ಭವಿಷ್ಯ

ಶ್ರೀ ರಾಮ ನವಮಿ ಶುಭದಿನದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

254

ರವಿವಾರ, 25/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಸಮಸ್ಯೆಗಳ ಪರಿಹಾರಕ್ಕೆ ಹೊಸ ಜಾಣ್ಮೆ ಬಳಬೇಕಾದ ಸಂದರ್ಭ ಬರಬಹುದು. ಮಕ್ಕಳ ಪುರೋಭಿವೃದ್ಧಿ ತೋರಿ ಬಂದೀತು. ವಿವಾಹಾದಿ ಶುಭಮಂಗಲ ಕಾರ್ಯಗಳು ನಡೆದಾವು. ಉಷ್ಣ ಪ್ರಕೋಪದಿಂದ ಆಗಾಗ ದೇಹಾರೋಗ್ಯದಲ್ಲಿ ಸಮಸ್ಯೆ ತರಲಿದೆ. ನಿಮ್ಮ ದಿಟ್ಟ ಮಾತುಗಳಿಂದಾಗಿ ಅನಾವಶ್ಯಕ ಹೊರೆ ಹೊರಬೇಕಾದೀತು. ಸಾಂಸಾರಿಕ ಸಂತೋಷ ಅನುಭವಿಸುವಿರಿ.

ವೃಷಭ:-

ವೃತ್ತಿರಂಗದಲ್ಲಿ ಉತ್ತಮ ಅಭಿವೃದ್ಧಿ ಇರುತ್ತದೆ. ಕಷ್ಟಗಳೆಲ್ಲವೂ ಕರಗಿ ಹೋಗಿ ಕಾರ್ಯ ಯೋಜನೆಗಳು ಸುಲಭವಾಗಿ ಸಾಕಾರಗೊಳ್ಳುವವು. ಕೆಲಸಕಾರ್ಯಗಳಿಗೆ ಸ್ಪೂರ್ತಿ ದೊರಕುವುದು. ಬಂಧುವರ್ಗದವರಿಂದ ಸಕಾಲಿಕ ನೆರವು ಸಾಧ್ಯತೆ. ಆರ್ಥಿಕ ಸ್ಥಿತಿಯಲ್ಲಿ ಸಮತೋಲನ ಕಂಡು ಬರುತ್ತದೆ. ಪರಿಶ್ರಮದ ಬಲದಿಂದಲೇ ಉದ್ಯೋಗ ಲಾಭ. ದೇಹಾರೋಗ್ಯ ಸುಧಾರಿಸಲಿದೆ.

ಮಿಥುನ:

ಬೇರೆಯವರ ಸಲಹೆಯಿಂದಾಗಿ ಅಪಾಯದಲ್ಲಿ ಸಿಲುಕುವ ಸಾಧ್ಯತೆ. ಆರ್ಥಿಕವಾಗಿ ಉತ್ತಮ ಫ‌ಲವಿದೆ. ಸಾಂಸಾರಿಕ ಜೀವನ ಸಮಾಧಾನ ತೋರಿ ಬಂದರೂ ಮನೆ ಮಂದಿಯೊಡನೆ ಹೊಂದಾಣಿಕೆ ಅಗತ್ಯವಿದೆ. ವ್ಯಾಪಾರ ವರ್ಗದವರಿಗೆ ಅಧಿಕ ಲಾಭವಿದೆ. ಹಿರಿಯರ ಮಾತುಗಳನ್ನು ಗೌರವಿಸುವುದರಿಂದ ಆಪತ್ತಿನಿಂದ ಪಾರಾಗುವಿರಿ. ಛಲಕ್ಕೊಂದು ಬಲದೊರೆತು ಯಶಸ್ಸು ನಿಮ್ಮದಾಗಲಿದೆ.

ಕಟಕ :-

ಕಾರಿಗಳ ಕಿರಿಕಿರಿ ತಪ್ಪದು. ಬಾಕಿ ಇರುವ ಕೆಲಸ ಕಾರ್ಯಗಳು ವಿಳಂಬವಿಲ್ಲದೇ ನೆರವೇರುವ ಸಾಧ್ಯತೆ. ಸಮಾಜದ ಗೌರವಾದರಗಳು ನಿಮ್ಮನ್ನರಸಿ ಬರುವವು. ಭರವಸೆಗಳ ಈಡೇರಿಕೆಗೆ ಶ್ರಮ ವಹಿಸಬೇಕಾದೀತು. ವೃತ್ತಿರಂಗದಲ್ಲಿ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ವಿಶ್ವಾಸ ಉತ್ತಮವಲ್ಲ. ಯಾವುದೇ ವಿಚಾರದಲ್ಲಿ ವಿವೇಚನೆಯಿಂದ ವರ್ತಿಸಬೇಕಾಗುತ್ತದೆ.

 

 ಸಿಂಹ:

ಬಂಧುಗಳ ಸಲಹೆ ಮತ್ತು ಆಶ್ವಾಸನೆಗಳಲ್ಲಿ ವಿಶ್ವಾಸ ವಿಡಿ. ರಾಜಕೀಯದಲ್ಲಿ ಅನಾವಶ್ಯಕವಾಗಿ ನಿಮ್ಮ ವಿಚಾರದಲ್ಲಿ ಸಹಮತವಿರದು. ಉದ್ವೇಗ, ಕೋಪ ತಾಪಗಳಿಂದ ದೇಹಾರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಶ್ರೀದೇವತಾ ಪ್ರಾರ್ಥನೆಯಿಂದ ಸಮಾಧಾನ ಸಿಗಲಿದೆ. ಹೊಸ ಕೆಲಸಕಾರ್ಯಗಳಲ್ಲಿ ತೊಡಗಲು ಪ್ರಶಸ್ತವಾಗಿದೆ. ಷರತ್ತು ಬದ್ಧ ಅವಕಾಶಗಳು ದೊರಕುವ ಸಾಧ್ಯತೆ. ಉದ್ಯೋಗರಂಗದಲ್ಲಿ ಬದಲಾವಣೆ ಸಾಧ್ಯತೆ.

ಕನ್ಯಾ :-

ಸರಕಾರಿ ಕೆಲಸಕಾರ್ಯಗಳು ಮುನ್ನಡೆ ತರುತ್ತವೆೆ. ವೃತ್ತಿರಂಗದಲ್ಲಿ ಜಾಗ್ರತೆ ವಹಿಸಿರಿ. ಸಾಂಸಾರಿಕವಾಗಿ ಹೊಂದಾಣಿಕೆ ಇರಬೇಕು. ದಾಯಾದಿಗಳಿಂದ ಕೆಟ್ಟ ಮಾತು ಕೇಳಿ ಬಂದು ಬೇಸರ ತಂದೀತು.ನಂಬಿ ಬಂದವರಿಗೆ ಉತ್ತಮ ಆಸರೆ ನೀಡಿ ಹರ್ಷದಾಯಕ ಸಂದೇಶ ನೀಡುವ ಸಾಧ್ಯತೆ. ಚಮತ್ಕಾರಿಕವಾಗಿ ಸತ್ಕಾರ್ಯಗಳಲ್ಲಿ ತೊಡಗಿಕೊಳ್ಳುವ ಅವಕಾಶ ನಿಮ್ಮದಾಗಲಿದೆ. ಪ್ರಶಂಸೆಗೆ ಪಾತ್ರರಾಗುವಿರಿ.

ತುಲಾ:

ಮಹಿಳಾ ಉದ್ಯೋಗಿಗಳಿಗೆ ಪ್ರಗತಿ ತೋರಿ ಬರುತ್ತದೆ. ಹೊಸ ಮಿತ್ರರ ಸಮಾಗಮನ ಕಾರ್ಯಸಿದ್ಧಿಯಾಗಲಿದೆ. ಧಾರ್ಮಿಕ ಕಾರ್ಯಗಳಿಗೆ ವಿಳಂಬ ತಂದೀತು. ವಿದ್ಯಾರ್ಥಿಗಳಿಗೆ ಶುಭವಿದೆ. ಅಭಿರುಚಿಗೆ ತಕ್ಕಂತೆ ಸ್ವಾವಲಂಬಿ ಕಾರ್ಯಗಳಲ್ಲಿ ತೊಡಗುವಿರಿ. ಆದರ್ಶ ಹೊಂದಿದ ಕೆಲಸಕಾರ್ಯಗಳಿಗೆ ಸಹಾಯ ದೊರಕಿ ಕಾರ್ಯಸಾಧನೆ ಮಾಡಲಿದ್ದೀರಿ. ಘನತೆ ಗೌರವಗಳು ನಿಮ್ಮದಾಗಲಿವೆ.

ವೃಶ್ಚಿಕ :-

ಸದಾಚಾರ ಕಾರ್ಯಗಳಲ್ಲಿ ಸ್ವಸ್ಥ ಮನಸ್ಸಿನಿಂದ ತೊಡಗುವಿರಿ. ವೃತ್ತಿರಂಗದಲ್ಲಿ ಕಾರ್ಯಒತ್ತಡದಿಂದ ಮಾನಸಿಕ ಸಮಾಧಾನ ವಿರದು. ಧಾರ್ಮಿಕ ಕಾರ್ಯಗಳ ಚಿಂತನೆ ನಡೆಯಲಿದೆ. ಅಂತಃ ಶತ್ರುಗಳ ಕಾಟಗಳಿಂದ ಬರಬೇಕಾದ ಸಹಕಾರ ತಪ್ಪಿ ಹೋಗಲಿದೆ. ಮಿತ್ರರ ಮಧ್ಯಸ್ಥಿಕೆಯಲ್ಲಿ ಗಂಭೀರ ಸಮಾಲೋಚನೆ ನಡೆಯುವ ಸಾಧ್ಯತೆಯಿದ್ದು ಶುಭದಾಯಕವಾಗಿ ಪರಿಣಮಿಸಲಿದೆ. ಗಣಪತಿ ಆರಾಧನೆ ಶ್ರೇಷ್ಟ.

ಧನಸ್ಸು:

ಕೋರ್ಟು ಕಚೇರಿ ಕಾರ್ಯಗಳಲ್ಲಿ ಮುನ್ನಡೆ. ಆರೋಗ್ಯದ ಬಗ್ಗೆ ವಾಹನ ಸಂಚಾರದ ಬಗ್ಗೆ ಜಾಗ್ರತೆ ವಹಿಸಬೇಕು. ಮಿತ್ರರೋ ಬಂಧುಗಳ್ಳೋ ನಿಮ್ಮ ಪಾಲಿಗೆ ಹಿತವೆನಿಸಿಯಾರು. ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಿರುವವರ ಬಣ್ಣ ಇಂದು ಬಯಲಾಗಲಿದೆ. ಮೇಧಾವಿ ತನದಿಂದಾಗಿ ಹಿತಕರ ವಾತಾವರಣ ನಿಮ್ಮದಾಗುವುದು. ಗೊಂದಲದ ನಿವಾರಣೆಗೆ ವೆಚ್ಚ ಮಾಡುವ ಸಾಧ್ಯತ

ಮಕರ :-

ಭರವಸೆಗಳ ಮಹಾಪೂರ ಹರಿದುಬಂದು ಸಂತೋಷ ಮೂಡುವುದು. ಪ್ರವಾಸದಿಂದ ಆರೋಗ್ಯ ಹದಗೆಟ್ಟರೂ ಸಮಸ್ಯೆ ಇರದು. ಕೆಲಸಕಾರ್ಯಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಇರದು. ಮಹತ್ಕಾರ್ಯವೊಂದರ ಚಿಂತನೆಗೆ ಇದು ಸಕಾಲವಲ್ಲ. ಸೇವಾಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ಸವಾಲುಗಳು ಎದುರಾಗಲಿದ್ದು, ಮುನ್ನುಗ್ಗಿದರೆ ಯಶಸ್ಸು ನಿಮ್ಮದಾಗಲಿದೆ.

ಕುಂಭ:-

ಮನೆಯ ಸಾಮಗ್ರಿಗಳಿಗಾಗಿ ಧನವ್ಯಯ. ಹೊಂದಿಕೊಳ್ಳುವ ಮನೋಭಾವದಿಂದಾಗಿ ಮಹತ್ವದ ವಿಷಯಗಳಲ್ಲಿ ಒಡಂಬಡಿಕೆಗೆ ಬರುವ ಸಾಧ್ಯತೆ. ವಿಪರೀತ ಸನ್ನಿವೇಶಗಳು ಎದುರಾಗಬಹುದು. ಧಾರ್ಮಿಕ ವಿಷಯಗಳಲ್ಲಿ ಆಸಕ್ತಿಯ ಚರ್ಚೆ. ಸಾಂಸಾರಿಕವಾಗಿ ನೆಮ್ಮದಿ ತೋರಿ ಬಂದರೂ ನಿರೀಕ್ಷಿತ ಸಮಾಧಾನ ಸಿಗದು. ಹೊಸ ಉದ್ದಿಮೆಗೆ ಮನಸ್ಸು ಮಾಡಿದಲ್ಲಿ ಲಾಭ ವಿರುತ್ತದೆ.

ಮೀನ:-

ನಿಮ್ಮ ಬಹುದಿನಗಳ ಬಯಕೆ ಇಡೇರುವ ಸಾಧ್ಯತೆ. ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ. ಉತ್ತಮ ಕೆಲಸ ಕಾರ್ಯಗಳಿಂದಾಗಿ ಮನ್ನಣೆ ಗಳಿಸುವಿರಿ. ಮನೆಯವರ ಆರೋಗ್ಯದ ಬಗ್ಗೆ ನಿಗಾವಹಿಸಿ. ಸರಕಾರಿ ಕೆಲಸಕಾರ್ಯಗಳಿಗಾಗಿ ಓಡಾಟ ಹಾಗೂ ಧನವ್ಯಯವಾಗಲಿದೆ. ಗೃಹ ಸಂಬಂಧಿ ಕೆಲಸಕಾರ್ಯಗಳು ನಡೆಯಲಿವೆ. ಯೋಗ್ಯ ವಯಸ್ಕರಿಗೆ ಕಂಕಣಬಲದ ಅವಕಾಶಗಳಿರುತ್ತವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ರಾಜಕೀಯ

    ಮೋದಿ ರಾಜ್ಯಕ್ಕೆ ಬಂದರೆ ದವಡೆಗೆ ಒಡೆಯಿರಿ ಎಂದು ವಿವಾಧಾತ್ಮಕ ಹೇಳಿಕೆ ಕೊಟ್ಟ ಶಾಸಕ..!

    ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ. ಕೆಲ ನಾಯಕರು ಪಕ್ಷದ ಪರ ಭಾಷಣ ಮಾಡುವ ವೇಳೆ ನಾಲಿಗೆ ಹರಿಬಿಡ್ತಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದರೆ ಎತ್ತಿ ದವಡೆಗೆ ಹೊಡೆಯಿರಿ ಅಂತಾ ಜೆಡಿಎಸ್‍ ಶಾಸಕ ಶಿವಲಿಂಗೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜೆಡಿಎಸ್‍ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದರೆ ಜನರಿಗೆ ಹಾಗೂ ರೈತರಿಗೆ ಕಳೆದ ಚುನಾವಣೆ ವೇಳೆ ಕೊಟ್ಟ ಭರವಸೆ ಏನಾಯ್ತು ಅಂತಾ ಪ್ರಶ್ನಿಸಿ, ಎಲ್ಲರೂ ದವಡೆಗೆ ಹೊಡೆಯಿರಿ ಅಂತಾ ಭಾಷಣ…

  • ಜ್ಯೋತಿಷ್ಯ

    ವಿಘ್ನ ವಿನಾಯಕನನನ್ನು ಸ್ಮರಿಸಿ ಈ ದಿನದ ನಿಮ್ಮ ರಾಶಿಯ ಶುಭ ಫಲಗಳನ್ನು ತಿಳಿಯಿರಿ.

    ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ (ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು )9901077772 call/ what ಮೇಷ ನೀವು ಇಂದು ನಿಮಗಾಗಿ ಸಾಕಷ್ಟು ಸಮಯ ಹೊಂದಿರುವುದರಿಂದ ನಿಮ್ಮ ಒಳ್ಳೆಯ ಆರೋಗ್ಯದ ಸಲುವಾಗಿ ಒಂದು ಧೀರ್ಘ ನಡಿಗೆಗೆ ಹೋಗಿ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ಇಂದು ನೀವು ಇತರರ ಅಗತ್ಯಗಳಿಗೆ ಗಮನ ನೀಡಬೇಕಾದರೂ ಮಕ್ಕಳೊಂದಿಗೆ ಅತೀ ಉದಾರತೆ ತೋರಿಸುವುದು…

  • ಸಿನಿಮಾ

    ಕನ್ನಡಿಗರಿಗೆ ಚಳ್ಳೆ ಹಣ್ಣು ತಿನ್ನಿಸಿದ್ರಾ ರಶ್ಮಿಕಾ…ಬಯಲಾಯ್ತು ಇವರು ಹೇಳಿದ ಮಹಾ ಸುಳ್ಳು…

    ಕನ್ನಡವನ್ನು ಕಾಲಲ್ಲಿ ಒದ್ದು ಅವಕಾಶಕ್ಕಾಗಿ ಪರಭಾಷೆಯ ಗುಲಾಮಳಾಗಿರುವ ರಶ್ಮಿಕ ಈಗ ಕನ್ನಡಿಗರನ್ನು ಯಾಮಾರಿಸಿದ್ದಾಳೆ.ಕರುನಾಡಿನಲ್ಲಿ ಹುಟ್ಟಿ ಬೆಳೆದರು ಕನ್ನಡ ಮಾತನಾಡುವುದಿಲ್ಲ. ಆದರೆ ಪರ ಭಾಷೆಯ ಬಗ್ಗೆ ಎಲ್ಲಿಲ್ಲದ ವ್ಯಾಮೋಹ. ಆ ಭಾಷೆಯನ್ನು ಮಾತ್ರ ತುಂಬಾ ಚೆನ್ನಾಗಿ ಗೌರವದಿಂದ ಮಾತನಾಡುತ್ತಾಳೆ. ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಾಗಲೂ , ಮಾಧ್ಯಮಗಳಲ್ಲೂ ಸಹ ಬೇರೆಯ ಭಾಷೆಯನ್ನು ಬರದಿದ್ದರೂ ಕಷ್ಟಪಟ್ಟು ಮಾತನಾಡುತ್ತಾಳೆ ವಿನಹ ಕನ್ನಡವನ್ನು ಮಾತ್ರ ಮಾತನಾಡುವುದಿಲ್ಲ. ಕನ್ನಡದಲ್ಲಿ ಸಂದರ್ಶನ ವಿದ್ದರೂ ಆಂಗ್ಲ ಭಾಷೆಯಲ್ಲಿಯೇ ಮಾತನಾಡುತ್ತಾಳೆ. ಇವಳಿಗೆ ಕನ್ನಡವೆಂದರೆ ಎಲ್ಲಿಲ್ಲದ ತಾತ್ಸಾರ. ಹೀಗಾಗಿ ಕನ್ನಡಿಗರು…

  • ಸುದ್ದಿ

    SSLC ಫೇಲ್ ಆದವರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ…

    ಇತ್ತೀಚೆಗಷ್ಟೇ S.S.L.C.ಪಲಿತಾಂಶ ಪ್ರಕಟವಗಿದ್ಧು ಪೇಲ್ ಆದ ವಿದ್ಯಾರ್ಥಿಗಳ ಪೂರಕ ಪರೀಕ್ಷೆ ಜೂನ್ 21 ರಿಂದ 28 ರವರೆಗೆ ನಡೆಯಲಿದೆ . ಮೇ 10 ಪೂರಕ ಪರೀಕ್ಷೆ ಕಟ್ಟಲು ಕೊನೆಯ ದಿನವಾಗಿದೆ. 200 ರೂ. ದಂಡ ಶುಲ್ಕದೊಂದಿಗೆ ಮೇ 15 ರ ವರೆಗೆ ಪೂರಕ ಪರೀಕ್ಷೆ ಕಟ್ಟಬಹುದಾಗಿದೆ.ಪೇಲ್ ಆಗಿರುವಂಥಹ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದವರು ಕೂಡ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತರ ಪತ್ರಿಕೆಗಳ ಛಾಯಾ ಪ್ರತಿ ಪಡೆಯಲು ಮೇ 13 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಛಾಯಾಪ್ರತಿಗೆ ಒಂದು…

  • ಜೀವನಶೈಲಿ

    ಭಾರತೀಯ ಮಹಿಳೆಯರು ಆಭರಣಗಳನ್ನು ಧರಿಸುವುದರ ಹಿಂದಿರುವ ವೈಜ್ಞಾನಿಕ ಕಾರಣಗಳು ಗೊತ್ತಾ…? ಈ ಲೇಖನ ಓದಿ…

    ಪ್ರಮಂಚದಲ್ಲಿ ಮಹಿಳೆಯರು ಸುಂದರವಾಗಿ ಕಾಣಲು ಅಲಂಕಾರ ಮಾಡಿಕೊಳ್ಳುತ್ತಾರೆ. ಅಲಂಕಾರ ಮಾಡಿಕೊಳ್ಳದೆ ಮಹಿಳೆಯರ ದಿನ ಪೂರ್ಣವಾಗುವುದಿಲ್ಲ. ಅಲಂಕಾರ ಹಾಗೂ ಒಡವೆಗಳಿಗಾಗಿ ಸಾಕಷ್ಟು ಹಣವನ್ನು ಖರ್ಚುಮಾಡಲು ಹಿಂಜರಿಯುವುದಿಲ್ಲ. ಆದರೇ ನಮ್ಮ ಭಾರತೀಯ ಮಹಿಳೆಯರು ಅಲಂಕಾರಕ್ಕಾಗಿ ಧರಿಸುವ ಆಭರಣಗಳ ಹಿಂದಿರುವ ವೈಜ್ಞಾನಿಕ ಕಾರಣಗಳು ಏನೆಂದು ತಿಳಿಯೋಣ.