ಭಾರತದ ಅತೀ ದೊಡ್ಡ ಹನುಮಂತನಿಗೆ ಭರ್ಜರಿ ಸ್ವಾಗತ ಮಾಡಿ, ಬೀಳ್ಕೊಟ್ಟ ಸೂಲಿಬೆಲೆ ಗ್ರಾಮಸ್ತರು. ಹೌದು, ಭಾರತದ ಅತೀ ಎತ್ತರದ, 62 ಅಡೀ ಇರುವ ಹನುಮನ ಏಕಶಿಲಾವಿಗ್ರಹವನ್ನು ಕೋಲಾರದಿಂದ ಬೆಂಗಳೂರಿಗೆ ಸಾಗಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೆ.
ಹನುಮನಿಗೆ ಅಭೂತಪೂರ್ವ ಸ್ವಾಗತ
ಬೆಂಗಳೂರಿನ ಹೆಚ್’ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆಗಾಗಿ ಸಿದ್ದವಾಗಿದ್ದ 62 ಅಡಿ ಎತ್ತರದ, 750 ಟನ್ ತೂಕದ ವೀರಾಂಜನೇಯ ಸ್ವಾಮಿಯ ವಿಗ್ರಹವನ್ನು, 300 ಚಕ್ರಗಳ ಬೃಹತ್ ವಾಹನದಲ್ಲಿ ಸಾಗಿಸಲಾಗುತ್ತಿದೆ.
ಮಾರ್ಗ ಮಧ್ಯ ತೊಂದರೆಯಾದರೂ, ಆ ತೊಂದರೆಗಳನ್ನು ನಿವಾರಿಸಿಕೊಂಡು ಮುಂದೆ ಸಾಗಿದ ಹನುಮಂತನ ಏಕಶಿಲಾ ವಿಗ್ರಹಕ್ಕೆ, ಮಾರ್ಗ ಮಧ್ಯ ಸಿಕ್ಕ ಸೂಲಿಬೆಲೆ ಗ್ರಾಮದ ಜನರು ಅಭೂತಪೂರ್ವ ಸ್ವಾಗತ ಕೋರಿದರು.
ಎಲ್ಲೋ ಪ್ರತಿಸ್ಟಾಪಾನೆ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಹನುಮಂತನ ಮೂರ್ತಿಗೆ ರಾಮನವಮಿ ಹಬ್ಬ
ಎಲ್ಲೋ ಪ್ರತಿಸ್ಟಾಪಾನೆ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಹನುಮಂತನ ಮೂರ್ತಿಗೆ ತಮಟೆ ನಗಾರಿಗಳೊಂದಿಗೆ, ಪಟಾಕಿಗಳನ್ನು ಸಿಡಿಸುತ್ತ, ರಸ್ತೆಗೆ ನೀರನ್ನು ಹಾಕುವ ಮುಖಾಂತರ ಭರ್ಜರಿಯಾಗಿ ರಾಮ ಭಕ್ತನನ್ನು ಸ್ವಾಗತಿಸಿದರು.
ಊರಿನ ಗ್ರಾಮಸ್ತರು ಹನುಮಂತನ ವಿಗ್ರಹವನ್ನು ಸ್ವಾಗತಿಸಿದ್ದು ಹೇಗೆ ಗೊತ್ತಾ ಈ ವಿಡಿಯೋ ನೋಡಿ…
62 ಅಡಿ ಎತ್ತರದ ಈ ವೀರಾಂಜನೇಯನ ಮೂರ್ತಿ ಬೆಂಗಳೂರಿನ ಎಚ್‌ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇಗುಲದ ಪ್ರಾಂಗಣದಲ್ಲಿ ಮುಂದಿನ ವರ್ಷ ರಾಮನವಮಿಯಂದು ಪ್ರತಿಷ್ಠಾಪನೆಗೊಳ್ಳಲಿದೆ.
ಶಿಲ್ಪಿ ಯಾರು..?
ಕೋಲಾರ ಜಿಲ್ಲೆಯ ನರಸಾಪುರ ಹೋಬಳಿಯ ಬೆಳತೂರು ಗ್ರಾ.ಪಂ.ವ್ಯಾಪ್ತಿಯ ಭೈರಸಂದ್ರ ಗ್ರಾಮದಲ್ಲಿ ಖ್ಯಾತ ಶಿಲ್ಪಿ ಶಿವಾರಪಟ್ಟಣದ ಪಿ. ರಾಜಶೇಖರಾಚಾರ‍್ಯ ನೇತೃತ್ವದಲ್ಲಿ ಕೆತ್ತನೆ ಕಾರ‍್ಯ ಕಳೆದ 3 ವರ್ಷದಿಂದ ನಡೆಯುತ್ತಿದ್ದು, ಈಗಾಗಲೇ ಶೇ.60ರಷ್ಟು ಕೆತ್ತನೆ ಪೂರ್ಣಗೊಂಡಿದೆ.
ಈ ಏಕಶಿಲೆ ಸಿಕ್ಕಿದ್ದು ಹೇಗೆ ಮತ್ತು ಎಲ್ಲಿ..?
ಇಂತಹ ಒಂದು ಏಕಾಶಿಲಾ ಹನುಮನ ಮೂರ್ತಿಯನ್ನು ಪ್ರತಿಸ್ಟಾಪಾನೆ ಮಾಡಬೇಕೆಂದು ನಿರ್ಧರಿಸಿದ ಶ್ರೀ ರಾಮಚೈತನ್ಯ ವರ್ಧಿನಿ ಟ್ರಸ್ಟ್ ಖ್ಯಾತ ಶಿಲ್ಪಿ ಶಿವಾರಪಟ್ಟಣದ ಪಿ. ರಾಜಶೇಖರಾಚಾರ‍್ಯ ನೇತೃತ್ವದಲ್ಲಿ ಶಿಲೆ ಹುಡುಕಲು ಆರಂಭಿಸಿದರು.ಸತತ ಮೂರು ತಿಂಗಳ ಸುತ್ತಾಟದ ನಂತರ, ಭೈರಸಂದ್ರ ಗ್ರಾಮದ ರೈತ ಬಿ.ಎಂ.ಮುನಿರಾಜು ಅವರ ತೋಟದಲ್ಲಿ ಇದ್ದಂತಹ ಬೃಹತ್ ಬಂಡೆ ಆಯ್ಕೆ ಮಾಡಿ, 2015ನೇ ಇಸವಿಯಲ್ಲಿ ಕೆತ್ತನೆ ಮಾಡಲು ಪ್ರಾರಂಬಿಸಿದರು.
62 ಅಡಿ ಉದ್ದದ ಹನುಮನನ್ನು ಸಾಗಿಸಿದ ಟ್ರಕ್ ಹೇಗಿತ್ತು ಗೊತ್ತಾ..?ಈ ವಿಡಿಯೋ ನೋಡಿ…
ಮೂರ್ತಿ ಸಾಗಿಸಲು ವಿಶೇಷ ವಾಹನ
62 ಅಡಿ ಉದ್ದ, 25 ಅಡಿ ಅಗಲ, 750 ಟನ್ ತೂಕದ ಆಂಜನೇಯ ವಿಗ್ರಹ ಸಾಗಾಟಕ್ಕೆ ಮೂರು ಎಂಜಿನ್‌ಗಳ ಬೃಹತ್ ಟ್ರಕ್ ಅನ್ನು ತಂತ್ರಜ್ಞರ ನೆರವಿನಿಂದ ಸ್ಥಳದಲ್ಲೇ ಜೋಡಿಸಲಾಯಿತು.ಆದರೆ ಈ ಟ್ರಕ್ ಚಲಿಸುವುದು ಘಂಟೆಗೆ 3 ಕಿ.ಮೀ. ಮಾತ್ರ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ನಾವು ಕರ್ನಾಟಕದ ಯಾವುದೇ ನಗರ, ಊರುಗಳಿಗೆ ಹೋಗಬೇಕಾದ್ರೆ, ನಮಗೆ ಯಾವ ಬಸ್ ಯಾವ ಸಮಯಕ್ಕೆ ಸಿಗುತ್ತೆ,ಎಷ್ಟೊತ್ತಿಗೆ ಬಸ್ ನಿಲ್ದಾಣ ಬಿಡುತ್ತೆ ಎಂಬುದರ ಬಗ್ಗೆ ಎಷ್ಟೋ ಜನಕ್ಕೆ ಮಾಹಿತಿ ಇರುವುದಿಲ್ಲ.
ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನ ಅ.17ರಿಂದಆರಂಭವಾಗಲಿದ್ದು, ಅ.28ರ ವರೆಗೂ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಗುರುವಾರದಿಂದ ಹಾಸನಾಂಬ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದ್ದು, ಒಟ್ಟು 13 ದಿನ ನಡೆಯಲಿದೆ. ಅಶ್ವೀಜಮಾಸದ ಮೊದಲ ಗುರುವಾರ ಮಧ್ಯಾಹ್ನ12.30ಕ್ಕೆ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ದೇವಿಯ ದರ್ಶನಕ್ಕಾಗಿ ಭಕ್ತ ಸಾಗರಹರಿದು ಬರಲಿದೆ. ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಿ ದರ್ಶನ ಭಾಗ್ಯ ಕರುಣಿಸುತ್ತಾಳೆ. ಹೀಗಾಗಿ ಪ್ರತಿ ವರ್ಷ ಸಾವಿರಾರು ಭಕ್ತರು…
ಕನ್ನಡದ ಪ್ರಸಿದ್ದ ನಟರೊಬ್ಬರನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶೇಷಾದ್ರಿಪುರಂನ ನಿತೇಶ್, ನಿತ್ಯಾನಂದ, ವಿಜಯನಗರದ ಮಧು ಹಾಗೂ ಪಿಜಿಹಳ್ಳಿಯ ಪೃಥ್ವಿ ಬಂಧಿತ ಆರೋಪಿಗಳು. ಸಿಸಿಬಿ ಪೊಲೀಸರು ಶೇಷಾದ್ರಿಪುರಂ ಠಾಣೆಯ ಬಿಡಿಎ ಕಚೇರಿ ಬಳಿ ಆರೋಪಿಗಳನ್ನ ಬಂಧಿಸಿದ್ದಾರೆ, ಮಾರ್ಚ್ 7 ರಂದು ಎಸಿಪಿ ಬಾಲರಾಜ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದರು. ಬಂಧಿತ ನಾಲ್ವರ ಬಳಿಯೂ ಲಾಂಗು ಮತ್ತು ಡ್ರಾಗರ್ ಸೇರಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ಸಿಸಿಬಿ ದಾಳಿ ವೇಳೆ ಐದು ಮಂದಿ…
ನಮ್ಮಲ್ಲಿ ಇರುವ ಅತ್ಯಮೂಲ್ಯವಾದ ವಸ್ತುಗಳನ್ನ, ಅಂದರೆ ಹಳೆಯ ಪೇಂಟಿಂಗ್, ಹಳೆಯ ಕಾಲದ ದಿನ ಬಳಕೆಯ ವಸ್ತುಗಳು, ಆಭರಣಗಳು ಹೀಗೆ ಯಾವುದೇ ವಸ್ತುಗಳನ್ನ ಈ ರೋಡ್ ಶೋ ಗೆ ತಗೆದುಕೊಂಡು ಹೋದರೆ ಅಲ್ಲಿನ ಪರಿಣಿತರ ತಂಡ ಆ ವಸ್ತುವನ್ನ ಪರಿಶೀಲನೆ ಮಾಡಿ ಅವರ ಇತಿಹಾಸ ಮತ್ತು ಅದರ ವೈಶಿಷ್ಟ್ಯತೆಯನ್ನ ಪರಿಶೀಲನೆ ಮಾಡಿ ಆ ವಸ್ತುವಿನ ಈಗಿನ ಬೆಲೆ ಎಷ್ಟು ಎಂದು ಹೇಳುತ್ತಾರೆ. ಇನ್ನು ಹೀಗೆ ತಮ್ಮ ಹಳೆಯ ವಸ್ತುಗಳನ್ನ ಈ ರೋಡ್ ಗೆ ತಗೆದುಕೊಂಡು ಹೋಗಿ ಕೋಟಿಗಟ್ಟಲೆ ಹಣ…
“ಕುಣಿಯೋಣು ಬಾರಾ ಕುಣಿಯೋಣು ಬಾ”, “ಇಳಿದು ಬಾ ತಾಯಿ ಇಳಿದು ಬಾ”, “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು”, ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು ಸಾಕ್ಷ್ಯಚಿತ್ರ ತಯಾರಾಗಿತ್ತು.
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 call/ whatsapp/ mail raghavendrastrology@gmail.com ಮೇಷ:– ನೀವು ಸ್ವಲ್ಪ…