News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಓಂ “ॐ ” ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ !
ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ! ಹಾಗಾದರೆ ಹೀಗೆ ಮಾಡಿ
ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭ!
ರೇಷನ್ ಹಣದ Status Check ಮಾಡಲು ಈ ಲಿಂಕ್ ಮೂಲಕ ಪರೀಕ್ಷಿಸಿಕೊಳ್ಳಿ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ
ಈ ಲಿಂಕ್‌ ಕ್ಲಿಕ್‌ ಮಾಡಿದರೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ
ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-35 ಸಾವಿರ ದಂಡ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
ಬ್ಯಾಂಕ್

2000 ರೂಪಾಯಿ ಮುಖಬೆಲೆ ನೋಟು ಚಲಾವಣೆಯನ್ನು ಹಿಂಪಡೆದ ಭಾರತೀಯ ರಿಸರ್ವ್ ಬ್ಯಾಂಕ್ !

72

ದೇಶಾದ್ಯಂತ ಎರಡು ಸಾವಿರ ರೂಪಾಯಿ ನೋಟ್‌ ಚಲಾವಣೆಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ. ಈ ವರ್ಷ ಸೆಪ್ಟೆಂಬರ್‌ 30ವರೆಗೂ ನೋಟು ವಿನಿಮಯಕ್ಕೆ ಕಾಲಾವಕಾಶ ನೀಡಲಾಗಿದೆ. ಮೇ 23 ರಿಂದ ಸಮೀಪದ ಬ್ಯಾಂಕ್‌ಗಳಿಗೆ ತೆರಳಿ ಸಾರ್ವಜನಿಕರು ನೋಟು ಬದಲಾವಣೆ ಮಾಡಿಕೊಳ್ಳಬಹುದು. ಇದಕ್ಕಾಗಿ ಬ್ಯಾಂಕ್‌ಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ.

ದೇಶಾದ್ಯಂತ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರ.
2023 ಸೆಪ್ಟೆಂಬರ್ 30 ರೊಳಗೆ ಅವುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಎಲ್ಲರಿಗೂ ಸೂಚನೆ.
ಸದ್ಯ 2,000 ರೂ ನೋಟು ಹೊಂದಿದ್ದರೆ ಅವರು ಮೇ 23ರ ನಂತರ ಸಮೀಪದ ಬ್ಯಾಂಕ್‌ಗೆ ತೆರಳಿ ನೋಟು ಬದಲಾವಣೆ ಮಾಡಿಕೊಳ್ಳಬಹುದು.

2 ಸಾವಿರ ರೂ. ನೋಟ್ ಬ್ಯಾನ್: ಚಲಾವಣೆ ಸ್ಥಗಿತಗೊಳಿಸಿದ RBI, ಸೆ. 30 ರವರೆಗೆ ಕರೆನ್ಸಿ ಬದಲಾವಣೆಗೆ ಅವಕಾಶ
2000 ರೂ. ನೋಟು ನೀಡದಂತೆ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ.

ಹಾಲಿ ಇರುವ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಸಲಹೆ ನೀಡಲಾಗಿದೆ

ಬ್ಯಾಂಕುಗಳಲ್ಲಿ 2000 ರೂ. ನೋಟುಗಳ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

2018 ರಲ್ಲಿ 2000 ನೋಟು ಮುದ್ರಣ ಸ್ಥಗಿತಗೊಳಿಸಲಾಗಿತ್ತು.

2000 ನೋಟು ಚಲಾವಣೆಯನ್ನು ಆರ್ಬಿಐ ವಾಪಸ್ ಪಡೆದುಕೊಂಡಿದೆ.

2016ರ ನವೆಂಬರ್ ನಲ್ಲಿ 2000 ರೂ. ನೋಟು ಚಲಾವಣೆಗೆ ತರಲಾಗಿತ್ತು.

ಸೆಪ್ಟೆಂಬರ್ 30ರವರೆಗೆ ನೋಟು ಬದಲಾವಣೆಗೆ ಅವಕಾಶ ನೀಡಲಾಗಿದೆ.

ಬ್ಯಾಂಕುಗಳಲ್ಲಿ 2000 ರೂ. ನೋಟು ಬದಲಾವಣೆ ಮಾಡಿಕೊಳ್ಳಬಹುದಾಗಿದ್ದು, ಸೆ. 30ರವರೆಗೂ ಅವಕಾಶ ಕಲ್ಪಿಸಲಾಗಿದೆ.

ನವದೆಹಲಿ : ದೇಶಾದ್ಯಂತ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. 2023 ಸೆಪ್ಟೆಂಬರ್ 30 ರೊಳಗೆ ಅವುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಎಲ್ಲರಿಗೂ ತಿಳಿಸಿದೆ.

ಶುಕ್ರವಾರ ಬಿಡುಗಡೆ ಪ್ರಕಟಣೆಯಲ್ಲಿ ಭಾರತೀಯ ರಿಸರ್ವರ್‌ ಬ್ಯಾಂಕ್ ಮಾಹಿತಿ ನೀಡಿದ್ದು,” 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಲಾಗಿದೆ. ಅಕ್ಟೋಬರ್‌ 1 ರಿಂದ ಈ ನೋಟುಗಳು ಚಲಾವಣೆಯಲ್ಲಿ ಇರುವುದಿಲ್ಲ. ಹೀಗಾಗಿ, ಸೆ.30ರ ಒಳಗೆ ಸಾರ್ವಜನಿಕರು ಬ್ಯಾಂಕ್‌ಗಳಿಗೆ ತೆರಳಿ ನೋಟು ಬದಲಾವಣೆ ಮಾಡಿಕೊಳ್ಳಬೇಕು ” ಎಂದು ಸೂಚನೆ ನೀಡಿದೆ.

ಮೇ 23 ರಿಂದ ಬದಲಾವಣೆಗೆ ಅವಕಾಶ
ಸದ್ಯ 2,000 ರೂಪಾಯಿ ನೋಟು ಹೊಂದಿದ್ದರೆ ಮೇ 23ರ ನಂತರ ಸಮೀಪದ ಬ್ಯಾಂಕ್‌ಗೆ ತೆರಳಿ ನೋಟು ಬದಲಾವಣೆ ಮಾಡಿಕೊಳ್ಳಬಹುದು. ಆದರೆ, ಒಮ್ಮೆಗೆ 10 ನೋಟುಗಳ ಅಂದರೆ 20 ಸಾವಿರ ರೂಪಾಯಿ ಮಾತ್ರ ಬದಲಾವಣೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.


2016 ರಲ್ಲಿ 500 ಹಾಗೂ 1000 ನೋಟ್‌ ಬ್ಯಾನ್‌ ಆಗಿತ್ತು
2016ರ ನವೆಂಬರ್‌ 8 ರಂದು 500 ಹಾಗೂ 1000 ಮುಖಬೆಲೆಯ ನೋಟು ಅಮಾನ್ಯೀಕರಣದ ನಂತರ ಹೊಸದಾಗಿ 2000 ರೂ. ನೋಟುಗಳನ್ನು ಪರಿಚಯಿಸಲಾಗಿತ್ತು. ಸದ್ಯ ಆ ನೋಟಿನ ಚಲಾವಣೆ ನಿಲ್ಲಿಸಿ ವಾಪಸ್ ಪಡೆಯುವುದಾಗಿ ಆರ್‌ಬಿಐ ತಿಳಿಸಿದೆ.

ಐದು ವರ್ಷಗಳ ಹಿಂದೆಯೇ ನೋಟು ಮುದ್ರಣ ಸ್ಥಗಿತ
2018ರಲ್ಲಿಯೇ 2000 ರೂಪಾಯಿ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲಾಗಿತ್ತು. ಈ ಕುರಿತಾಗಿ ಸದನಕ್ಕೆ ಕೇಂದ್ರ ಸರ್ಕಾರ ಮಾಹಿತಿ ನೀಡಲಾಗಿತ್ತು. ಇದೀಗ ಕ್ಲೀನ್ ನೋಟ್ ಅಭಿಯಾನದಡಿ ನೋಟ್‌ಗಳನ್ನು ಹಿಂಪಡೆಯಲು ಆರ್‌ಬಿಐ ಮುಂದಾಗಿದೆ. ಮೇ 23, 2023ರಿಂದ ಯಾವುದೇ ಬ್ಯಾಂಕ್‌ನಲ್ಲಿ 2000 ನೋಟುಗಳನ್ನು ಇತರ ಮುಖಬೆಲೆಯ ನೋಟುಗಳಾಗಿ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ಸೂಚಿಸಿದೆ.

ಸೆಪ್ಟೆಂಬರ್‌ 30 ನಂತರವೂ ಕಾನೂನು ಬದ್ದವಾಗಿರುತ್ತವೆ
ಜನರು ಬ್ಯಾಂಕ್‌ಗಳೊಂದಿಗೆ ನೋಟುಗಳನ್ನು ಬದಲಾಯಿಸಿಕೊಳ್ಳಲು 4 ತಿಂಗಳ ಸಮಯ ಸಾಕು. ಚಲಾವಣೆಯಲ್ಲಿರುವ ಹೆಚ್ಚಿನ ರೂ 2000 ನೋಟುಗಳು ಸೆಪ್ಟೆಂಬರ್ 30 ರ ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ಬ್ಯಾಂಕ್‌ಗಳಿಗೆ ಹಿಂತಿರುಗುತ್ತವೆ ಎಂದು ಆರ್‌ಬಿಐ ಹೇಳಿದೆ. ಸೆಪ್ಟೆಂಬರ್ 30 ರ ನಂತರವೂ ಕಾನೂನುಬದ್ಧವಾಗಿ ಉಳಿಯುತ್ತದೆ. ಜನರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.


2,000 ರೂ ನೋಟು ವಿನಿಮಯಕ್ಕೆ ಏನಿವೆ ನಿಯಮಗಳು?
ಸಾರ್ವಜನಿಕರು ಒಮ್ಮೆಗೆ 20,000 ರೂ ಮೊತ್ತದ ನೋಟುಗಳನ್ನು ವಿನಿಯಮ ಮಾಡಿಕೊಳ್ಳಲು ಅವಕಾಶ ಇದೆ. ಅಂದರೆ 2,000 ರೂ ಮುಖಬೆಲೆಯ 10 ನೋಟುಗಳನ್ನು ಮಾತ್ರ ಎಕ್ಸ್​ಚೇಂಜ್ ಮಾಡಬಹುದು.
ಬ್ಯಾಂಕ್ ಖಾತೆ ಹೊಂದಿಲ್ಲದಿದ್ದವರೂ ಕೂಡ ಯಾವುದೇ ಬ್ಯಾಂಕ್ ಕಚೇರಿಗೆ ಹೋಗಿ ಏಕಕಾಲದಲ್ಲಿ 2,000 ರೂ ಮುಖಬೆಲೆಯ 10 ನೋಟುಗಳನ್ನು ವಿನಿಯಮ ಮಾಡಿಕೊಳ್ಳಬಹುದು.
ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲು ಯಾವುದೇ ಮಿತಿ ಇಲ್ಲ. 2,000 ರೂ ಮುಖಬೆಲೆಯ ಎಷ್ಟು ಬೇಕಾದರೂ ನೋಟುಗಳನ್ನು ಅಕೌಂಟ್​ಗೆ ಡೆಪಾಸಿಟ್ ಮಾಡಬಹುದು.

 

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ

  • ಸಿನಿಮಾ

    ಕೆಜಿಎಫ್ ಸಿನಿಮಾ ಈಗ ಎರಡು ಭಾಗಗಳಾಗಿ ತೆರೆಮೇಲೆ ಕಾಣಲಿದೆ …! ತಿಳಿಯಲು ಇದನ್ನು ಓದಿ….

    ಕರ್ನಾಟಕದಿಂದ ತಯಾರಾಗುತ್ತಿರುವ ಬಹು ವೆಚ್ಚದಾಯಕ ಸಿನಿಮಾ ಕೆಜಿಎಫ್ ಸಿನಿಮಾಇತ್ತೀಚಿನ ಸುದ್ದಿ ಆಗಿದೆ.ಮಾಸ್ಟರ್ ಪೀಸ್ ಮತ್ತು ಮಿ. ಅಂಡ್ ಮಿಸಸ್ ರಾಮಾಚಾರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಸ್ಯಾಂಡಲ್ ವುಡ್ ಹಾಟ್ ಫೇವರಿಟ್ ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾ 2 ಭಾಗವಾಗಿ ತೆರೆಕಾಣಲಿದೆ.

  • ಸುದ್ದಿ

    ವಯಸ್ಕರಿಗೆ ಬಿಳಿ ಕೂದಲಿನ ಕಾಟವೇ ಆಗಾದರೆ ಈ ನ್ಯಾಚುರಲ್ ರೆಮಿಡಿ ಒಮ್ಮೆ ಟ್ರೈ ಮಾಡಿ ನೋಡಿ,.!

    ಬೆಳ್ಳಗಿನ ಕೂದಲು ಇರುವ ವ್ಯಕ್ತಿಗಳನ್ನು ಕಂಡರೆ ನಾವು ಅಜ್ಜಿ-ತಾತ ಎಂದು ಸಂಭೋಧಿಸುತ್ತೇವೆ. ಅಂದರೆ ಈ ನರೆ (ಬೆಳ್ಳಗಿನ) ಕೂದಲು ಸಂಭವಿಸುವುದು 50ರ ಮೇಲೆ ಎಂದಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಈ ನರೆ ಕೂದಲು 12 ರಿಂದ 20ರ ವಯಸ್ಸಿನಲ್ಲೇ ಕಂಡುಬರುತ್ತಿರುವುದು ಆತಂಕಕಾರಿ ವಿಚಾರ. ಆದರೆ ನರೆ ಕೂದಲು ಇಷ್ಟು ಚಿಕ್ಕ ವಯಸ್ಸಿಗೆ ಕಾಣಿಸಿಕೊಳ್ಳಲು ಕಾರಣವೇನು? ಸಮಸ್ಯೆಗೆ ಪರಿಹಾರ ಅಥವಾ ಮನೆಮದ್ದು ಏನೆಂಬುದನ್ನು ಇಲ್ಲಿ ತಿಳಿಸಲಾಗಿದೆ ನೋಡಿ. ಬಿಳಿ ಕೂದಲಿಗೆ ಕಾರಣವೇನು? : *ಆನುವಂಶಿಕತೆ, *ವಿಟಿಲಿಗೊ, ಟ್ಯೂಬೆರಸ್ ಸ್ಕ್ಲೆರೋಸಿಸ್,…

  • ವಿಸ್ಮಯ ಜಗತ್ತು

    ಗಂಡು ಮೀನಾಗಿ ಹುಟ್ಟಿ ಬಳಿಕ ಹೆಣ್ಣು ಮೀನಾಗಿ ಬದಲಾಗುವ ಈ ಮೀನಿನ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಮೀನು ಹುಟ್ಟಿನಿಂದ ಗಂಡು ಮೀನಾಗಿ ಹುಟ್ಟಿ ಎರಡು ವರ್ಷಗಳ ಬಳಿಕ ಹೆಣ್ಣು ಮೀನಾಗಿ ಬದಲಾಗುತ್ತದೆ. ಇದು ಕೇಳಲು ನಿಮ್ಗೆ ಅಚ್ಚರಿ ಅನ್ನಿಸಿದರೂ ನಿಜ. ಬರ್ರಮುಂಡಿ ಎಂಬ ಮೀನು ಈ ವಿಧವಾಗಿ ಗಂಡಿನಿಂದ ಹೆಣ್ಣಾಗಿ ರೂಪಾಂತರ ಹೊಂದುತ್ತದೆ.

  • ಸುದ್ದಿ

    ಈ ದ್ವೀಪದ ಪ್ರತಿ ಹೆಜ್ಜೆಯಲ್ಲೂ ಸಾವೇ ಹಿಂಬಾಲಿಸುತ್ತದೆ! ಚರ್ಮ ಮತ್ತು ಮಾಂಸವನ್ನು ಕರಗಿಸಿಬಿಡುವಷ್ಟು ಶಕ್ತಿ ಈ ದ್ವೀಪದಲ್ಲಿದೆ…ಏನೆಂದು ತಿಳಿಯಿರಿ?

    ಬಹುಶಃ ಮಾನವನಿಗೆ ಕಾಲಿಡೋಕೆ ಸಾಧ್ಯವಾಗದೇ ಇರುವ ಕೆಲವು ವಿಸ್ಮಯ ಪ್ರದೇಶಗಳು ನಮ್ಮ ಪ್ರಪಂಚದಲ್ಲಿದ್ದು, ನಾನಾ ನಿಗೂಢತೆಗಳನ್ನು ತನ್ನ ಮಡಿಲಿನಲ್ಲಿ ಬಚ್ಚಿಟ್ಟುಕೊಂಡಿದೆ!! ಹೀಗಿರಬೇಕಾದರೆ ಮುಖ್ಯ ಭೂಭಾಗದೊಂದಿಗೆ ಸಂಪರ್ಕವನ್ನು ಕಡಿದುಕೊಂಡು, ಪ್ರತ್ಯೇಕ ದ್ವೀಪವಾಗಿದ್ದರೂ ಕೂಡ ಅದು ಮಾನವನಿಂದ ಇನ್ನೂ ಮುಟ್ಟಲು ಅಸಾದ್ಯ!! ದ್ವೀಪದೊಳಗೆ ಒಂದು ಬಾರಿ ಕಾಲಿಟ್ಟರೆ ಹಿಂತಿರುಗುವ ಯಾವ ಗ್ಯಾರೆಂಟಿಯೂ ಇಲ್ಲ. ಯಾಕೆಂದರೆ ಪ್ರತಿ ಹೆಜ್ಜೆಯಲ್ಲೂ ಕೂಡ ಸಾವೇ ಹಿಂಬಾಲಿಸುತ್ತದೆ!! ಜಗತ್ತಿನಲ್ಲಿ ತಿಳಿಯದಿರದ ಅದೆಷ್ಟೋ ವಿಷಯಗಳು ಇರುತ್ತವೆ. ಅದರಲ್ಲೂ ವಿಚಿತ್ರವೆನಿಸುವ ಸಂಗತಿಗಳು ಸಾಕಷ್ಟಿದ್ದು, ಕುತೂಹಲಕ್ಕೂ ಕಾರಣವಾಗುತ್ತಲೇ ಇದೆ!! ಈ…

  • ಉಪಯುಕ್ತ ಮಾಹಿತಿ

    ಈ ಜಾಗಗಳಲ್ಲಿ ಮೊಬೈಲ್ ಫೋನ್ ಗಳನ್ನು ಇಟ್ಟು ಕೊಳ್ಳಲೇಬೇಡಿ…

    ನೀವು ಮೊಬೈಲ್ ಪ್ರಿಯರೇ? ಮೊಬೈಲ್ ಇಲ್ಲದೆ ನಿಮಗೆ ನಿದ್ದೆ ಬರುವುದಿಲ್ಲವೇ? ನೀವು ಹೋದಲ್ಲೆಲ್ಲ ಮೊಬೈಲ್ ಬೇಕೇ ಬೇಕೆನಿಸುತ್ತದೆಯೆ? ಹಾಗಿದ್ದರೇ ಇಲ್ಲಿ ಕೇಳಿ….ಯಾವುದೇ ಕಾರಣಕ್ಕೂ ಈ ಎಂಟು ಕಡೆ ನಿಮ್ಮ ಮೊಬೈಲನ್ನು ಬಳಸಲೇಬೇಡಿ. ನಿಮ್ಮ ಹತ್ತಿರಕ್ಕೂ ಇಟ್ಟುಕೊಳ್ಳಬೇಡಿ. ನೀವು ಮಲಗುವ ಕೊಠಡಿ : ಸಾಮಾನ್ಯವಾಗಿ ಮಲಗುವ ಕೋಣೆಯಲ್ಲಿ ಮೊಬೈಲನ್ನು ಎಲ್ಲರೂ ಇಟ್ಟುಕೊಂಡೇ ಇರುತ್ತಾರೆ. ಕಾರಣ ಬರುವ ಮೆಸೇಜ್ ಗಳನ್ನು ಓದುವುದು, ರಾತ್ರಿ ಮೆಸೇಜುಗಳನ್ನು ಓದಿಯೇ ಮಲಗುವುದು. ಇದೆಲ್ಲದರ ಜೊತೆಗೆ ಅಲಾರಾಂ ಇಟ್ಟುಕೊಳ್ಳುವುದು ಅಭ್ಯಾಸ ಆಗಿ ಬಿಟ್ಟಿರುತ್ತದೆ. ಆದರೆ ನೆನಪಿಡಿ ಇದು…

  • Health

    ಕಿತ್ತಳೆ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಕಿತ್ತಳೆ ಒಂದು ರೀತಿಯ ಕಡಿಮೆ ಕ್ಯಾಲೋರಿ, ಹೆಚ್ಚು ಪೌಷ್ಟಿಕ ಸಿಟ್ರಸ್ ಹಣ್ಣು. ಆರೋಗ್ಯಕರ ಮತ್ತು ವೈವಿಧ್ಯಮಯ ಆಹಾರದ ಭಾಗವಾಗಿ, ಕಿತ್ತಳೆ ಹಣ್ಣುಗಳು ಬಲವಾದ, ಸ್ಪಷ್ಟವಾದ ಚರ್ಮಕ್ಕೆ ಕೊಡುಗೆ ನೀಡುತ್ತವೆ ಮತ್ತು ವ್ಯಕ್ತಿಯ ಅನೇಕ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಿತ್ತಳೆ ಹಣ್ಣುಗಳು ಅವುಗಳ ನೈಸರ್ಗಿಕ ಮಾಧುರ್ಯ, ಲಭ್ಯವಿರುವ ಹಲವು ವಿಧಗಳು ಮತ್ತು ಬಳಕೆಯ ವೈವಿಧ್ಯತೆಯಿಂದಾಗಿ ಜನಪ್ರಿಯವಾಗಿವೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಅವುಗಳನ್ನು ರಸ ಮತ್ತು ಮಾರ್ಮಲೇಡ್‌ಗಳಲ್ಲಿ ಸೇವಿಸಬಹುದು, ಅವುಗಳನ್ನು ಸಂಪೂರ್ಣವಾಗಿ ತಿನ್ನಬಹುದು, ಅಥವಾ ಕೇಕ್…