ಸುದ್ದಿ

ಹಾಸನದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಪಕ್ಷದವರಿಂದಲೇ ಷಡ್ಯಂತ್ರ ನಡೆದಿದೆಯಾ? ವೈರಲ್ ಆಗಿರುವ ಆಡಿಯೋನಲ್ಲಿ ಏನಿದೆ ಗೊತ್ತಾ?

109


ಬಿಜೆಪಿ ಅಭ್ಯರ್ಥಿ ಸೋಲಿಗೆ ಕಮಲ ನಾಯಕರೇ ಸ್ಕೆಚ್ ಹಾಕುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಮೂಡಿದೆ. ಯಾಕಂದ್ರೆ ಶಾಸಕ ಪ್ರೀತಂಗೌಡ ಹಾಗೂ ಬಿಜೆಪಿ ಕಾರ್ಯಕರ್ತ ಮಾತಾಡಿದ್ದಾರೆ ಎನ್ನಲಾದ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬಿಜೆಪಿ ಶಾಸಕ ಪ್ರೀತಂಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಬಿಜೆಪಿಯಲ್ಲಿ ಪುಕ್ಸಟ್ಟೆ ನಾಯಕನಾಗಲು ಮಂಜು ಹೊರಟಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎ. ಮಂಜು ಬಗ್ಗೆ ಕಾರ್ಯಕರ್ತನ ಬಳಿ ಪ್ರೀತಂ ಗೌಡ ಮಾತನಾಡಿದ್ದಾರೆನ್ನಲಾಗಿದೆ.

ಹಾಸನದಲ್ಲಿ ಬಳ್ಳಾರಿ ಚುನಾವಣೆಯ ಫಲಿತಾಂಶ ಮರುಕಳಿಸುತ್ತದೆ. 10 ವರ್ಷದ ಹಿಂದೆ ಮಾಡಿರುವುದನ್ನು ಜನ ಮರೆತಿರಬಹುದು. 7 ತಿಂಗಳ ಹಿಂದೆ ಸಚಿವರಾಗಿ ಮಾಡಿದ ಅವಾಂತರ ಮರೀತಾರಾ ಎಂದು ಮಂಜು ಕುರಿತಾಗಿ ಮಾತನಾಡಲಾಗಿದೆ.

ಮಂಜು ಅವರ ಬಗ್ಗೆ ಜನ ಮರೆತಿಲ್ಲ. ಹೀಗಾಗಿ ವೋಟುಗಳು ಜೆಡಿಎಸ್ ಪಕ್ಷಕ್ಕೆ ಹೋಗುತ್ತವೆ. ವೋಟ್ ಬಂದರೆ ಮಂಜು ನಾನು ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಸೋತರೆ ಮತ್ತೆ ಸಿದ್ದರಾಮಯ್ಯ ಬಳಿಗೆ ಓಡಿ ಹೋಗುತ್ತಾರೆ ಎಂದೆಲ್ಲಾ ಬಿಜೆಪಿ ಕಾರ್ಯಕರ್ತ ಮತ್ತು ಶಾಸಕ ಪ್ರೀತಂಗೌಡ ಅವರ ನಡುವೆ ಸಂಭಾಷಣೆ ನಡೆದಿದ್ದು, ಆಡಿಯೋ ವೈರಲ್ ಆಗಿದೆ.

ಆದರೆ ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರೀತಂ ಗೌಡ ನಕಲಿ ಆಡಿಯೋ ಇದಾಗಿದೆ ಎಂದು ಹೇಳಿದ್ದಾರೆ. ಹಾಸನ ಜಿಲ್ಲೆಯ ಬಹುತೇಕ ಕಡೆ ಬಿಜೆಪಿ ಪ್ರಬಲವಾಗಿದೆ. ಜೆಡಿಎಸ್ ನವರು ಇಂತಹ ನಕಲಿ ಆಡಿಯೋ ಬಿಟ್ಟಿರಬಹುದು ಎಂದು ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸೌಂದರ್ಯ

    ಮೊಡವೆಗಳಿಂದ ಬೇಜಾರಾಗಿದ್ರೆ ಇಲ್ಲಿದೆ ಸಿಂಪಲ್ ಮನೆಮದ್ದು……

    ನಮ್ಮಲ್ಲಿ ಅನೇಕರಿಗೆ ಆಹಾರ ಕ್ರಮಗಳಿಂದಾಗಿ, ಮೊಡವೆಗಳು ಬಂದು, ಅವು ನಮ್ಮ ಚರ್ಮದ ಮೇಲೆ ಕಲೆಯಾಗಿ ಕಾಡುತ್ತದೆ. ಇದನ್ನು ಹೋಗಲಾಡಿಸಲು ಅನೇಕ ಕಸರತ್ತುಗಳನ್ನು ಮಾಡುತ್ತಾರೆ.

  • ಸುದ್ದಿ

    ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ನೂರಾರು ಎಕರೆ ಬೆಳೆ ನಾಶ…!

    ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಹಂತದ ಕಾಲುವೆಗೆ ನೀರು ಬಿಟ್ಟ ಹಿನ್ನೆಲೆ ಕಾಲುವೆ ಒಡೆದು ನೂರಾರು ಎಕರೆ ಬೆಳೆ ಹಾಳಾಗಿದೆ. ರಾಯಚೂರಿನ ಗೋನಾಳ ಬಳಿ ನಿರ್ಮಾಣ ಹಂತದಲ್ಲಿರುವ ನಾರಾಯಣಪುರ ಬಲದಂಡೆ ಕಾಲುವೆಗೆ ನೀರನ್ನು ಹರಿಸಿರುವುದರಿಂದ ಹತ್ತಿ, ತೊಗರಿ ಸೇರಿ ಲಕ್ಷಾಂತರ ರೂಪಾಯಿ ಬೆಳೆ ಹಾಳಾಗಿದೆ. ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿ 126 ಕಿ.ಮೀ ನಿಂದ 186 ಕಿ.ಮೀ ವರೆಗಿನ ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಇನ್ನೂ ನಡೆದಿದೆ. ಅಧಿಕಾರಿಗಳು ಕಾಲುವೆಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ…

  • ಮನರಂಜನೆ

    ಬಿಗ್ ಬಾಸ್ ಮನೆಯಿಂದ ದಿಡೀರ್ ಆಚೆ ಬಂದ ಹರೀಶ್ ರಾಜ್ ಅವರಿಗೆ ಸಿಕ್ಕ ದೊಡ್ಡ ಸಂಭಾವನೆ ಎಷ್ಟು ಗೊತ್ತಾ.

    ಸ್ನೇಹಿತರೆ ಬಿಗ್ ಬಾಸ್ ಕನ್ನಡ ಸೀಸನ್ 7 ಕೊನೆಯ ಹಂತವನ್ನ ತಲುಪಿದ್ದು ಫಿನಾಲೆಗೆ ಇನ್ನು ಕೆಲವು ದಿನಗಳು ಮಾತ್ರ ಭಾಕಿ ಉಳಿದುಕೊಂಡಿದೆ, ಈಗಾಗಲೇ 108 ಕ್ಕೂ ದಿನಗಳ ಕಾಲ ಬಿಗ್ ಬಾಸ್ ನಡೆದಿದ್ದು ಈ ವಾರ ಬಿಗ್ ಬಾಸ್ ಫೈನಲ್ ನಡೆಯಲಿದ್ದು ಐದು ಘಟಾನುಘಟಿ ಸ್ಪರ್ಧಿಗಳು ಬಿಗ್ ಬಾಸ್ ನಲ್ಲಿ ಫೈನಲ್ ಹಂತವನ್ನ ತಲುಪಿದ್ದಾರೆ. ಇನ್ನು ಆರಂಭದಲ್ಲಿ ಸ್ವಲ್ಪ ಮಂಕಾಗಿದ್ದ ಬಿಗ್ ಬಾಸ್ ಈಗ ಬಹಳ ರೋಚಕ ಹಂತವನ್ನ ತಲುಪಿದ್ದು TRP ಯಲ್ಲಿ ಕೂಡ ಮೇಲಕ್ಕೆ ಬರುತ್ತಿದೆ…

  • inspirational

    ರೈತರ ಬೆಳೆ‌ ಸಮಿಕ್ಷೆ ನೊಂದಣಿ ದಿನಾಂಕ ವಿಸ್ತರಣೆ

    ಬೆಂಗಳೂರು: ಅಗಷ್ಟ್  ತಿಂಗಳ 24ಕ್ಕೆ ಅಂತ್ಯಗೊಳ್ಳಲಿದ್ದ ಕೃಷಿ ಬೆಳೆ ಸಮೀಕ್ಷೆಯನ್ನು ಸೆಪ್ಟೆಂಬರ್ ತಿಂಗಳ 24  ತನಕ ವಿಸ್ತರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಕೃಷಿ ಬೆಳೆ ಸಮೀಕ್ಷೆ ಕುರಿತಂತೆ ಸುದೀರ್ಘ ಚರ್ಚೆ ನಡೆದ ಬಳಿಕ ಒಂದು ತಿಂಗಳು ಅವಧಿ ವಿಸ್ತರಿಸುವ ತೀರ್ಮಾನ ಕೈಗೊಂಡಿದೆ. ಬೆಳೆ ಸಮೀಕ್ಷೆ ವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದು .  .ಕಳೆದ ವರ್ಷ ಕೇವಲ 3,500 ಮಂದಿ ರೈತರು ಮಾತ್ರ ನೋಂದಣಿ ಮಾಡಿದ್ದರು, ಈ ವರ್ಷ ಅಲ್ಪ ಅವಧಿಯಲ್ಲೇ…

  • ಸಿನಿಮಾ

    ಬಿಗ್ ಬಾಸ್ ಸಂಚಿಕೆ-5ರಲ್ಲಿ ನೀವೂ ಸಹ ಸ್ಪರ್ಧಿಸಬಹುದು!ಹೇಗಂತೀರಾ?ಈ ಲೇಖನಿ ಓದಿ….

    ಕನ್ನಡದ ಖಾಸಗಿ ಚಾನಲ್ ನಡೆಸುವ, ಕನ್ನಡದ ರಿಯಾಲಿಟಿ ಶೋ ‘ಬಿಗ್ ಬಾಸ್’ ಕಾರ್ಯಕ್ರಮ ಈಗಾಗಲೇ ತುಂಬಾ ಜನಪ್ರಿಯವಾಗಿದೆ. ನಿಮಗೆ ಗೊತ್ತಿರುವ ಹಾಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಇಲ್ಲಿಯವರಿಗೂ ವಿವಿಧ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡ ಸೆಲೆಬ್ರೆಟಿಗಳಿಗೆ ಮಾತ್ರ ಭಾಗವಹಿಸುವುದಕ್ಕೆ ಅವಕಾಶವಿತ್ತು.