ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
17 ವರ್ಷಗಳ ನಂತರ ಭಾರತ ವಿಶ್ವ ಸುಂದರಿ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಚೀನಾದ ಸಾನ್ಯಾ ಸಿಟಿಯಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧೀಕರಿಸಿದ್ದ ಮಾನುಷಿ ಚಿಲ್ಲರ್ 2017 ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 108 ಸುಂದರಿಯರನ್ನು ಹಿಂದಿಕ್ಕಿ ಮಾನುಷಿ ಈ ಸೌಂದರ್ಯ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ.

2000 ಇಸವಿಯಲ್ಲಿ ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದರು.
ಹರಿಯಾಣ ನಿವಾಸಿಯಾದ ಮಾನುಷಿ ವೈದ್ಯಕೀಯ ವಿದ್ಯಾರ್ಥಿನಿ. 20ರ ಹರೆಯದ ಈಕೆ ದೆಹಲಿಯ ಸೇಂಟ್ ಥಾಮಸ್ ಸ್ಕೂಲ್ನಲ್ಲಿ ವಿದ್ಯಾಭ್ಯಾಸ ಮುಗಿಸಿ ಭಗತ್ ಫೂಲ್ ಸಿಂಗ್ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. . ಈಕೆಯ ಪೋಷಕರೂ ವೈದ್ಯರು.

ಮಾನುಷಿ ಕೂಚಿಪುಡಿ ನೃತ್ಯ ಪರಿಣಿತೆ. ಅಷ್ಟೇ ಅಲ್ಲ, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದು, ಪ್ರಾಜೆಕ್ಟ್ ಶಕ್ತಿ ಎಂಬ ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರಲ್ಲಿ ಋತುಸ್ರಾವದ ಸಮಯದಲ್ಲಿ ನೈರ್ಮ ಲ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. 20 ಗ್ರಾಮಗಳಿಗೆ ಭೇಟಿ ನೀಡಿ, 5000 ಮಹಿಳೆಯರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ಬ್ಯೂಟಿ ವಿತ್ ಎ ಪರ್ಪಸ್ ಎಂಬ ಪಟ್ಟವನ್ನೂ ಮಾನುಷಿ ತಮ್ಮದಾಗಿಸಿಕೊಂಡಿದ್ದಾರೆ. ಇಂಗ್ಲೆಂಡ್ನ ಸ್ಟೆಫಾನಿ ಹಿಲ್ ಮೊದಲ ರನ್ನರ್ ಅಪ್ ಮತ್ತು ಮೆಕ್ಸಿಕೊದ ಆಂಡ್ರಿಯಾ ಮೇಜಾ ದ್ವಿತೀಯ ರನ್ನರ್ ಅಪ್ ಸ್ಥಾನ ಗಳಿಸಿದ್ದಾರೆ. ಸ್ಪರ್ಧೆಯ ಪ್ರಶ್ನೋತ್ತರ ಸುತ್ತಿನಲ್ಲಿ ಯಾವ ವೃತ್ತಿಗೆ ಹೆಚ್ಚಿನ ಸಂಬಳಕ್ಕೆ ಅರ್ಹ ಮತ್ತು ಯಾಕೆ ಎಂಬ ಪ್ರಶ್ನೆಯನ್ನು ಮಾನುಷಿಯವರಲ್ಲಿ ಕೇಳಲಾಗಿತ್ತು.
ಸಂಬಳದ ಪ್ರಶ್ನೆ ಅಲ್ಲ ಆದರೆ ಅತೀ ಹೆಚ್ಚು ಗೌರವ ಗಳಿಸುವವಳು ಅಮ್ಮ ಎಂದು ಮಾನುಷಿ ಉತ್ತರಿಸಿದ್ದಾಳೆ.

ಈ ಹಿಂದೆ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2017 ರಲ್ಲೂ ಮಾನುಷಿ ಗೆದ್ದಿದ್ದಳು. ಚೀನಾ ಸಾನ್ಯಾ ನಗರದಲ್ಲಿ ನಡೆದ ಸಮಾರಂಭದಲ್ಲಿ 2016ರ ಪೋಟೋì ರಿಕೋದ ಸ್ಟೆಫಾನಿ ಡೆಲ್ ವಾಲೆಯಿಂದ ಕಿರೀಟವನ್ನು ಮಾನುಷಿ ಮುಡಿಗೇರಿಸಿಕೊಂಡಿದ್ದಾರೆ.
ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ಕ್ ಮಾಡಿ:https://youtu.be/E8B1c3NpLpc
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದು ರಾತ್ರಿ ಕಾಂಪ್ರಮೈಸ್ ಮಾಡಿಕೋ ಎಂದು ಹೇಳಿದ ನಿರ್ಮಾಪಕನಿಗೆ ಮರಾಠಿ ಚಿತ್ರದ ನಟಿ ಶ್ರುತಿ ಮರಾಠೆ ಜಾಣತನದ ಉತ್ತರ ನೀಡಿದ್ದು, ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹ್ಯುಮನ್ಸ್ ಆಫ್ ಮುಂಬೈ ಬಗ್ಗೆ ಮಾತನಾಡಿದ ನಟಿ ಶ್ರುತಿ, ಚಿತ್ರಕ್ಕೆ ಆಡಿಶನ್ ಮಾಡುವಾಗ ಆದಂತಹ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಂಡಿದ್ದಾರೆ. ನಿರ್ಮಾಪಕ ಮಾಡಿದ ಇಂಟರ್ ವ್ಯೂವ್ ನಲ್ಲಿ ಶ್ರುತಿ ಭಾಗವಹಿಸಿದ್ದರು. ಈ ವೇಳೆ ನಿರ್ಮಾಪಕ, “ಕಾಂಪ್ರಮೈಸ್”, ಹಾಗೂ “ಒಂದು ರಾತ್ರಿ” ಎಂಬ ಪದಗಳನ್ನು ಬಳಸಲು ಶುರು ಮಾಡಿದ್ದರು. ನಿರ್ಮಾಪಕನ ಮಾತನ್ನು…
ಮಂಗಳೂರು: ರೈತನೊಬ್ಬ ಅಡಕೆ ಮರವನ್ನು ಯಂತ್ರವೊಂದರ ಸಹಾಯದಿಂದ ಹತ್ತುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅಡಕೆ ಮರಕ್ಕೆ ಅತ್ಯಂತ ಸುಲಭವಾಗಿ ಹತ್ತಿ ಅಡಕೆ ಕೀಳುವ ಬೈಕ್ ಮಾದರಿಯ ಯಂತ್ರವೊಂದನ್ನು ಬಂಟ್ವಾಳದ ಪ್ರಗತಿಪರ ಕೃಷಿಕ ಗಣಪತಿ ಭಟ್ ಆವಿಷ್ಕರಿಸಿದ್ದು, ಇದಕ್ಕೀಗ ಮಹೀಂದ್ರಾ ಗ್ರೂಪ್ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಂದಲೂ ಮೆಚ್ಚುಗೆಯಿಂದ ಟ್ವೀಟ್ ಮಾಡಿದೆ. ಸಜೀಪಮೂಡ ಗ್ರಾಮದ ಕೋಮಾಲಿ ನಿವಾಸಿ, ಗಣಪತಿ ಭಟ್ ಅವರ ಯಂತ್ರದ ಮೂಲಕ ಮಹಿಳೆಯರೂ ಮರ ಏರಲು ಸಾಧ್ಯವಾಗಿದೆ. ಯುವತಿಯೋರ್ವಳು ಮರ ಏರುತ್ತಿರುವ…
ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್ ಭಾರತದ ಅನೇಕ ನಾಯಕಿಯರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಆದರೆ ದೀಪಿಕಾ ಪಡುಕೋಣೆ ಅವರೊಂದಿಗೆ ಮೂವಿ ಮಾಡಿಲ್ಲ. ಯಾಕೆ? ಇತ್ತೀಚೆಗೆ ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆಗ ಅವರನ್ನು ದೀಪಿಕಾ ಪಡುಕೋಣೆ ಜೊತೆ ಇದುವರೆಗೂ ಸಿನಿಮಾ ಏಕೆ ಮಾಡಿಲ್ಲ ಎಂದು ಪ್ರಶ್ನಿಸಲಾಗಿತ್ತು. ಆಗ ಸಲ್ಮಾನ್, ಹೌದು, ನನಗೂ ನಿಜಕ್ಕೂ ಅಚ್ಚರಿ ಆಗುತ್ತಿದೆ.. ನಾನು ದೀಪಿಕಾ ಜೊತೆ ಯಾವಾಗ ಸಿನಿಮಾ ಮಾಡುತ್ತೇನೆ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅಲ್ಲದೆ ದೀಪಿಕಾ ಜೊತೆ ನಟಿಸಲು ಇದುವರೆಗೂ ನನಗೆ…
‘ನೀವು ಕೇಳಿದಷ್ಟು ಅನುದಾನ ಕೊಡಲು ಸರ್ಕಾರದ ಬಳಿ ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲ’ ಎಂದು ಸಿಎಂ ಯಡಿಯೂರಪ್ಪ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.ಶಿವಮೊಗ್ಗದಲ್ಲಿ ನಿನ್ನೆ ಪ್ರವಾಹದಿಂದಾದ ನಷ್ಟದ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ನಷ್ಟದ ಬಗ್ಗೆ ಹಾಗೂ ನೀಡಬೇಕಿರುವ ಪರಿಹಾರದ ಬಗ್ಗೆ ಸಿಎಂ ಅವರಿಗೆ ಮಾಹಿತಿ ನೀಡಿದಾಗ ಅವರು ಮೇಲಿನಂತೆ ಉತ್ತರ ನೀಡಿದ್ದಾರೆ. ‘ಬೆಳೆ ಹಾನಿ ಅಂದಾಜು ಮಾಡಲು ಆತುರ ಬೇಡ, ಕೇಳಿದಷ್ಟು ಹಣ ನೀಡಲು ಸರ್ಕಾರದ ಬಳಿ ನೋಟು ಮುದ್ರಿಸುವ ಯಂತ್ರಗಳಿಲ್ಲ, 8-10…
ದಿನನಿತ್ಯದ ಚಟುವಟಿಕೆಯಲ್ಲಿ ನಿದ್ರೆಯೂ ಒಂದು. ಉತ್ತಮ ಆರೋಗ್ಯಕ್ಕೆ ಪೌಷ್ಟಿಕಾಂಶ ಭರಿತ ಆಹಾರ ಮುಖ್ಯವಾದಂತೆ ಉತ್ತಮ ನಿದ್ರೆಗೂ ನಾವು ಸೇವಿಸುವ ಆಹಾರ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.
ಕೋಲಾರ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸರ್ಕಾರದ ಮಟ್ಟದಲ್ಲಿ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ 01ನೇ ತರಗತಿಯಿಂದ 05 ತರಗತಿಯವರೆಗೆ ಶಾಲಾ ಕಿಟ್ಗಳನ್ನು ಕೋಲಾರ ಜಿಲ್ಲೆÀಯ ನೋಂದಾಯಿತ ಕಟ್ಟಡ ಕಾರ್ಮಿಕ ಮಕ್ಕಳಿಗೆ ನೇರವಾಗಿ ಆಯಾ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಯಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಸೆಂಟ್ರ್ರಿAಗ್ ಮತ್ತು ಇತರೆ ಕಟ್ಟಡ ಕಾರ್ಮಿಕರ ಸಂಘ ಅಧ್ಯಕ್ಷರಾದ ನವೀನ್ ಕುಮಾರ್…