ಕನಸನ್ನು ಕಂಡವಳು ಆದರೆ ಇದನ್ನು ಬರಿ ಕನಸಾಗಿ ಬಿಡದೆ ಕಷ್ಟಪಟ್ಟು ಸಾಧನೆ ಅಂದಿದ್ದಾಳೆ ಹಾಗೂ ನಾನು ಸಾಮಾನ್ಯ ಪೊಲೀಸ್ ಪೇದೆ ಆದ್ರೆ ಈ ವಿಚಾರದಲ್ಲಿ ತುಂಬಾನೇ ಖುಷಿ ಇದೆ ಹಾಗೂ ನಮ್ಮ ಊರು ಹಾಗೂ ದೇಶವೇ ಖುಷಿ ಪಡೆಯುವ ವಿಚಾರ ಅನ್ನೋದನ್ನ ತಮ್ಮ ಮನೆಯವರು ಹೇಳಿದ್ದಾರೆ.

ಇದೀಗ ಅಂತರರಾಷ್ಟ್ರೀಯ ವಿಮಾನದ ಪ್ರಾಯೋಗಿಕ ತರಬೇತಿಗಾಗಿ ಅನುಪ್ರಿಯಾ ಸ್ಪೇನ್‌ಗೆ ಹೋಗಲು ಯೋಜಿಸಿದ್ದು ಇದಕ್ಕಾಗಿ ಸುಮಾರು 20 ಲಕ್ಷ ರೂ. ಹಣ ಅಗತ್ಯವಿದೆ.ಆಕೆಯ ಕುಟುಂಬವು ಆಕೆಗಾಗಿ ಎಲ್ಲಾ ಉಳಿತಾಯಗಳನ್ನು ಉಪಯೋಗಿಸಿರುವ ಕಾರಣ , ರಾಜ್ಯದಲ್ಲಿ ಮಹಿಳೆಯರ ಸಬಲೀಕರಣವನ್ನು ಖಾತ್ರಿಪಡಿಸಿಕೊಳ್ಳುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಸಹಾಯ ಹಸ್ತ ನೀಡಬೇಕೆಂದು ಅನುಪ್ರಿಯಾ ಪೋಷಕರು ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಏಡಿಗಳು ಹೆಚ್ಚು ಕಾಲ ಬಾಳುವುದು ತೀರ ಅಪರೂಪ ವಿಚಾರ. ಆದರೆ ನ್ಯೂಯಾರ್ಕ್ ನಲ್ಲಿ ಏಡಿಯೊಂದು ಬರೋಬ್ಬರಿ 132 ವರ್ಷ ಬದುಕಿದೆ.
ದೇಶದ ರಾಜಕಾರಣದಲ್ಲಿ ತಮಿಳುನಾಡಿನ ಸೂಪರ್ ಸ್ಟಾರ್ಗಳಾದ ರಜನಿಕಾಂತ್ ಹಾಗೂ ಕಮಲಹಾಸನ್ ಅವರು ರಾಜಕೀಯಕ್ಕೆ ಬರುತ್ತಿರುವ ಬೆನ್ನಲ್ಲೇ ನಮ್ಮ ನಾಡಿನ ರಿಯಲ್ಸ್ಟಾರ್ ಉಪೇಂದ್ರ ಸಹ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಸಮೀಪ 7 ಹೆಡೆ ಸರ್ಪದ ಅಸ್ತಿತ್ವ ಕಂಡುಬಂದಿದೆ. 7 ತಲೆಯ ಹೊಂದಿರುವ ಹಾವಿನ ಪೂರೆ ಕಾಣಿಸಿಕೊಂಡಿದ್ದು, ಇದು ದೈವ ಸ್ವರೂಪ ಎಂದು ಗ್ರಾಮಸ್ಥರು ಹೂವು, ಹಣ್ಣು, ಅರಿಶಿನ ಕುಂಕುಮ ಹಾಕಿ ಪೂಜೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದೆ. ಕೋಡಿಹಳ್ಳಿ ಸಮೀಪದ ಮರಿಗೌಡನ ದೊಡ್ಡಿ ಬಳಿ ನಿರ್ಜನ ಪ್ರದೇಶದಲ್ಲಿ ಹಾವಿನ ಪೊರೆ ಕಾಣಿಸಿಕೊಂಡಿದೆ. ಸಮೀಪದಲ್ಲಿ ದೊಡ್ಡ ಹುತ್ತ ಕೂಡ ಇದೆ. ಸುಮಾರು 6 ತಿಂಗಳ ಹಿಂದೆ ಕೋಟೆಕೊಪ್ಪ ಗ್ರಾಮದ…
ಭಾರತದಲ್ಲಿ ರಾಮ ಅಥವಾ ಶಿವನ ಹೆಸರು ಸರ್ವೇ ಸಾಮಾನ್ಯ. ಇಂದು ರಾಮ ನವಮಿ ಇಲ್ಲಿದೆ ರಾಮನ ೧೦೮ ನಾಮದೇಯ. ಇದರಲ್ಲಿ ನಿಮಗೆಷ್ಟು ತಿಳಿದಿದೆ ಅಥವಾ ನಿಮಗೆ ತಿಳಿದ ಮತ್ತಷ್ಟು ನಾಮದೇಯ ವನ್ನು ನಮಗೆ ತಿಳಿಸಿ.
ತ್ರೀವಿಧ ದಾಸೋಹದ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದ ಸಿದ್ದಗಂಗಾ ಶ್ರೀಗಳು ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದಿದ್ದಾರೆ. ಪರಮಪೂಜ್ಯ ಶ್ರೀ ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಕಾರಣ ಇಡೀ ನಡೇ ಕಣ್ಣೀರಿನಲ್ಲಿ ಮುಳುಗಿದೆ.. ಬಡವರ ಬಂಧು.. ಜಾತಿ ಧರ್ಮ ಮತ ಬೇದ ಮಾಡದೇ ಕಾಯಕ ಯೋಗಿ ಪವಾಡ ಪುರುಷ ಶಿವಯೋಗಿ.. ಸಿದ್ದ ಪುರುಷ ಮಹಾಸ್ವಾಮಿಗಳು ಇಂದು ಬೆಳಿಗ್ಗೆ 11.44 ರಲ್ಲಿ ಭಕ್ತ ಕೋಟಿ ಸಾಗರವನ್ನು ಅಗಲಿದ್ದಾರೆ.. ಶಿವಕುಮಾರ ಸ್ವಾಮೀಜಿಗಳಿಗೆ ಮಕ್ಕಳೆಂದರೇ ಜಾಸ್ತಿ ಮಮತೆ. ಬದುಕಿನ ಹೆಚ್ಚಿನ ಕ್ಷಣಗಳನ್ನು ಶ್ರೀಗಳು ಮಕ್ಕಳ ಜೊತೆ…
ಬಸ್ ಸೀಟ್, ಉದ್ಯೋಗ ಮತ್ತು ಟ್ರೈನ್ ಬೋಗಿಯಲ್ಲಿ ಮಹಿಳೆಯರಿಗೆ ರಿಸರ್ವೆಷನ್ ಇದೆ. ಈಗ ಪಾರ್ಕಿಂಗ್ ನಲ್ಲೂ ಮಹಿಳಾ ಚಾಲಕರಿಗೆ ರಿಸರ್ವೆಷನ್ ಸಿಗುತ್ತಿದ್ದು, ಇದರ ಮೊದಲ ಹೆಗ್ಗಳಿಕೆ ನಮ್ಮ ಸಿಲಿಕಾನ್ ಸಿಟಿಗೆ ಸಿಕ್ಕಿದೆ.