ತಾನೇ ಸಿದ್ದಪಡಿಸಿದ ನಕಲಿ ಕೀ ಬಳಸಿ 15 ಲಕ್ಷ ರೂ ಮೌಲ್ಯದ 23 ದ್ವಿಚಕ್ರ ವಾಹನಗಳನ್ನು ಕದ್ದು ಮೆಕ್ಯಾನಿಕ್ ಒಬ್ಬಾತ ಸಿಕ್ಕಿ ಬಿದ್ದಿದ್ದಾನೆ. ರಾಜ್ಯ ರಾಜಧಾನಿಯಲ್ಲಿ ಈ ಘಟನೆ ನಡೆದಿದೆ.ದ್ವಿಚಕ್ರ ವಾಹನ ಮತ್ತು ಮೊಪೆಡ್‌ಗಳ ಮೆಕ್ಯಾನಿಕ್ ಒಬ್ಬಾತ ತಾನೇ ಸಿದ್ದಪಡಿಸಿದ ಒಂದೇ ಒಂದು ನಕಲಿ ಕೀ ಬಳಸಿ 15 ಲಕ್ಷ ರೂ ಮೌಲ್ಯದ 23 ದ್ವಿಚಕ್ರ ವಾಹನಗಳನ್ನು ಕದ್ದು ಸಿಕ್ಕಿ ಬಿದ್ದಿದ್ದಾನೆ. ಕೆಂಪೇಗೌಡ ಲೇಔಟ್‌ನ ನಿವಾಸಿ ನವೀನ್ ಅಲಿಯಾಸ್ ಡಿಯೋ ನವೀನ್ (19) ಸಿಕ್ಕಿ ಬಿದ್ದವ. ಈತನ ಸಹಚರ ಮಾಗಡಿ ಸಮೀಪದ ಕುಣಿಗಾನಹಳ್ಳಿಯ ನಾರಾಯಣ ಅಲಿಯಾಸ್ ನಾರಾಯಣನನ್ನು ಕೂಡ ಬಂಧಿಸಲಾಗಿದೆ.
ಡಿಯೋ ನವೀನ ಸ್ಕೂಟರ್ ಮತ್ತು ಮೊಪೆಡ್‌ಗಳನ್ನು ರಿಪೇರಿ ಮಾಡುವುದರಲ್ಲಿ ಪಳಗಿದ ಕೈ. ಸಣ್ಣ ವಯಸ್ಸಿನಲ್ಲೇ ಗ್ಯಾರೇಜಿಗೆ ಸೇರಿ ರಿಪೇರಿ ಕೆಲಸ ಕಲಿತಿದ್ದ ಈತ, ಯಾವುದೇ ಕಂಪನಿಯ ಯಾವುದೇ ಸ್ಕೂಟರ್ ಆದರೂ ಕೆಲವೇ ನಿಮಿಷಗಳಲ್ಲಿ ಬಿಚ್ಚಿ ಮತ್ತೆ ಹೊಸದಾಗಿ ಫಿಟ್ ಮಾಡುವಷ್ಟು ಕೆಲಸ ಕಲಿತಿದ್ದ. ಬಹುತೇಕ ಕಂಪನಿಯ ದ್ವಿಚಕ್ರ ವಾಹನಗಳ ಲಾಕ್ ವ್ಯವಸ್ಥೆಯನ್ನು ಚೆನ್ನಾಗಿ ಅರಿತುಕೊಂಡಿದ್ದ.
ಈ ತಿಳಿವಳಿಕೆಯನ್ನೇ ಕಳ್ಳತನಕ್ಕೆ ಬಳಸಿಕೊಂಡ. ಒಂದು ಕಂಪನಿಯ ಲಾಕ್‌ಗೂ ಮತ್ತೊಂದು ಕಂಪನಿಯ ಲಾಕ್‌ಗೂ ಇರುವ ಸಣ್ಣ ಪುಟ್ಟ ವ್ಯತ್ಯಾಸವನ್ನು ತನ್ನ ಮೆಕಾನಿಕ್ ವೃತ್ತಿ ಅನುಭವದಿಂದಲೇ ಕಲಿತಿದ್ದ ,ಈತ ಎಲ್ಲಾ ವಾಹನಕ್ಕೂ ಅನ್ವಯವಾಗುವ ನಕಲಿ ಕೀಯನ್ನು ಸಿದ್ದಪಡಿಸಿಕೊಂಡಿದ್ದ. ಇದೇ ಕೀ ಬಳಸಿ ಸಲೀಸಾಗಿ ದ್ವಿಚಕ್ರ ವಾಹನಗಳ ಕಳ್ಳತನ ಮಾಡುತ್ತಿದ್ದ. ಮಾಗಡಿಯ ಸ್ನೇಹಿತ ನಾರಾಯಣ ಅಲಿಯಾಸ್ ನಾಣಿಯನ್ನು ಕೃತ್ಯಕ್ಕೆ ಜತೆಯಾಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕುರುಬರಹಳ್ಳಿ ಸಮೀಪದ ಸತ್ಯನಾರಾಯಣ ಲೇಔಟ್ ನಿವಾಸಿ ಶರತ್ ಎನ್ನುವವರು ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನ ಆಗಿತ್ತು. ಘಟನಾ ಸ್ಥಳದ ಸುತ್ತ ಮುತ್ತ ಇರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ ಬಳಿಕ ಕೇವಲ 10 ಸೆಕೆಂಡುಗಳಲ್ಲಿ ಸಲೀಸಾಗಿ ನಕಲಿ ಕೀ ಬಳಸಿ ವಾಹನ ಕದ್ದಿದ್ದು ಗೊತ್ತಾಗಿತ್ತು. ಬಳಿಕ ಈತನ ಚಹರೆ ಪತ್ತೆ ಹಚ್ಚಿ ತನಿಖೆ ಮುಂದುವರೆಸಿದಾಗ ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇವರ ಬಂಧನದಿಂದ ಮಹಾಲಕ್ಷ್ಮಿಲೇಔಟ್‌ನ 5 ಪ್ರಕರಣಗಳು ಸೇರಿದಂತೆ ಹನುಮಂತನಗರ, ಬಸವೇಶ್ವರನಗರ, ಬ್ಯಾಡರಹಳ್ಳಿ, ಅನ್ನಪೂರ್ಣೇಶ್ವರಿ ಲೇಔಟ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ 23 ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 call/ whatsapp/ mail raghavendrastrology@gmail.com ಮೇಷ(12 ನವೆಂಬರ್, 2018) ಅನಿಯಂತ್ರಿತ ಕೋಪಸಾಮಾನ್ಯವಾಗಿ ಎಲ್ಲರನ್ನೂ, ಹಾಗೂ ವಿಶೇಷವಾಗಿ ಕೋಪಗೊಂಡವರನ್ನು ಹೆಚ್ಚು ಘಾಸಿಗೊಳಿಸುತ್ತದೆ….
ರಾಜ್ಯ ಸರ್ಕಾರ 3500 ಮಂದಿ ಪರಿಶಿಷ್ಟ ಜಾತಿಯವರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾರು ಖರೀದಿಸಲು 3 ಲಕ್ಷ ರೂ. ವರೆಗೆ ಸಬ್ಸಿಡಿ ನೀಡಲು ನಿರ್ಧರಿಸಿದೆ. ಸಾಲ ಸೌಲಭ್ಯ ಒದಗಿಸುವ ಮೂಲಕ ಕಾರು ವಿತರಣೆ ಪ್ರಕ್ರಿಯೆ ಶುರುವಾಗಿದೆ.
ಹಿಂದೂ ಧರ್ಮದಲ್ಲಿ ಬಣ್ಣಕ್ಕೂ, ಶಕುನಕ್ಕೂ ಸಂಬಂಧವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಬಣ್ಣಕ್ಕೂ ಅದ್ರದೇ ಆದ ಮಹತ್ವ, ಪ್ರಾಮುಖ್ಯತೆಯಿರುತ್ತದೆ. ವಾರದಲ್ಲಿ ಏಳು ದಿನ ಏಳು ದೇವತೆಗಳ ಆಧಾರದ ಮೇಲೆ ಬಣ್ಣಕ್ಕೆ ಶುಭ-ಅಶುಭ ಸ್ಥಾನ ನೀಡಲಾಗಿದೆ. ಶಾಸ್ತ್ರಗಳ ಪ್ರಕಾರ, ಗುರುವಾರ ಹಳದಿ ಬಣ್ಣ ಶ್ರೇಷ್ಠ. ಗುರುವಾರ ಹಳದಿ ಬಟ್ಟೆ ಧರಿಸಿದ ಹುಡುಗಿ ಕಣ್ಣ ಮುಂದೆ ಬಂದ್ರೆ ಶೀಘ್ರವೇ ಜೀವನದಲ್ಲಿ ಧನಪ್ರಾಪ್ತಿಯಾಗಲಿದೆ ಎಂದರ್ಥ. ಇನ್ನು ಶುಕ್ರವಾರದ ದಿನ ಅಂಗೈ ತುರಿಸಿದ್ರೆ ಹಣ ಪ್ರಾಪ್ತಿಯಾಗಲಿದೆ ಎಂದರ್ಥ. ಆದಷ್ಟು ಬೇಗ ಆರ್ಥಿಕ ಸಮಸ್ಯೆ…
‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ನಟಿ ಮಾಯಾ ತಮ್ಮಗೆಳೆಯನನ್ನು ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಅಗ್ನಿಸಾಕ್ಷಿ’ಧಾರಾವಾಹಿ ಖ್ಯಾತಿಯ ನಟಿ ಇಶಿತಾ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಶಿತಾವರ್ಷ ಎನ್ನುವುದಕ್ಕಿಂತ ಮಾಯಾ ಎಂದರೆ ಎಲ್ಲರಿಗೂ ತಿಳಿಯುತ್ತದೆ. ಯಾಕೆಂದರೆ ಈಕೆ ಧಾರಾವಾಹಿಯಲ್ಲಿ ಮಾಯಾ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಮಾಯಾ ತಮ್ಮ ಬಹು ಕಾಲದ ಗೆಳೆಯ ಮುರುಗಾನಂದ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾಯಾ ಮದುವೆ ಸಮಾರಂಭಕ್ಕೆ ಕುಟುಂಬದವರು, ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಬಂದು ನವ…
ನಿಮ್ಮ ಬಳಿ ಕಾರಿದ್ದು ಎಲ್ ಪಿ ಜಿ ಸಬ್ಸಿಡಿಯನ್ನೂ ಪಡೆಯುತ್ತಿದ್ದರೆ ನಿಮಗೊಂದು ಶಾಕಿಂಗ್ ನ್ಯೂಸ್ ನೀಡಲು ಕೇಂದ್ರ ಸರ್ಕಾರ ಸಜ್ಜಾಗ್ತಿದೆ. ದೇಶದಲ್ಲಿ ಎಷ್ಟು ಮಂದಿ ಬಳಿ ಕಾರಿದೆಯೋ ಅವರಿಗೆ ಸಬ್ಸಿಡಿಯಲ್ಲಿ ಅಡುಗೆ ಅನಿಲ ನೀಡುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಲಿದೆ. ಈ ಬಗ್ಗೆ ಮೋದಿ ಸರ್ಕಾರ ಯೋಜನೆ ರೂಪಿಸುತ್ತಿದ್ದು, ಸದ್ಯದಲ್ಲಿಯೇ ಘೋಷಣೆಯಾಗುವ ಸಾಧ್ಯತೆಯಿದೆ.
ಭಾರತ ಎಂದರೆ ಪುಣ್ಯಭೂಮಿಯೇ ಸರಿ!! ಇಲ್ಲಿರುವ ಕೆಲವೊಂದು ನಿಗೂಢ ಸ್ಥಳಗಳು ಹಾಗೂ ಕೆಲವೊಂದು ವಿಚಾರಗಳು ಅಚ್ಚರಿಯನ್ನು ಮೂಡಿಸುತ್ತದೆ!! ಅದರ ಬಗ್ಗೆ ಎಷ್ಟೂ ಪರಿಶೀಲನೆ ನಡೆಸಿದರೂ ಏನೋ ದೈವೀ ಶಕ್ತಿ ಎಂಬುವುದನ್ನು ನಂಬಲೇ ಬೇಕಾಗುತ್ತದೆ!! ಇಂತಹ ಕೆಲವೊಂದು ಸಂಗತಿಗಳಿಗೂ ವಿಜ್ಞಾನಿಗಳಿಗೂ ಸವಾಲಾಗಿರುವುದಲ್ಲದೆ ಅಚ್ಚರಿಯನ್ನುಂಟು ಮಾಡಿಸುತ್ತದೆ.. ಈಗಾಗಲೇ ಭಾರತದಲ್ಲಿ ಹಲವಾರು ಕೋಟೆಗಳನ್ನು ನಾವು ಕಂಡಿದ್ದೇವೆ.. ಆದರೆ ಯಾವತ್ತಾದರೂ ತಲೆಕೆಳಗಾದ ರಹಸ್ಯ ಕೋಟೆಯ ಬಗ್ಗೆ ಯಾರಾದರೂ ಕೇಳಿದ್ದೀರಾ?! ತಲೆಕೆಳಗಾದ ಕೋಟೆ ಅಂದಾಗಲೇ ಅಚ್ಚರಿಯನ್ನುಂಟು ಮಾಡುತ್ತೆ ಅಲ್ವಾ?! ಹೌದು ಇಂತಹ ಕೋಟೆ ಉತ್ತರಖಂಡದ…