ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಯಸ್ಸಿಗೂ ಬುದ್ದಿವನ್ತಿಕೆಗೂ ಏನೂ ಸಂಭಂದವಿಲ್ಲ ಅಂತಾರೆ. ಇಂತಹವರನ್ನೂ ನೋಡಿಯೇ ಇಂತಹ ಮಾತು ಹೇಳಿದ್ದಾರೆ ಅನಿಸುತ್ತದೆ. ಏಕೆಂದರೆ, ನೀವು ಶಾಕ್ ಆಗ್ತೀರ, ಇನ್ನೂ ಹತ್ತನೇ ತರಗತಿ ಓದುತ್ತಿರುವ ಹರ್ಷವರ್ಧನ್ ಜಾಲಾ ಏರೋಬಾಟಿಕ್ಸ್ 7 ಟೆಕ್ ಸೊಲ್ಯೂಷನ್ಸ್ ಎಂಬ ಸಂಸ್ಥೆಯ ವ್ಯವಸ್ಥಾಪಕ, ಸಿಇಓ.
ಹರ್ಷವರ್ಧನ್ 14 ವರ್ಷದ ಬಾಲಕ, ಗುಜರಾತ್’ನಲ್ಲಿ ನಡೆಯುತ್ತಿರುವ ವೈಬ್ರಂಟ್ ಜಾಗತಿಕ ಶೃಂಗಸಭೆಯಲ್ಲಿ ತಾನು ಡಿಸೈನ್ ಮಾಡಿದ ಡ್ರೋನ್ ಅನ್ನು ಪ್ರದರ್ಶನಕ್ಕೆ ತಂದಿದ್ದನು. ಈ ಡ್ರೋನ್ ಕಾರ್ಯವನ್ನು ಗಮನಿಸಿದ ಗುಜರಾತ್ ಸರ್ಕಾರ ತಮಗೆ ಅಂತಹ ಡ್ರೋನ್ ಬೇಕೆಂದು ಆತನ ಜೊತೆ ಬರೊಬ್ಬರಿ 5 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದೆ.
ಈ ಡ್ರೋನ್ ಮಾಡುವ ಕೆಲಸ :- ಯುದ್ಧ ಪ್ರದೇಶಗಳಲ್ಲಿ, ಗಡಿ ಪ್ರದೇಶಗಳಲ್ಲಿ ಅಡಗಿಸಿ ಇಟ್ಟಿರುವ ಮದ್ದುಗುಂಡುಗಳನ್ನು ಗುರ್ತಿಸಿ, ಅವುಗಳನ್ನು ನಿಷ್ಕ್ರಿಯಗೊಳಿಸಲು ಉಪಯೋಗಿಸುವ ಮೂರು ವಿಧದ ಡ್ರೋನ್’ಗಳನ್ನು ಈ ಪುಟ್ಟ ಪೋರ ತಯಾರಿಸಿದ್ದಾನೆ.
ಈ ಆಲೋಚನೆ ಬಂದಿದ್ದು ಹೇಗೆ?
ಕಳೆದ ಒಂದು ವರ್ಷದಿಂದ ತಾನು ಇಂತಹ ಡ್ತೋನ್’ಗಳನ್ನು ನಿರ್ಮಿಸುತ್ತಿದ್ದು, ಟಿವಿ ನೋಡುವಾಗ ತುಂಬಾ ಜನ ಸೈನಿಕರು ಸ್ಪೋಟಕಗಳಿಂದ ಸಾವನ್ನಪ್ಪುವುದು, ತೀವ್ರವಾಗಿ ಗಾಯಗೊಳ್ಳುವುದನ್ನು ನೋಡಿ ಈ ಆಲೋಚನೆ ಬಂದಿರುವುದಾಗಿ ತಿಳಿಸಿದ್ದಾನೆ. ಈ ಮೂರು ವಿಧದ ಡ್ರೋನ್’ಗಳನ್ನು ತಯಾರಿಸಲು 5 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ತಿಳಿಸಿದ್ದಾನೆ.
ಡ್ರೋನ್’ನಲ್ಲಿ ಏನೇನಿದೆ :-
ಈ ಡ್ರೋನ್’ನಲ್ಲಿ ಇನ್‌ಫ್ರಾರೆಡ್, ಆರ್’ಜಿಬಿ ಸೆನ್ಸರ್ ಇರುತ್ತದೆ ಎಂದೂ, ಜೊತೆಗೆ ಥರ್ಮಲ್ ಮೀಟರ್, 21 ಮೇಗಾಪಿಕ್ಸಲ್ ಕ್ಯಾಮರ, ಮೆಕಾನಿಕಲ್ ಷಟ್ಟರ್ ಇರುತ್ತದೆ ಎಂದು ಹರ್ಷವರ್ಧನ್ ತಿಳಿಸಿದ್ದಾನೆ.
ಡ್ರೋನ್ ಕಾರ್ಯ ಹೇಗಿರುತ್ತೆ :-
ಇವುಗಳ ಸಹಾಯದಿಂದ ಹೈ ರಿಜಲ್ಯೂಷನ್ ಫೋಟೋಗಳನ್ನು ತೆಗೆದು ಕಳುಹಿಸುತ್ತದೆ ಎಂದು ವಿವರಿಸಿದ. ಭೂಮಿಯಿಂದ 2 ಅಡಿ ಗುರುತನ್ನು, 8 ಚದರ ಮೀಟರ್ ಪರಿಧಿಯಲ್ಲಿರುವ ಎಲ್ಲಾ ಜಾಗವನ್ನು ಈ ಡ್ರೋನ್ ಕವರ್ ಮಾಡುತ್ತದೆ. ಆ ಜಾಗದಲ್ಲಿ ಎಲ್ಲಿಯಾದರೂ ಸ್ಪೋಟಕಗಳು ಕಂಡು ಬಂದರೆ ತಕ್ಷಣ ಬೇಸ್ ಸ್ಟೇಷನ್’ಗೆ ಕಳುಹಿಸುತ್ತದೆ. ಇದರಲ್ಲಿ 50 ಗ್ರಾಂಗಳು ತೂಕದ ಬಾಂಬ್ ಒಂದು ಇದ್ದು, ಅದು ಸ್ಫೋಟಕಗಳನ್ನು ಧ್ವಂಸ ಮಾಡುತ್ತದೆ. ತನ್ನ ಕಂಪನಿ ಏರೋಬಾಟಿಕ್ಸ್ ಹೆಸರಿನಲ್ಲಿ ಈ ಡ್ರೋನ್ ಅನ್ನು ಈಗಾಗಲೇ ಪೇಟೆಂಟ್ ಸಹ ರಿಜಿಸ್ಟ್ರಾರ್ ಮಾಡಿಸಿದ್ದಾನೆ ಈ ಬಾಲಕ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು, : ದುಬೈನ ಪ್ರವಾಸೋದ್ಯಮಮತ್ತು ವಾಣಿಜ್ಯ ಮಾರುಕಟ್ಟೆ (ದುಬೈ ಟೂರಿಸಂ) ತನ್ನ ದೇಶದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವನಿಟ್ಟಿನಲ್ಲಿ ಹೊಸ ಯೋಜನೆಯಾದ ದುಬೈ ಸ್ಟಾಪ್‍ಓವರ್ ಪಾಸ್ ಅನ್ನು ಪ್ರಕಟಿಸಿದೆ. ಇದು ವಿಶೇಷವಾಗಿ ದುಬೈನಲ್ಲಿಕಡಿಮೆ ಅವಧಿವರೆಗೆ ಭೇಟಿ ನೀಡಲಿರುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಯೋಜನೆಯಾಗಿದೆ.ಅಲ್ಲಿನ ಆಕರ್ಷಕ ತಾಣಗಳನ್ನು ಕಡಿಮೆ ದರದಲ್ಲಿ ವೀಕ್ಷಿಸಿ ಕಣ್ತುಂಬಿಕೊಳ್ಳುವ ಯೋಜನೆ ಇದು. ಅರೇಬಿಯನ್ಟ್ರಾವೆಲ್ ಮಾರ್ಕೆಟ್ 2019 (ಎಟಿಎಂ)ನಲ್ಲಿ ಈ ಹೊಸ ಯೋಜನೆಯನ್ನು ಪ್ರಕಟಿಸಲಾಗಿದೆ. ದುಬೈ ಸ್ಟಾಪ್‍ಓವರ್ ಪಾಸ್ ಪ್ರವಾಸಿಗರಿಗೆ ಸಮಯ ಮತ್ತು ಹಣವನ್ನು ಉಳಿತಾಯ ಮಾಡಲಿದೆ.ಈ ಮೂಲಕ…
ಬೆಂಗಳೂರು: ಸಿಎಂ ಕುಮಾರಸ್ವಾಮಿ ಕಲಾಪದಲ್ಲಿ ಮಾಡಿದ ಭಾಷಣದಲ್ಲಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಹೊಗಳಿದ್ದಾರೆ. ಆಕೆ ಪ್ರತಿ ಹಂತದಲ್ಲೂ ನನ್ನ ಜತೆಯಲ್ಲಿದ್ದಾಳೆ ಎಂದು ಹೇಳಿದರು. ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಉಸ್ತುವಾರಿ ಸಿಎಂ ಸದನದಲ್ಲಿ ಕೊಂಡಾಡಿದ್ದಾರೆ. ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ. ವಿಶ್ವಾಸಮತ ಯಾಚನೆ ನಿರ್ಣಯದ ಚರ್ಚೆಗೆ ಉತ್ತರಿಸುವ ವೇಳೆ, ನಾನು ಉದ್ದೇಶ ಪೂರ್ವಕವಾಗಿ ರಾಜಕೀಯಕ್ಕೆ ಬಂದವನಲ್ಲ. ರಾಜಕೀಯದಲ್ಲಿ ಇರುವವರನ್ನು ನಾನು ಮದುವೆಯಾಗುವುದಿಲ್ಲ ಎಂದಿದ್ದಳು ನನ್ನ ಪತ್ನಿ. ಆದರೆ ಈಗ ಅವರೂ ನನ್ನ…
ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮದ್ಯಪ್ರಿಯರಿಗೆ ಮದ್ಯಪಾನ ಮಾಡಲು ಮದ್ಯದ ಬಾಟಲಿಗಳನ್ನು ಹಿಡಿದುಕೊಂಡು ಓಡಾಡುವ ಅಥವಾ ಗ್ಲಾಸ್ ಗಳನ್ನು ಹೊಂದಿಸುವ ಗೋಜು ಇರುವುದಿಲ್ಲ.ಇದರ ಬದಲಾಗಿ ಕ್ಯಾಪ್ಸೂಲ್ ಮದ್ಯ ಬರುತ್ತಿದೆ. ಸ್ಕಾಟ್ಲೆಂಡ್ ನ ಮದ್ಯದ ಕಂಪನಿಯೊಂದು ಇಂತಹ ವಿಸ್ಕಿ ಕ್ಯಾಪ್ಸೂಲ್ ಅನ್ನು ಪರಿಚಯಿಸಿದೆ. 195 ವರ್ಷಗಳಷ್ಟು ಹಳೆಯದಾದ ಸ್ಕಾಚ್ ವಿಸ್ಕಿ ಕಂಪನಿ ಈ ಗ್ಲಾಸ್ ಲೆಸ್ ಮದ್ಯವನ್ನು ಬಿಡುಗಡೆ ಮಾಡಿದೆ.ಈ ಕ್ಯಾಪ್ಸೂಲ್ ಕುರಿತ 53 ಸೆಕೆಂಡುಗಳ ವಿಡೀಯೋವನ್ನು ಬಿಡುಗಡೆ ಮಾಡಿರುವ ಕಂಪನಿ ಸರಳವಾದ ರೀತಿಯಲ್ಲಿ ಎಂಜಾಯ್ ಮಾಡಬಹುದು ಎಂದು ಹೇಳಿಕೊಂಡಿದೆ….
ದೇಶದಲ್ಲಿ ನಡೆಯುತ್ತಿರುವ ಮೊಬೈಲ್ ಡೇಟಾ ಕ್ರಾಂತಿ ಇಡೀ ವಿಶ್ವವನ್ನು ನಮ್ಮ ಕಡೆಗೆ ತಿರುಗುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಗೂಗಲ್-ಫೇಸ್‌ಬುಕ್ ಸೇರಿದಂತೆ ಎಲ್ಲಾ ದೈತ್ಯ ಕಂಪನಿಗಳು ಭಾರತದ ಕಡೆಗೆ ಹೆಚ್ಚಿನ ಒಲವು ತೋರಿಸುತ್ತಿದ್ದು, ಭಾರತೀಯರಿಗಾಗಿಗೇ ಸೇವೆಗಳನ್ನು ನೀಡಲು ಮುಂದಾಗಿವೆ.
ಹೌದು ಸಾಧನೆ ಮಾಡುವವರಿಗೆ ವಯಸ್ಸು ಮುಖ್ಯ ಅಲ್ಲ ಅನ್ನೋದನ್ನ ಈ ಬಾಲಕ ತೋರಿಸಿ ಕೊಟ್ಟಿದ್ದಾನೆ. ವಿಶ್ವದ ಅತಿ ಕಿರಿಯ ವಿಮಾನ ಚಾಲಕ ಎನ್ನುವ ಖ್ಯಾತಿಗೆ ಪಾತ್ರನಾಗಿರುವ ಈತನ ಹೆಸರು ಮನ್ಸೂರ್ ಅನೀಸ್ ಎಂಬುದಾಗಿ.
ವರ ಬೋಳುಮಂಡೆಯವನೆಂದು ಗೊತ್ತಾಗಿ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ವರ ರವಿ ಕುಮಾರ್ ವೃತ್ತಿಯಲ್ಲಿ ವೈದ್ಯರಾಗಿದ್ದು, ತಾನು ಭೇಟಿಯೇ ಆಗದ ಯುವತಿಯೊಂದಿಗೆ ಮದುವೆಯಾಗಲು ದೆಹಲಿಯಿಂದ 1 ಸಾವಿರ ಕಿ.ಮೀ ದೂರದಲ್ಲಿರುವ ಬಿಹಾರದ ಸುಗೌಲಿ ಗ್ರಾಮಕ್ಕೆ ಬಂದಿದ್ದರು.