ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮನೆ ಬಾಡಿಗೆ ನೀಡದೆ, ಮನೆ ಮಾಲೀಕನಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದ ಖ್ಯಾತ ನಟ ಯಶ್ ಅವರಿಗೆ, ಮನೆ ಖಾಲಿ ಮಾಡುವಂತೆ 42ನೇ ಸಿಟಿ ಸಿವಿಲ್ ಕೋರ್ಟ್ ಆದೇಶಸಿದೆ.
ಹೌದು, ನಟ ಯಶ್ ಬಾಡಿಗೆ ಮನೆ ವಿವಾದಕ್ಕೆ ಸಂಬಂಧಿಸಿದಂತೆ, ಕೋರ್ಟ್ 3 ತಿಂಗಳೊಳಗೆ ಮನೆ ಖಾಲಿ ಮಾಡಲು ಸೂಚನೆ ನೀಡಿದೆ.
ಕತ್ರಿಗುಪ್ಪೆಯಲ್ಲಿರುವ ತಮ್ಮ ನಿವಾಸ ವಾಸವಿರುವ ಯಶ್ ಮತ್ತು ಅವರ ಕುಟುಂಬ ಸಮಯಕ್ಕೆ ಸರಿಯಾಗಿ ಬಾಡಿಗೆ ಕಟ್ಟದೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮನೆ ಮಾಲೀಕ ಮುನಿಪ್ರಸಾದ್ ಅವರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
3 ವರ್ಷಗಳಿಂದ ಬಾಡಿಗೆ ಮನೆ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದು, ಬೆಂಗಳೂರಿನ 42 ನೇ ಸಿಟಿ ಸಿವಿಲ್ ಕೋರ್ಟ್ ಮನೆ ಖಾಲಿ ಮಾಡುವಂತೆ ಯಶ್ ಅವರ ತಾಯಿ ಪುಷ್ಪಾ ಅವರಿಗೆ ಸೂಚಿಸಿದೆ.
9.60 ಲಕ್ಷ ರೂ. ಪಾವತಿಯೊಂದಿಗೆ 3 ತಿಂಗಳಲ್ಲಿ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಮನೆ ಖಾಲಿ ಮಾಡುವಂತೆ ಯಶ್ ತಾಯಿ ಪುಷ್ಪಾ ಅವರಿಗೆ ಸೂಚಿಸಲಾಗಿದೆ. ಇದರೊಂದಿಗೆ ಮನೆ ಅಡ್ವಾನ್ಸ್ 4 ಲಕ್ಷ ರೂ. ವಾಪಸ್ ಕೊಡುವಂತೆ ಕತ್ರಿಗುಪ್ಪೆ ನಿವಾಸಿ ಮನೆ ಮಾಲೀಕ ಮುನಿಪ್ರಸಾದ್ ಅವರಿಗೆ ಸೂಚಿಸಲಾಗಿದೆ.
ಯಶ್ ತಾಯಿಯಿಂದ ನಮಗೆ 21.37 ಲಕ್ಷ ರು ಬಾಡಿಗೆ ಹಣ ಬರಬೇಕಿದೆ ಎಂದು ಮನೆ ಮಾಲೀಕರು ತಮ್ಮ ದೂರಿನಲ್ಲಿ ತಿಳಿಸಿದ್ದರು.
ಯಶ್ ಅವರ ಕುಟುಂಬ ಬಾಡಿಗೆ ನೀಡಿಲ್ಲ. ಅಲ್ಲದೇ ಅವರು ಬೇರೆ ಮನೆಯಲ್ಲಿ ವಾಸವಾಗಿದ್ದರೂ, ಬೀಗವನ್ನು ಹಾಕಿ ಬಾಡಿಗೆ ಮನೆಯನ್ನು ತಮ್ಮ ಸುಪರ್ದಿಯಲ್ಲಿಯೇ ಇಟ್ಟುಕೊಂಡಿದ್ದಾರೆ. ಮನೆ ಖಾಲಿ ಮಾಡಿಸಲು ಮನೆ ಮಾಲೀಕರು ಕೋರ್ಟ್ ಮೊರೆ ಹೋಗಿದ್ದರು.
ಹೀಗಾಗಿ ವಾದ ವಿವಾದಗಳನ್ನು ಆಲಿಸಿದ ಕೋರ್ಟ್ ಮೂರೂ ತಿಂಗಳೊಳಗೆ ಮನೆ ಖಾಲಿ ಮಾಡುವುದರ ಜೊತೆಗೆ, ಬಾಡಿಗೆ ಕೊಡದೆ ಉಳಿಸಿಕೊಂಡಿರುವ ಹಣವನ್ನು ಮನೆ ಮಾಲೀಕರಿಗೆ ಕೊಡಬೇಕೆಂದು ಯಶ್ ತಾಯಿ ಪುಷ್ಪ ಅವರಿಗೆ ಕೋರ್ಟ್ ಆದೇಶ ಮಾಡಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್,ಶಿವರಾಜ್ ಕುಮಾರ್ ನಂತರ ಕನ್ನಡದ ಮತ್ತೊಬ್ಬ ನಟ ಗೌರವ ಡಾಕ್ಟರೇಟ್ ಪಡೆಯಲಿದ್ದಾರೆ. ಅವರು ಬೇರೆ ಯಾರು ಅಲ್ಲ ಕ್ರೇಜಿ ಸ್ಟಾರ್ ರವಿ ಚಂದ್ರನ್. ಬೆಂಗಳೂರಿನ ಸಿ ಎಮ್ ಆರ್ ವಿಶ್ವ ವಿದ್ಯಾನಿಲಯ ರವಿ ಚಂದ್ರನ್ ರಿಗೆ ಗೌರವ ಡಾಕ್ಟರೇಟ್ ನೀಡುತ್ತಿದೆ. ಈ ಹಿಂದೆ ರವಿಚಂದ್ರನ್ ಅಭಿಮಾನಿಗಳು ತಮ್ಮ ಪ್ರೀತಿಯ ನಟನಿಗೆ ಡಾಕ್ಟರೇಟ್ ನೀಡಬೇಕು ಎಂದು ತಮ್ಮ ಆಸೆ ವ್ಯಕ್ತ ಪಡಿಸಿದ್ದರು. ಇದೀಗ ಅವರ ಬಯಕೆ ಈಡೇರಿದೆ. ನವೆಂಬರ್ 3 ರಂದು ದೊಡ್ಡ ಕಾರ್ಯಕ್ರಮದ ಮೂಲಕ…
ಕೆಲವಾರು ಮದುವೆ ಸಮಾರಂಭಗಳಲ್ಲಿ ತಲೆದೋರುವ ನಾನಾರೀತಿಯ ಸಮಸ್ಯೆಗಳಿಂದ ವಿವಾದಗಳುಂಟಾಗಿ ಮದುವೆ ಮಂಟಪಗಳಲ್ಲಿಯೇ ವಧು, ವರರು ಮತ್ತು ಅವರ ಕಡೆಯವರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುವುದೂ ಇದೆ. ಇಂತಹುದೇ ಘಟನೆ ಇದೀಗ ರಾಜಸ್ಥಾನದಲ್ಲೂ ನಡೆದಿದೆ. ಸಪ್ತಪದಿಯ ಸಂದರ್ಭದಲ್ಲಿ ಗಂಡು ತಾನು ಮದುವೆಯಾಗವ ಮದುಮಗಳೆದುರು ಇಟ್ಟ ಬೇಡಿಕೆಯಿಂದಾಗಿ ಜಗಳವೇರ್ಪಟ್ಟಿದ್ದಲ್ಲದೇ ಮದುವೆಯೇ ಮುರಿದು ಬಿದ್ದಿದೆ.
ಬೆಕ್ಕು ಮತ್ತು ನಾಯಿ ಪರಮ ಶತ್ರುಗಳು ಎಂದು ಹೇಳುತ್ತಾರೆ. ಆದರೆ ಇಲ್ಲೊಂದು ನಾಯಿ ಬೆಕ್ಕಿನ ಮರಿಗೆ ಹಾಲುಣಿಸಿ ತಾಯಿಯ ಪ್ರೀತಿಯನ್ನು ತೋರಿಸುತ್ತಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನೆಮ್ಮಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಚೆಟ್ಟಂಗಡ ಗಿಣಿ ತಿಮ್ಮಯ್ಯ ಅವರ ಮನೆಯಲ್ಲಿ ಈ ಅಪರೂಪದ ದೃಶ ಕಂಡು ಬಂದಿದೆ. ಈ ನಾಯಿ ಪ್ರತಿನಿತ್ಯ ಬೆಕ್ಕಿನಮರಿಗೆ ಹಾಲು ನೀಡುತ್ತಿದೆ. ಈ ನಾಯಿ ಬೆಕ್ಕಿನ ಮರಿಗಳಿಗೆ ಪ್ರತಿದಿನ ಹಾಲನ್ನು ಕುಡಿಸುತ್ತದೆ. ತಾಯಿಯ ಮಮತೆಯನ್ನು ಬಯಸಿ ಬರುವ ಬೆಕ್ಕಿನ ಮರಿಗೆ…
ರಾತ್ರಿ ಹೊತ್ತು ಕಾಲುಸೆಳೆತವುಂಟಾಗಿ ನಿಮಗೆ ಮಧ್ಯೆ ಮಧ್ಯೆ ಎಚ್ಚರವಾಗುತ್ತಿದೆಯೇ..? ಹೀಗೆ ಸೆಳೆತ ಉಂಟಾಗಲು ಹಲವಾರು ಕಾರಣಗಳಿವೆ. ಮಧುಮೇಹ, ನರಗಳ ಬಲಹೀನತೆ, ಗರ್ಭಧಾರಣೆ ಹಾಗೂ ಡೀಹೈಡ್ರೇಶನ್(ನಿರ್ಜಲೀಕರಣ) ಮುಂತಾದ ಕಾರಣಗಳಿಂದ ಕಾಲುಗಳ ಸೆಳೆತ ಉಂಟಾಗಬಹುದು.
ದೇಹಕ್ಕೆ ಆರೋಗ್ಯಯುತ ರಕ್ತಕಣಗಳ ಸಂಖ್ಯೆ ಮುಖ್ಯ. ಇವುಗಳ ಸಂಖ್ಯೆ ಕುಂಠಿತವಾದರೆ ರಕ್ತಹೀನತೆ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಪ್ರತಿನಿತ್ಯ ಪೌಷ್ಟಿಕ ಆಹಾರ ಸೇವಿಸಿದರೆ ರಕ್ತಹೀನತೆಯನ್ನು ತಡೆಗಟ್ಟಬಹುದು. ಈ ಮೂಲಕ ದೇಹದಲ್ಲಿ ಅಧಿಕ ರಕ್ತಕಣಗಳ ಸಂಖ್ಯೆ, ಅವುಗಳ ಉತ್ಪಾದನೆ ಹಾಗೂ ರಕ್ತಚಲನೆಯನ್ನು ಸರಿದೂಗಿಸಬಹುದು. ರಕ್ತಕಣಗಳ ಸಂಖ್ಯೆ ಹೆಚ್ಚಿಸಲು ಬೀಟ್ರೂಟ್ ಮೊದಲಾದ ಹಸಿ ತರಕಾರಿ ಹಾಗೂ ಹಣ್ಣುಗಳು ನಮಗೆ ಸಹಾಯ ಮಾಡುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಇವುಗಳನ್ನು ಸೇವಿಸುವುದರಿಂದ ಆರೋಗ್ಯಯುತ ಬದುಕು ನಮ್ಮದಾಗಿಸಿಕೊಳ್ಳಬಹುದು. ಇಲ್ಲದಿದ್ದರೆ ವೈದ್ಯರ ಮೊರೆ ಹೋಗಬೇಕಾಗುತ್ತದೆ. ಹಸಿ ತರಕಾರಿಗಳ ಸೇವನೆ ಹಾಗೂ ಡ್ರೈ…
ಶುಕ್ರವಾರ, 23/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಹೆತ್ತವರನ್ನು ತೀರ್ಥಯಾತ್ರೆಗೆ ಕಳುಹಿಸುವ ಸಂಕಲ್ಪ ಮಾಡಲಿದ್ದೀರಿ. ಹಿರಿಯರಿಗೆ ಆಗಾಗ ದೇಹಾರೋಗ್ಯ ಏರುಪೇರಾಗಲಿದೆ. ಸಾಮಾಜಿಕ ರಂಗದಲ್ಲಿ ಆಗಾಗ ಸಮಾರಂಭಕ್ಕಾಗಿ ಓಡಾಟ ವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಂತಸ ತರಲಿದೆ. ರಾಜಕೀಯ ಧುರೀಣರೊಬ್ಬರ ಸಹಕಾರದಿಂದ ಮಹತ್ತರ ಕೆಲಸವೊಂದನ್ನು ಮಾಡಿಸಿಕೊಳ್ಳಲಿದ್ದೀರಿ. ವ್ಯಾಪಾರದಿಂದ ಅಧಿಕ ಲಾಭ. ವೃಷಭ:- ಮಕ್ಕಳ ಬಗ್ಗೆ ಗಮನ ಹರಿಸಬೇಕು. ಉನ್ನತ ಅಧಿಕಾರಿಗಳ ಬೆಂಬಲದಿಂದ ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಿದ್ದೀರಿ. ಮೇಲ್ದರ್ಜೆ ಗುತ್ತಿಗೆದಾರರಿಗೆ ಉತ್ತಮ ಕಾಮಗಾರಿಗಳು ದೊರಯುವ ಲಕ್ಷಣಗಳು…