ಸಿನಿಮಾ

ವಿಶ್ವದ ಎಲ್ಲಾ ಕನ್ನಡಿಗರಿಗೆ ಮನರಂಜನೆ ನೀಡುತ್ತಿದ್ದ “ಮಜಾ ಟಾಕೀಸ್”ಬಂದ್ ಆಗಲಿದೆಯಾ?ಇದು ನಿಜನಾ?ತಿಳಿಯಲು ಈ ಲೇಖನ ಓದಿ…

893

ಮಜಾ ವಿತ್ ಸುಜಾ ಯಶಸ್ಸಿನ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ, ಲೊಕೇಶ್ ಪ್ರೊಡಕ್ಷನ್ಸ್ ಮೂಲಕ ಮಜಾ ಟಾಕೀಸ್ ಪಯಣ ಶುರುಮಾಡಿದ್ದ ಸೃಜನ್ ಲೋಕೇಶ್ ಇದೀಗ, ನಗುವಿನ ತೆರೆ ಎಳೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಎರಡನೂರಕ್ಕೂ ಹೆಚ್ಚು ಎಪಿಸೋಡ್‌ಗಳನ್ನು ಮಿಂಚಿಸಿ ಕಿರುತೆರೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದ ಮಜಾಟಾಕೀಸ್ ಇದೀಗ ಅಂತಿಮ ಘಟಕ್ಕೆ ಬಂದು ತಲುಪಿದೆ. ಅಂದ್ರೆ ಈ ಶೋ ಮುಕ್ತಾಯವಾಗ್ತಿದೆ.ಅಪರ್ಣಾ, ಮನೋಹರ್ ಹಾಗೂ ಇಂದ್ರಜಿತ್ ಅಂತಹ ಗಂಭೀರ ವ್ಯಕ್ತಿಗಳನ್ನು ಹಾಸ್ಯಮಯ ಪಾತ್ರಗಳಲ್ಲಿ ಯಶಸ್ವಿಯಾಗಿ ಬಿಂಬಿಸಿದ್ದಾರೆ.

ಶ್ವೇತಾ, ದಯಾನಂದ್, ಪವನ್, ವಂದನ ಹಾಗೂ ರೇಮೋ ಅವರನ್ನೊಳಗೊಂಡ “ಮಜಾ ಟಾಕೀಸ್” ಒಂದು ಅಪರೂಪದ ತಂಡ. ಮಂಡ್ಯ ರಮೇಶ್ ಮತ್ತು ಕುರಿ ಪ್ರತಾಪ್ ಸೇರಿಕೊಂಡ ಮೇಲಂತೂ ಪ್ರೇಕ್ಷಕರಿಗೆ ಡಬ್ಬಲ್ ಬೋನಸ್.

2015ರ ಫೆಬ್ರವರಿ 7 ರಂದು ಶುರುವಾಗಿದ್ದ ಮಜಾ ಟಾಕೀಸ್ ಸತತ ಎರಡುವರೆ ವರ್ಷ ಕಿರುತೆರೆಯ ವೀಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಕಲರ್ಸ್ ಕನ್ನಡ ವಾಹಿನಿಯ ಯಶಸ್ವಿ ಕಾರ್ಯಕ್ರಮವಾಗಿದ್ದ ಮಜಾ ಟಾಕೀಸ್ ಈಗ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ತಲುಪಿದೆ.

ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರಾದ ಪುನೀತ್, ಉಪೇಂದ್ರ, ಸುದೀಪ್, ದರ್ಶನ್, ಅರ್ಜುನ್ ಸರ್ಜಾ ಹಾಗೂ ಶಿವರಾಜ್ ಕುಮಾರ್ ಅವರನ್ನು ಕರೆತಂದು ಪ್ರೇಕ್ಷಕರಿಗೆ ಮನೋರಂಜನೆ ನೀಡಿದ ಹೆಗ್ಗಳಿಕೆ ಸೃಜನ್ ಅವರದು. ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಜಾ ಟಾಕೀಸ್ ಸಿನಿಮಾ ತಂಡದ ಪ್ರಮೋಷನ್ ಗಳಿಗೆ ಒಂದು ಒಳ್ಳೆಯ ವೇದಿಕೆಯೂ ಆಗಿತ್ತು.

ಇನ್ನು ಮಜಾ ಟಾಕೀಸ್ ಕಾರ್ಯಕ್ರಮ ಮುಗಿಸುತ್ತಿರುವ ಕುರಿತಂತೆ ನಟ ಸೃಜನ್ ಲೋಕೇಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕಳೆದ ಶನಿವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಜಾ ಟಾಕೀಸ್ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಸಂಚಿಕೆಯ ಚಿತ್ರೀಕರಣ ಅದ್ಧೂರಿಯಾಗಿ ನಡೆದಿದ್ದು ಆ ಸಂಚಿಕೆ ದೀಪಾವಳಿ ಹಬ್ಬದ ವಿಶೇಷವಾಗಿ ಪ್ರಸಾರವಾಗುವ ಸಾಧ್ಯತೆ ಇದೆ.

ಪ್ರತಿ ಶನಿವಾರ ಹಾಗೂ ಭಾನುವಾರ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುತ್ತಿದ್ದ ಮಜಾ ಟಾಕೀಸ್ ಶೋ ಮುಕ್ತಾಯದ ವಿಷಯ ಅಭಿಮಾನಿಗಳಲ್ಲಿ ಅಸಮಾಧಾನವನ್ನುಂಟು ಮಾಡಿದ್ದು ಕಲರ್‌ ಸೂಪರ್ಸ್‌ನ ಫೇಸ್‌ ಬುಕ್‌ನಲ್ಲಿ ಈ ಶೋ ಮುಂದುವರೆಸಿ ಎನ್ನುವ ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ATMನಲ್ಲಿ ಹಣ ಡ್ರಾ ಮಾಡುವ ವೇಳೆ ಎಚ್ಚರಿಕೆಯಿಂದಿರಿ!ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ…

    ಡಿಜಿಟಲ್ ಯುಗದಲ್ಲಿ ಜನರು ಎಟಿಎಂ ಬಳಕೆ ಹೆಚ್ಚು ಮಾಡಿದ್ದಾರೆ. ಒಂದು ದಿನ ಎಟಿಎಂ ಕೆಲಸ ನಿಲ್ಲಿಸಿದ್ರೂ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಎಟಿಎಂ ಬಳಕೆ ಮಾಡ್ತಿದ್ದಾರೆ. ಎಟಿಎಂ ಬಳಕೆ ವೇಳೆ ಕೆಲವೊಂದು ತಪ್ಪುಗಳನ್ನು ನಾವು ಮಾಡ್ತೇವೆ. ಈ ತಪ್ಪುಗಳೇ ಹ್ಯಾಕರ್ ಗೆ ಅನುಕೂಲ ಮಾಡಿಕೊಡುತ್ತದೆ. ಎಟಿಎಂ ಬಳಕೆ ವೇಳೆ ಕೆಲವೊಂದು ಸಂಗತಿಗಳನ್ನು ಅವಶ್ಯವಾಗಿ ತಿಳಿದುಕೊಳ್ಳಬೇಕಾಗುತ್ತದೆ. ಎಟಿಎಂನಲ್ಲಿ ಕಾರ್ಡ್ ಹಾಕುವ ಸ್ಲಾಟ್ ಅನ್ನು ಮೊದಲು ಎಚ್ಚರಿಕೆಯಿಂದ ನೋಡಿ. ಕಾರ್ಡ್ ಸ್ಲಾಟ್ ಅನುಮಾನ ಹುಟ್ಟಿಸುವಂತಿದ್ದರೆ, ಸ್ಲಾಟ್ ತಿದ್ದುಪಡಿಯಾಗಿದ್ದರೆ, ತುಂಬಾ…

  • ವಿಸ್ಮಯ ಜಗತ್ತು

    ಮನಷ್ಯ ಪ್ರಾಣಿ ಮಾಡದ ಕೆಲಸವನ್ನು,10 ವರ್ಷದಿಂದ ಈ ಪ್ರಾಣಿ ಮಾಡಿದೆ..!

    ನಾವು ಮನುಷ್ಯರು ತಾವು ವಾಸವಿರುವ ಮನೆಯನ್ನೇ ಸ್ವಚ್ಚವಾಗಿಡುವುದಕ್ಕೆ, ಸೋಮಾರಿತನ ತೋರುತ್ತಾರೆ. ಇನ್ನು ಅಕ್ಕ ಪಕ್ಕದ ಜಾಗ ಅಥವಾ ಬೇರೆ ಜಾಗಗಳನ್ನು ಸ್ವಚ್ಚವಾಗಿದುವುದರ ಬಗ್ಗೆ ಯೋಚಿಸೋದು ತಂಬಾ ದೂರ ಬಿಡಿ.

  • ರೆಸಿಪಿ

    ನಿಮ್ಮ ಮನೆಯಲ್ಲೇ ರುಚಿ ರುಚಿಯಾದ “ಪಾನಿ ಪುರಿ” ತಯಾರಿಸಿ…

    ಸಂಜೆ ಆದ್ರೂ ಸಾಕು, ಏನಾದ್ರೂ ಬಿಸಿ ಬಿಸಿ ಚಾಟ್ಸ್ ತಿನ್ನಬೇಕೆಂದು ಎಲ್ಲಾ ರೀತಿಯ ವಯೋಮಾನದವರಿಗೆ ಇಷ್ಟವಾಗುತ್ತದೆ. ಆದ್ರೆ ಹೆಚ್ಚಾಗಿ ತಳ್ಳು ಗಾಡಿಯಲ್ಲಿ ಸಿಗುವ ಪಾನಿ ಪುರಿಯನ್ನು ತಿನ್ನಲು ಕೆಲವರು ಇಷ್ಟ ಪಡುತ್ತಾರೆ, ಕೆಲವರು ಇಷ್ಟ ಪಡುವುದಿಲ್ಲ.ಯಾಕೆಂದ್ರೆ ತಳ್ಳು ಗಾಡಿಯಲ್ಲಿನ ಸ್ವಚ್ಚತೆ ಕುರಿತು ಕೆಲವರಿಗೂ ಅನುಮಾನ. ಆದ್ರೂ ತಿನ್ನದೇ ಸುಮ್ಮನೆ ಇರಲಿಕ್ಕೆ ಆಗೋದಿಲ್ಲ.

  • ಸುದ್ದಿ

    ಮಳೆರಾಯನ ಅಬ್ಬರಕ್ಕೆ ತುಂಬಿದ ನದಿಗಳು,ವಾಹನ ಸವಾರರು ಭೋರ್ಗರೆದು ಹರಿಯುತ್ತಿರುವ ನೀರಿನ ಮಧ್ಯೆಯೇ ದುಸ್ಸಾಹಸ ಮಾಡುತ್ತಿದ್ದಾರೆ…!

    ಬೆಳಗಾವಿ, ಚಿಕ್ಕೋಡಿ, ರಾಯಚೂರಿನಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು ಕೃಷ್ಣಾ ನದಿ ವ್ಯಾಪ್ತಿಯಲ್ಲಿರುವ ಬರುವ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆಗಳು ಜಲಾವೃತವಾಗಿದ್ದು, ಕಾರು ಬೈಕ್‍ಗಳು ಆಟಿಕೆಯಂತಾಗಿವೆ, ಆದರೂ ಕೂಡ ವಾಹನ ಸವಾರರು ಮಾತ್ರ ಭೋರ್ಗರೆದು ಹರಿಯುತ್ತಿರುವ ನೀರಿನ ಮಧ್ಯೆಯೇ ದುಸ್ಸಾಹಸ ಮಾಡುತ್ತಿದ್ದಾರೆ. ಬೆಳಗಾವಿಯ ದೆಸೂರು-ಖಾನಾಪೂರ ಮಧ್ಯೆ ಇರುವ ಕೊಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನೀರು ತುಂಬಿ ಹರಿಯುತ್ತಿದ್ದರೂ ಕೂಡ ವಾಹನ ಸವಾರರು ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ವೇಗದಿಂದ ಹರಿಯುತ್ತಿರುವ ನೀರನ್ನೇ ಲೆಕ್ಕಿಸದೇ ವಾಹನ ಸವಾರರು ಕೊಳ್ಳ ದಾಟುತ್ತಿದ್ದಾರೆ. ಸ್ಥಳದಲ್ಲಿ…

  • ಸುದ್ದಿ

    ಬ್ರೆಕಿಂಗ್ ಸುದ್ದಿ..ಮುದ್ದಹನುಮೇಗೌಡರು ತಮ್ಮ ನಾಮಪತ್ರ ಹಿಂಪಡೆಯುವುದು ಖಚಿತ.?ಈ ಸುದ್ದಿ ನೋಡಿ

    ತುಮಕೂರು ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ, ಪಕ್ಷದ ನಾಯಕರ ಒತ್ತಡಕ್ಕೆ ಮಣಿದಿದ್ದು, ಚುನಾವಣಾ ಕಣದಿಂದ ಹಿಂದೆ ಸರಿಯಲು ಸಮ್ಮತಿಸಿದ್ದಾರೆನ್ನಲಾಗಿದೆ. ಮುದ್ದಹನುಮೇಗೌಡರು ತುಮಕೂರು ಕ್ಷೇತ್ರದ ಹಾಲಿ ಸಂಸದರಾಗಿದ್ದರೂ ಸಹ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು. ಈ ಹಿನ್ನಲೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡರು ಕಣಕ್ಕಿಳಿದಿದ್ದು, ಮುದ್ದಹನುಮೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರಿಂದ ಮೈತ್ರಿ…